Ranya Rao Case: ದೊಡ್ಡ ಟ್ವಿಸ್ಟ್! ರನ್ಯಾ ರಾವ್ ಈ ಸಂಘಟನೆಗೆ ಭಾಗವಂತೆ.. ಯಾವುದು ಗೊತ್ತಾ?

ಇತ್ತೀಚೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(kempegowda international airport)ನಟಿ ಅರೆಸ್ಟ್ ಆಗಿದ್ದರು. ಚಿನ್ನ(Gold Smuggling) ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ( Ranya Rao)ಬಂಧನವಾದ ಸುದ್ದಿ ರಾಜ್ಯ, ದೇಶದೆಲ್ಲೆಡೆ ದೊಡ್ಡ ಸಂಚಲನ ಸೃಷ್ಟಿಸಿದೆ. ಇದೀಗ, ಈ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಇವರು ಕಳ್ಳಸಾಗಣೆ ಸಿಂಡಿಕೇಟ್‌ನ ಭಾಗವಾಗಿದ್ದರು ಮತ್ತು ಹಲವು ಬಾರಿ ದೇಶಕ್ಕೆ ಅಕ್ರಮವಾಗಿ ಚಿನ್ನವನ್ನು ತಂದಿದ್ದರು ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ನ್ಯಾಯಾಲಯಕ್ಕೆ ಮಾಹಿತಿಯನ್ನು ನೀಡಿದೆ.

ಇನ್ನು ಈ ಪ್ರಕರಣದಲ್ಲಿ ಪ್ರಮುಖ ನಾಯಕಿಯಾದ ನಟಿ ರನ್ಯಾ ರಾವ್(Actress Ranya Rao) ಪೊಲೀಸ್ ಮಹಾನಿರ್ದೇಶಕ ರಾಮಚಂದ್ರ ರಾವ್ ಅವರ ಪುತ್ರಿ ಎಂಬುದು ಜಗಜ್ಜಾಹೀರಾಗಿದೆ. ಈಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಅವರಿಂದ 12.56 ಕೋಟಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ಅವರ ಮನೆಯಲ್ಲಿ ನಡೆಸಿದ ಶೋಧದಲ್ಲಿ 2.06 ಕೋಟಿ ಮೌಲ್ಯದ ಚಿನ್ನಾಭರಣಗಳು ಮತ್ತು 2.67 ಕೋಟಿ ಮೌಲ್ಯದ ಭಾರತೀಯ ಕರೆನ್ಸಿ ಪತ್ತೆಯಾಗಿದೆ.

ದೊಡ್ಡ ಟ್ವಿಸ್ಟ್! ರನ್ಯಾ ರಾವ್ ಈ ಸಂಘಟನೆಗೆ ಭಾಗವಂತೆ ಯಾವುದು ಗೊತ್ತಾ?

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಕಳ್ಳಸಾಗಣೆ ಸಿಂಡಿಕೇಟ್‌ನ ಭಾಗವಾಗಿದ್ದರು ಮತ್ತು ಹಲವು ಬಾರಿ ದೇಶಕ್ಕೆ ಅಕ್ರಮವಾಗಿ ಚಿನ್ನವನ್ನು ತಂದಿದ್ದರು ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಕರ್ನಾಟಕ ನ್ಯಾಯಾಲಯಕ್ಕೆ ಮಾಹಿತಿಯನ್ನು ತಿಳಿಸಿದ್ದಾರೆ.

ಮಾರ್ಚ್ 12 ರಂದು, ಕೇಂದ್ರ ತನಿಖಾ ದಳ (ಸಿಬಿಐ) ಜೊತೆಗೆ ಪ್ರಕರಣದ ತನಿಖೆ ನಡೆಸುತ್ತಿರುವ ಡಿಆರ್‌ಐ , ಹವಾಲಾ ಮೂಲಕ ಹಣವನ್ನು ವ್ಯವಸ್ಥೆ ಮಾಡಿ ವರ್ಗಾಯಿಸಲಾಗಿದೆ ಎಂದು ಹೇಳಿತು ಮತ್ತು ಅವರು ಆ ಮಾರ್ಗದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇನ್ನೂ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್‌ ಹೆಚ್ಚಿನ ಸಂಪನ್ಮೂಲಗಳು ಮತ್ತು ಅತ್ಯಾಧುನಿಕ ಜಾಲವನ್ನು ಹೊಂದಿರುವ ದೊಡ್ಡ ಸಿಂಡಿಕೇಟ್‌ನ ಭಾಗವಾಗಿ ಕಂಡುಬರುತ್ತಿರುವುದರಿಂದ, ಅವರು ಯಾವುದೇ ಅಪರಾಧವನ್ನು ಮಾಡದಂತೆ ತಡೆಯಲು ಅವರನ್ನು ಬಂಧಿಸುವುದು ಅವಶ್ಯಕ ಎಂದು ಮಾಹಿತಿ ತಿಳಿದು ಬಂದಿದೆ.

ಕಳ್ಳಸಾಗಣೆ ದಂಧೆ

ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿ ಮಾಡಿರುವ ಪ್ರಕಾರ ದುಬೈನಿಂದ ಕಾರ್ಯನಿರ್ವಹಿಸುತ್ತಿರುವ "ಸಂಘಟಿತ ಕಳ್ಳಸಾಗಣೆ ಸಿಂಡಿಕೇಟ್ ನ ದೊಡ್ಡ ಪಿತೂರಿ ಮತ್ತು ಅದರಲ್ಲಿ ಸರ್ಕಾರಿ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಸುವಂತೆ ಡಿಆರ್‌ಐ ಸಿಬಿಐ ಅನ್ನು ಕೇಳಿದೆ ಎಂದು ಅವರು ವರದಿ ಮಾಡಿದ್ದಾರೆ.

ಇನ್ನೂ ಇವರು ಈ ತಿಂಗಳ ಆರಂಭದಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಒಮಾನ್ ಮತ್ತು ಯುಎಇಯ ಇಬ್ಬರು ವಿದೇಶಿ ಪ್ರಜೆಗಳನ್ನು18.92 ಕೋಟಿ ಮೌಲ್ಯದ 21.28 ಕೆಜಿ ಚಿನ್ನದೊಂದಿಗೆ ಬಂಧಿಸಿದ ನಂತರ ಡಿಆರ್‌ಐ ಸಿಬಿಐಗೆ ದೂರು ನೀಡಿತು .

ಕನ್ನಡ ನಟಿ ರನ್ಯಾ ರಾವ್ ಅವರ ಸ್ನೇಹಿತ ತರುಣ್ ಕೊಂಡರಾಜು ಅವರನ್ನು ಡಿಆರ್‌ಐ ವಶಕ್ಕೆ ತೆಗೆದುಕೊಂಡು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದೆ ಎಂದು ಸುದ್ದಿ ಸಂಸ್ಥೆಗಳು ಮಾಹಿತಿಯನ್ನು ತಿಳಿಸಿದೆ,

ಸಿಐಡಿ ತನಿಖೆ ಹಿಂತೆಗೆದುಕೊಂಡ ರಾಜ್ಯ ಸರ್ಕಾರ

ನಟಿ ರನ್ಯಾ ರಾವ್ ಅವರ ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸ್ ಅಧಿಕಾರಿಗಳ ಸಂಭಾವ್ಯ ಲೋಪಗಳು ಮತ್ತು ಕರ್ತವ್ಯ ಲೋಪದ ಬಗ್ಗೆ ತನಿಖೆ ನಡೆಸುವಂತೆ ಕ್ರಿಮಿನಲ್ ತನಿಖಾ ಇಲಾಖೆ (ಸಿಐಡಿ) ಗೆ ನಿರ್ದೇಶನ ನೀಡಿದ್ದ ಆದೇಶವನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಿಂತೆಗೆದುಕೊಂಡಿದೆ .

ಆರಂಭದಲ್ಲಿ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ಉಲ್ಲಂಘನೆಯ ತನಿಖೆ ನಡೆಸುವ ಕಾರ್ಯವನ್ನು ರಾಜ್ಯ ಪೊಲೀಸರ ಸಿಐಡಿಗೆ ವಹಿಸಲಾಗಿತ್ತು.

ಸದ್ಯ ಈ ಪ್ರಕರಣ ಸಂಬಂಧ ತನಿಖೆ ಚುರುಕುಗತಿಯಲ್ಲಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಯಾವೆಲ್ಲಾ ಮಾಹಿತಿಗಳು ಹೊರ ಬೀಳುತ್ತವೆ, ಈ ಪ್ರಕರಣದಲ್ಲಿ ಯಾರದ್ದೆಲ್ಲಾ ಕೈವಾಡವಿದೆ, ಇದರ ಹಿಂದಿನ ಉದ್ದೇಶವೇನು, ಇದು ಎಂಬುದೆಲ್ಲಾ ತಿಳಿದುಬರಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+