ನಟಿ ರನ್ಯಾರಾವ್ ಅವರಿಗೆ ಜೈಲೋ? ಬೇಲೋ? ಇಂದೇ ನಿರ್ಧಾರವಾಗಲಿದೆ ರನ್ಯಾರಾವ್ ಜಾಮೀನು ಭವಿಷ್ಯ. ಹೌದು, ಗೋಲ್ಡ್ ಸ್ಮಗ್ಲಿಂಗ್ (ಚಿನ್ನ ಅಕ್ರಮ ಸಾಗಾಟ) ಪ್ರಕರಣದ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿತ್ತು. ಇದೀಗ ಅಂತಿಮ ಹಂತಕ್ಕೆ ಬಂದು ತಲುಪಿದೆ.
ಹೌದು ಈ ಹಿಂದೆ ನಟಿ ರನ್ಯಾ ವಿಶೇಷ ನ್ಯಾಯಾಲಯ ಮತ್ತು ಹೈಕೋರ್ಟ್‌ನಿಂದ ಜಾಮೀನು ಪಡೆಯಲು ಪ್ರಯತ್ನವನ್ನು ಪಡೆದರು ಅದೆಲ್ಲಾ ವಿಫಲವಾಗಿದ್ದವು. ಇದರ ನಡುವೆಯೂ ಡಿಆರ್‌ಐ ನಿಗದಿತ ಅವಧಿಯಲ್ಲಿ ಚಾರ್ಜ್‌ಶೀಟ್ ಸಲ್ಲಿಸದ ಕಾರಣ ಶಾಸನಬದ್ಧ ಜಾಮೀನಿಗಾಗಿ ಅರ್ಜಿಯ ಸಲ್ಲಿಕೆಯನ್ನು ಮಾಡಿದ್ದರು ಆದ್ದರಿಂದ ನಟಿ ರನ್ಯಾ ರಾವ್‌ಗೆ ಜಾಮೀನು ಮಂಜೂರು ಮಾಡಬೇಕೆಂದು ಆಕೆ ಪರ ವಕೀಲ ಕಿರಣ್ ಜವಳಿ ಅವರು ಮಾಹಿತಿಯನ್ನು ನೀಡಿದ್ದಾರೆ ಹಾಗಾಗಿ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಇಂದು ತೀರ್ಪು ನೀಡಬಹುದು.

ಈ ಪ್ರಕರಣದಲ್ಲಿ ಪ್ರಮುಖ ನಾಯಕಿಯಾದ ನಟಿ ರನ್ಯಾ ರಾವ್(Actress Ranya Rao) ಪೊಲೀಸ್ ಮಹಾನಿರ್ದೇಶಕ ರಾಮಚಂದ್ರ ರಾವ್ ಅವರ ಪುತ್ರಿ ಎಂಬುದು ಜಗಜ್ಜಾಹೀರಾಗಿದೆ. ಈಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಅವರಿಂದ 12.56 ಕೋಟಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ಅವರ ಮನೆಯಲ್ಲಿ ನಡೆಸಿದ ಶೋಧದಲ್ಲಿ 2.06 ಕೋಟಿ ಮೌಲ್ಯದ ಚಿನ್ನಾಭರಣಗಳು ಮತ್ತು 2.67 ಕೋಟಿ ಮೌಲ್ಯದ ಭಾರತೀಯ ಕರೆನ್ಸಿ ಪತ್ತೆಯಾಗಿತ್ತು.
ಕಳ್ಳಸಾಗಣೆ ದಂಧೆ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿ ಮಾಡಿರುವ ಪ್ರಕಾರ ದುಬೈನಿಂದ ಕಾರ್ಯನಿರ್ವಹಿಸುತ್ತಿರುವ "ಸಂಘಟಿತ ಕಳ್ಳಸಾಗಣೆ ಸಿಂಡಿಕೇಟ್ ನ ದೊಡ್ಡ ಪಿತೂರಿ ಮತ್ತು ಅದರಲ್ಲಿ ಸರ್ಕಾರಿ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಸುವಂತೆ ಡಿಆರ್‌ಐ ಸಿಬಿಐ ಅನ್ನು ಕೇಳಿದೆ ಎಂದು ಅವರು ವರದಿ ಮಾಡಿದ್ದಾರೆ. ಇನ್ನೂ ಇವರು ಈ ತಿಂಗಳ ಆರಂಭದಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಒಮಾನ್ ಮತ್ತು ಯುಎಇಯ ಇಬ್ಬರು ವಿದೇಶಿ ಪ್ರಜೆಗಳನ್ನು18.92 ಕೋಟಿ ಮೌಲ್ಯದ 21.28 ಕೆಜಿ ಚಿನ್ನದೊಂದಿಗೆ ಬಂಧಿಸಿದ ನಂತರ ಡಿಆರ್‌ಐ ಸಿಬಿಐಗೆ ದೂರು ನೀಡಿತು .
ರನ್ಯಾರಾವ್ ಪ್ರಕರಣ ರಾಜಕೀಯ ಪ್ರಭಾವದ ಪರಿಣಾಮವೇ?
ಹಲವು ವಿವಾದಗಳಿಂದ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಬೆಳವಣಿಗೆಗಳು ನಡೆಯುತ್ತಿವೆ. ಸರ್ಕಾರದ ಒಂದಷ್ಟು ವಿಫಲತೆಗಳನ್ನು ಇಟ್ಟುಕೊಂಡು ಬಿಜೆಪಿ ನಾಯಕರು ಹರಿಹಾಯುತ್ತಿದ್ದಾರೆ. ಸರ್ಕಾರದ ವೈಫಲ್ಯತೆಯನ್ನು ಹಿಡಿಯಲು ವಿರೋಧ ಪಕ್ಷವಾದ ಬಿಜೆಪಿ ನಾನಾ ಕಸರತ್ತು ನಡೆಸುತ್ತಿದೆ. ಇದರ ನಡುವೆಯೇ ರನ್ಯಾ ರಾವ್ ಅವರ ಭೂ ವಿವಾದ ಪ್ರಕರಣವೂ ಮುನ್ನೆಲೆಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿಗೆ ಇದು ಮುಜುಗರ ತರುವ ಸಂಗತಿ ಎನ್ನಲಾಗಿದೆ. ಹಳೆಯ ಸರ್ಕಾರದ ಅವಧಿಯಲ್ಲಿ ನಡೆದ ಈ ಭೂಮಿ ಹಂಚಿಕೆ ಪ್ರಕ್ರಿಯೆ ಪೂರ್ಣ ಪ್ರಮಾಣದ ಪರಿಶೀಲನೆಗೆ ಒಳಪಡಬೇಕೆಂದು ಸರ್ಕಾರ ಒತ್ತಾಯಿಸಿದೆ. ಮಾಜಿ ಸರ್ಕಾರದ ಆಡಳಿತಾವಧಿಯಲ್ಲಿ ಈ ಭೂಮಿ ಹಂಚಿಕೆ ನ್ಯಾಯಬದ್ಧವಾಗಿತ್ತಾ? ಅಥವಾ ಪ್ರಭಾವ ಬಳಸಿ ಮಂಜೂರಾತಿ ಪಡೆದಿತ್ತಾ? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅಲ್ಲದೇ ರನ್ಯಾ ರಾವ್ ಅವರ ಕಂಪನಿಗೆ ಭೂಮಿ ಹಂಚಿಕೆ ಹಳೆಯ ಸರ್ಕಾರದ ಅವಧಿಯಲ್ಲಿ ಅನುಮೋದನೆಗೊಂಡಿದ್ದರೂ, ಇದು ಕಾನೂನುಬಾಹಿರ ಹಣ ಮಾರ್ಗೀಕರಣ ಅಥವಾ ರಾಜಕೀಯ ಪ್ರಭಾವದ ಪರಿಣಾಮವೇ? ಎಂಬ ಪ್ರಶ್ನೆಗಳು ಎದ್ದಿವೆ.
ರನ್ಯಾ ರಾವ್ ಚಿನ್ನದ ಕಳ್ಳಸಾಗಣೆ ಪ್ರಕರಣ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಅವರನ್ನ ತಪಾಸಣೆ ನಡೆಸಿದ, ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿತ್ತು. ಸುಮಾರು ₹12.56 ಕೋಟಿ ಮೌಲ್ಯದ ಚಿನ್ನದ ಬಾರ್‌ಗಳು ಪತ್ತೆಯಾಗಿದ್ದು ದೇಶದೆಲ್ಲೆಡೆ ದೊಡ್ಡಮಟ್ಟದ ಸುದ್ದಿಯಾಯಿತು. ಬಳಿಕ ಅವರು ವಾಸವಿದ್ದ ಮನೆ ಮೇಲೆ ದಾಳಿ ಮಾಡಿದಾಗ, ಅಲ್ಲಿ ₹2.06 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ₹2.67 ಕೋಟಿ ನಗದು ವಶಪಡಿಸಿಕೊಳ್ಳಲಾಯಿತು. ಒಟ್ಟು ₹17.29 ಕೋಟಿ ಮೌಲ್ಯದ ಆಸ್ತಿ ಮತ್ತು ನಗದು ವಶ ಪಡಿಸಿಕೊಂಡು, ಈ ಪ್ರಕರಣವನ್ನು ಚಿನ್ನದ ಕಳ್ಳಸಾಗಾಣಿಕೆ ಮಾಫಿಯಾ ಜಾಲದ ಒಂದು ದೊಡ್ಡ ಹೊಡೆತ ಎಂದು ಅಧಿಕಾರಿಗಳು ಘೋಷಣೆಯನ್ನು ಮಾಡಿದ್ದಾರೆ.
ಚಿನ್ನ ಅಕ್ರಮ ಸಾಗಾಟ ಪ್ರಕರಣದ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿತ್ತು. ಇದೀಗ ಅಂತಿಮ ಹಂತಕ್ಕೆ ಬಂದು ತಲುಪಿದೆ.ನಟಿ ರನ್ಯಾರಾವ್ ಅವರಿಗೆ ಜೈಲೋ? ಬೇಲೋ? ಇಂದೇ ನಿರ್ಧಾರವಾಗಲಿದೆ.


Click it and Unblock the Notifications