ಒಂದು ಗಂಟೆ ಷೇರು ವಹಿವಾಟಿನಲ್ಲಿ 199 ಕೋಟಿ ರು. ಝುಂಝುನ್ 'ಮಾಯ'

ಟೈಟಾನ್ ಕಂಪೆನಿ ಷೇರಿನ ಬೆಲೆ ಮಂಗಳವಾರ (ಆಗಸ್ಟ್ 11, 2020) ಬೆಳಗಿನ ವಹಿವಾಟಿನಲ್ಲಿ 4% ಕುಸಿತ ಕಂಡು, 1057 ರುಪಾಯಿಗೆ ಇಳಿಯಿತು. ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದಲ್ಲಿ ಕಂಪೆನಿಯು 270 ಕೋಟಿ ರುಪಾಯಿ ನಿವ್ವಳ ನಷ್ಟ ದಾಖಲಿಸಿದೆ. ಆ ಹಿನ್ನೆಲೆಯಲ್ಲಿ ಷೇರಿನ ಬೆಲೆ ಇಳಿದಿದೆ. ಇದರಿಂದ ಷೇರು ಮಾರುಕಟ್ಟೆ ವಹಿವಾಟು ಅರಂಭಿಸಿದ ಕೇವಲ ಒಂದೇ ಗಂಟೆಯಲ್ಲಿ ಹೂಡಿಕೆದಾರ ರಾಕೇಶ್ ಝುಂಝುನ್ ವಾಲಾ 199 ಕೋಟಿ ರುಪಾಯಿ ಕಳೆದುಕೊಂಡಿದ್ದಾರೆ.

ಟೈಟಾನ್ ಕಂಪೆನಿ ಷೇರಿನ ಬೆಲೆ ಇಳಿದರೆ ಝುಂಝುನ್ ವಾಲಾ ಏಕೆ ಹಣ ಕಳೆದುಕೊಳ್ಳಬೇಕು ಎಂಬುದು ನಿಮ್ಮ ಪ್ರಶ್ನೆ ಆಗಿದ್ದಲ್ಲಿ ಉತ್ತರ ಇಲ್ಲಿದೆ. ಜೂನ್ ಕೊನೆ ಹೊತ್ತಿಗೆ ಝುಂಝುನ್ ವಾಲಾ ಅವರು ಟೈಟಾನ್ ಕಂಪೆನಿಯಲ್ಲಿ 4.43% ಷೇರಿನ ಪಾಲು ಹೊಂದಿದ್ದಾರೆ. ಅದನ್ನು ಸಂಖ್ಯೆಗಳಲ್ಲಿ ಹೇಳಬೇಕೆಂದರೆ 3.93 ಕೋಟಿ ಷೇರುಗಳು.

ಒಂದು ಗಂಟೆ ಷೇರು ವಹಿವಾಟಿನಲ್ಲಿ 199 ಕೋಟಿ ರು. ಝುಂಝುನ್ 'ಮಾಯ'

ಆ ಲೆಕ್ಕಾಚಾರದಲ್ಲಿ ಸೋಮವಾರದಂದು 4354 ಕೋಟಿ ರುಪಾಯಿ ಇದ್ದ ಝುಂಝುನ್ ವಾಲಾ ಹೂಡಿಕೆ ಮೌಲ್ಯವು 4189 ಕೋಟಿಗೆ ಇಳಿದು 165 ಕೋಟಿ ನಷ್ಟವಾಯಿತು. ಇದರ ಜತೆಗೆ ರಾಕೇಶ್ ಪತ್ನಿ ರೇಖಾ ಅವರ ಹೆಸರಿನಲ್ಲೂ ಟೈಟಾನ್ ಕಂಪೆನಿಯ 97,40,575 ಷೇರುಗಳಿವೆ. ಅದರಿಂದ ಆದ ನಷ್ಟವನ್ನು ಸಹ ಲೆಕ್ಕ ಹಾಕಿದ್ದಲ್ಲಿ ಭಾರೀ ಲುಕ್ಸಾನು ಅನುಭವಿಸಿದಂತಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+