ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಬಳಸಲಾಗುವ ಎಲ್ಲಾ ಔಷಧಿಗಳು ಮತ್ತು ಸಲಕರಣೆಗಳ ಮೇಲಿನ ಜಿಎಸ್‌ಟಿಯನ್ನು ತೆಗೆದುಹಾಕುವಂತೆ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನವದೆಹಲಿಯಲ್ಲಿ ಇಂದು ನಡೆಯುತ್ತಿರುವ 43ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಪ್ರಿಯಾಂಕಾ ಗಾಂಧಿ ಆಗ್ರಹಿಸಿದ್ದಾರೆ.

''ಸಾಂಕ್ರಾಮಿಕ ರೋಗದ ಮಧ್ಯೆ ಇಂತಹ ವಸ್ತುಗಳ ಮೇಲೆ ತೆರಿಗೆ ವಿಧಿಸುವುದು ''ಕ್ರೌರ್ಯ'' ಎಂದು ಸರಕು ಮತ್ತು ಸೇವೆಗಳ ಮೇಲಿನ ತೆರಿಗೆಯನ್ನು ನಿರ್ಧರಿಸುವ ಜಿಎಸ್‌ಟಿ ಕೌನ್ಸಿಲ್ ಸಭೆಗೆ ಪ್ರಿಯಾಂಕಾ ಮನವಿ ಮಾಡಿದ್ದಾರೆ.
ಸಾಂಕ್ರಾಮಿಕ ಸಮಯದಲ್ಲಿ ಆಂಬ್ಯುಲೆನ್ಸ್, ಹಾಸಿಗೆಗಳು, ವೆಂಟಿಲೇಟರ್‌ಗಳು, ಆಮ್ಲಜನಕ, ಔಷಧಿಗಳು, ಲಸಿಕೆಗಳಿಗಾಗಿ ಹೋರಾಡಿದ ಜನರಿಂದ ಕೋವಿಡ್ ಸಂಬಂಧಿತ ಉತ್ಪನ್ನಗಳ ಜಿಎಸ್‌ಟಿ ಮರುಪಡೆಯುವುದು "ಕ್ರೌರ್ಯ ಮತ್ತು ಸೂಕ್ಷ್ಮತೆ" ವಿಚಾರವಾಗಿದೆ ಎಂದಿದ್ದಾರೆ.
ಹೀಗಾಗಿ ಇಂದು ನಡೆಯುತ್ತಿರುವ ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಬಳಸಲಾಗುವ ಎಲ್ಲಾ ಜೀವ ಉಳಿಸುವ ಔಷಧಿಗಳು ಮತ್ತು ಸಲಕರಣೆಗಳ ಮೇಲಿನ ಜಿಎಸ್‌ಟಿ ತೆಗೆದುಹಾಕುವಂತೆ ಆಗ್ರಹಿಸಿದ್ದಾರೆ. ಜೊತೆಗೆ ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ ಸಾಮಾನ್ಯವಾಗಿ ಬಳಸಲಾಗುವ ವಸ್ತುಗಳ ಪಟ್ಟಿಯನ್ನು ಮತ್ತು ಅವುಗಳ ಮೇಲೆ ವಿಧಿಸಲಾಗುವ ಜಿಎಸ್‌ಟಿ ದರವನ್ನೂ ಅವರು ಲಗತ್ತಿಸಿದ್ದಾಳೆ.
ವೈದ್ಯಕೀಯ ಸಲಕರಣೆಗಳ ಮೇಲಿನ ಜಿಎಸ್‌ಟಿ ದರ
| ಸಲಕರಣೆಗಳು | ಜಿಎಸ್‌ಟಿ(%) |
| ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ | 18 |
| ಹ್ಯಾಂಡ್ ವಾಶ್, ಸೋಪ್ | 18 |
| ಸರ್ಜಿಕಲ್ ರಬ್ಬರ್ ಗ್ಲೌಸ್ | 12 |
| ಸೋಂಕುನಿವಾರಕ | 18 |
| ಥರ್ಮಾಮೀಟರ್ | 18 |
| ವೆಂಟಿಲೇಟರ್ಸ್ | 12 |
| ಆಕ್ಸಿಜನ್ ಕಾನ್ಸಂಟ್ರೇಟರ್ | 12 |
| ವೈದ್ಯಕೀಯ ದರ್ಜೆಯ ಆಕ್ಸಿಜನ್ ಸಿಲಿಂಡರ್ | 12 |
| ರೆಮಿಡಿಸಿವರ್ ಮತ್ತು ಇತರೆ ಕೋವಿಡ್ ಸಂಬಂಧಿತ ಡ್ರಗ್ | 12 |
| ಟೆಸ್ಟಿಂಗ್ ಕಿಟ್ಸ್ | 12 |
| ಪಿಪಿಇ ಕಿಟ್ಸ್ (1,000 ರೂ. ಹಚ್ಚು) | 12 |
| ಹತ್ತಿ ಅಲ್ಲದ ಫೇಸ್‌ಮಾಸ್ಕ್ | 12 |
| ಲಸಿಕೆ | 05 |
| ಪಿಪಿಇ ಕಿಟ್ಸ್ (1,000 ರೂ. ಒಳಗೆ) | 05 |
| ಹತ್ತಿಯ ಮಾಸ್ಕ್ | 05 |


Click it and Unblock the Notifications