ಭಾರತದ ವಾರೆನ್ ಬಫೆಟ್ ಎಂದೇ ಖ್ಯಾತಿ ಪಡೆದಿರುವ, ಖ್ಯಾತ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಯುವ ಹೂಡಿಕೆದಾರರಿಗೆ ಸ್ಫೂರ್ತಿ. ಹೀಗಾಗಿಯೇ ಅವರು ಹೂಡಿಕೆ ಮಾಡುವ ಷೇರುಗಳು ಸಾಕಷ್ಟು ಸುದ್ದಿಯಲ್ಲಿರುತ್ತವೆ.
ಇತ್ತೀಚೆಗಷ್ಟೇ ರಾಕೇಶ್ ಜುಂಜುನ್‌ವಾಲ ಈ ಐದು ಕಂಪನಿಗಳಲ್ಲಿ ತಮ್ಮ ಪಾಲನ್ನು ಹೆಚ್ಚಿಸಿದ್ದು, ಎರಡರಲ್ಲಿ ಹೊಸ ಹೂಡಿಕೆಗಳನ್ನು ಮಾಡಿದ್ದಾರೆ. ಏಪ್ರಿಲ್ 25 ರಲ್ಲಿ ಇಕ್ವಿಟಿಯಿಂದ ಸಂಗ್ರಹಿಸಲಾದ ಡೇಟಾದ ಮೂಲಕ ಈ ಮಾಹಿತಿ ಬಹಿರಂಗಗೊಂಡಿದೆ.

ಮಾರ್ಚ್ 31ಕ್ಕೆ ಕೊನೆಗೊಂಡ 2020-21ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ರಾಕೇಶ್ ಜುಂಜುನ್‌ವಾಲಾ ಫೋರ್ಟಿಸ್ ಹೆಲ್ತ್‌ಕೇರ್, ಟಿವಿ 18 ಬ್ರಾಡ್‌ಕಾಸ್ಟ್, ಜುಬಿಲೆಂಟ್ ಫಾರ್ಮೋವಾ, ಆಗ್ರೋ ಟೆಕ್ ಫುಡ್ಸ್, ಮತ್ತು ಎಂಸಿಎಕ್ಸ್‌ನಲ್ಲಿ ಹೂಡಿಕೆ ಹೆಚ್ಚಿಸಿದ್ದಾರೆ. ಯಾವ ಕಂಪನಿ ಷೇರು ಮೇಲೆ ಎಷ್ಟು ಪಾಲು ಹೆಚ್ಚಾಗಿದೆ ಎಂಬ ಮಾಹಿತಿ ಈ ಕೆಳಗಿದೆ.
ಫೋರ್ಟಿಸ್ ಹೆಲ್ತ್‌ಕೇರ್ ಲಿಮಿಟೆಡ್: 4.31% (3.97)
ಟಿವಿ18 ಬ್ರಾಡ್‌ಕಾಸ್ಟ್: 2.6% (2.51)
ಜುಬಿಲೆಂಟ್ ಫಾರ್ಮೊವಾ ಲಿಮಿಟೆಡ್ : 6.29% (5.82)
ಆಗ್ರೋ ಟೆಕ್ ಫುಡ್ಸ್: 8.22% (8.01)
ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್ ಆಫ್ ಇಂಡಿಯಾ ಲಿ.(ಎಂಸಿಎಕ್ಸ್): 4.9% (3.92)


Click it and Unblock the Notifications