ಭಾರತದ ಜನಪ್ರಿಯ ಉದ್ಯಮಿ, ಟಾಟಾಸನ್ಸ್, ಸಂಸ್ಥೆಯ ಚೇರ್ಮನ್ ಆಗಿರುವ ರತನ್ ಟಾಟಾ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ. ಹಲವಾರು ವರ್ಷಗಳಿಂದ ತನ್ನ ವ್ಯಾಪಾರ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ರತನ್ ಟಾಟಾ ಹೆಸರು ಇಂದಿಗೂ ಕೂಡಾ ಮಾಸಿಲ್ಲ. ಸಾಮಾಜಿಕ ಜಾಲತಾಣದ ವಿಚಾರಕ್ಕೆ ಬಂದಾಗಲೂ ಈ ಬ್ಯುಜಿನೆಸ್ ಟೈಕಾನ್ ಅತೀ ಸುದ್ದಿಯಾಗುವ ವ್ಯಕ್ತಿ. ಆದರೆ ಹೆಚ್ಚಾಗಿ ಸಕ್ರಿಯವಾಗಿರುವುದಿಲ್ಲ. ಟ್ವಿಟ್ಟರ್‌ನಲ್ಲಿ ರತನ್ ಟಾಟಾರನ್ನು ಸುಮಾರು 12.4 ಮಿಲಿಯನ್ ನೆಟ್ಟಿಗರು ಫಾಲೋ ಮಾಡುತ್ತಾರೆ. ಆದರೆ ರತನ್ ಟಾಟಾ ಮಾತ್ರ ಒಟ್ಟಾಗಿ 27 ಟ್ವಿಟ್ಟರ್ ಖಾತೆಗಳನ್ನು ಮಾತ್ರ ಫಾಲೋ ಮಾಡುತ್ತಾರೆ.
ಈ 27 ಟ್ವಿಟ್ಟರ್ ಖಾತೆಗಳಲ್ಲಿ 3 ರಾಜಕಾರಣಿಗಳ ಖಾತೆಗಳಾಗಿದೆ. ಹಾಗೆಯೇ ಇಬ್ಬರು ನಟರುಗಳನ್ನು ಕೂಡಾ ರತನ್ ಟಾಟಾ ಟ್ವಿಟ್ಟರ್‌ನಲ್ಲಿ ಫಾಲೋ ಮಾಡುತ್ತಾರೆ. ಅಷ್ಟಕ್ಕೂ ರತನ್ ಟಾಟಾ ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಕೆ ಮಾಡುವುದಿಲ್ಲ. ಭಾರತದಲ್ಲಿ ಉದ್ಯಮ ಕ್ಷೇತ್ರದಲ್ಲಿ ಐಕಾನ್ ಆಗಿರುವ ರತನ್ ಟಾಟಾ ಹಲವಾರು ಜನರಿಗೆ ಸ್ಪೂರ್ತಿ. ಅದರಿಂದಾಗಿ ಈ ವ್ಯಕ್ತಿಯ ಸಾಮಾಜಿಕ ಜಾಲತಾಣವನ್ನು ಫಾಲೋ ಮಾಡುವವರ ಸಂಖ್ಯೆಯು ಅಧಿಕವಾಗಿದೆ. ಆದರೆ ಅವರು ಕೆಲವೇ ಕೆಲವು ಮಂದಿಯ ಟ್ವಿಟ್ಟರ್ ಖಾತೆಯನ್ನು ಫಾಲೋ ಮಾಡುತ್ತಾರೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ರತನ್ ಟಾಟಾ ಫಾಲೋ ಮಾಡುವ ಟ್ವಿಟ್ಟರ್ ಖಾತೆಗಳು
ರತನ್ ಟಾಟಾ ಒಟ್ಟಾಗಿ 27 ಟ್ವಿಟ್ಟರ್ ಖಾತೆಗಳನ್ನು ಫಾಲೋ ಮಾಡುತ್ತಾರೆ. ಈ ಪೈಕಿ ಮೂರು ಖಾತೆ ರಾಜಕಾರಣಿಗಳಾದ ಪ್ರಧಾನಮಂತ್ರಿ ನರೇಂದ್ರ ಮೋದಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಅಮೆರಿಕಾದ ಮಾಜಿ ಅಧ್ಯಕ್ಷ ಬರಾಜ್ ಒಮಾಬಾದ್ದು ಆಗಿದೆ. ಹಾಗೆಯೇ ಪಿಎಂಒ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಕೂಡಾ ರತನ್ ಟಾಟಾ ಫಾಲೋ ಮಾಡುತ್ತಾರೆ. ಹಾಗೆಯೇ ಬ್ರಿಟಾನಿಯಾ ಪಿಎಂಒ, ಅಮೇರಿಕಾದ ವಿದೇಶಾಂಗ ಸಚಿವ, ಕಾರ್ನೆಲ್ ಯೂನಿವರ್ಸಿಟಿ, ಹಾರ್ವರ್ಡ್ ಯೂನಿವರ್ಸಿಟಿ, ಬ್ಲ್ಯೂಬರ್ಗ್ ಖಾತೆಗಳನ್ನು ಫಾಲೋ ಮಾಡುತ್ತಾರೆ.
ಆನಂದ್ ಮಹೀಂದ್ರಾ, ಸಮೀರ್, ಆಟೋ ಡಿಸೈನರ್ ಇರಾನ್ ಕಾಲ್ಯೂಮ್, ಪ್ರನಾಯ್ ರಾಯ್, ಸಿಂಗಾಪುರ ಪಿಎಂ ಲೀ ಹೆಸೆನ್ ಲಾಂಗ್, ಪ್ರಿಯಾಂಕಾ ಚೋಪ್ರಾ, ಬೋಮಾನ್ ಇರಾನಿ, ಲ್ಯಾಂಡ್ ರೋವರ್ ಯುಎಸ್‌ಎ, ಜಾಗ್ವಾರ್ ಯುಎಸ್‌ಎ, ಟಾಟಾ ನ್ಯಾನೋ, ಆಟೋಕಾರ್ ಇಂಡಿಯಾ, ಎಂಐಟಿ ಮಿಡೀಯಾ ಲ್ಯಾಬ್, ಬಿಬಿಸಿ ಬ್ರೆಕಿಂಗ್ ನ್ಯೂಸ್, ಫೈನಾನ್ಶಿಯಲ್ ಟೈಮ್ಸ್, ದಿ ಇಕಾನಮಿಸ್ಟ್, ದಿ ಹಿಂದೂ, ಎನ್ ರಾಮ್, ವಾಲ್ ಸ್ಟ್ರೀಟ್ ಜರ್ನಲ್ ಅನ್ನು ರತನ್ ಟಾಟಾ ಫಾಲೋ ಮಾಡುತ್ತಾರೆ.
ಇನ್‌ಸ್ಟಾಗ್ರಾಂನಲ್ಲಿ ಒಂದೇ ಖಾತೆಯನ್ನು ಫಾಲೋ ಮಾಡುವ ರತನ್ ಟಾಟಾ
ಹಲವಾರು ಉದ್ಯಮಿಗಳು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಅದರಂತೆಯೇ ದೇಶ ಅತೀ ದೊಡ್ಡ ಉದ್ಯಮಿಗಳಲ್ಲಿ ಒಬ್ಬರಾದ ರತನ್ ಟಾಟಾ ಇನ್‌ಸ್ಟಾಗ್ರಾಂನಲ್ಲಿ 8.5 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ. ಆದರೆ ಈ ಬ್ಯುಜಿನೆಸ್ ಟೈಕಾನ್ ಕೇವಲ ಒಂದು ಖಾತೆಯನ್ನು ಮಾತ್ರ ಫಾಲೋ ಮಾಡುತ್ತಾರೆ. ಅಷ್ಟಕ್ಕೂ ಈ ಖಾತೆ ಯಾವುದೇ ಸೆಲೆಬ್ರೆಟಿಗಳದ್ದು ಅಲ್ಲ ಅಥವಾ ದೊಡ್ಡ ಉದ್ಯಮ ಸಂಸ್ಥೆಗಳದ್ದು ಅಲ್ಲ.
ಉದ್ಯಮಿ ರತನ್ ಟಾಟಾ ಫಾಲೋ ಮಾಡುತ್ತಿರುವ ಏಕೈಕ ಇನ್‌ಸ್ಟಾಗ್ರಾಂ ಖಾತೆಯು ಜನಪ್ರಿಯ ಸಂಸ್ಥೆಯಾದ ಟಾಟಾ ಗ್ರೂಪ್‌ನ ಟಾಟಾ ಟ್ರಸ್ಟ್ಸ್ ಆಗಿದೆ. ಪ್ರಸ್ತುತ ರತನ್ ಟಾಟಾ ತಮ್ಮ ಟಾಟಾ ಸಂಸ್ಥೆಯ ವಹಿವಾಟಿನಲ್ಲಿ ಹೆಚ್ಚಿನ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದಿಲ್ಲ. ಇದಕ್ಕೆ ವಯಸ್ಸು ಕೂಡಾ ಕಾರಣವಾಗಿರಬಹುದು. ಆದರೂ ಕೂಡಾ ಈಗಲೂ ರತನ್ ಟಾಟಾ ತನ್ನ ಸಂಸ್ಥೆಯ ಟಾಟಾ ಟ್ರಸ್ಟ್ಸ್‌ನ ವಹಿವಾಟುಗಳ ಮೇಲೆ ನಿಗಾ ವಹಿಸಿದ್ದಾರೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications