ನವದೆಹಲಿ, ಮೇ 12: ಮುಕೇಶ್ ಅಂಬಾನಿ, ರತನ್ ಟಾಟಾ ಸೇರಿದಂತೆ ದೇಶದ ಅಗರ್ಭ ಶ್ರೀಮಂತರಂತೆ ಗೌತಮ್ ಸಿಂಘಾನಿಯಾ ಅವರು ಕೂಡ ಬಿಲಿಯನೇರ್ ಉದ್ಯಮಿಯಾಗಿದ್ದಾರೆ. ಆದರೆ, ತಮ್ಮ ಐಷಾರಾಮಿ ಬದುಕಿನಿಂದಾಗಿ ಅವರು ಆಗಾಗ ಸುದ್ದಿಯಲ್ಲಿರುತ್ತಾರೆ. ಅದರಲ್ಲಿಯೂ ಗೌತಮ್ ಅವರಿಗೆ ಕಾರುಗಳೆಂದರೆ ಬಹಳ ಪ್ರೀತಿ. ಹೀಗಿರುವಾಗ, ಗೌತಮ್ ಅವರು ಇದೀಗ ಖರೀದಿಸಿರುವ ಹೊಸದೊಂದು ಕಾರಿನಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ.
ಕಾರ್‌ಟೆಕ್ ವರದಿಗಳ ಪ್ರಕಾರ, ಬಿಲಿಯನೇರ್ ಗೌತಮ್ ಸಿಂಘಾನಿಯಾ ಅವರು ಹೊಸ ಮೆಕ್ಲಾರೆನ್ 750ಎಸ್ ಕಾರನ್ನು ಖರೀದಿ ಮಾಡಿದ್ದಾರೆ. ಇದು ಗೌತಮ್ ಸಿಂಘಾನಿಯಾ ಅವರ ಬಳಿಯಿರುವ ದುಬಾರಿ ಮೆಕ್ಲಾರೆನ್ ಕಾರುಗಳ ಪೈಕಿ ಅತ್ಯಂತ ದುಬಾರಿ ಕಾರು ಕೂಡ ಹೌದು. ರೇಮಂಡ್ ಗ್ರೂಪ್‌ನ ಮುಖ್ಯಸ್ಥರಾಗಿರುವ ಗೌತಮ್ ಅವರು ಆರೆಂಜ್ ಹಾಗೂ ಕಪ್ಪು ಬಣ್ಣದ ಸುಪರ್ ಕಾರು ಖರೀದಿಸಿದ್ದಾರೆ.

ಗೌತಮ್ ಅವರು ಶೋರೂಂ ಹೊರತಾಗಿ ಈ ಐಷಾರಾಮಿ ಕಾರಿಗೆ 5.91 ಕೋಟಿ ರೂ. ನೀಡಿ ಖರೀದಿಸಿದ್ದಾರೆ. ಮೆಕ್ಲಾರೆನ್ 750ಎಸ್ ಕಾರು ಇನ್ನೊಂದು ಮಾಡೆಲ್ ಆದ 720ಎಸ್‌ನಿಂದ ಶೇ.10ರಷ್ಟು ಹೆಚ್ಚು ಫಾಸ್ಟರ್ ಕಾರು ಆಗಿದೆ. ಈ ಕಾರು 4.0 ಲೀಟರ್ ಟ್ವಿನ್ ಫ್ಲ್ಯಾಟ್-ಪ್ಲೇನ್ ವಿ8 ಎಂಜಿನ್ ಅನ್ನು ಹೊಂದಿದ್ದು ಅದು 750 ಪಿಎಸ್ ಹಾಗೂ 800 ಎನ್‌ಎಂ ಗರಿಷ್ಠ ಟಾರ್ಕ್ ಹೊಂದಿದೆ.
ಮೆಕ್ಲಾರೆನ್ 750ಎಸ್ ಕಾರು 720ಎಸ್‌ಗಿಂತ ಬಹಳ ವಿಭಿನ್ನವಾದ ಫೀಚರ್ ಹಾಗೂ ದಕ್ಷತೆಯನ್ನು ಹೊಂದಿದೆ. ಈ ಕಾರು ಝೀರೋದಿಂದ 100 ಕಿಮೀ. ವೇಗವನ್ನು ಪಡೆಯುವುದಕ್ಕೆ ಕೇವಲ2.8 ಸೆಕೆಂಡ್ ಸಮಯವನ್ನು ಮಾತ್ರ ಪಡೆದುಕೊಳ್ಳುತ್ತದೆ.
ಈ ಕಾರಿನ ಮತ್ತೊಂದು ವಿಶಿಷ್ಟತೆ ಅಂದರೆ ಅದು ಕೇವಲ 4.4 ಸೆಕೆಂಡ್‌ಗೆ 200 ಕಿಮೀ. ವೇಗವನ್ನು ಪಡೆದುಕೊಳ್ಳಲಿದೆ. ಹೀಗಾಗಿಯೇ ಈ ಸೂಪರ್ ಕಾರಿನ ಬೆಲೆಯು 5.91 ಕೋಟಿ ರೂ. ಆಗಿದೆ. ಗೌತಮ್ ಸಿಂಘಾನಿಯಾ ಅವರು ಈ ಸೂಪರ್ ಮೆಕ್ಲಾರೆನ್ 750ಎಸ್ ಕಾರು ಹೊರತಾಗಿಯೂ ಮೆಕ್ಲಾರೆನ್ 720ಎಸ್ ಹಾಗೂ ಮೆಕ್ಲಾರೆನ್ 570ಎಸ್‌ನಂಥ ಬಹುಕೋಟಿ ಬೆಲೆಯ ಐಷಾರಾಮಿ ಕಾರನ್ನು ಕೂಡ ಹೊಂದಿದ್ದಾರೆ.


Click it and Unblock the Notifications