ಬೆಂಗಳೂರು, ಜನವರಿ 12: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್ ಸೋಮನಾಥ್ ಇತ್ತೀಚೆಗೆ ಇಸ್ರೋಗೆ ಹೆಚ್ಚಿನ ಐಐಟಿ ವಿದ್ಯಾರ್ಥಿಗಳು ನೇಮಕಾಗುತ್ತಿರುವುದನ್ನು ನೋಡಲು ಸಂತೋಷವಾಗುತ್ತದೆ ಎಂದು ತಿಳಿಸಿದರು.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆಯ ವಾರ್ಷಿಕ ವಿಜ್ಞಾನ ಮತ್ತು ತಂತ್ರಜ್ಞಾನ ಉತ್ಸವವಾದ ಟೆಕ್‌ಫೆಸ್ಟ್‌ನಲ್ಲಿ ಮಾತನಾಡಿದ ಸೋಮನಾಥ್, ಇಸ್ರೋಗೆ ಸೇರುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಸಹಾಯ ಮಾಡುವ ಭಾರತದ ಬಾಹ್ಯಾಕಾಶ ಪ್ರಯತ್ನಗಳಿಗೆ ಕೊಡುಗೆ ನೀಡುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.

ಇಸ್ರೋ ಅಧ್ಯಕ್ಷರು ಭಾರತದ ಮೊದಲ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮವಾದ ಗಗನ್‌ಯಾನ್ ಮಿಷನ್ ಮತ್ತು ಭಾರತ್ ಅಂತರಿಕ್ಷ್ ನಿಲ್ದಾಣದ ಉಡಾವಣೆ ಸೇರಿದಂತೆ ಇಸ್ರೋದ ಭವಿಷ್ಯದ ಬಾಹ್ಯಾಕಾಶ ಕಾರ್ಯಾಚರಣೆಗಳ ವಿವರಿಸಿದರು. ಇದರ ಆರಂಭಿಕ ಹಂತವು 2028 ರ ವೇಳೆಗೆ ಪೂರ್ಣಗೊಳ್ಳಲಿದೆ. 2035 ರ ವೇಳೆಗೆ ಉಡಾವಣೆ ಮಾಡಲು ಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಚಂದ್ರಯಾನ-3 ಲ್ಯಾಂಡಿಂಗ್ ಆದ ನಂತರ ನೀವೆಲ್ಲರೂ ಈಗ ಬಾಹ್ಯಾಕಾಶದ ಬಗ್ಗೆ ಉತ್ಸುಕರಾಗಿದ್ದೀರಿ. ಆದರೆ ಭವಿಷ್ಯದಲ್ಲಿ ನಮ್ಮ ಮುಂದೆ ಇರುವ ಸಾಧ್ಯತೆಗಳ ಬಗ್ಗೆ ನಾನು ಹೆಚ್ಚು ಉತ್ಸುಕನಾಗಿದ್ದೇನೆ. ಈ ಪಥವನ್ನು ಈಗ ಚೆನ್ನಾಗಿ ವ್ಯಾಖ್ಯಾನಿಸಲಾಗಿದೆ. ಮುಂದೆ ಇರುವ ಸವಾಲುಗಳು ನಿಜವಾಗಿಯೂ ನನಗೆ ರೋಮಾಂಚನಕಾರಿಯಾಗಿದೆ ಎಂದು ಸೋಮನಾಥ್ ಹೇಳಿದರು.
ಮಾನವರನ್ನು ಚಂದ್ರನಿಗೆ ಕಳುಹಿಸುವಂತಹ ಭವಿಷ್ಯದ ಚಂದ್ರನ ಕಾರ್ಯಾಚರಣೆಗಳು, ಹಾಗೆಯೇ ಚಂದ್ರ-ಆಧಾರಿತ ಆರ್ಥಿಕತೆಯನ್ನು ಸ್ಥಾಪಿಸುವ ಕಲ್ಪನೆಯನ್ನು ಅವರು ವಿವರಿಸಿದರು. ಇವೆಲ್ಲವನ್ನೂ ಬಾಹ್ಯಾಕಾಶ ಸಂಸ್ಥೆ 2047 ರ ವೇಳೆಗೆ ಪೂರೈಸುವ ಗುರಿಯನ್ನು ಹೊಂದಿದೆ ಎಂದರು.
ಸೋಮನಾಥ್ ಅವರು, ಐಐಟಿ ಬಾಂಬೆಯ ವಿದ್ಯಾರ್ಥಿಗಳನ್ನು ಇಸ್ರೋ ಪ್ರಯತ್ನಗಳಿಗೆ ಸೇರುವಂತೆ ಒತ್ತಾಯಿಸಿದರು. ವಾಸ್ತವವಾಗಿ, ನಾನು ಐಐಟಿ ಚೆನ್ನೈನಲ್ಲಿ ಭಾಷಣ ಮಾಡಿದ್ದೆ. ಐಐಟಿಗಳು ಮತ್ತು ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಅವರ ಕೊಡುಗೆಯ ಬಗ್ಗೆ ನಾನು ಮಾತನಾಡುವುದನ್ನು ನೀವು ಬಹುಶಃ ಕೇಳಿರಬಹುದು. ಹೆಚ್ಚಿನ ಐಐಟಿಯನ್ನರು ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಸೇರುವುದನ್ನು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವುದನ್ನು ನೋಡಲು ನನಗೆ ಸಂತೋಷವಾಗುತ್ತದೆ ಎಂದರು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಐಐಟಿಗಳಿಂದ ಇಂಜಿನಿಯರ್‌ಗಳನ್ನು ನೇಮಿಸಿಕೊಳ್ಳಲು ಇಸ್ರೋ ಪ್ರಯತ್ನಿಸಿತ್ತು, ಆದರೆ ಶೇಕಡಾ 60 ರಷ್ಟು ಅಭ್ಯರ್ಥಿಗಳು ಸಂಬಳದ ಪ್ಯಾಕೇಜು ನೋಡಿ ಹಿಂದೇಟು ಹಾಕಿದ್ದರು. ಅವರು ಇಸ್ರೋಗೆ ಸೇರುತ್ತಿರಲಿಲ್ಲ. ನಾವು ಹೋಗಿ ಐಐಟಿಯಿಂದ ನೇಮಕಾತಿ ಮಾಡಲು ಪ್ರಯತ್ನಿಸಿದ್ದಾಗ ಯಾರೂ ಸೇರುತ್ತಿರಲಿಲ್ಲ ಎಂದು ಅವರು ಹೇಳಿದರು.


Click it and Unblock the Notifications