ಮೊಬಿಲಿಟಿ ಅಗ್ರಿಗೇಟರ್ ರೈಡ್-ಹೇಲಿಂಗ್ ಸೇವಾ ಪೂರೈಕೆದಾರ ರಾಪಿಡೋ ಕರ್ನಾಟಕದಲ್ಲಿ ಈ ವರ್ಷ ಅಂತ್ಯದ ಒಳಗೆ ತನ್ನ ಹೊಸ 'ಪಿಂಕ್ ರಾಪಿಡೋ' ಬೈಕ್‌ಗಳನ್ನು ಬಿಡುಗಡೆ ಮಾಡಲಿದ್ದು, ಇದು ಮಹಿಳೆಯರಿಗಾಗಿ ಮಹಿಳೆಯರೇ ನಡೆಸುವ ರಾಪಿಡೋ ಸೇವೆಯಾಗಿರಲಿದೆ.
ಹೌದು ಈ ವಿಚಾರವನ್ನು ಕಂಪನಿಯ ಸಹ-ಸಂಸ್ಥಾಪಕ ಪವನ್ ಗುಂಟುಪಲ್ಲಿ ಬಹಿರಂಗಪಡಿಸಿದ್ದು, ಶುಕ್ರವಾರ ಬೆಂಗಳೂರಿನಲ್ಲಿ ನಡೆದ ನಡೆದ 'ಗ್ಲೋಬಲ್ ಇನ್ವೆಸ್ಟರ್ ಮೀಟ್ ನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಬಹಿರಂಗಪಡಿಸಿದರು.

ಕರ್ನಾಟಕದಲ್ಲಿ ನಾವು ಈ ವರ್ಷ ಮಹಿಳೆಯರಿಗಾಗಿ ಮಹಿಳೆಯರೇ ನಡೆಸುವ ಬೈಕ್ ಟ್ಯಾಕ್ಸಿಗಳಾದ ರಾಪಿಡೋದ ಪಿಂಕ್ ಬೈಕ್ ಅನ್ನು ಪರಿಚಯಿಸಲಿದ್ದೇವೆ. ಇದು ಸುಮಾರು 25,000 ಉದ್ಯೋಗಗಳನ್ನು ಸೃಷ್ಟಿಸುತ್ತದೆ" ಎಂದು ಗುಂಟುಪಲ್ಲಿ ಹೇಳಿದ್ದಾರೆ. ಅಂದಹಾಗ್ ಸೆಪ್ಟೆಂಬರ್ 2024 ರಲ್ಲಿ, ರಾಪಿಡೊ ಚೆನ್ನೈನಲ್ಲಿ ಬೈಕ್ ಪಿಂಕ್ ಅನ್ನು ಅನಾವರಣ ಮಾಡಿತ್ತು.
ರಾಪಿಡೊ ಬೈಕ್‌ಗಳಲ್ಲಿ ಮಹಿಳಾ ಕ್ಯಾಪ್ಟನ್‌ಗಳನ್ನು ಪರಿಚಯಿಸುವ ಮೂಲಕ ಮಹಿಳೆಯರಿಗೆ 25,000 ಉದ್ಯೋಗಾವಕಾಶಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಒಬ್ಬ ಮಹಿಳೆ ಅಪರಿಚಿತ ಚಾಲಕನೊಂದಿಗೆ ಸುರಕ್ಷಿತವಾಗಿ ಪ್ರಯಾಣಿಸಲು ಸಾಧ್ಯವಾದರೆ, ತನ್ನ ತಲುಪಬೇಕಾದಸ್ಥಾನವನ್ನು ಸುಲಭವಾಗಿ ತಲುಪಲು ಸಾಧ್ಯವಾದರೆ, ಅದನ್ನೇ ನಮ್ಮ ಯಶಸ್ಸು ಎಂದು ಪರಿಗಣಿಸಬಹುದು" ಎಂದು ಗುಂಟುಪಲ್ಲಿ ಹೇಳಿದ್ದಾರೆ.
ಈ ಪಿಂಕ್ ರಾಪಿಡೋ ಯೋಜನೆ ಗಳಿಂದ ಕೇವಲ ಉದ್ಯೋಗಗಳನ್ನು ಸೃಷ್ಟಿಸುವುದಲ್ಲ, ಮಹಿಳೆಯರಿಗೆ ಸುರಕ್ಷಿತ ಮತ್ತು ಸಬಲೀಕರಣಗೊಳಿಸುವ ಕೆಲಸದ ವಾತಾವರಣವನ್ನು ಒದಗಿಸುವುದ್ದರೆ. ಸುರಕ್ಷಿತ ಪ್ರಯಾಣದ ಅನುಭವವನ್ನು ಪ್ರಯಾಣಿಕರು ಖಾತರಿಪಡಿಸಿಕೊಳ್ಳಲು ನಾವು ಹಲವಾರು ಸುರಕ್ಷತಾ ಕ್ರಮಗಳನ್ನು ಜಾರಿಗೆ ತಂದಿದ್ದೇವೆ. ನಮ್ಮ ಈ ಯೋಜನೆಯಿಂದ ಉನ್ನತ ಶಿಕ್ಷಣ ಅಥವಾ ಕೌಶಲ್ಯಗಳಲ್ಲಿ ಪರಿಣತವಿಲ್ಲದ ಮಹಿಳೆಯರು ತಮ್ಮ ಹತ್ತಿರದ ಪಟ್ಟಣ ನಗರಗಳಲ್ಲಿ ಉದ್ಯೋಗದ ಅವಕಾಶಗಳನ್ನು ಕಂಡುಕೊಳ್ಳುತ್ತಿದ್ದಾರೆ, ಎಂಬುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಈಗ ಕಾರ್ಯನಿರ್ವಹಿಸುತ್ತಿರುವ ನಮ್ಮ ಉದ್ಯೋಗಿಗಳಲ್ಲಿ ಸುಮಾರು ಶೇಕಡಾ 35 ರಷ್ಟು ಸಣ್ಣ ನಗರಗಳು ಮತ್ತು ಪಟ್ಟಣಗಳಿಂದ ಬಂದವರಾಗಿದ್ದಾರೆ " ಎಂದು ಅವರು ಮಾಹಿತಿ ನೀಡಿದ್ದಾರೆ.
ಒಬ್ಬ ವ್ಯಕ್ತಿ ಬದಲಾವಣೆಗೆ ನಾಂದಿ ಹಾಡಬಹುದು, ಆದರೆ ನಾವೆಲ್ಲವೂ ಒಟ್ಟಾದರೆ ಇದನ್ನು ಪರಿವರ್ತನಾತ್ಮಕ ಕ್ರಾಂತಿಕಾರಿ ರೀತಿಯಲ್ಲಿ ಬದಲಾವಣೆಯನ್ನು ಸೃಷ್ಟಿಸಬಹುದು. ಮುಂದುವರಿಯಿರಿ ಮತ್ತು ಅವಕಾಶಗಳ ಬಾಗಿಲುಗಳು ತೆರೆದುಕೊಳ್ಳುತ್ತಲೇ ಇರುತ್ತವೆ" ಎಂದು ಗುಂಟುಪಲ್ಲಿ ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಸಲಹೆಯನ್ನು ಹಂಚಿಕೊಂಡಿದ್ದಾರೆ. ಆರಂಭಿಕ ಹಂತದಲ್ಲಿ, ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿರುವ ಮಹಿಳಾ ಕ್ಯಾಪ್ಟನ್‌ಗಳಿಗೆ 25 ಎಲೆಕ್ಟ್ರಿಕ್ ಬೈಕ್‌ಗಳನ್ನು ಪೂರೈಸುವುದಾಗಿ ರಾಪಿಡೋ ಹೇಳಿದೆ. ಇದರಿಂದಾಗಿ ಸಾರಿಗೆ ಮತ್ತು ಆದಾಯದ ಅವಕಾಶಗಳು ಸುಲಭವಾಗಿ ಲಭ್ಯವಾಗುತ್ತವೆ. ಹೆಚ್ಚುವರಿಯಾಗಿ, ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ಕಂಪನಿಯು ವಿವಿಧ ಎನ್‌ಜಿಒಗಳ ಸಹಭಾಗಿತ್ವದಲ್ಲಿ ವ್ಯಾಪಕ ತರಬೇತಿ ಕಾರ್ಯಕ್ರಮಗಳ ಮೂಲಕ ಮಹಿಳಾ ಕ್ಯಾಪ್ಟನ್‌ಗಳಿಗೆ ಅಗತ್ಯ ಸುರಕ್ಷತೆ ಮತ್ತು ಚಾಲನಾ ಕೌಶಲ್ಯಗಳಲ್ಲಿ ತರಬೇತಿ ನೀಡುವುದಾಗಿ ತಿಳಿಸಿದೆ.
ಆರ್ಥಿಕವಾಗಿ ಹಿಂದುಳಿದ ಮಹಿಳಾ ಕ್ಯಾಪ್ಟನ್‌ಗಳಿಗೆ 25 ಎಲೆಕ್ಟ್ರಿಕ್ ಬೈಕ್ ಒದಗಿಸಲಿದೆ ಸಂಸ್ಥೆ
ರಾಪಿಡೋ ಸಂಸ್ಥೆಯು ಆರ್ಥಿಕವಾಗಿ ಹಿಂದುಳಿದ ಮಹಿಳಾ ಕ್ಯಾಪ್ಟನ್‌ಗಳಿಗೆ ಆರಂಭಿಕ ಹಂತದಲ್ಲಿ 25 ಎಲೆಕ್ಟ್ರಿಕ್ ಬೈಕ್‌ಗಳನ್ನು ಒದಗಿಸುವ ಮೂಲಕ ಸಾರಿಗೆ ಮತ್ತು ಆದಾಯದ ಅವಕಾಶಗಳನ್ನು ಸುಲಭಗೊಳಿಸುವ ಭರವಸೆ ನೀಡಿದೆ. ಅಲ್ಲದೆ, ವಿವಿಧ ಎನ್‌ಜಿಒಗಳ ಸಹಯೋಗದೊಂದಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಮಹಿಳಾ ಕ್ಯಾಪ್ಟನ್‌ಗಳಿಗೆ ಸುರಕ್ಷತೆ ಮತ್ತು ಚಾಲನಾ ಕೌಶಲ್ಯಗಳ ಬಗ್ಗೆ ತರಬೇತಿ ನೀಡಲು ರಾಪಿಡೋ ಮುಂದಾಗಿದೆ. ಇದಲ್ಲದೆ, ಕೋಲ್ಕತ್ತಾದಲ್ಲಿ ಎಲೆಕ್ಟ್ರಿಕ್ ಬೈಕ್ ಪಿಂಕ್ ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸುವುದಾಗಿ ಕಂಪನಿ ಘೋಷಿಸಿದೆ.


Click it and Unblock the Notifications