ಇನ್ನೇನು ಕೆಲವೇ ದಿನಗಳಲ್ಲಿ ಸಾಲು ಸಾಲು ರಜೆ ಸಿಗಲಿದೆ. ಅತ್ತ ಮಕರ ಸಂಕ್ರಾಂತಿ, ಮುಂದಿನ ವಾರ ಗಣರಾಜ್ಯೋತ್ಸವ, ವಾರದ ರಜೆ, ಹೀಗೆ ಹಲವು ರಜೆ ಸಿಗೋದಂತು ಪಕ್ಕಾ. ಮಕರ ಸಕ್ರಾಂತಿ (Makara Sankranti) ಹಬ್ಬದ ಸಂದರ್ಭದಲ್ಲಿ ಈ ಬಾರಿ ಊರಿಗೆ ಹೋಗೋರ ಸಂಖ್ಯೆ ಜಾಸ್ತಿಯೇ ಇದೆ. ಅದೇ ಕಾರಣದಿಂದ ಇದೀಗ ಭಾರತೀಯ ರೈಲ್ವೇ (Indian Railways) ಇಲಾಖೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಸಾಲು ಸಾಲು ಹಬ್ಬ, ರಜೆ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲು ಸೇವೆಯನ್ನು ಘೋಷಣೆ ಮಾಡಿದೆ.

ಹೌದು, ಮಕರ ಸಂಕ್ರಾಂತಿ, ಗಣರಾಜ್ಯೋತ್ಸವ ಹಿನ್ನೆಲೆ ಬೆಂಗಳೂರಿಂದ ಊರಿಗೆ ಹೋಗೋರಿಗೆ ರೈಲ್ವೇ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ. ರಾಜ್ಯದ ಪ್ರಮುಖ ಮಾರ್ಗವಾದ ಬೆಂಗಳೂರು-ವಿಜಯಪುರ ನಡುವೆ ವಿಶೇಷ ರೈಲು ಸೇವೆಯನ್ನು ಆರಂಭಿಸಿದೆ. ಇದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ ಓದಿ.
ಸಂಕ್ರಾಂತಿ ಪ್ರಯುಕ್ತ ವಿಶೇ ರೈಲು!
ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆ ಬಹಳಷ್ಟು ಮಂದಿ ಊರಿಗೆ ತೆರಳುವವರು ಇರುತ್ತಾರೆ. ಅದೇ ಕಾರಣದಿಂದ ಭಾರತೀಯ ರೈಲ್ವೇ ಇಲಾಖೆ ಈ ವಿಶೇಷ ನಿರ್ಧಾರ ತೆಗೆದುಕೊಂಡಿದೆ. ಈ ಕುರಿತು ರೈಲ್ವೇ ಇಲಾಖೆ ಮಾಹಿತಿ ನೀಡಿದ್ದು, ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು, ನೈಋತ್ಯ ರೈಲ್ವೇ ಇಲಾಖೆ ಎಸ್‌ಎಂವಿಟಿ ಬೆಂಗಳುರು ಮತ್ತು ವಿಜಯಪುರ ನಡುವೆ ವಿಶೇಷ ರೈಲು ಸೇವೆ ನೀಡಲು ಮುಂದಾಗಿದೆ.
ಬೆಂಗಳೂರು ಟು ವಿಜಯಪುರ ವಿಶೇಷ ರೈಲು!
ವೇಳಾಪಟ್ಟಿ ಪ್ರಕಾರ ರೈಲು ಸಂಖ್ಯೆ 06245 ಎಸ್‌ಎಂವಿಟಿ ಬೆಂಗಳುರು ಟು ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಜನವರಿ 13 (ಮಂಗಳವಾರ) ರಂದು ಮತ್ತು ಜನವರಿ 23 ರಂದು ರಾತ್ರಿ 7:15 ಕ್ಕೆ ಎಸ್‌ಎಂವಿಟಿ ಬೆಂಗಳೂರಿನಿಂದ ಪ್ರಯಾಣ ಆರಂಭಿಸಲಿದೆ. ಈ ರೈಲು ಮರುದಿನ ಬೆಳಿಗೆ 7 ಗಂಟೆಗೆ ವಿಜಯಪುರ ತಲುಪುತ್ತದೆ.
ಇನ್ನು ರೈಲು ಸಂಖ್ಯೆ 06246 ವಿಜಯಪುರ ಟು ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಜನವರಿ 18 (ಭಾನುವಾರ) ಮತ್ತು ಜನವರಿ 26 (ಸೋಮವಾರ) ವಿಜಯಪುರದಿಂದ ಸಂೆ 5:30 ಕ್ಕೆ ಹೊರಡುತ್ತದೆ. ಈ ರೈಲು ಮರುದಿನ ಬೆಳಿಗ್ಗೆ 6:30 ಕ್ಕೆ ಎಸ್‌ಎಂವಿಟಿ ಬೆಂಗಳೂರು ರೈಲು ನಿಲ್ದಾಣವನ್ನು ತಲುಪುತ್ತದೆ.
ಒಂದು ರೈಲು, 6 ಜಿಲ್ಲೆಗಳಿಗೆ ಗುಡ್ ನ್ಯೂಸ್!
ಇನ್ನು ಈ ವಿಶೇಷ ರೈಲುಗಳು (06245-06246) ಬಾಣಸವಾಡಿ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್‌ಎಸ್‌ಎಸ್ ಹಾವೇರಿ, ಬಾದಾಮಿ, ಬಾಗಲಕೋಟೆ, ಆಲಮಟ್ಟಿ ನಿಲ್ದಾಣಗಳನ್ನು ಹೊಂದಿರಲಿದೆ. ಇನ್ನು ಈ ರೈಲುಗಳೂ 22 ಬೋಗಿಗಳನ್ನು ಹೊಂದಿದ್ದು, ವಿಶೇಷ ರೈಲಿನಿಂದಾಗಿ 6 ಜಿಲ್ಲೆಗ ಜನರಿಗೆ ಅನುಕೂಲವಾಗೋದಂತೂ ನಿಜ. ಪ್ರತೀ ಹಬ್ಬ, ಏನಾದರು ಸರಣಿ ರಜೆಗಳಿದ್ದಾಗ ರೈಲ್ವೇ ಇಲಾಖೆ ಈ ರೀತಿಯ ವಿಶೇಷ ರೈಲು ಸೇವೆಯನ್ನು ಒದಗಿಸುತ್ತದೆ. ಅದೇ ರೀತಿ ಈ ಬಾರಿ ಮಕರ ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವ ಪ್ರಯುಕ್ತ ಈ ವಿಶೇಷ ರೈಲು ಸೇವೆ ಘೋಷಿಸಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications