ತನ್ನ ರಾಷ್ಟ್ರೀಯ ವಿಸ್ತರಣೆ ಯೋಜನೆಗೆ ಮರು ಚಾಲನೆ ನೀಡಿರುವ ಪುರವಂಕರ ಲಿಮಿಟೆಡ್, ಮುಂಬೈನಲ್ಲಿ ತನ್ನ ಮೊದಲ ಗರಿಷ್ಠ ಐಷಾರಾಮಿ (ಅಲ್ಟ್ರಾ - ಲಕ್ಸುರಿ) ಯೋಜನೆಯಾಗಿರುವ 'ಪೂರ್ವ ಕ್ಲೆರ್ಮೊಂಟ್' ಆರಂಭಿಸಿದೆ. ಈ ಯೋಜನೆಯು ಮುಂಬೈ ನಗರದಲ್ಲಿ ಪುರವಂಕರದ ಮರು ಪ್ರವೇಶವನ್ನು ಸೂಚಿಸುತ್ತಿದೆ.
ಇದು ಕಂಪನಿಯ 'ವಲ್ರ್ಡ್ ಹೋಮ್ ಕಲೆಕ್ಷನ್' ಅಡಿಯಲ್ಲಿನ ಅಲ್ಟ್ರಾ - ಲಕ್ಸುರಿ ವಿಭಾಗದಲ್ಲಿನ ಮುಂಬೈನ ಮೊದಲ ಯೋಜನೆಯಾಗಿದೆ. ಮುಂಬೈ ಮಹಾನಗರ ಪ್ರದೇಶದಲ್ಲಿ (ಎಂಎಂಆರ್) ಇದು ಕಾರ್ಯಗತಗೊಳ್ಳಲಿದೆ. 'ವಲ್ರ್ಡ್ ಹೋಮ್ ಕಲೆಕ್ಷನ್' - ಇದು ಪುರವಂಕರ ಲಿಮಿಟೆಡ್‌ನ ಹೊಸ ಸರಣಿಯಾಗಿರುವ ಅಲ್ಟ್ರಾ ಲಕ್ಸುರಿ ಹೋಮ್‍ನ ವ್ಯಾಪ್ತಿಯಲ್ಲಿ ಬರಲಿದೆ.

ಈ ಮಹತ್ವಾಕಾಂಕ್ಷೆಯ ಯೋಜನೆ ಮೂಲಕ ಸುಸ್ಥಿರ, ಭವಿಷ್ಯದ ಮತ್ತು ವಿಶ್ವದ ಖ್ಯಾತ ವಾಸ್ತುಶಿಲ್ಪಿಗಳು ಪುರವಂಕರ ಕಂಪನಿಗಾಗಿಯೇ ಪ್ರತ್ಯೇಕವಾಗಿ ವಿನ್ಯಾಸ ಮಾಡಿರುವ ಮನೆಗಳು ಈ ಯೋಜನೆಯಲ್ಲಿ ಇರಲಿವೆ. ಈ ಯೋಜನೆಯಲ್ಲಿ ಪುರವಂಕರ ಕಂಪನಿಯು ರೂ 450 ಕೋಟಿ ಮೊತ್ತದ ಬಂಡವಾಳ ತೊಡಗಿಸಲಿದ್ದು, ವರಮಾನವು ರೂ. 800 ಕೋಟಿಗೆ ತಲುಪುವ ನಿರೀಕ್ಷೆ ಇದೆ. ಈ ಯೋಜನೆಯಡಿ ನಾಲ್ಕು ಗೋಪುರಗಳಲ್ಲಿ ಒಟ್ಟು 233 ಮನೆಗಳು ಮತ್ತು ಇನ್ನೊಂದು ಗೋಪುರದಲ್ಲಿ 79 ವಾಣಿಜ್ಯ ಘಟಕಗಳು ಇರಲಿವೆ.
ನಿರಂತರವಾಗಿ ಬೆಳವಣಿಗೆ ಕಾಣುತ್ತಲೇ ಇರುವ ಮುಂಬೈ ನಗರದ ರಿಯಲ್ ಎಸ್ಟೇಟ್ ಮಾರುಕಟ್ಟೆಯು ನಗರದ ಉದ್ದಗಲಕ್ಕೂ ವಿಸ್ತರಣೆಯಾಗುತ್ತಿದೆ. ಇತ್ತೀಚಿನ ಕೆಲ ತಿಂಗಳುಗಳಿಂದೀಚೆಗೆ ವಿಲಾಸಿ ಮನೆಗಳ ವಿಭಾಗದಲ್ಲಿ ಸುಸ್ಥಿರ ಬೆಳವಣಿಗೆ ಕಂಡುಬರುತ್ತಿದೆ. ಇದು ಕೋವಿಡ್ ಪಿಡುಗಿನ ನಂತರದ ದಿನಗಳಲ್ಲಿ ಗ್ರಾಹಕರ ಮನಸ್ಥಿತಿಯಲ್ಲಿ ಸಕಾರಾತ್ಮಕ ಬದಲಾವಣೆ ಕಂಡು ಬಂದಿರುವುದನ್ನು ಸೂಚಿಸುತ್ತದೆ.
ಈ ಸುಪ್ತ ಬೇಡಿಕೆ ಮತ್ತು ಜನರ ಮನಸ್ಥಿತಿಯಲ್ಲಿ ಆಗಿರುವ ಬದಲಾವಣೆಯನ್ನು ಸದುಪಯೋಗ ಮಾಡಿಕೊಳ್ಳಲು ಪುರವಂಕರ ಮುಂದಾಗಿದೆ. ತನ್ನ ಅಲ್ಟ್ರಾ - ಲಕ್ಸುರಿ 'ವಲ್ರ್ಡ್ ಹೋಮ್ ಕಲೆಕ್ಷನ್' ಮನೆಗಳನ್ನು ಮುಂಬೈ ನಗರಕ್ಕೆ ಪರಿಚಯಿಸಲು ಇದು ಸೂಕ್ತ ಸಮಯವಾಗಿದೆ ಎಂಬುದು ಪುರವಂಕರ ನಂಬಿಕೆಯಾಗಿದೆ.


Click it and Unblock the Notifications