ಇತ್ತೀಚಿನ ದಿನಗಳಲ್ಲಿ ಯುವಕರು ಸ್ವಂತ ಉದ್ಯೋಗ ಪ್ರಾರಂಭಿಸುವತ್ತ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ತಮ್ಮದೇ ಆದ ವ್ಯವಹಾರವನ್ನು ಸ್ಥಾಪಿಸಿ, ಯಶಸ್ಸು ಗಳಿಸಿದ ಅನೇಕ ಯುವಕರು ಸಮಾಜದಲ್ಲಿ ಮಾದರಿಯಾಗಿದ್ದಾರೆ. ಈ ಲೇಖನದಲ್ಲಿ ಸ್ವಂತ ಉದ್ಯೋಗವನ್ನು ಕಟ್ಟಿ ಯಶಸ್ಸು ಸಾಧಿಸಿದ 25ರ ಯುವಕನೊಬ್ಬನ ಯಶೋಗಾಥೆಯನ್ನು ತಿಳಿಸಲಿದ್ದೇವೆ. ಈತನ ಯಶೋಗಾಥೆ ಯುವಕರಿಗೆ ಒಂದು ಪ್ರೇರಣೆಯಾಗಿದೆ. ಕಷ್ಟಪಟ್ಟು ಕೆಲಸ ಮಾಡಿದರೆ ಮತ್ತು ಸರಿಯಾದ ಯೋಜನೆಯನ್ನು ಹಾಕಿಕೊಂಡರೆ, ಯಾವುದೇ ಉದ್ಯೋಗದಲ್ಲಿ ಯಶಸ್ಸು ಸಾಧಿಸಬಹುದು ಎಂಬುದನ್ನು ಈತ ತೋರಿಸಿಕೊಟ್ಟಿದ್ದಾನೆ.
ಹೌದು, ಸಾಧನೆ ಯಾರ ಸ್ವತ್ತೂ ಅಲ್ಲ, ಅದಕ್ಕೆ ಸಾಧಿಸುವ ಛಲವೊಂದಿದ್ದರೆ ಸಾಕು. ಬಿಸಿಲ ನಾಡಿನಿಂದ ಬಂದ ಯುವಕನೊಬ್ಬ ತನ್ನ ಪರಿಶ್ರಮದಿಂದ ಯಶಸ್ಸನ್ನು ಕಂಡುಕೊಂಡಿದ್ದಾನೆ. ಸಿದ್ದಗಂಗಾ ಶ್ರೀಗಳ ಆಶೀರ್ವಾದ ಮತ್ತು ಸ್ನೇಹಿತರ ಸಹಾಯದಿಂದ ಬಡತನದ ಬೇಗೆಯನ್ನು ಮೆಟ್ಟಿ ನಿಂತು, ಚಿಕ್ಕ ವಯಸ್ಸಿನಲ್ಲಿಯೇ ಸಾಧನೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಅವರೇ ಪುನೀತ್ ಐನಾಪುರಿ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುಲಿಕೆರೆ ಗ್ರಾಮದ ಪುನೀತ್ ಐನಾಪುರಿ, ತಾಯಿ ಸಿದ್ದಮ್ಮ ಮತ್ತು ತಂದೆ ಲೋಕೇಶ್ ಅವರ ಪುತ್ರ. ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದ ಇವರು, ಆರನೇ ತರಗತಿಯಲ್ಲಿರುವಾಗಲೇ ತಂದೆಯನ್ನು ಕಳೆದುಕೊಂಡರು. ತಾಯಿಯ ಮಾತಿನಂತೆ ಬೆಂಗಳೂರಿಗೆ ಬಂದ ಇವರು, ಮಾದನಾಯಕನ ಹಳ್ಳಿಯಲ್ಲಿ ಹಾಲು ಮಾರಾಟ ಮಾಡುತ್ತಾ, ಬೇರೆಯವರ ಮನೆಯಲ್ಲಿ ಭಾರವಾಗಬಾರದೆಂದು ತಮ್ಮ ಖರ್ಚಿಗಾಗಿ ಇಡ್ಲಿ,ವಡೆ ಮಾರಾಟ ಮಾಡಲು ಪ್ರಾರಂಭಿಸಿದರು.
ಪುನೀತ್ ಅವರ ದೊಡ್ಡಪ್ಪ ಅಂಡಿಗೆಯಲ್ಲಿ ಒಂದು ರೂಪಾಯಿಗೆ ಇಡ್ಲಿ ಮಾರಾಟ ಮಾಡುತ್ತಿದ್ದರು. ದಿನಕ್ಕೆ ನೂರು- ಇನ್ನೂರು ಇಡ್ಲಿಗಳನ್ನು ಮಾರಾಟ ಮಾಡಿದರೆ ಜೀವನ ಸಾಗುತ್ತಿತ್ತು. ಆಗ ಅವರಿಗೆ ಖರ್ಚಿಗೆ ಒಂದು ಅಥವಾ ಎರಡು ರೂಪಾಯಿ ಸಿಗುತ್ತಿತ್ತು. ಇದೇ ರೀತಿ ಮೂರರಿಂದ ನಾಲ್ಕು ರೂಪಾಯಿಗಳನ್ನು ಖರ್ಚಿಗೆ ಇಟ್ಟುಕೊಂಡು ಮೂರನೇ ತರಗತಿ ಹಾಗೂ ನಾಲ್ಕನೇ ತರಗತಿಯನ್ನು ಮುಗಿಸಿದರು.
ಐದನೇ ತರಗತಿಗೆ ತಮ್ಮ ಊರಿಗೆ ಹಿಂತಿರುಗಿ ನವೋದಯ ಸೆಂಟರ್‌ನಲ್ಲಿ ಕೋಚಿಂಗ್ ಪಡೆದರು. ನಂತರ ಆದರ್ಶ ವಿದ್ಯಾಲಯಕ್ಕೆ ಆಯ್ಕೆಯಾದರು. ಆದರೆ ಮನೆಯಲ್ಲಿ ಓದಿಸಲು ಆಗುವುದಿಲ್ಲ ಎಂದು ಅವರ ತಾಯಿ ಹೇಳಿದ್ದರಿಂದ, ತಮ್ಮ ಸಾಮರ್ಥ್ಯವಿದ್ದರೆ ಓದು ಎಂದು ತಿಳಿಸಿದರು. ನಂತರ ಅಣ್ಣನ ಮನೆಗೆ ಬಂದರು, ಅಲ್ಲಿ ಇಂಗ್ಲಿಷ್ ಮೀಡಿಯಂ ಕಷ್ಟವೆಂದು ತಿಳಿದುಕೊಂಡರು. ಅಣ್ಣನ ಆಕಳುಗಳನ್ನು ನೋಡಿಕೊಂಡು 10ನೇ ತರಗತಿಯಲ್ಲಿ 82% ಅಂಕಗಳನ್ನು ಪಡೆದು ಉತ್ತೀರ್ಣರಾದರು. ಬೇಸಿಗೆ ರಜೆಯಲ್ಲಿ ದಾವಣಗೆರೆಯ ಬಿಎಸ್ ಚನ್ನಪ್ಪ ಸಿಲ್ಕ್ ಅಂಗಡಿಯಲ್ಲಿ ಕೆಲಸಕ್ಕೂ ಕೂಡ ಸೇರಿದರು. ಅಲ್ಲಿ ಸೀರೆಗಳ ಮೂಟೆ ಹೊರುವಂತಹ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರಿಗೆ 14 ಸಾವಿರ ರೂಪಾಯಿ ಸಿಗುತ್ತಿತ್ತು. ಅದರಲ್ಲಿ ಮೂರು ಸಾವಿರವನ್ನು ಕಾಲೇಜು ಶುಲ್ಕಕ್ಕೆಂದು ತೆಗೆದಿಟ್ಟುಕೊಂಡರು.
11ನೇ ತರಗತಿಯ ಬೇಸಿಗೆ ರಜೆಯಲ್ಲಿ ಸೋಲಾರ್ ಪ್ಲೇಟ್ ತೊಳೆಯುವ ಕೆಲಸಕ್ಕೆ ಹೋದರು, ಆದರೆ ವಯಸ್ಸಿನ ಕಾರಣದಿಂದ 17 ದಿನಗಳ ನಂತರ ಆ ಕೆಲಸವನ್ನು ಕಳೆದುಕೊಂಡರು. ನಂತರ ಹೊಸಪೇಟೆ ಮತ್ತು ಪ್ರಿಯದರ್ಶಿ ಲಾಡ್ಜ್‌ನಲ್ಲಿ ಕೆಲಸ ಮಾಡಿದ್ದಾರೆ.
ಬಾರ್‌ಗಳಲ್ಲೂ ಕೂಡ ಕೆಲಸ ಮಾಡಿದ್ದಾರೆ. ಇಂದಿಗೂ ಅವರಿಗೆ ಒಂದು ಎಕರೆ ಜಮೀನು ಕೂಡ ಇಲ್ಲ. ಚಿಕ್ಕ ಮನೆಯಲ್ಲಿ ವಾಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಅಪೇಕ್ಷೆ ಇಲ್ಲದೆ ಸ್ವಾಲಂಬಿಯಾಗಿ ಜೀವನವನ್ನು ಕಟ್ಟಿಕೊಂಡಿದ್ದಾರೆ.
ನೀರಾವರಿ ಹೋರಾಟ, ಸಮಾಜಮುಖಿ ಕೆಲಸ
ಹೊಸಪೇಟೆ ಮತ್ತು ಅವರ ಊರಿನ ನಡುವೆ 80 ಕಿಲೋಮೀಟರ್ ಅಂತರವಿದ್ದು, ನೀರಾವರಿಗಾಗಿ ಹೋರಾಟ ಮಾಡಿದರು. "80 ಕಿಲೋಮೀಟರ್ ದೂರವಿರುವ ನಮಗೆ ನೀರು ಬರುತ್ತಿಲ್ಲ, ಪಾವಗಡಕ್ಕೆ ಹೇಗೆ ನೀರು ಹೋಗುತಿದೆ?" ಎಂದು ಪ್ರಶ್ನಿಸಿ ಹೋರಾಟ ಮಾಡಿದರು. ಆ ಹೋರಾಟಕ್ಕೆ ತಕ್ಕ ಫಲ ಸಿಕ್ಕಿತು, ಅವರ ಕೆರೆಗೆ ನೀರು ತುಂಬಿತು. ಇದರಿಂದ ಎಲ್ಲರಿಗೂ ಅನುಕೂಲವಾಯಿತು. ತಮಗೆ ಸ್ವಂತ ಮನೆ ಮತ್ತು ಹೊಲ ಇಲ್ಲದಿದ್ದರೂ, ನೀರಾವರಿ ಹೋರಾಟ ಮಾಡಿದ್ದಕ್ಕೆ ಎಲ್ಲರೂ ಪ್ರೋತ್ಸಾಹಿಸಿದರು. ಆಗ ಅವರು ಹೆಸರು ಮಾಡಲು ಪ್ರಾರಂಭಿಸಿದರು.
ಆನಂದ ವಿಹಾರ್ ಹೋಟೆಲ್‌ನಲ್ಲಿ ಆರು ವರ್ಷಗಳ ಕಾಲ ಕೆಲಸ ಮಾಡಿದರು. ಅಲ್ಲಿನ ಮಾಲೀಕರು ಉದ್ಯಮದ ಬಗ್ಗೆ ಸಲಹೆ ನೀಡಿದರು. ಎಸ್ಸೆಸ್ಸೆಲ್ಸಿ ಮುಗಿದ ನಂತರ ಕಾಲೇಜು ಶುಲ್ಕಕ್ಕೆ 4,600 ರೂಪಾಯಿಗಳು ಬೇಕಾಗಿದ್ದವು, ಆದರೆ ಸಮವಸ್ತ್ರ ಮತ್ತು ಓಡಾಟದ ಖರ್ಚಿಗೆ ಹಣವಿರಲಿಲ್ಲ. ಅವರ ಅಕ್ಕನ ಮದುವೆಯಾದ್ದರಿಂದ ತಮ್ಮ ಜವಾಬ್ದಾರಿ ಮುಗಿಯಿತೆಂದು ಹೇಳಿದರು. ಕಷ್ಟಪಟ್ಟು ಓದುವುದಾದರೆ ಓದು ಎಂದು ತಿಳಿಸಿದರು. ಅರ್ಧ ತುಮಕೂರನ್ನು ಕೆಲಸಕ್ಕಾಗಿ ಸುತ್ತಿದರು, ಆದರೆ ಕೆಲಸ ಸಿಗಲಿಲ್ಲ. ನಂತರ ರೋಮ್ ಕ್ಲೀನ್ ಕೆಲಸಕ್ಕೆ ಸೇರಿಕೊಂಡರು, ಆದರೆ ಅಲ್ಲಿ ತಮ್ಮವರೇ ಎಂದು ನಂಬಿ ಮೋಸ ಹೋದರು. ಸಿದ್ದಗಂಗಾ ಮಠದಲ್ಲಿ ಪ್ರಾರ್ಥನೆಗೆ ಎಲ್ಲರೂ ಸೇರಿ ಬರುತ್ತಿಲ್ಲವೆಂದು ಹೊರಗೆ ಹಾಕಿದರು. ನಂತರ ಲಾಡ್ಜ್ ಕೆಲಸಕ್ಕೆ ಸೇರಿ ಅಲ್ಲಿ ಬೆಂಕಿ ಅಹುತಿಯಿಂದ ಪಾರಾಗಿದ್ದರು. ಇದನೆಲ್ಲಾ ಸುಧಾರಿಸಿಕೊಂಡು ಡಿಗ್ರಿಯಲ್ಲಿ ಪತ್ರಿಕೋದ್ಯಮ ಓದುವ ಸಂದರ್ಭದಲ್ಲಿ ನೆರೆ ಸಂತ್ರಸ್ತರಿಗಾಗಿ ಹಣವನ್ನು ಸಂಗ್ರಹಿಸಿ, ಮೈಸೂರಿನ ಹೂಣಾಸೂರು ಕ್ಷೇತ್ರಕ್ಕೆ ತಲುಪಿಸಿದರು. ಇದರಿಂದ ಕಾಲೇಜಿನಲ್ಲಿ ತುಂಬಾನೇ ಹೆಸರು ಮಾಡಿದರು.
ಇಡ್ಲಿ ಮಾರಾಟದಿಂದ ಹೋಟೆಲ್ ಉದ್ಯಮದವರೆಗೆ
ಪುನೀತ್ ಅವರು ಚಿಕ್ಕಂದಿನಿಂದಲೇ ಇಡ್ಲಿ ಮಾರಾಟ ಮಾಡಿ ಜೀವನವನ್ನು ಕಟ್ಟಿಕೊಂಡವರು. ಇಂದು ತಮ್ಮ ಹೆಸರಿನ ಎರಡು ಹೋಟೆಲ್‌ಗಳನ್ನು ತೆರೆದು ತಿಂಗಳಿಗೆ ಲಕ್ಷಾಂತರ ರೂಪಾಯಿಗಳನ್ನು ಗಳಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, 36 ಉದ್ಯೋಗಿಗಳಿಗೆ ಕೆಲಸ ನೀಡಿ ಅವರ ಜೀವನಕ್ಕೂ ಆಧಾರವಾಗಿದ್ದಾರೆ.
'ಪುನೀತ್, ಪುನೀತ್ ಎಂದರೆ ಯಾರು ಎಂದು ಅನಿಸುತ್ತಿತ್ತು. ನನ್ನ ತಂದೆ ಕೂಡ ಹೋಟೆಲ್ ಮಾಡಿದ್ದರು. ನಾನು ಕೆಲಸದ ತೃಪ್ತಿಗಾಗಿ ಮೂರು ಹೊತ್ತು ಹಸಿದವರಿಗೆ ಊಟವನ್ನು ನೀಡುವಂತಹ ಈ ಹೋಟೆಲ್ ಕೆಲಸವನ್ನು ಮಾಡಿದೆ' ಎಂದು ಪುನೀತ್ ಹೇಳುತ್ತಾರೆ. ಕೋವಿಡ್ ಸಮಯದಲ್ಲಿ ಆನಂದ ವಿಹಾರ್‌ನವರು ಸಹಾಯ ಮಾಡಿದರು. ಧ್ಯಾನವಾಸಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಒಂದು ಹೋಟೆಲ್ ಮತ್ತು ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 13ರ ಹತ್ತಿರ ಇನ್ನೊಂದು ಹೋಟೆಲ್ ಇದೆ. ಇದು ಅವರ ಐದನೇ ಹೋಟೆಲ್. ಅದರಲ್ಲಿ ಒಂದು ಹೋಟೆಲ್ ಕೋಳಿ ಫಾರಂನಿಂದ ನಷ್ಟವಾಯಿತು. ಇನ್ನೊಂದು ಹೋಟೆಲ್ ಕೆಲವು ಕಾರಣಗಳಿಂದ ಮುಚ್ಚಲ್ಪಟ್ಟಿತು. ಇನ್ನೂ ಮೂರು ಹೋಟೆಲ್‌ಗಳು ಪೂರ್ತಿ ಸಸ್ಯಾಹಾರದ್ದಾಗಿವೆ ಮತ್ತು ಉಳಿದವು ಮಾಂಸಾಹಾರಿ ಹೋಟೆಲ್‌ಗಳಾಗಿವೆ. ಸದ್ಯಕ್ಕೆ ಒಂದು ಸಸ್ಯಾಹಾರಿ ಮತ್ತು ಒಂದು ಮಾಂಸಾಹಾರಿ ಹೋಟೆಲ್ ರನ್ನಿಂಗ್ ಇದೆ.
ಬೆಳಗ್ಗೆ 6 ಗಂಟೆಗೆ ಎದ್ದು, ರಾತ್ರಿ 12 ಗಂಟೆಗೆ ನಿದ್ದೆ
ಇವರು ದಿನ ಶುರುವಾಗುವುದು ಪ್ರತಿನಿತ್ಯ ಬೆಳಗ್ಗೆ 6 ಅಲ್ಲಿಂದ ಹೊಟೇಲ್ ಕೆಲಸವನ್ನು ಆರಂಭ ಮಾಡುತ್ತಾರೆ. ಮಾಲೀಕನಾದರೂ ಕೂಡ ಇವರೇ ಸರ್ವರ್ ಕ್ಲೀನ್ ಗಳಂತಹ ಕೆಲಸವನ್ನು ಮಾಡುತ್ತಾರೆ. ಸೈಟ್ ತೆಗೆದುಕೊಂಡು ಮನೆ ಕೂಡ ನಿರ್ಮಾಣ ಮಾಡಿದ್ದಾರೆ. ಶ್ರಮಪಟ್ಟು ಕೆಲಸ ಮಾಡಿದ್ದಾರೆ. ವ್ಯಾಪಾರದಲ್ಲಿ ಯಾವುದೇ ಸಮಸ್ಯೆಯಿಲ್ಲ, ಪ್ರತಿನಿತ್ಯ ಬೆಳಿಗ್ಗೆ 6 ಗಂಟೆಗೆ ಎದ್ದು ರಾತ್ರಿ 12 ಗಂಟೆಗೆ ಮಲಗುತ್ತಾರೆ. ಎರಡು ಹೋಟೆಲ್‌ಗಳನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.
ಪುನೀತ್ ಐನಾಪುರಿಯವರ ಪ್ರಕಾರ, ಹೋಟೆಲ್ ಉದ್ಯಮಕ್ಕೆ ಬರುವವರು ಎಲ್ಲದಕ್ಕೂ ಸಿದ್ಧರಾಗಿರಬೇಕು. ಬೇರೆಯವರ ಸಹಾಯದಿಂದ ಮಾಡುತ್ತೇನೆ ಎಂದರೆ ಈ ಉದ್ಯಮಕ್ಕೆ ಕಾಲಿಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಸ್ಮರಣ ದಿನದಂದು ಅನ್ನದಾನವನ್ನು ಮಾಡುತ್ತಾರೆ. ಎಲ್ಲ ಕೆಲಸವನ್ನು ನಿಭಾಯಿಸಿಕೊಂಡು ಹೋದರೆ ಅರ್ಧ ಕೆಲಸವನ್ನು ಗೆದ್ದಂತೆ ಎಂದು ಹೇಳುತ್ತಾರೆ. ಎಲ್ಲ ಕೆಲಸವೂ ಗೊತ್ತಿರಬೇಕು.
'ನಮ್ಮ ತಂದೆ-ತಾಯಿ ನಮಗೆ ಕಲಿಸಿರುವ ಕಸುಬು ಎಂದರೆ ಅಡುಗೆ ಕೆಲಸ. ಇದನ್ನು ನಮ್ಮ ಮನೆಯ ದೇವರೆಂದು ತಿಳಿದುಕೊಂಡು ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನನಗೆ ಗುರು ಎಂದರೆ ನಾಗಾರ್ಜುನ ಶಾಸ್ತ್ರಿಗಳು, ಅವರು ಇಂದಿಗೂ ಕೂಡ ಮಾರ್ಗದರ್ಶನ ನೀಡುತ್ತಿದ್ದಾರೆ' ಎಂದು ಪುನೀತ್ ಹೇಳುತ್ತಾರೆ.
ಪುನೀತ್ ಅವರ ಸಮಾಜ ಮುಖಿ ಕಾರ್ಯ
ಅವರ ಹೋಟೆಲ್‌ನಲ್ಲಿ ಕೆಲಸ ಮಾಡುವ ಹುಡುಗನಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದಾರೆ. ಪ್ರತಿ ವರ್ಷವೂ ಅನ್ನದಾನ ಮಾಡುತ್ತಾರೆ. ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಪೆನ್ನುಗಳನ್ನು ನೀಡಿದ್ದಾರೆ. ನಟ ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಇವರು, ತಮ್ಮ ಕೈಲಾದ ಸಹಾಯವನ್ನು ಮಾಡಿದ್ದಾರೆ. ಇತ್ತೀಚೆಗೆ ಯುವಕರು ನಮ್ಮ ಕೈಯಲ್ಲಿ ಏನು ಆಗುವುದಿಲ್ಲ ಎಂದು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುತ್ತಾರೆ, ಹಾಗೆ ಮಾಡದೆ ಶ್ರಮಪಟ್ಟು ಕೆಲಸ ಮಾಡಿ ಎಂದು ಸಲಹೆ ನೀಡುತ್ತಾರೆ.
'ನಮ್ಮ ಹೋಟೆಲ್‌ನಲ್ಲಿ ಕೆಲಸ ಮಾಡಿದವರು ತಮ್ಮದೇ ಆದ ಹೋಟೆಲ್ ಉದ್ಯಮವನ್ನು ಪ್ರಾರಂಭಿಸಿದ್ದಾರೆ. ಅನ್ನಪೂರ್ಣೇಶ್ವರಿ ನಮ್ಮ ಕೈ ಬಿಟ್ಟಿಲ್ಲ' ಎಂದು ಪುನೀತ್ ಹೇಳುತ್ತಾರೆ. ಅವರ ಹೋಟೆಲ್‌ನಲ್ಲಿ ನವಣೆ ಬಾತ್ ಫೇಮಸ್ ಮತ್ತು ದೇವಮಲ್ಲಿಗೆಯಿಂದ ಬಾತ್ ಮಾಡುತ್ತಾರೆ, ಇದು ವಯಸ್ಸಾದವರಿಗೆ ಹೆಚ್ಚಿನ ಅನುಕೂಲವಾಗಿದೆ.
ಎರಡು ಹೋಟೆಲ್‌ಗಳಿಂದ ಸೇರಿ 36 ಜನರು ಕೆಲಸ ಮಾಡುತ್ತಿದ್ದಾರೆ. ಕೆಲಸದಲ್ಲಿ ಇವರು ಲಾಭ- ನಷ್ಟ ಎರಡನ್ನು ಕಂಡಿದ್ದಾರೆ. ಲಕ್ಷ ಲಕ್ಷ ಸಂಪಾದಿಸಿದ್ದರು ಇವರು ಸುಮಾರು 10 ರಿಂದ 20 ಲಕ್ಷದವರೆಗೂ ನಷ್ಟವನ್ನು ಅನುಭವಿಸಿದ್ದಾರೆ ಎಂದು ಅವರು ಹೇಳುತ್ತಾರೆ. ಓದುವ ಸಮಯದಲ್ಲಿ ಶಿಕ್ಷಕರು ಕೂಡ ಸಹಾಯ ಮಾಡಿದ್ದಾರೆ.
ಒಟ್ಟಾರೆಯಾಗಿ, ಪುನೀತ್ ಐನಾಪುರಿ ಅವರ ಜೀವನವು ಯುವಕರಿಗೆ ಒಂದು ಸ್ಪೂರ್ತಿಯಾಗಿದೆ. ಕಷ್ಟಪಟ್ಟು ದುಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಸದ್ಯಕ್ಕೆ ಪುನೀತ್ ಐನಾಪುರಿಯವರ ಎರಡು ಹೋಟೆಲ್‌ಗಳಿಂದ ತಿಂಗಳಿಗೆ ಮೂರರಿಂದ ನಾಲ್ಕು ಲಕ್ಷದವರೆಗೂ ಆದಾಯ ಬರುತ್ತದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications