ನವದೆಹಲಿ, ಏಪ್ರಿಲ್ 8: ನೀರಿನ ಬಿಕ್ಕಟ್ಟು ಎದುರಿಸುತ್ತಿರುವ ಉದ್ಯಾನ ನಗರಿ ಬೆಂಗಳೂರಿಗೆ ಸಿಹಿಸುದ್ದಿಯೊಂದು ಬಂದಿದೆ. ಯುಗಾದಿ ಬಳಿಕ ನಗರಕ್ಕೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಕಳೆದ ಒಂದು ತಿಂಗಳಿನಿಂದ ಬಿಸಿಲಿನ ಬೇಗೆಯಿಂದ ತತ್ತರಿಸುತ್ತಿರುವ ಬೆಂಗಳೂರಿಗರು ಯುಗಾದಿ ನಂತರ ನೆಮ್ಮದಿಯ ನಿಟ್ಟುಸಿರು ಬಿಡಲಿದ್ದಾರೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸುಳಿವು ನೀಡಿದೆ.

ಇತ್ತೀಚೆಗೆ ನೀಡಲಾದ ಸಂಭವನೀಯ ಮಳೆಯ ಮುನ್ಸೂಚನೆ ಪ್ರಕಾರ ದಕ್ಷಿಣ ಒಳನಾಡು ಕರ್ನಾಟಕದ ಜಿಲ್ಲೆಗಳಲ್ಲಿ ಏಪ್ರಿಲ್‌ನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುತ್ತದೆ ಎಂದಿದೆ. ಐಎಂಡಿಯ ಇತ್ತೀಚಿನ ಮುನ್ಸೂಚನೆಯು ಬೆಂಗಳೂರು ಸೇರಿದಂತೆ ಪ್ರದೇಶದಲ್ಲಿ ಸಾಮಾನ್ಯದಿಂದ ಸಾಮಾನ್ಯಕ್ಕಿಂತ ಮಳೆಯ ಮುನ್ಸೂಚನೆ ನೀಡಿದೆ.
ಮಳೆಯಾಗುವ ಮುನ್ಸೂಚನೆ ಸಾರ್ವಜನಿಕರಲ್ಲಿ ಸಂತಸ ತಂದಿದೆ. ಬೆಂಗಳೂರು ಮತ್ತು ದಕ್ಷಿಣ ಒಳನಾಡು ಕರ್ನಾಟಕ ಜಿಲ್ಲೆಗಳು ಏಪ್ರಿಲ್ ಎರಡನೇ ವಾರದಲ್ಲಿ ಬೇಸಿಗೆಯ ತುಂತುರು ಮಳೆ ಸುರಿಯಲಿದೆ. ಇದು ತಿಂಗಳ ಅಂತ್ಯದವರೆಗೂ ಮುಂದುವರೆಯುವುದು. ಈ ಬಗ್ಗೆ ಬೆಂಗಳೂರಿನ ಐಎಂಡಿಯ ಹಿರಿಯ ವಿಜ್ಞಾನಿ ಎ ಪ್ರಸಾದ್ ಮಾತನಾಡಿ, "ಯುಗಾದಿ ಹಬ್ಬದ ದಿನದಿಂದ ಪ್ರತ್ಯೇಕ ಪ್ರದೇಶಗಳಲ್ಲಿ ಕೆಲವು ಸಣ್ಣ ತುಂತುರು ಮಳೆಯೊಂದಿಗೆ ಮಳೆ ಪ್ರಾರಂಭವಾಗಬಹುದು ಮತ್ತು ಹಬ್ಬದ ವಾರದ ದ್ವಿತೀಯಾರ್ಧದಲ್ಲಿ ಕ್ರಮೇಣ ಸಾಧಾರಣ ಮಳೆಯಾಗಬಹುದು" ಎಂದು ತಿಳಿಸಿದ್ದಾರೆ.
ನಗರದಲ್ಲಿ ಅಲ್ಲಲ್ಲಿ ಮಳೆಯಾಗಲಿದೆ. ಇದು ಜೋರಾದ ಗಾಳಿ ಮತ್ತು ಗುಡುಗು ಸಹಿತವಾಗಿರುತ್ತದೆ. ನಗರದಾದ್ಯಂತ ಏಕರೂಪವಾಗಿ ಮಳೆಯಾಗದಿದ್ದರೂ, ಕೆಲವು ಪ್ರದೇಶಗಳಲ್ಲಿ ಸಾಮಾನ್ಯ ವ್ಯಾಪ್ತಿಯಿಂದ ಸ್ವಲ್ಪ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ ಎಂದು ಮತ್ತೊಬ್ಬ ಹವಾಮಾನಶಾಸ್ತ್ರಜ್ಞರು ತಿಳಿಸಿದ್ದಾರೆ.
ಮಳೆಗೆ ಇನ್ನೂ ಒಂದು ವಾರ ಬಾಕಿ ಇರುವಾಗ ಮುಂದಿನ ಮೂರು ದಿನಗಳಲ್ಲಿ ಶಾಖದ ಪರಿಸ್ಥಿತಿಗಳು ಇರಲಿದೆ ಎಂದು ಐಎಂಡಿಯ ಹವಾಮಾನಶಾಸ್ತ್ರಜ್ಞರು ತಿಳಿಸಿದ್ದಾರೆ. ಬೆಂಗಳೂರು ಮತ್ತು ಇತರ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಪೀಕ್ ಹೀಟ್ ವೇವ್ ಪರಿಸ್ಥಿತಿಗಳು ಮುಂದುವರೆಯುತ್ತದೆ. ಬೆಂಗಳೂರಿನಲ್ಲಿ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.ಇದು ಏಪ್ರಿಲ್‌ನಲ್ಲಿ ಸರಾಸರಿಗಿಂತ 3 ಡಿಗ್ರಿ ಹೆಚ್ಚಾಗಿದೆ. ಇದು ವಾರಾಂತ್ಯದ ವೇಳೆಗೆ ಕೆಲವು ಅಂಶಗಳಿಂದ ಸ್ವಲ್ಪ ಹೆಚ್ಚಾಗುವ ನಿರೀಕ್ಷೆಯಿದೆ ಮತ್ತೊಬ್ಬ ಹವಾಮಾನಶಾಸ್ತ್ರಜ್ಞರು ಹೇಳಿದರು.


Click it and Unblock the Notifications