ನವದೆಹಲಿ, ಮೇ 12: ಟಾಟಾ ಗ್ರೂಪ್ ಭಾರತದ ಅತಿದೊಡ್ಡ ಹಾಗೂ ಅತ್ಯಂತ ಹಳೇಯ ಉದ್ಯಮ ಗ್ರೂಪ್ ಆಗಿ ಪ್ರಸ್ತುತ ವಿಮಾನ ಸೇವೆಯಿಂದ ಹಿಡಿದು ಅಡುಗೆ ಬಳಸುವ ಉಪ್ಪಿನವರೆಗೆ ಪ್ರತಿಯೊಂದು ಕ್ಷೇತ್ರಗಳ ಉತ್ಪನ್ನಗಳ ತಯಾರಿಕೆ-ಮಾರಾಟದಲ್ಲಿ ತೊಡಗಿಸಿಕೊಂಡಿದೆ.
ಈ ಉದ್ಯಮ ಸಾಮ್ರಾಜ್ಯವನ್ನು ಇಷ್ಟೊಂದು ದೊಡ್ಡ ಮಟ್ಟಕ್ಕೆ ಕಟ್ಟಿ ಬೆಳೆಸಿದವರು ಟಾಟಾ ಗ್ರೂಪ್‌ನ ರತನ್ ಟಾಟಾ ಅವರು. ಈಗ ರತನ್ ಟಾಟಾ ಅವರ ಸೊಸೆ ಮಾಯಾ ಟಾಟಾ ಅವರು ಈ ಬಹುದೊಡ್ಡ ಟಾಟಾ ಸಾಮ್ರಾಜ್ಯದ ಉತ್ತರಾಧಿಕಾರಿಯಾಗುವುದಕ್ಕೆ ಸಿದ್ಧರಾಗುತ್ತಿದ್ದಾರೆ.

ರತನ್ ಟಾಟಾ ಅವರ ಮಲಸಹೋದರಾಗಿರುವ ನೋಯೆಲ್ ಟಾಟಾ ಹಾಗೂ ಆಲೂ ಮಿಸ್ತ್ರಿ ಅವರ 34 ವರ್ಷ ವಯಸ್ಸಿನ ಪುತ್ರಿಯಾಗಿರುವ ಮಾಯಾ ಟಾಟಾ ಅವರು ಭಾರತದ ಅತ್ಯಂತ ಹೆಮ್ಮೆಯ ಟಾಟಾ ಬ್ರಾಂಡ್‌ಗೆ ಉತ್ತರಾಧಿಕಾರಿಗಳಾಗುವುದಕ್ಕೆ ಮುಂದಾಗಿದ್ದಾರೆ. ತನ್ನ ಒಡಹುಟ್ಟಿದವರಾದ ಲಿಯಾ ಮತ್ತು ನೆವೆಲ್ಲೆ ಜತೆಗೆ ಮಾಯಾ ಅವರು ಟಾಟಾ ಗ್ರೂಪ್‌ಗೆ ಸೇರಿದ ಟಾಟಾ ಮೆಡಿಕಲ್ ಸೆಂಟರ್ ಟ್ರಸ್ಟ್‌ನ ಬೋರ್ಡ್‌ನಲ್ಲಿದ್ದಾರೆ.
ಮಾಯಾ ಅವರ ತಾಯಿಯ ವಂಶಾವಳಿಯು ಅತ್ಯಂತ ಪ್ರಮುಖವಾಗಿದ್ದು, ಮಾಯಾ ಅವರ ತಾಯಿಯಾದ ಆಲೂ ಮಿಸ್ತ್ರಿ ಅವರು ಸೈರಸ್ ಮಿಸ್ತ್ರಿಯ ಸಹೋದರಿಯಾಗಿದ್ದಾರೆ. ಸೈರಿಸ್ ಮಿಸ್ತ್ರಿ ಅವರು ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿದ್ದರು. ಜತೆಗೆ ಅವರು ದಿವಂಗತ ಪಲ್ಲೋಂಜಿ ಮಿಸ್ತ್ರಿ ಅವರ ಪುತ್ರಿಯಾಗಿದ್ದಾರೆ. ಹಾಗೆಯೇ ಸೈರಸ್ ಮಿಸ್ತ್ರಿ ಅವರ ಪತ್ನಿ ಹಾಗೂ ಮಾಯಾ ಅವರ ಚಿಕ್ಕಮ್ಮ ಅವರು ರೋಹಿಕಾ ಮಿಸ್ತ್ರಿ ಅವರು 56 ಸಾವಿರ ಕೋಟಿ ರೂ. ಗಳ ಆಸ್ತಿ ಹೊಂದಿದ್ದಾರೆ. ಆ ಮೂಲಕ ರೋಹಿಕಾ ಅವರು ಭಾರತದ ಶ್ರೀಮಂತರ ಮಹಿಳೆಯರ ಪಟ್ಟಿಯಲ್ಲಿದ್ದಾರೆ.
ಇನ್ನು ತಮ್ಮ ಒಡಹುಟ್ಟಿದವರಲ್ಲಿ ಕಿರಿಯವಳಾಗಿದ್ದರು ಕೂಡ ಮಾಯಾ ಟಾಟಾ ಅವರು ಟಾಟಾ ಗ್ರೂಪ್‌ನಲ್ಲಿ ಗಮನಾರ್ಹವಾಗಿ ಗುರುತಿಸಿಕೊಂಡಿದ್ದಾರೆ. ಮಾಯಾ ಅವರು ಬೇಯರ್ಸ್ ಬಿಸಿನೆಸ್ ಸ್ಕೂಲ್ ಹಾಗೂ ಯುಕೆಯ ವಾರ್ವಿಕ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದುಕೊಂಡಿರುವ ಅಲ್ಲಿನ ಹಳೇ ವಿದ್ಯಾರ್ಥಿ ಕೂಡ ಆಗಿದ್ದಾರೆ.
ಮಾಯಾ ಅವರ ವೃತ್ತಿ ಬದುಕು ಟಾಟಾ ಗ್ರೂಪ್‌ನಲ್ಲೇ ಆರಂಭವಾಗಿದೆ. ಅವರು ಟಾಟಾ ಕ್ಯಾಪಿಟಲ್‌ನಲ್ಲಿ ಬರುವ ಬಹಳ ಪ್ರತಿಷ್ಠಿತ ಪ್ರೈವೆಟ್ ಇಕ್ವಿಟಿ ಫಂಡ್ ಆಗಿರುವ ಟಾಟಾ ಅಪರ್ಚ್ಯುನಿಟೀಸ್ ಫಂಡ್‌ನಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ನಂತರ ಅವರು ಟಾಟಾ ಡಿಜಿಟಲ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಆ ಮೂಲಕ ಟಾಟಾ ನ್ಯೂ ಆಪ್ ಲಾಂಚ್‌ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಎಕಾನಾಮಿಕ್ ಟೈಮ್ಸ್ ಪ್ರಕಾರ, ಮಾಯಾ ಅವರು ತಮ್ಮ ಅವಧಿಯಲ್ಲಿ ಟಾಟಾ ಅಪರ್ಚಿನ್ಯೂಟೀಸ್‌ನಲ್ಲಿ ಪೋರ್ಟ್‌ಪೋಲಿಯೋ ಮ್ಯಾನೇಜ್‌ಮೆಂಟ್ ಹಾಗೂ ಇನ್ವೆಸ್ಟ್‌ಮೆಂಟ್ ರಿಲೇಷನಗ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಮಾಯಾ ಟಾಟಾ ಅವರು ಟಾಟಾ ಮೆಡಿಕಲ್ ಟ್ರಸ್ಟ್‌ನಲ್ಲಿ ಆರು ಮಂದಿ ಆಡಳಿತ ಮಂಡಳಿ ಸದಸ್ಯರ ಪೈಕಿ ಒಬ್ಬರಾಗಿದ್ದಾರೆ. ಜತೆಗೆ ಅವರು 2011ರಲ್ಲಿ ರತನ್ ಟಾಟಾ ಅವರು ಕೊಲ್ಕೊತ್ತಾದಲ್ಲಿನ ಕ್ಯಾನ್ಸರ್ ಆಸ್ಪತ್ರೆಯ ಮೇಲುಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ.


Click it and Unblock the Notifications