ಇಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ನೂತನ ಹಣಕಾಸು ವರ್ಷದ ಆರಂಭದಲ್ಲೇ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಅದೇ ರೆಪೋ ದರ ಇಳಿಕೆ.. ಈ ವರ್ಷದ ಮುಖ್ಯ ಆಕರ್ಷಣೆ ಎಂದರೆ ಪ್ರಮುಖ ನೀತಿ ಬಡ್ಡಿದರವಾದ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ ಇಳಿಸಿ 6%ಕ್ಕೆ ತರಲಾಗಿದೆ. ದೇಶದ ಆರ್ಥಿಕತೆ ಇನ್ನೂ ಚೇತರಿಕೆ ಹಂತದಲ್ಲಿರುವ ಈ ಹೊತ್ತಿನಲ್ಲಿ, ಈ ತೀರ್ಮಾನ ಸಾಲಗಾರರು ಮತ್ತು ಠೇವಣಿದಾರರಿಗೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ತೆಗೆದುಕೊಂಡ ಈ ಒಂದು ನಿರ್ಧಾರದಿಂದ ಗೃಹ ಸಾಲ, ಫಿಕ್ಸಡ್ ಡೆಪಾಸಿಟ್, ಜಾಗತಿಕ ಬೆಳವಣಿಗೆ ಮೇಲೆ ಹೇಗೆಲ್ಲಾ ಪರಿಣಾಮ ಬೀರಲಿದೆ ಎಂಬುದನ್ನು ತಿಳಿಯೋಣ.

ಗೃಹ ಸಾಲದಲ್ಲಿ ಉಳಿತಾಯ :
ರೆಪೊ ದರ ಕಡಿತವಾಗುವುದರಿಂದ ಗೃಹ ಸಾಲದ ಬಡ್ಡಿದರಗಳಲ್ಲೂ ಇಳಿಕೆ ಆಗುವ ಸಾಧ್ಯತೆ ಇದೆ. ಉದಾಹರಣೆಗೆ, 9% ಬಡ್ಡಿದರದೊಂದಿಗೆ 20 ವರ್ಷದ ಅವಧಿಗೆ ಪಡೆದಿರುವ ₹50 ಲಕ್ಷದ ಗೃಹಸಾಲಕ್ಕೆ ಪ್ರಸ್ತುತ ಇಎಂಐ ₹44,986 ಆಗಿರಬಹುದು. ಆದರೆ, ರೆಪೊ ದರದ ಆಧಾರದ ಮೇಲೆ ಬ್ಯಾಂಕ್‌ಗಳು ಬಡ್ಡಿದರವನ್ನು 8.5% ಗೆ ಇಳಿಸಿದರೆ, ಇಎಂಐ ₹43,391 ಆಗುತ್ತದೆ. ಇದರರ್ಥ, ಪ್ರತಿ ತಿಂಗಳು ₹1,595, ವಾರ್ಷಿಕವಾಗಿ ₹19,140 ಹಾಗೂ 20 ವರ್ಷಗಳ ಅವಧಿಯಲ್ಲಿ ₹3.8 ಲಕ್ಷದಷ್ಟು ಉಳಿತಾಯ ಸಾಧ್ಯವಾಗುತ್ತದೆ. ಆದರೂ ಈ ಲಾಭ ತಕ್ಷಣವೇ ಎಲ್ಲ ಬ್ಯಾಂಕುಗಳಲ್ಲಿ ದೊರಕುವುದಿಲ್ಲ. ಹಲವಾರು ಬ್ಯಾಂಕುಗಳು ಹಿಂದಿನ MPC ನಿರ್ಧಾರಗಳ ನಂತರವೂ ಬಡ್ಡಿದರಗಳನ್ನು ತಕ್ಷಣ ಇಳಿಸಿಲ್ಲ. ಈ ಬಾರಿ ಸಹ ತಕ್ಷಣ ಪ್ರತಿಕ್ರಿಯೆ ಸಿಗುತ್ತದೆಯೇ ಎಂಬುದರ ಮೇಲೆ ಅನುಮಾನವಿದೆ.
FD ಹೂಡಿಕೆದಾರರಿಗೆ ಎಚ್ಚರಿಕೆ:
ರೆಪೊ ದರ ಕಡಿತದ ಬೇರೊಂದು ಪರಿಣಾಮವೇನೆಂದರೆ, ಬ್ಯಾಂಕುಗಳು ತಮ್ಮ ಠೇವಣಿ ಯೋಜನೆಗಳ ಬಡ್ಡಿದರಗಳನ್ನು ಸಹ ಇಳಿಸುತ್ತವೆ. ಹೀಗಾಗಿ, ಕಡಿಮೆ ಬಡ್ಡಿದರದ FD ಗಳಿಂದ ಸ್ತಿರ ಆದಾಯದ ನಿರೀಕ್ಷೆ ಹೊಂದಿರುವವರಿಗೆ ಇದು ನಕಾರಾತ್ಮಕ ಬೆಳವಣಿಗೆ. ಹೊಸವಾಗಿ FD ಮಾಡಲು ಇಚ್ಛಿಸುವವರು ಈಗ ಬಡ್ಡಿದರ ಹೋಲಿಕೆ ಮಾಡಿ, ಹೆಚ್ಚು ಬಡ್ಡಿ ನೀಡುವ ಬ್ಯಾಂಕುಗಳತ್ತ ತಿರುಗಬಹುದು.
ಬ್ಯಾಂಕುಗಳ ತಂತ್ರ:
ಫ್ರೀಯೊ ಕಂಪನಿಯ ಸಿಇಒ ಕುನಾಲ್ ವರ್ಮಾ ಅವರ ಅಭಿಪ್ರಾಯದ ಪ್ರಕಾರ, ಬ್ಯಾಂಕುಗಳು ತಕ್ಷಣದ ಬಡ್ಡಿದರ ಪರಿಷ್ಕರಣೆ ಮಾಡುವುದಕ್ಕೆ ಹಲವಾರು ಅಂಶಗಳನ್ನು ಗಮನಿಸುತ್ತವೆ. ಇದರಲ್ಲಿ ನಿಧಿಯ ಮೊತ್ತ, MCLR, ಲಾಭದಾಯಕತೆ ಮುಂತಾದವುಗಳು ಸೇರಿವೆ. ಹೀಗಾಗಿ, RBI ರೆಪೊ ದರ ಕಡಿತ ಮಾಡಿದರೂ, ಬ್ಯಾಂಕುಗಳಿಂದ ತಕ್ಷಣ ಪ್ರತಿಕ್ರಿಯೆ ಬಂದೀತು ಎಂಬ ನಿರೀಕ್ಷೆ ಬೇಡ.
ತೈಲ ಬೆಲೆ, ಸುಂಕ ನೀತಿ:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಘೋಷಿಸಿರುವ ಹೊಸ ಸುಂಕಗಳು ಜಾಗತಿಕ ವ್ಯಾಪಾರಕ್ಕೆ ನೈಸರ್ಗಿಕ ಅಸ್ಥಿರತೆ ತಂದಿವೆ. ತೈಲದ ಬೆಲೆ ಏರಿಕೆ, ಚೀನಾದ ಆರ್ಥಿಕ ಕುಸಿತ ಮುಂತಾದ ಅಂಶಗಳು ಭಾರತೀಯ ಆರ್ಥಿಕತೆಗೆ ಬಲವಾದ ಪರಿಣಾಮ ಬೀರುತ್ತವೆ. ಇವು ಹಣದುಬ್ಬರದ ಮಟ್ಟವನ್ನು ಹೆಚ್ಚಿಸಬಹುದು. ಪರಿಣಾಮವಾಗಿ, ಮುಂದಿನ ಹಣಕಾಸು ನೀತಿಯಲ್ಲಿ RBI ಮತ್ತೆ ಬಡ್ಡಿದರ ಇಳಿಕೆ ಮಾಡದೆ ಸ್ಥಿರತೆಯ ಮಾರ್ಗದಲ್ಲಿ ಮುಂದುವರೆಯಬಹುದು.
ಷೇರು ಮತ್ತು ಬಾಂಡ್ ಮಾರುಕಟ್ಟೆಯ ಪ್ರತಿಕ್ರಿಯೆ:
ರೆಪೊ ದರ ಇಳಿಕೆಯ ಸುದ್ದಿ ಷೇರು ಮಾರುಕಟ್ಟೆಯಲ್ಲಿ ಗಂಭೀರ ಪ್ರತಿಕ್ರಿಯೆ ಮೂಡಿಸಿಲ್ಲ. ಬ್ಯಾಂಕಿಂಗ್ ಕ್ಷೇತ್ರದ ಷೇರುಗಳಲ್ಲಿ ಕೆಲವಷ್ಟು ಚಲನೆ ಕಂಡುಬಂದಿದೆ. ಬಾಂಡ್ ಮಾರುಕಟ್ಟೆಯು ಹೆಚ್ಚು ಚಟುವಟಿಕೆಗೊಳಗಾದರೂ, ದೀರ್ಘಾವಧಿಯ ಹೂಡಿಕೆದಾರರು ಇನ್ನೂ ನಿರೀಕ್ಷೆಯಲ್ಲಿದ್ದಾರೆ. RBI ಮುಂದಿನ ಧೋರಣೆಯು ಹೆಚ್ಚು ಸ್ಪಷ್ಟತೆ
ಒಟ್ಟಿನಲ್ಲಿ RBI ರೆಪೋ ದರವನ್ನು 6% ಕ್ಕೆ ಇಳಿಸುವ ದೊಡ್ಡ ನಿರ್ಧಾರವನ್ನೇ ತೆಗೆದುಕೊಂಡಿದೆ. ಇದರಿಂದ ಗೃಹ ಸಾಲದಲ್ಲಿ ಗ್ರಾಹಕರಿಗೆ ಕೊಂಚ ಮಟ್ಟದಲ್ಲಾದರೂ ಉಳಿತಾಯವಾಗುತ್ತದೆ. . ಆದರೆ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡುವವರಿಗೆ ಮಾತ್ರ ಇದು ಸ್ವಲ್ಪ ನಷ್ಟದ ದಾರಿ ತೋರಿಸಬಹುದು.. ಬ್ಯಾಂಕುಗಳ ಪ್ರತಿಕ್ರಿಯೆ ತಕ್ಷಣ ಸಿಗದರೂ, ಧೀರ್ಘಾವಧಿಯಲ್ಲಿ ಸಾಲದ ಬಡ್ಡಿದರ ಇಳಿಕೆಯಿಂದ ಸಾಮಾನ್ಯ ಜನತೆಗೆ ಲಾಭವಾಗುವ ನಿರೀಕ್ಷೆಯಿದೆ.


Click it and Unblock the Notifications