ಭಾರತದಾದ್ಯಂತದ ಇರುವ ಎಲ್ಲಾ ಪಬ್ಜಿ ಅಭಿಮಾನಿಗಳಿಗೆ ಇಲ್ಲಿದೆ ಗುಡ್‌ನ್ಯೂಸ್. ಭಾರತದಿಂದ ನಿಷೇಧಕ್ಕೊಳಗಾಗಿದ್ದ ಪಬ್ಜಿ ಗೇಮ್ ಇದೀಗ ಬ್ಯಾಟಲ್‌ಗ್ರೌಂಡ್ ಮೊಬೈಲ್ ಇಂಡಿಯಾ ಎಂಬ ಹೊಸ ಹೆಸರಿನಲ್ಲಿ ಮರು ಪ್ರವೇಶಕ್ಕೆ ಸಿದ್ದಗೊಂಡಿದೆ.
ವರದಿಗಳ ಪ್ರಕಾರ, ಹೊಸ ಹೆಸರಿನೊಂದಿಗೆ, ಮುಂದಿನ ಕೆಲವು ತಿಂಗಳುಗಳಲ್ಲಿ PUBG ಮೊಬೈಲ್ ಇಂಡಿಯನ್ ವರ್ಶನ್ ಬಿಡುಗಡೆಯಾಗುವ ಸಾಧ್ಯತೆಯಿದೆ. ಸ್ಪೋರ್ಟ್ಸ್‌ಕ್ರೀಡಾದ ವರದಿಯ ಪ್ರಕಾರ ಈ ವರ್ಷದ ಮೇ ಅಥವಾ ಜೂನ್ ತಿಂಗಳಲ್ಲಿ ಪಬ್ಜಿ ಮೊಬೈಲ್ ಇಂಡಿಯಾ ಬಿಡುಗಡೆಯಾಗುವ ಸಾಧ್ಯತೆಯಿದೆ.

ಕಳೆದ ವಾರ ಪಬ್ಜಿ ಮೊಬೈಲ್ ಇಂಡಿಯಾದ ಕೆಲವು ಪೋಸ್ಟರ್‌ಗಳು ಸೋರಿಕೆಯಾಗಿತ್ತು. ಇದರಲ್ಲಿ ಪಬ್ಜಿ ಬ್ಯಾಟಲ್‌ಗೌಂಡ್ಸ್ ಮೊಬೈಲ್ ಇಂಡಿಯಾ ಹೆಸರಿನಲ್ಲಿ ಪೋಸ್ಟರ್ ಕಾಣಿಸಿಕೊಂಡಿದ್ದು, ಬಿಡುಗಡೆಯ ದಿನಾಂಕವು ಇನ್ನೂ ಸ್ಪಷ್ಟವಾಗಿಲ್ಲ.
ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಅಥವಾ ಪಬ್ಜಿ ಮೊಬೈಲ್ ಇಂಡಿಯಾ ಕಳೆದ ವಾರ ಮೇ ತಿಂಗಳಲ್ಲಿ ಪ್ರಾರಂಭವಾಗಬಹುದು ಎಂದು ಹಲವಾರು ವರದಿಗಳು ಪ್ರಕಟವಾಗಿತ್ತು. ಆದಾಗ್ಯೂ, ಇದು ಕೇವಲ ಊಹಾಪೋಹ ಸುದ್ದಿಯಾಗಿದ್ದು, ಕಂಪನಿಯು ಬಿಡುಗಡೆ ದಿನಾಂಕಗಳನ್ನು ಅಧಿಕೃತವಾಗಿ ಪ್ರಕಟಿಸಲಿದೆ.
ಇದಲ್ಲದೆ, ಕ್ರಾಫ್ಟನ್ ಈಗಾಗಲೇ "Batlergroundsmobileindia.in" ಎಂಬ ಹೊಸ ವೆಬ್‌ಸೈಟ್ ಡೊಮೇನ್ ಅನ್ನು ಕಳೆದ ತಿಂಗಳು ಏಪ್ರಿಲ್ 7 ರಂದು ನೋಂದಣಿ ಮಾಡಿದೆ.


Click it and Unblock the Notifications