ಪ್ರಯಾಣಿಕ ವಾಹನಗಳ ರಿಟೇಲ್ ಮಾರಾಟವು 2020ರ ಮಾರ್ಚ್ಗೆ ಹೋಲಿಸಿದರೆ 2021ರ ಮಾರ್ಚ್ನಲ್ಲಿ ಶೇಕಡಾ 28.39ರಷ್ಟು ಹೆಚ್ಚಾಗಿದೆ ಎಂದು ಭಾರತೀಯ ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್ಎಡಿಎ) ಗುರುವಾರ ತಿಳಿಸಿದೆ.
2020ರ ಮಾರ್ಚ್ನಲ್ಲಿ 2.17 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟ ಆಗಿದ್ದವು. ಆದರೆ 2021ರ ಮಾರ್ಚ್ ವೇಳೆಗೆ 2.79 ಲಕ್ಷಕ್ಕೆ ತಲುಪಿದೆ ಎಂದು ಎಫ್ಎಡಿಎ ಹೇಳಿದೆ.
ಇನ್ನು ದ್ವಿಚಕ್ರ ವಾಹನಗಳ ಮಾರಾಟವು ಶೇಕಡಾ 35.26ರಷ್ಟು ಇಳಿಕೆಗೊಂಡಿದ್ದು 11,95,445 ಯುನಿಟ್ಗಳಿಗೆ ತಲುಪಿದೆ. 2020ರ ಮಾರ್ಚ್ ತಿಂಗಳಲ್ಲಿ 18,46,613 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು.

ಇದರ ಜೊತೆಗೆ ಪ್ರಯಾಣಿಕ ವಾಹನಗಳ ಮಾರಾಟ ಕೂಡ ಶೇಕಡಾ 42.2ರಷ್ಟು ಕುಸಿತಗೊಂಡಿದ್ದು, ಕಳೆದ ವರ್ಷದ 1,16,559 ಯುನಿಟ್ಗಳಿಗೆ ಹೋಲಿಸಿದರೆ 67,372 ಯುನಿಟ್ಗಳಿಗೆ ಇಳಿಕೆಗೊಂಡಿದೆ.
ಇದೇ ರೀತಿಯಾಗಿ ತ್ರಿಚಕ್ರ ವಾಹನಗಳ ಮಾರಾಟವು ಶೇಕಡಾ 50.72ರಷ್ಟು ಇಳಿಕೆಗೊಂಡಿದ್ದು, 38,034 ಯುನಿಟ್ಗಳಷ್ಟೇ ಮಾರಾಟವಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ 77,173 ಯುನಿಟ್ಗಳು ಮಾರಾಟವಾಗಿದ್ದವು.
ಆದರೆ ವಿಶೇಷ ಅಂದರೆ ಟ್ರಾಕ್ಟರ್ ಮಾರಾಟವು ಶೇಕಡಾ 29.21ರಷ್ಟು ಏರಿಕೆಗೊಂಡಿದ್ದು 69,082 ಯುನಿಟ್ಗಳು ಕಳೆದ ತಿಂಗಳು ಮಾರಾಟವಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ 53,463 ಟ್ರ್ಯಾಕ್ಟರ್ ಮಾರಾಟವಾಗಿತ್ತು.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರೇ, ಇಂದೇ ನಗದೀಕರಿಸಿಕೊಳ್ಳಿ ನಿಮ್ಮ ಲಾಭ!



Click it and Unblock the Notifications