ಹಲವಾರು ಉದ್ಯಮಿಗಳು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಅದರಂತೆಯೇ ದೇಶ ಅತೀ ದೊಡ್ಡ ಉದ್ಯಮಿಗಳಲ್ಲಿ ಒಬ್ಬರಾದ ರತನ್ ಟಾಟಾ ಇನ್‌ಸ್ಟಾಗ್ರಾಂನಲ್ಲಿ 8.5 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ. ಆದರೆ ಈ ಬ್ಯುಜಿನೆಸ್ ಟೈಕಾನ್ ಮಾತ್ರ ಕೇವಲ ಒಂದು ಖಾತೆಯನ್ನು ಮಾತ್ರ ಫಾಲೋ ಮಾಡುತ್ತಾರೆ. ಅಷ್ಟಕ್ಕೂ ಈ ಖಾತೆ ಯಾವುದೇ ಸೆಲೆಬ್ರೆಟಿಗಳದ್ದು ಅಲ್ಲ ಅಥವಾ ದೊಡ್ಡ ಉದ್ಯಮ ಸಂಸ್ಥೆಗಳದ್ದು ಅಲ್ಲ.
ಉದ್ಯಮಿ ರತನ್ ಟಾಟಾ ಫಾಲೋ ಮಾಡುತ್ತಿರುವ ಏಕೈಕ ಇನ್‌ಸ್ಟಾಗ್ರಾಂ ಖಾತೆಯು ಜನಪ್ರಿಯ ಸಂಸ್ಥೆಯಾದ ಟಾಟಾ ಗ್ರೂಪ್‌ನ ಟಾಟಾ ಟ್ರಸ್ಟ್ಸ್ ಆಗಿದೆ. ಪ್ರಸ್ತುತ ರತನ್ ಟಾಟಾ ತಮ್ಮ ಟಾಟಾ ಸಂಸ್ಥೆಯ ವಹಿವಾಟಿನಲ್ಲಿ ಹೆಚ್ಚಿನ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದಿಲ್ಲ. ಇದಕ್ಕೆ ವಯಸ್ಸು ಕೂಡಾ ಕಾರಣವಾಗಿರಬಹುದು. ಆದರೂ ಕೂಡಾ ಈಗಲೂ ರತನ್ ಟಾಟಾ ತನ್ನ ಸಂಸ್ಥೆಯ ಟಾಟಾ ಟ್ರಸ್ಟ್ಸ್‌ನ ವಹಿವಾಟುಗಳ ಮೇಲೆ ನಿಗಾ ವಹಿಸಿದ್ದಾರೆ.

ರತನ್ ಟಾಟಾ ಫಾಲೋ ಮಾಡುವ ಏಕೈಕ ಖಾತೆ ಬಗ್ಗೆ ಮಾಹಿತಿ
ಸುಮಾರು 130 ವರ್ಷಗಳ ಹಿಂದೆ ಟಾಟಾ ಟ್ರಸ್ಟ್ಸ್ ಅನ್ನು ಆರಂಭ ಮಾಡಲಾಗಿದೆ. 1892ರಲ್ಲಿ ಭಾರತದ ಇಂಡಸ್ಟ್ರೀಯ ಪಿತಾಮಹ ಮತ್ತು ಟಾಟಾ ಗ್ರೂಪ್ ಸಂಸ್ಥಾಪಕ ಜೆಮ್‌ಶೆಡ್ ಜೀ ಟಾಟಾ, ಜೆನ್ ಟಾಟಾ ಎಂಡೋಮೆಂಟ್ ಫಂಡ್ ಅನ್ನು ಆರಂಭಿಸಿದಾಗ ಟಾಟಾ ಟ್ರಸ್ಟ್ಸ್ ಅನ್ನು ಆರಂಭಿಸಲಾಗಿದೆ. ಈ ಫಂಡ್ ಅನ್ನು ಮುಖ್ಯವಾಗಿ ಭಾರತೀಯ ನಾಗರಿಕರಿಗೆ ಉನ್ನತ ಶಿಕ್ಷಣ ನೀಡಲು ಬಳಕೆ ಮಾಡಲಾಗುತ್ತದೆ.
ಟಾಟಾ ಟ್ರಸ್ಟ್ಸ್ ಅಧಿಕೃತ ವೆಬ್‌ಸೈಟ್ ಪ್ರಕಾರ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವುದು, ಉನ್ನತ ಸಂಶೋಧನೆಗೆ ಒತ್ತು ನೀಡುವುದು ಆ ಸಂದರ್ಭದಲ್ಲಿ ಪ್ರಮುಖವಾಗಿತ್ತು. ಬೆಳವಣಿಗೆ ಹೊಂದಿದ ಯುಎಸ್‌ನಂತಹ ದೇಶಗಳು ಕೂಡಾ ಇದೇ ಮಾರ್ಗವನ್ನು ಹಿಡಿದಿದೆ ಎಂದು ಉಲ್ಲೇಖ ಮಾಡಲಾಗಿದೆ. ಟಾಟಾ ಗ್ರೂಪ್ ಸಂಸ್ಥಾಪಕ ಜೆಮ್‌ಶೆಡ್ ಜೀ ಟಾಟಾ ಈ ಫೀಲ್ಡ್‌ನ ಮೊದಲ ಪ್ರವರ್ತಕರು ಆಗಿದ್ದಾರೆ.
ಪದ್ಮ ವಿಭೂಷಣ ಪ್ರಶಸ್ತಿಯನ್ನು ಪಡೆದಿರುವ ರತನ್ ಟಾಟಾ, ಭಾರತದ ಪ್ರಮುಖ ಉದ್ಯಮಿ, ಜನರ ಮೇಲೆ ಅತೀ ಅಧಿಕ ಪ್ರಭಾವ ಬೀರಿದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ರತನ್ ಟಾಟಾಗೆ ಈಗ 85 ವರ್ಷವಾಗಿದೆ. ಭಾರತದ ಉದ್ಯಮಿ ರತನ್ ಟಾಟಾ ಡಿಸೆಂಬರ್ 28ರಂದು 85ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಇವರ ಬಗ್ಗೆ ಕೆಲವೊಂದು ವಿಶೇಷ ವಿಚಾರಗಳನ್ನು ನಾವಿಂದು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ.


Click it and Unblock the Notifications