2024ರಲ್ಲಿ ನಮ್ಮನ್ನಗಲಿದ ಉದ್ಯಮಿಗಳು: ದಿಗ್ಗಜರ ಸ್ಮರಣೆ

ಇನ್ನೇನು ನೂತನ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜಗತಿನಾದ್ಯಂತ ಹೊಸ ವರ್ಷದ ಸ್ವಾಗತಕ್ಕೆ ತಯಾರಿ ಭರದಿಂದ ಸಾಗುತ್ತಿದೆ. ವಿದೇಶಗಳಂತೆ ಭಾರತದಲ್ಲೂ ಕೂಡ ಹೊಸ ವರ್ಷಕ್ಕೆ ತಯಾರಿ ಭರದಿಂದ ಸಾಗುತ್ತಿದೆ. ಇನ್ನು ಕಾರ್ಪೋರೇಟ್‌ ಜಗತ್ತಿನ ಬಗ್ಗೆ ಹೇಳುವುದಾದರೆ 2024ರಲ್ಲಿ ಪ್ರಮುಖ ಉದ್ಯಮಪತಿಗಳನ್ನು ಭಾರತ ಕಳಕೊಂಡಿದ್ದು,ಭಾರತೀಯರಿಗೆ ಆಘಾತ ಮೂಡಿಸಿತ್ತು. ಟಾಟಾದ ರತನ್‌ ಟಾಟಾ, ಪ್ರಖ್ಯಾತ ಬ್ಯಾಂಕರ್‌ ನಾರಾಯಣನ್‌ ವಘುಲ್‌, ರಾಮೋಜಿ ರಾವ್‌ ಮುಂತಾದ ಪ್ರಮುಖ ಘಟಾನುಘಟಿ ಉದ್ಯಮಿಗಳನ್ನು ಭಾರತ ಕಳೆದುಕೊಂಡಿದ್ದು, ತುಂಬಲಾರದ ನಷ್ಟ ಎಂದರೆ ತಪ್ಪಾಗಲಾರದು. ಇನ್ನು ಉದ್ಯಮಿಗಳ ನಿಧನದಿಂದ ಸಹಜವಾಗಿಯೇ ಭಾರತದ ಮಾರುಕಟ್ಟೆಯಲ್ಲದೆ ದೇಶದ ಬೆಳವಣಿಗೆ ಹಾಗೂ ಅಭಿವೃದ್ದಿಯ ಮೇಲೆ ಕೂಡ ವ್ಯತಿರಿಕ್ತ ಪರಿಣಾಮ ಬೀರುವಂತಾಗಿದೆ. 2024 ರ ವರ್ಷದಲ್ಲಿ ಭಾರತದ ಅತಿದೊಡ್ಡ ಕಾರ್ಪೊರೇಟ್ ನಾಯಕರಲ್ಲಿ ಒಬ್ಬರಾದ ರತನ್ ಟಾಟಾ ಮತ್ತು ವ್ಯಾಪಾರ ಮತ್ತು ಆರ್ಥಿಕತೆಯ ಜಗತ್ತಿಗೆ ಸಂಬಂಧಿಸಿದ ಹಲವಾರು ಇತರ ಪ್ರಸಿದ್ಧ ವ್ಯಕ್ತಿಗಳು ನಿಧನ ಹೊಂದಿದ್ದರು. ಸದ್ಯ 2024 ರಲ್ಲಿ ನಿಧನ ಹೊಂತಿದ ಪ್ರಮುಖ ಗಣ್ಯರ ಬಗೆಗಿನ ಮಾಹಿತಿ ಇಲ್ಲಿದೆ.

ರತನ್‌ ಟಾಟಾ

ಭಾರತದ ಖ್ಯಾತ ಉದ್ಯಮಿಗಳಲ್ಲಿ ಒಬ್ಬರಾಗಿದ್ದ ರತನ್‌ ಟಾಟಾ ಬಗ್ಗೆ ಹೆಚ್ಚಿನ ಪೂರ್ವ ಪೀಠಿಕೆಯ ಅಗತ್ಯವಿಲ್ಲ. ರತನ್‌ ಟಾಟಾ ಅವರು ಕೇವಲ ತನ್ನ ಕಂಪೆನಿಯನ್ನೇ ಅಲ್ಲದೆ ಭಾರತ ಆರ್ಥಿಕ ವ್ಯವಸ್ಥೆಯನ್ನೇ ಧನಾತ್ಮಕ ರೀತಿಯಲ್ಲಿ ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರತನ್‌ ಅವರು ಟಾಟಾ ಕಂಪೆನಿಯ ಮುಖ್ಯಸ್ಥ ಹುದ್ದೆ ಅಲಂಕರಿಸಿದ ವೇಳೆಯಲ್ಲಿ ಸಂಸ್ಥೆಯು 4 ಬಿಲಿಯನ್‌ ಡಾಲರ್‌ ಮೌಲ್ಯವನ್ನು ಹೊಂದಿತ್ತು. ಆದರೆ ಟಾಟಾ ಅವರು 2012ರಲ್ಲಿ ಹುದ್ದೆಯಿಂದ ನಿರ್ಗಮಿಸಿದ ವೇಳೆಗಾಗಲೇ ಕಂಪೆನಿಯನ್ನು 77 ಬಿಲಿಯನ್‌ ಡಾಲರ್‌ ಮೌಲ್ಯದ ಕಂಪೆನಿಯನ್ನಾಗಿ ಮಾಡಿದ್ದರು. ಅದೂ ಅಲ್ಲದೆ ಕಂಪೆನಿ ಸದ್ಯ 400 ಬಿಲಿಯನ್‌ ಡಾಲರ್‌ ಮೌಲ್ಯವನ್ನು ಹೊಂದಿದೆ. ಅದೂ ಅಲ್ಲದೆ ಸದ್ಯ ಟಾಟಾ ಸಂಸ್ಥೆಯ ಅಡಿಯಲ್ಲಿ ಸುಮಾರು 26 ವಿವಿಧ ಕಂಪೆನಿಗಳು ಕಾರ್ಯನಿರ್ವಹಿಸುತ್ತಿದ್ದು, ಕೇವಲ ಭಾರತವಲ್ಲದೆ ವಿಶ್ವದ ಹಲವು ಭಾಗಗಳಲ್ಲಿ ಟಾಟಾ ತನ್ನ ಇರುವಿಕೆಯನ್ನು ತೋರಿಸಿದೆ. ಕೇವಲ ಲಾಭ ಗಳಿಸುವುದೇ ಅಲ್ಲದೆ ದಾನ ಧರ್ಮದಲ್ಲೂ ಖ್ಯಾತಿ ಪಡೆದುಕೊಂಡಿದೆ. ಒಟ್ಟಿನಲ್ಲಿ ಟಾಟಾ ಭಾರತದ ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿದ್ದಲ್ಲದೆ ಭಾರತದ ಆರ್ಥಿಕ ಸ್ಥಿತಿಯನ್ನೇ ಬದಲಾವಣೆಗೆ ಕಾರಣವಾಗಿದ್ದರು. ಹಿರಿಯ ಬ್ಯಾಂಕರ್ ನಾರಾಯಣನ್ ವಘುಲ್ ಅವರು ಮೇ ತಿಂಗಳಲ್ಲಿ 88 ನೇ ವಯಸ್ಸಿನಲ್ಲಿ ನಿಧನರಾದರು. ಅವರಿಗೆ 2009 ರಲ್ಲಿ ವ್ಯಾಪಾರ ಮತ್ತು ಕೈಗಾರಿಕೆ ವಿಭಾಗದಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ICICI ಸಂಸ್ಥೆಯು ಮುಂದಿನ ದಿನಗಳಲ್ಲಿ ಸೆಕ್ಯುರಿಟೀಸ್, ರೇಟಿಂಗ್ ಕಂಪನಿ ಕ್ರಿಸಿಲ್ ಲಿಮಿಟೆಡ್ ಮತ್ತು ವೆಂಚರ್ ಫಂಡ್ ICICI ವೆಂಚರ್ಸ್ ಅನ್ನು ಸ್ಥಾಪಿಸುವಲ್ಲಿ ಪ್ರಮುಖ ವಹಿಸಿತ್ತು. ಕಳೆದ ಮೇ ತಿಂಗಳಿನಲ್ಲಿ ವಘುಲ್‌ ಅವರು ತಮ್ಮ 88ನೇ ಹರೆಯದಲ್ಲೇ ಇಹಲೋಕ ತ್ಯಜಿಸಿದರು.

 2024: ನಮ್ಮನ್ನಗಲಿದ ದಿಗ್ಗಜ ಉದ್ಯಮಿಗಳ ಸ್ಮರಣೆ

ನಾರಾಯಣನ್ ವಘುಲ್

ಭಾರತದ ದಿಗ್ಗಜ ಬ್ಯಾಂಕರ್‌ ಆಗಿದ್ದ ನಾರಾಯಣನ್‌ ವಘುಲ್‌ ಅವರು ಭಾರತದ ಖ್ಯಾತ ಬ್ಯಾಂಕ್‌ಗಳಲ್ಲಿ ಒಂದಾಗಿರುವ ICICI ಬ್ಯಾಂಕ್‌ನ ಐಸಿಐಸಿಎಂ ಸ್ಥಾಪನೆಯ ವೇಳೆ ಅವರು ಪ್ರಮುಖರಾಗಿದ್ದರು. ಆಧುನಿಕ ಬ್ಯಾಂಕಿಂಗ್‌ನೊಂದಿಗೆ ICICI ಬ್ಯಾಂಕ್‌ ಅನ್ನು ಮುಂದಡಿ ಇರಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ICICI ಬ್ಯಾಂಕ್‌ ನಲ್ಲಿ ವಘುಲ್‌ ಅವರು ಸುಮಾರು 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಆರಂಭಿಕ 10 ವರ್ಷಗಳನ್ನು ಅವರು ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರೆ ಬಳಿಕದ ವರ್ಷಗಳನ್ನು ಅಧ್ಯಕ್ಷರಾಗಿ ಮುಂದುವರೆಸಿದ್ದರು. ಇನ್ನು 1996 ರ ಮೇ ತಿಂಗಳಿನಲ್ಲಿ ವಘುಲ್‌ ಅವರು ಕೆ ವಿ ಕಾಮತ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹಲವು ಕ್ರಾಂತಿಕಾರಕ ಬದಲಾವಣೆ ತಂದಿದ್ದ ವಘುಲ್‌ ಅವರಿಗೆ 2009ರಲ್ಲಿ ವ್ಯಾಪಾರ ಹಾಗೂ ಕೈಗಾರಿಕಾ ವಿಭಾಗದಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ರಾಮೋಜಿ ರಾವ್

ಟಾಲಿವುಡ್ (ತೆಲುಗು ಚಿತ್ರೋದ್ಯಮ) ಉದ್ಯಮವನ್ನು ಜಾಗತಿಕ ಭೂಪಟಕ್ಕೆ ಕೊಂಡೊಯ್ಯುವಲ್ಲಿ ಚೆರುಕುರಿ ರಾಮೋಜಿ ರಾವ್ ಅವರು ಮಹತ್ತರ ಪಾತ್ರ ವಹಿಸಿದ್ದರು. ಬಾಹುಬಲಿ, ಆರ್‌ಆರ್‌ಆರ್ ಮತ್ತು ಇತರ ಬ್ಲಾಕ್‌ಬಸ್ಟರ್‌ಗಳು ಭಾರತದಾದ್ಯಂತ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಸೂಪರ್‌ ಹಿಟ್ ಆಗಿದ್ದವು. ಈ ಎಲ್ಲಾ ಚಿತ್ರಗಳನ್ನು ವಿಶ್ವದ ಅತಿದೊಡ್ಡ ಚಲನಚಿತ್ರ ನಿರ್ಮಾಣ ಸೆಟ್‌ ಆಗಿರುವ ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ಚಿತ್ರೀಕರಿಸಲಾಗಿತ್ತು. ಈ ಸೆಟ್‌ನಲ್ಲಿ ವಿಶ್ವ ದರ್ಜೆಯ ಶೂಟಿಂಗ್ ಸೌಲಭ್ಯವನ್ನು ಹೊಂದಿದ್ದು, ಭಾರತದಾದ್ಯಂತ ಹಲವು ಭಾಷೆಗಳ ಚಿತ್ರಗಳು ಇಲ್ಲಿ ಶೂಟ್‌ ಆಗಿವೆ. ಹಲವು ಇತರೆ ಉದ್ಯಮಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದ ರಾಮೋಜಿ ರಾವ್‌ ಅವರು ಕಳೆದ ಮೇನಲ್ಲಿ ನಿಧನರಾಗಿದ್ದರು.

ಬಿಬೇಕ್ ಡೆಬ್ರಾಯ್

ಸರ್ಕಾರಿ ಮಟ್ಟದಲ್ಲಿ ಹಲವಾರು ಪ್ರಮುಖ ನೀತಿಗಳನ್ನು ರೂಪಿಸುವುದರಿಂದ ಹಿಡಿದು ಪ್ರಧಾನ ಮಂತ್ರಿಯ ಪ್ರಮುಖ ಆರ್ಥಿಕ ಸಲಹೆಗಾರರಾಗಿ ಬಿಬೆಕ್ ಡೆಬ್ರಾಯ್ ಅವರು ಕೆಲಸ ನಿರ್ವಹಿಸಿದ್ದರು. ಬಿಬೇಕ್‌ ಅವರು ಅನುಭವಿ ಅರ್ಥಶಾಸ್ತ್ರಜ್ಞ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದರು. ಡೆಬ್ರಾಯ್ ಅವರು ಸೆಪ್ಟೆಂಬರ್ 2017 ರಿಂದ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷರಾಗಿದ್ದರು.

ಅಮಿಯಾ ಕುಮಾರ್ ಬಾಗ್ಚಿ

ವಿಶ್ರಾಂತ ಪ್ರಾಧ್ಯಾಪಕ, ಆರ್ಥಿಕ ಇತಿಹಾಸಕಾರ ಮತ್ತು ಕೋಲ್ಕತ್ತಾದ ಇನ್‌ಸ್ಟಿಟ್ಯೂಟ್ ಆಫ್ ಡೆವಲಪ್‌ಮೆಂಟ್ ಸ್ಟಡೀಸ್ (ಐಡಿಎಸ್‌ಕೆ) ಸಂಸ್ಥಾಪಕ ನಿರ್ದೇಶಕರಾಗಿ ಅಮಿಯಾ ಕುಮಾರ್ ಬಾಗ್ಚಿ ಅವರು ಸೇವೆ ಸಲ್ಲಿಸಿದ್ದರು. ತಮ್ಮ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸಿದ್ದ ಅಮಿಯಾ ಅವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ನೀಡಿ ಗೌರವಿಸಲಾಯಿತು. ಇದೇ ತಿಂಗಳ ಡಿಸೆಂಬರ್‌ನಲ್ಲಿ ಅಮಿಯಾ ಅವರು ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು.

ಶಶಿಕಾಂತ್ ರೂಯಾ‌

ಶಶಿಕಾಂತ್ ರೂಯಾ, ಮೊದಲ ತಲೆಮಾರಿನ ಉದ್ಯಮಿಯಾಗಿದ್ದು ಅವರು ಪ್ರಸಿದ್ದ ಎಸ್ಸಾರ್‌ ಗ್ರೂಪ್‌ ಅನ್ನು ಜಾಗತಿಕ ಮಟ್ಟದಲ್ಲಿ ಸಂಸ್ಥೆಯನ್ನಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸದ್ಯ ಇದೇ ಎಸ್ಸಾರ್‌ ಗ್ರೂಪ್‌ ವಾರ್ಷಿಕವಾಗಿ ಬರೊಬ್ಬರಿ 14 ಶತಕೋಟಿ ಡಾಲರ್‌ ಮೊತ್ತದ ವಾರ್ಷಿಕ ಆದಾಯ ಗಳಿಸುತ್ತಿದೆ. ಇವರ ನೇತೃತ್ವದಲ್ಲೇ ಸಣ್ಣ ನಿರ್ಮಾಣ ವ್ಯವಹಾರ ಸಂಸ್ಥೆಯೊಂದನ್ನು ಅವರು ಬಹುದೊಡ್ಡ ಸಂಘಟಿತ ಸಂಸ್ಥೆಯನ್ನಾಗಿ ಪರಿವರ್ತಿಸಿದರು. ಆದರೆ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+