ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಗೆ ಕೇಂದ್ರ ಸಂಪುಟ ಒಪ್ಪಿಗೆ: ವಾಹನ ಕ್ಷೇತ್ರಕ್ಕೆ ಬಂಪರ್

ಕೇಂದ್ರ ಸಂಪುಟವು ಬುಧವಾರದಂದು (ನವೆಂಬರ್ 11, 2020) ಹತ್ತು ವಲಗಳಿಗೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಅಥವಾ ಪಿಎಲ್ ಐ ಯೋಜನೆಗೆ ಅನುಮತಿ ನೀಡಿದೆ. ಸುದ್ದಿ ಮೂಲಗಳನ್ನು ಆಧರಿಸಿ, ಪ್ರಮುಖ ಸುದ್ದಿ ಸಂಸ್ಥೆಯಿಂದ ವರದಿ ಆಗಿದೆ. ಈ ಯೋಜನೆ ಅಡಿಯಲ್ಲಿ ಐದು ವರ್ಷಗಳ ಅವಧಿಗೆ 1.46 ಲಕ್ಷ ಕೋಟಿ ರುಪಾಯಿ ನೀಡಲಾಗುವುದು.

ವಿವಿಧ ವಲಯಗಳ ಪೈಕಿ ವಾಹನ ಹಾಗೂ ವಾಹನ ಬಿಡಿ ಭಾಗಗಳ ವಲಯಕ್ಕೆ 57,000 ಕೋಟಿ ರುಪಾಯಿ ಮೀಸಲಿಡಲಾಗುವುದು. ಈ ಪಿಎಲ್ ಐ ಯೋಜನೆ ಅಡಿಯಲ್ಲಿ ಅಡ್ವಾನ್ಸ್ ಸೆಲ್ ಕೆಮಿಸ್ಟ್ರಿ ಬ್ಯಾಟರಿ, ಫಾರ್ಮಾಸ್ಯುಟಿಕಲ್ಸ್, ಆಹಾರ ಪದಾರ್ಥಗಳು ಮತ್ತು ವೈಟ್ ಗೂಡ್ಸ್ ಗಳು ಬರುತ್ತವೆ.

ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಗೆ ಕೇಂದ್ರ ಸಂಪುಟ ಒಪ್ಪಿಗೆ

ಈ ಯೋಜನೆ ಭಾಗವಾಗಿ ಹೆಚ್ಚುವರಿ ಉತ್ಪಾದನೆಗೆ ಸರ್ಕಾರದಿಂದ ಪ್ರೋತ್ಸಾಹಧನ ನೀಡಲಿದೆ. ಇದರ ಜತೆಗೆ ರಫ್ತು ಮಾಡುವ ಸಲುವಾಗಿ ಕಂಪೆನಿಗಳು ದೇಶದಲ್ಲಿ ಉತ್ಪಾದನೆ ಮಾಡಲು ಅನುವು ಮಾಡಿಕೊಡಲಾಗುತ್ತದೆ. ಈ ಸುದ್ದಿಯ ಬೆನ್ನಿಗೆ ವಾಹನ ಕ್ಷೇತ್ರದ ಷೇರುಗಳು- ನಿಫ್ಟಿ ವಾಹನ ಕ್ಷೇತ್ರದ ಸೂಚ್ಯಂಕಗಳು ಒಂದು ಪರ್ಸೆಂಟ್ ಗೂ ಹೆಚ್ಚು ಏರಿಕೆ ಕಂಡಿತು. ಹೀರೋ ಮೋಟೋಕಾರ್ಪ್, ಮಾರುತಿ ಸುಜುಕಿ ಷೇರುಗಳು ಪ್ರಮುಖವಾಗಿ ಹೆಚ್ಚಳವಾದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+