ಬ್ಯಾಕ್, ಟ್ಯಾಕ್ಸಿ ಆಯ್ತು.. ಇದೀಗ ಆಹಾರ ವಿತರಣೆ ಸರದಿ. ಇನ್ನುಂದೆ ರ‍್ಯಾಪಿಡೋದಲ್ಲೂ ಸಿಗುತ್ತೆ ಫುಡ್..! ಸ್ವಿಗ್ಗಿ ಮತ್ತು ಜೊಮಾಟೊಗೆ ನಡುಕ ಶುರು. ಹೌದು, ಈಗಾಗಲೇ ಬೈಕ್ ಟ್ಯಾಕ್ಸಿ ಸೇವೆಯಿಂದ ಜನಪ್ರಿಯತೆ ಗಳಿಸಿರುವ ರ‍್ಯಾಪಿಡೋ ಇದೀಗ, ಆಹಾರ ವಿತರಣಾ ವಲಯಕ್ಕೂ ಪ್ರವೇಶಿಸಲು ಸಿದ್ಧವಾಗಿದೆ. ಈ ಕ್ಷೇತ್ರದಲ್ಲಿ ಈಗಾಗಲೇ ಹೆಸರುವಾಸಿಯಾಗಿರುವ ಸ್ವಿಗ್ಗಿ ಮತ್ತು ಜೊಮ್ಯಾಟೊ ಸಂಸ್ಥೆಗಳಿಗಿಂತ ಕಡಿಮೆ ಕಮಿಷನ್ ದರವನ್ನು ವಿಧಿಸುವ ಮೂಲಕ ತನ್ನದೇ ಆದ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಮುಂದಾಗಿದೆ. ಈ ಸೇವೆ ಯಾವಾಗ ಪ್ರಾರಂಭ? ಆರ್ಡರ್ ಶುಲ್ಕ ಎಷ್ಟು? ಯಾರ ಜೊತೆ ಒಪ್ಪಂದ ಆಗಿದೆ? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಹೌದು,ನಾವು ಎಲ್ಲಿಗಾದರೂ ಹೋಗಲು ಅತಿ ಹೆಚ್ಚಾಗಿ ಜನರು ಬೈಕ್-ಟ್ಯಾಕ್ಸಿ ಅಪ್ಲಿಕೇಶನ್ ಸೇವೆಯಾದ ರ‍್ಯಾಪಿಡೋ ಅನ್ನು ಬಳಸಿಕೊಳ್ಳುತ್ತಾರೆ. ಆದರೆ ಇದೀಗ ರ‍್ಯಾಪಿಡೋ ಭಾರತದ ಆನ್‌ಲೈನ್ ಆಹಾರ ವಿತರಣಾ ಮಾರುಕಟ್ಟೆಯನ್ನು ಲಗ್ಗೆಯನ್ನು ಇಡುತ್ತಿದ್ದು, ಕಂಪನಿಯು ಈಗಾಗಲೇ NRAI ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.

ಮಾಧ್ಯಮ ವರದಿಗಳ ಪ್ರಕಾರ, ರಾಪಿಡೊ ರೆಸ್ಟೋರೆಂಟ್‌ಗಳಿಂದ ಕಡಿಮೆ ಕಮಿಷನ್ ವಿಧಿಸುವ ಮೂಲಕ ದೊಡ್ಡ ಮಾರುಕಟ್ಟೆ ಪಾಲನ್ನು ಪಡೆಯಲು ಪ್ರಯತ್ನವನ್ನು ಮಾಡುತ್ತಿದೆ. ಈ ಆಹಾರ ವಿತರಣೆಯ ಯೋಜನೆಯೊಂದಿಗೆ, ರೆಸ್ಟೋರೆಂಟ್‌ಗಳು ಹೆಚ್ಚಿನ ಲಾಭವನ್ನು ಪಡೆಯುವ ನಿರೀಕ್ಷೆಯಿದೆ ಮತ್ತು ಗ್ರಾಹಕರು ಕಡಿಮೆ ಬೆಲೆಗೆ ಆಹಾರ ವಿತರಣೆಯನ್ನು ಪಡೆಯುವ ನಿರೀಕ್ಷೆ ಕೂಡ ಇದೆ.ಈಗಾಗಲೇ ಚಾಲ್ತಿಯಲ್ಲಿ ಇರುವ ಆನ್‌ಲೈನ್ ಆಹಾರ ವಿತರಣಾ ಕಂಪನಿಗಳಾದ ಸ್ವಿಗ್ಗಿ ಮತ್ತು ಜೊಮಾಟೊಗಳಿಗೆ ಕಠಿಣ ಸ್ಪರ್ಧೆಯನ್ನು ರಾಪಿಡೊ ನೀಡಬಹುದು.
ಎಕನಾಮಿಕ್ ಟೈಮ್ಸ್‌ನ ವರದಿ ಮಾಡಿರುವ ಪ್ರಕಾರ ರಾಪಿಡೊ ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (NRAI) ನೊಂದಿಗೆ ಪಾಲುದಾರಿಕೆ ಹೊಂದಿದ್ದು, ಅದರ ಅಡಿಯಲ್ಲಿ ಕಂಪನಿಯು ರೆಸ್ಟೋರೆಂಟ್‌ಗಳೊಂದಿಗೆ ವಾಣಿಜ್ಯ ನಿಯಮಗಳನ್ನು ಕೂಡ ಒಪ್ಪಿಕೊಂಡಿದೆ. NRAI ದೇಶಾದ್ಯಂತ 5 ಲಕ್ಷಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳನ್ನು ಒಳಗೊಂಡಿದೆ.
ಈ ಸೇವೆ ಯಾವಾಗ ಪ್ರಾರಂಭ?
ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಹೇಳಿರುವ ವರದಿಯ ಪ್ರಕಾರ ಈ ಯೋಜನೆಯು ವಿಶೇಷವಾಗಿ ಸಣ್ಣ ರೆಸ್ಟೋರೆಂಟ್‌ಗಳಿಗೆ ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದರು. ಜೂನ್ ಅಂತ್ಯ ಅಥವಾ ಜುಲೈ ಆರಂಭದಲ್ಲಿ ಬೆಂಗಳೂರಿನಲ್ಲಿ ಇದರ ಪೈಲಟ್ ಪ್ರಯೋಗವನ್ನು ಪ್ರಾರಂಭಿಸಲಾಗುವುದು ಎಂದು ಸಹ ತಿಳಿಸಲಾಯಿತು.
ರ‍್ಯಾಪಿಡೋ ಅಧಿಕಾರಿಗಳು ಹೇಳಿರುವ ಪ್ರಕಾರ, ಕಂಪನಿಯು ಆರ್ಡರ್ ಮೌಲ್ಯದ ಆಧಾರದ ಮೇಲೆ ರೆಸ್ಟೋರೆಂಟ್‌ಗಳಿಂದ ಕೇವಲ ಶೇ. 8-15 ಕಮಿಷನ್ ಮಾತ್ರ ವಿಧಿಸುತ್ತದೆ. ಈ ದರಗಳು ಸಾಮಾನ್ಯವಾಗಿ ಶೇ.16-30 ಕಮಿಷನ್ ವಿಧಿಸುವ ಸ್ವಿಗ್ಗಿ ಮತ್ತುಜೊಮಾಟೊ ಗಿಂತ ತುಂಬಾ ಕಡಿಮೆ ಇರುತ್ತದೆ ಎಂದು ಹೇಳಿದ್ದಾರೆ.
ಆರ್ಡರ್ ಮೇಲೆ ಎಷ್ಟು ಶುಲ್ಕ ವಿಧಿಸಲಾಗುತ್ತದೆ?
ವರದಿಗಳ ಪ್ರಕಾರ, ರಾಪಿಡೊ 400 ರೂ.ಗಳಿಗಿಂತ ಕಡಿಮೆ ಆರ್ಡರ್‌ಗಳಿಗೆ 25 ಮತ್ತು 400 ಕ್ಕಿಂತ ಹೆಚ್ಚಿನ ಆರ್ಡರ್‌ಗಳಿಗೆ 50 ಸ್ಥಿರ ಶುಲ್ಕ ವಿಧಿಸುತ್ತದೆ.ಈ ಕಡಿಮೆ ಶುಲ್ಕ ಮಾದರಿಯು ರೆಸ್ಟೋರೆಂಟ್‌ಗಳಿಗೆ ಉತ್ತಮ ಲಾಭ ಮತ್ತು ಗ್ರಾಹಕರಿಗೆ ಕಡಿಮೆ ಬೆಲೆಗೆ ಆಹಾರದ ವಿತರಣೆಯನ್ನು ಮಾಡಬಹುದು.
ಸ್ವಿಗ್ಗಿ ಮತ್ತು ಎಟರ್ನಲ್ (ಜೊಮ್ಯಾಟೋ) ಷೇರು ಕುಸಿತ
ಆಹಾರ ವಿತರಣಾ ವಲಯಕ್ಕೆ ರ್‍ಯಾಪಿಡೋ ಪ್ರವೇಶಿಸುತ್ತಿರುವ ಸುದ್ದಿ ಕೂಡಲೇ ಇಂದು ಸ್ವಿಗ್ಗಿ ಮತ್ತು ಎಟರ್ನಲ್ (ಜೊಮ್ಯಾಟೋ) ಷೇರುಗಳು ಭಾರೀ ಕುಸಿತವನ್ನು ಕಂಡಿವೆ. ಎಟರ್ನಲ್ NSE ನಲ್ಲಿ ಸುಮಾರು 2 ಪ್ರತಿಶತದಷ್ಟು ಕುಸಿದು 256 ರೂ.ಗಳಲ್ಲಿ ವಹಿವಾಟು ಮುಕ್ತಾಯಗೊಳಿಸಿದರೆ, ಸ್ವಿಗ್ಗಿಯ ಷೇರು ಬೆಲೆ ಶೇ 2.63 ಕುಸಿದು 364.90 ರೂ.ಗಳಲ್ಲಿ ವಹಿವಾಟು ಮುಕ್ತಾಯಗೊಳಿಸಿತು. ಓಲಾ ಮತ್ತು ಉಬರ್ ಮಾದರಿಯಲ್ಲಿ ಕ್ಯಾಬ್ ಸೇವೆಗಳನ್ನು ನೀಡುವ ರ‍್ಯಾಪಿಡೋ ಆಹಾರ ವಿತರಣಾ ವಲಯಕ್ಕೆ ಪ್ರವೇಶಿಸುತ್ತಿದೆ ಎಂಬ ಸುದ್ದಿ ಸ್ವಿಗ್ಗಿ ಮತ್ತು ಝೊಮ್ಯಾಟೊವನ್ನು ಬೆಚ್ಚಿಬೀಳಿಸುತ್ತಿದೆ.


Click it and Unblock the Notifications