ಬೆಂಗಳೂರು, ಫೆಬ್ರವರಿ 5: ಮಲೇಷ್ಯಾದ ಜೋಹರ್ ಪ್ರಾಂತ್ಯವನ್ನು ಅಳುತ್ತಿದ್ದ ರಾಜ ಸುಲ್ತಾನ್ ಇಬ್ರಾಹಿಂ ಸುಲ್ತಾನ್ ಇಸ್ಕಂದರ್ ಅವರನ್ನು ಮಲೇಷ್ಯಾದ ನೂತನ ರಾಜನನ್ನಾಗಿ ನೇಮಿಸಲಾಗಿದೆ. ಸರದಿಯ ವ್ಯವಸ್ಥೆಯ ಪ್ರಕಾರ ಈ ಪಟ್ಟ ಮುಂದಿನ ಐದು ವರ್ಷಗಳ ಕಾಲ ಇರಲಿದೆ.
ರಾಜ ಸುಲ್ತಾನ್ ಇಸ್ಕಂದರ್ ರಾಷ್ಟ್ರದ ರಾಜ ಮಾತ್ರವಲ್ಲದೆ ವ್ಯಾಪಾರ ಜಗತ್ತಿನಲ್ಲಿ ಅತ್ಯಂತ ಯಶಸ್ವಿ ಉದ್ಯಮಿಯಾಗಿದ್ದು ಮತ್ತು ಪ್ರಭಾವಶಾಲಿ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಬ್ಲೂಮ್‌ಬರ್ಗ್ ವರದಿ ಪ್ರಕಾರ ಇಸ್ಕಂದರ್ ಅವರ ಅಂದಾಜು ಸಂಪತ್ತು 47,327 ಕೋಟಿ ರೂ. ಆಗಿದೆ.

ಇವರ ವ್ಯಾಪಾರ ಸಾಮ್ರಾಜ್ಯವು ಕೇವಲ ಒಂದೇ ಉದ್ಯಮಕ್ಕೆ ಸೀಮಿತವಾಗದೇ ಹಲವು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರಿಯಲ್ ಎಸ್ಟೇಟ್ ನಿಂದ ಹಿಡಿದು ಗಣಿಗಾರಿಕೆ, ಟೆಲಿ ಕಮ್ಯುನಿಕೇಶನ್, ತಾಳೆ ಎಣ್ಣೆಯವರೆಗೆ ಉದ್ಯಮಗಳನ್ನೊಳಗೊಂಡಿದೆ. ಅವರ ಐಷಾರಾಮಿ ನಿವಾಸ, "ಇಸ್ತಾನಾ ಬುಕಿಟ್ ಸೆರೆನೆ" ಅವರ ಕುಟುಂಬದ ಬೃಹತ್ ಸಂಪತ್ತಿಗೆ ಸಾಕ್ಷಿಯಾಗಿದೆ.
ಇದಲ್ಲದೆ ಮಲೇಷ್ಯಾ ಅರಸ ಇಸ್ಕಂದರ್ ತಮ್ಮ ಸಂಗ್ರಹದಲ್ಲಿ 300 ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಒಂದು ಕಾರು ಅಡಾಲ್ಫ್ ಹಿಟ್ಲರ್ ಉಡುಗೊರೆಯಾಗಿದೆ. ಇವರ ಕುಟುಂಬವು ಗೋಲ್ಡ್-ಅಂಡ್-ಬ್ಲೂ ಬೋಯಿಂಗ್ 737 ಸೇರಿದಂತೆ ಖಾಸಗಿ ಜೆಟ್‌ಗಳ ಸಮೂಹವನ್ನು ಹೊಂದಿದೆ. ಸಿರಿವಂತ ಉದ್ಯಮಿಗಳ ಬಳಿ ಅಂಗರಕ್ಷಕರಿರುವುದು ಸಾಮಾನ್ಯ ,ಆದರೆ ಅದಕ್ಕಿಂತಲೂ ವಿಶೇಷ ಎಂದರೆ ಇಸ್ಕಂದರ್ ಅವರ ಕುಟುಂಬ
ಖಾಸಗಿ ಸೈನ್ಯವನ್ನು ಹೊಂದಿದೆ ಎಂದರೆ ನಿಮಗೆ ನಿಜಕ್ಕೂ ಅಚ್ಚರಿಯಾಗಬಹುದು.
ಇಸ್ಕಂದರ್ ಅವರು ವಿದ್ಯುಕ್ತವಾಗಿ ಮಲೇಷ್ಯಾ ಅರಸರಾಗಿ ಸಿಂಹಾಸನ ಏರಿರುವುದು ಸಾಮಾನ್ಯವಾಗಿದ್ದರು, ಇವರು ಉದ್ಯಮಿಯಾಗಿ ಸಿಂಗಾಪುರದ ರಾಜಕೀಯ ನಾಯಕರೊಂದಿಗೆ ಮತ್ತು ವ್ಯಾಪಾರೋದ್ಯಮಗಳೊಂದಿಗೆ ಅತ್ಯುತ್ತಮ ಸಂಬಂಧ ಹೊಂದಿರುವುದರಿಂದ ಇದು ಮಲೇಷ್ಯಾದ ರಾಜಕೀಯ ಚಿತ್ರಣವನ್ನೇ ಬದಲಿಸಲಿದೆ.
ರಾಜನ ಪಾತ್ರವು ಬಹುಮಟ್ಟಿಗೆ ವಿಧ್ಯುಕ್ತವಾಗಿದ್ದರೂ, ಅವರು ಪ್ರಧಾನ ಮಂತ್ರಿಯನ್ನು ನೇಮಿಸುವ ಸಾಮರ್ಥ್ಯ ಸೇರಿದಂತೆ ಕೆಲವು ಸಂಸದೀಯ ಜವಾಬ್ದಾರಿಗಳನ್ನು ಹೊಂದಿದ್ದಾರೆ. ಅಪರಾಧಗಳಿಗೆ ಶಿಕ್ಷೆಗೊಳಗಾದವರನ್ನು ಕ್ಷಮಿಸಲು ಅವರು ಅವಕಾಶವಿದೆ. ಮಲೇಷ್ಯಾ ಮಾತ್ರವಲ್ಲದೇ ಸುಲ್ತಾನ್ ಇಬ್ರಾಹಿಂ ಇಸ್ಕಂದರ್ ಅವರು ಸಿಂಗಾಪುರದಲ್ಲೂ ಜಮೀನಿನ ಒಡೆತನವನ್ನು ಹೊಂದಿದ್ದಾರೆ. ಈ ಜಮೀನಿನ ಮೌಲ್ಯ ಸುಮಾರು ನಾಲ್ಕು ಬಿಲಿಯನ್ ಡಾಲರ್ ಎಂದು ಹೇಳಲಾಗಿದೆ.
ಇಸ್ಕಂದರ್ ಅವರು ಉದ್ಯಮಗಳಲ್ಲಿ ಅವಕಾಶಗಳನ್ನು ಹುಟ್ಟುಹಾಕುವವರಾಗಿದ್ದು, ಇದು ವಿಶೇಷವಾಗಿ ಮಲಯ ಸಮುದಾಯಕ್ಕೆ ಮತ್ತು ಚೀನಾದ ಉದ್ಯಮಿಗಳೊಂದಿಗೆ ಪ್ರಮುಖ ಯೋಜನೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.


Click it and Unblock the Notifications