ನಿವೃತ್ತಿಯ ವೇಳೆಗೆ ಒಂದು ಒಳ್ಳೆಯ ನಿಧಿಯಲ್ಲಿ ಹೂಡಿಕೆ ನಿಮ್ಮ ನಿವೃತ್ತಿಯ ಜೀವನವನ್ನು ಸುಗಮವಾಗಿ ಸಾಗಿಸುವುದರ ಜೊತಗೆ ಆರ್ಥಿಕ ಭದ್ರತೆಯನ್ನು ಸಹ ಪಡೆದುಕೊಳ್ಳಬಹುದು. ಹಾಗಿದ್ದರೆ ನಾವು ಎಲ್ಲಿ ಹೂಡಿಕೆ ಮಾಡಬೇಕು..? ಯಾವ ನಿಧಿ ನಮ್ಮಗೆ ಉತ್ತಮ ಆಯ್ಕೆಯಾಗುತ್ತದೆ ಎಂಬ ಹೆಚ್ಚಿನ ವಿವರ ಇಲ್ಲಿದೆ ನೀಡಿ.

ಹೌದು,ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡದವರಿಗೆ ಸಾರ್ವಜನಿಕ ಭವಿಷ್ಯ ನಿಧಿ (PPF) ಒಂದು ಅತ್ಯುತ್ತಮ ಆಯ್ಕೆ. ಕೇಂದ್ರ ಸರ್ಕಾರದಿಂದ ಬೆಂಬಲಿತವಾದ ತೆರಿಗೆ ಮುಕ್ತ ಉಳಿತಾಯ ಯೋಜನೆಗಳಲ್ಲಿ ಇದು ಪ್ರಮುಖವಾಗಿದೆ. ಆದರೆ ಈ ಯೋಜನೆಯಲ್ಲಿ ಹೂಡಿಕೆ ಮೊತ್ತವು ಲಾಕ್-ಇನ್ ಅವಧಿಯೊಂದಿಗೆ ಮಿತಿಯನ್ನು ಹೊಂದಿದೆ, ಆದರೆ SIP ನಲ್ಲಿ, ಅಂತಹ ಯಾವುದೇ ನಿರ್ಬಂಧವಿಲ್ಲ. ವ್ಯವಸ್ಥಿತ ಹೂಡಿಕೆ ಯೋಜನೆ (SIP) ಮತ್ತು ಸಾರ್ವಜನಿಕ ಭವಿಷ್ಯ ನಿಧಿ (PPF) ಎರಡೂ ಜನಪ್ರಿಯ ಹೂಡಿಕೆ ಆಯ್ಕೆಗಳಾಗಿವೆ. ಆದಹಾಗೆ ಎರಡೂ ಯೋಜನೆ ನಿಧಿಯನ್ನು ಪೂರೈಸಲು ನಿಯಮಿತ ಮತ್ತು ವ್ಯವಸ್ಥಿತ ಹೂಡಿಕೆಯ ಅಗತ್ಯವಿದೆ. ನೀವು ಮೂವತ್ತು ( 30) ವರ್ಷಗಳ ಕಾಲ ತಿಂಗಳಿಗೆ 11,000 ರೂಪಾಯಿ ಹೂಡಿಕೆಯ ಮೂಲಕ ಯಾವ ಯೋಜನೆ ನಿಮ್ಮಗೆ ಅತಿ ಹೆಚ್ಚು ನಿವೃತ್ತಿ ನಿಧಿಯನ್ನು ನಿರ್ಮಿಸಬಹುದು ಎಂಬುವುದನ್ನು ನಾವಿಂದು ತಿಳಿದುಕೊಳ್ಳೋಣ ಬನ್ನಿ
ವ್ಯವಸ್ಥಿತ ಹೂಡಿಕೆ ಯೋಜನೆ (SIP) ಎಂದರೇನು?
ಎಸ್‌ಐಪಿ ಹೂಡಿಕೆ ಅಂದರೆ ನೀವು ಒಂದು ಕ್ರಮಬದ್ಧವಾಗಿ ಮ್ಯೂಚುವಲ್ ಫಂಡ್‌ಗಳಲ್ಲಿ ಹಣವನ್ನು ಹಾಕುವುದು. ಇದರಲ್ಲಿ ಪ್ರತಿ ದಿನ, ತಿಂಗಳು, ಮೂರು ತಿಂಗಳಿಗೆ ಒಮ್ಮೆ ಅಥವಾ ವರ್ಷಕ್ಕೊಮ್ಮೆ ಹೀಗೆ ಹೂಡಿಕೆದಾರರ ಅನುಕೂಲವಾದ ರೀತಿಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಮುಖ್ಯವಾಗಿ, ಅವರವರ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಎಷ್ಟು ಹಣ ಹಾಕಬೇಕು ಎಂಬುದನ್ನು ಸಹ ಬದಲಾಯಿಸಿಕೊಳ್ಳಬಹುದು. ಇದು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಒಂದು ಸುಲಭವಾದ ಮಾರ್ಗ.
ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಎಂದರೇನು?
ಸಾರ್ವಜನಿಕ ಭವಿಷ್ಯ ನಿಧಿ ಸರ್ಕಾರಿ ಬೆಂಬಲಿತ ಯೋಜನೆಯಾಗಿದ್ದು, ಇದನ್ನು ನೀವು ಪೋರ್ಟ್‌ಫೋಲಿಯೋ ವೈವಿಧ್ಯೀಕರಣಕ್ಕೂ ಬಳಸಬಹುದು. ಒಂದು ವರ್ಷದಲ್ಲಿ 1.5 ಲಕ್ಷದವರೆಗಿನ ಠೇವಣಿಗಳು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಗಳಿಗೆ ಅರ್ಹವಾಗಿವೆ.
SIP ನಲ್ಲಿ ಮತ್ತು PPF ನಲ್ಲಿ ಕನಿಷ್ಠ ಹೂಡಿಕೆ ಮೊತ್ತ ಎಷ್ಟು?
ವ್ಯವಸ್ಥಿತ ಹೂಡಿಕೆ ಯೋಜನೆಯಲ್ಲಿ ಕನಿಷ್ಠ ಹೂಡಿಕೆ ಮೊತ್ತ 100 ರೂ. ಆಗಿದ್ದು, ಇದನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೆಚ್ಚಿಸಬಹುದು, ಕಡಿಮೆ ಮಾಡಬಹುದು ಅಥವಾ ಹೂಡಿಕೆ ಮಾಡುವುದನ್ನು ನಿಲ್ಲಿಸಬಹುದು. ಆದರೆ ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಒಂದು ವರ್ಷದಲ್ಲಿ ಕನಿಷ್ಠ ಹೂಡಿಕೆ 500 ರೂ.ಗಳಾಗಿದ್ದರೆ, ಗರಿಷ್ಠ ಹೂಡಿಕೆ 1.5 ಲಕ್ಷ ರೂ.ಗಳಾಗಿರುತ್ತದೆ.
SIP ಹೇಗೆ ಕೆಲಸ ಮಾಡುತ್ತದೆ?
ನಿಮ್ಮ ಬ್ಯಾಂಕ್ ಖಾತೆಯಿಂದ ನಿಗದಿತ ಮೊತ್ತವನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ ಮತ್ತು ಆಯ್ದ ಮ್ಯೂಚುವಲ್ ಫಂಡ್ ಯೋಜನೆಯ ಘಟಕಗಳನ್ನು (NAV) ಖರೀದಿಸಲು ನಿಮ್ಮ ಆಯ್ಕೆಯ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆಯನ್ನು ಮಾಡಲಾಗುತ್ತದೆ.
ಪಿಪಿಎಫ್ ಹೇಗೆ ಕೆಲಸ ಮಾಡುತ್ತದೆ?
ಯಾವುದೇ ಭಾರತೀಯ ಪ್ರಜೆ ಈ ಪಿಪಿಎಫ್ ಖಾತೆಯನ್ನು ತೆರೆಯಬಹುದು, ಇದರಲ್ಲಿ ಒಟ್ಟು ಮೊತ್ತ ಅಥವಾ ಕಂತುಗಳು ಸೇರಿದಂತೆ ಹೊಂದಿಕೊಳ್ಳುವ ಠೇವಣಿ ಆಯ್ಕೆಗಳು ಮತ್ತು 15 ವರ್ಷಗಳ ಲಾಕ್-ಇನ್ ಅವಧಿಯನ್ನು 5 ವರ್ಷಗಳ ಬ್ಲಾಕ್‌ಗಳಲ್ಲಿ ವಿಸ್ತರಿಸಬಹುದು. ಪಿಪಿಎಫ್ ಅಂಚೆ ಕಚೇರಿಗಳು ಮತ್ತು ಬ್ಯಾಂಕುಗಳಲ್ಲಿ ಲಭ್ಯವಿರುವ ಈ ಉಳಿತಾಯ ಯೋಜನೆಯು ಸ್ವಯಂಪ್ರೇರಿತ ಠೇವಣಿಗಳನ್ನು ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ.
ಪಿಪಿಎಫ್ ಲೆಕ್ಕಾಚಾರ:
30 ವರ್ಷಗಳವರೆಗೆ ಮಾಸಿಕ 11,000 ಹೂಡಿಕೆ
ವರ್ಷದ ಹೂಡಿಕೆ: 1,32,000 (ತಿಂಗಳ ಹೂಡಿಕೆ 11,000 x 12 ತಿಂಗಳುಗಳು)
ಅವಧಿ: 30 ವರ್ಷಗಳು
ಬಡ್ಡಿದರ: ಶೇಕಡಾ 7.1
ಪಿಪಿಎಫ್ ಲೆಕ್ಕಾಚಾರದ ಪ್ರಕಾರ ತಿಂಗಳಿಗೆ11,000 ಹೂಡಿಕೆ ಮಾಡಿದರೆ 30 ವರ್ಷಗಳಲ್ಲಿ ನಿಮ್ಮ ನಿಧಿ ಅಂದಾಜು ಮೆಚ್ಯೂರಿಟಿ ಮೌಲ್ಯ 1,35,96,801 ರೂ ಆಗಿರುತ್ತದೆ. ಅಂದಾಜು ಒಟ್ಟು ಬಡ್ಡಿ 96,36,801 ರೂ ಆಗಿರುತ್ತದೆ.
SIP ಹೂಡಿಕೆ ನಿಯಮಗಳು
SIP ಹೂಡಿಕೆಯಲ್ಲಿ ಯಾವುದೇ ಸ್ಥಿರ ಆದಾಯವಿಲ್ಲದ ಕಾರಣ, ನಾವು ವಾರ್ಷಿಕ ಆದಾಯದ ಪ್ರಕಾರ ಶೇಕಡಾ 8 (ಸಾಲ ನಿಧಿ), ಶೇಕಡಾ 10 (ಈಕ್ವಿಟಿ ನಿಧಿ) ಮತ್ತು ಶೇಕಡಾ 12 (ಹೈಬ್ರಿಡ್ ನಿಧಿ) ಗಳನ್ನು ಲೆಕ್ಕ ಹಾಕುತ್ತಿದ್ದೇವೆ.
SIP ಹೂಡಿಕೆಯ ಲೆಕ್ಕಚಾರ
30 ವರ್ಷಗಳ ಕಾಲ 11,000 ರೂ. ಹೂಡಿಕೆಯ ಮೇಲಿನ ನಿವೃತ್ತಿ ನಿಧಿ ಅಂದಾಜು 3,38,90,705 ರೂ.ಗಳ ಕಾರ್ಪಸ್ ಅನ್ನು ಪಡೆಯಬಹುದು. ಈ ಅವಧಿಯಲ್ಲಿ ಹೂಡಿಕೆ ಮಾಡಿದ ಒಟ್ಟು ಮೊತ್ತ 39,60,000 ರೂ.ಗಳಾಗಿರುತ್ತದೆ. ಅಂದರೆ, ಬಂಡವಾಳದ ಮೇಲಿನ ಲಾಭವು ಸುಮಾರು 2,99,30,705 ರೂ.ಗಳಷ್ಟಿರುತ್ತದೆ.
ವ್ಯವಸ್ಥಿತ ಹೂಡಿಕೆ ಯೋಜನೆ (SIP) ಮೂಲಕ 30 ವರ್ಷಗಳ ಕಾಲ ಪ್ರತಿ ತಿಂಗಳು 11,000 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಷೇರು ಮಾರುಕಟ್ಟೆ ಆಧಾರಿತ ನಿಧಿಯಲ್ಲಿ (ಇಕ್ವಿಟಿ ಫಂಡ್) ವಾರ್ಷಿಕವಾಗಿ ಶೇ. 10 ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸಿದರೆ, 30 ವರ್ಷಗಳಲ್ಲಿ ಅಂದಾಜು 2,28,72,220 ರೂಪಾಯಿಗಳ ಕಾರ್ಪಸ್ ನಿಧಿ ಲಭ್ಯವಾಗುತ್ತದೆ. ಇದರಲ್ಲಿ ಅಂದಾಜು 1,89,12,220 ರೂಪಾಯಿ ಬಂಡವಾಳ ಲಾಭವಾಗಿರುತ್ತದೆ.
ಸಾಲ ನಿಧಿಯಲ್ಲಿ (ಡೆಟ್ ಫಂಡ್) ವಾರ್ಷಿಕವಾಗಿ ಶೇ. 8 ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸಿದರೆ, ಅದೇ 30 ವರ್ಷಗಳಲ್ಲಿ ಅಂದಾಜು 1,55,93,746 ರೂಪಾಯಿಗಳ ಕಾರ್ಪಸ್ ನಿಧಿ ಲಭ್ಯವಾಗುತ್ತದೆ. ಇದರಲ್ಲಿ ಅಂದಾಜು 1,16,33,746 ರೂಪಾಯಿ ಬಂಡವಾಳ ನಿಮ್ಮ ಕೈ ಸೇರುತ್ತದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್‌ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications