5 ಕೋಟಿಗಿಂತ ಕಡಿಮೆ ಮಾನ್ಯತೆಯ ಬ್ಯಾಂಕ್‌ಗಳಿಗೆ ಆರ್‌ಬಿಐ ನಿಯಮ ಸಡಿಲಿಕೆ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ 5 ಕೋಟಿ ರೂ. ಗಿಂತ ಕಡಿಮೆ ಬ್ಯಾಂಕ್ ಮಾನ್ಯತೆಗಾಗಿ ಚಾಲ್ತಿ ಖಾತೆ ನಿಯಮಗಳನ್ನು ಸಡಿಲಿಕೆ ಮಾಡಿದೆ. ಸಾಲದಾತರು ಯಾವುದೇ ನಿರ್ಬಂಧವಿಲ್ಲದೆ ಚಾಲ್ತಿ ಖಾತೆ ತೆರೆಯಲು, ನಗದು ಕ್ರೆಡಿಟ್ ಮತ್ತು ಓವರ್‌ಡ್ರಾಫ್ಟ್ ಸೌಲಭ್ಯಗಳನ್ನು ಆರಂಭ ಮಾಡಲು ಅವಕಾಶ ಮಾಡಿಕೊಡುತ್ತದೆ. ಒಂದು ತಿಂಗಳೊಳಗೆ ಬದಲಾವಣೆಗಳನ್ನು ಜಾರಿಗೆ ತರಲು ನಿಯಂತ್ರಕರು ಬ್ಯಾಂಕ್‌ಗಳಿಗೆ ಸೂಚನೆ ನೀಡಿದ್ದಾರೆ.
"ಸಾಲಗಾರರಿಗೆ, ಬ್ಯಾಂಕಿಂಗ್ ವ್ಯವಸ್ಥೆಯ ಮಾನ್ಯತೆ 5 ಕೋಟಿ ರೂ.ಗಿಂತ ಕಡಿಮೆಯಿದ್ದರೆ, ಬ್ಯಾಂಕಿಂಗ್ ವ್ಯವಸ್ಥೆಯಿಂದ ಪಡೆಯುವ ಸಾಲ ಸೌಲಭ್ಯಗಳು ರೂ. 5 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಆದಾಗ ಖಾತೆಗಳನ್ನು ತೆರೆಯಲು ಅಥವಾ ಬ್ಯಾಂಕ್‌ಗಳು ಸಿಸಿ/ಒಡಿ ಸೌಲಭ್ಯವನ್ನು ಒದಗಿಸಲು ಯಾವುದೇ ನಿರ್ಬಂಧ ಇಲ್ಲ," ಎಂದು ಆರ್‌ಬಿಐ ತನ್ನ ಮಾರ್ಗಸೂಚಿಗಳಲ್ಲಿ ತಿಳಿಸಿದೆ.
Muhurat trading 2021: ದಿನಾಂಕ, ಅವಧಿ, ಮಹತ್ವ, ವಿಶೇಷದ ಬಗ್ಗೆ ತಿಳಿಯಿರಿ
5 ಕೋಟಿ ರೂ.ಗಿಂತ ಹೆಚ್ಚಿನ ಮಾನ್ಯತೆ ಹೊಂದಿರುವ ಸಾಲಗಾರರಿಗೆ, ಬ್ಯಾಂಕಿಂಗ್‌ನ ಮಾನ್ಯತೆಯ ಕನಿಷ್ಠ 10 ಪ್ರತಿಶತವನ್ನು ಬ್ಯಾಂಕ್ ಹೊಂದಿದ್ದರೆ, ಅವರು ನಗದು ಕ್ರೆಡಿಟ್ ಅಥವಾ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಹೊಂದಿರುವ ಯಾವುದೇ ಬ್ಯಾಂಕ್‌ನಲ್ಲಿ ಖಾತೆಗಳನ್ನು ನಿರ್ವಹಿಸುವುದನ್ನು ಮುಂದುವರಿಸಬಹುದಾಗಿದೆ.

ಈಗ ಬ್ಯಾಂಕಿಂಗ್ ನಿಯಂತ್ರಕವು ಬ್ಯಾಂಕುಗಳಿಗೆ ಅಂತರ-ಬ್ಯಾಂಕ್ ಖಾತೆಗಳನ್ನು ತೆರೆಯಲು ಮತ್ತು ನಿರ್ವಹಿಸಲು ಅನುಮತಿ ನೀಡಿದೆ. ಇಎಕ್ಸ್‌ಐಎಂ ಬ್ಯಾಂಕ್, ನಬಾರ್ಡ್, ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಹಾಗೂ ಎಸ್‌ಐಡಿಬಿಐ ಅಂಥಹ ಸಂಸ್ಥೆಗಳಲ್ಲಿ ಖಾತೆಗಳನ್ನು ತೆರೆಯಬಹುದಾಗಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ, ಬ್ಯಾಂಕಿಂಗ್ ನಿಯಂತ್ರಕರು ಖಾತೆಗಳನ್ನು ತೆರೆಯಲು ಹೊಸ ನಿಯಮಗಳನ್ನು ಜಾರಿ ಮಾಡಿದ್ದರು. ಈ ನಿಯಮದ ಪ್ರಕಾರ ಸಾಲಗಾರನು ತನ್ನ ಒಟ್ಟು ಸಾಲದ ಕನಿಷ್ಠ ಶೇಕಡ 10 ರಷ್ಟು ಖಾತೆಯನ್ನು ಹೊಂದಿರುವ ಬ್ಯಾಂಕ್‌ನಲ್ಲಿ ಮಾತ್ರ ಖಾತೆಯನ್ನು ಹೊಂದಬಹುದಾಗಿತ್ತು.
ಇನ್ನು ನೂತನ ಕಟ್ಟುಪಾಡುಗಳನ್ನು ಅನುಸರಿಸಲು ಬ್ಯಾಂಕುಗಳಿಗೆ ಮೂರು ತಿಂಗಳ ಕಾಲಾವಕಾಶ ನೀಡಿದ್ದರೂ, ಬಳಿಕ ಈ ನಿಮಯದ ಅನುಷ್ಠಾನಕ್ಕೆ ಜುಲೈ 31 ರವರೆಗೆ ಗಡುವನ್ನು ರಿಸರ್ವ್ ಬ್ಯಾಂಕ್ ವಿಸ್ತರಣೆ ಮಾಡಿತ್ತು. ಕಳೆದ ಕೆಲವು ತಿಂಗಳುಗಳಲ್ಲಿ ಸಾವಿರಾರು ಖಾತೆಗಳನ್ನು ಮುಚ್ಚಿದ ನಂತರ ಹಲವು ಸಂಸ್ಥೆಗಳು ಮತ್ತು ಸಣ್ಣ ವ್ಯಾಪಾರ ಮಾಲೀಕರಿಗೆ ಅನಾನುಕೂಲತೆಯನ್ನು ಉಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ನಂತರ ಈ ಗಡುವನ್ನು ಅಕ್ಟೋಬರ್ 31 ರವರೆಗೆ ವಿಸ್ತರಿಸಲಾಯಿತು. ಇನ್ನು ಎಸ್‌ಬಿಐ ಒಂದರಲ್ಲೇ ಇಂತಹ 60,000ಕ್ಕೂ ಹೆಚ್ಚು ಖಾತೆಗಳನ್ನು ಮುಚ್ಚಲಾಗಿದೆ ಎಂದು ವರದಿಗಳು ಹೇಳಿದೆ.
ಆರ್‌ಬಿಐ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ಮರುನೇಮಕ
ಇನ್ನು ಇತರ ಸಾಲ ನೀಡುವ ಬ್ಯಾಂಕ್‌ಗಳಲ್ಲಿ ಸೇವಿಂಗ್ಸ್ ಖಾತೆಯನ್ನು ತೆರೆಯಲು ಮಾತ್ರ ಅನುಮತಿಸಲಾಗುತ್ತದೆ. ಆ ಖಾತೆಗಳಲ್ಲಿ ಠೇವಣಿ ಮಾಡಿದ ಹಣವನ್ನು ಸ್ವೀಕರಿಸಿದ ಎರಡು ದಿನಗಳಲ್ಲಿ ರವಾನೆ ಮಾಡಲಾಗುತ್ತದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಯಾವುದೇ ಸಾಲದಾತರು ಕನಿಷ್ಠ ಹತ್ತು ಶೇಕಡ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಾಲಗಾರನಿಗೆ ಬಹಿರಂಗಪಡಿಸದಿದ್ದರೆ, ಹೆಚ್ಚಿನ ಮಾನ್ಯತೆ ಹೊಂದಿರುವ ಬ್ಯಾಂಕ್ ಖಾತೆಯನ್ನು ತೆರೆಯಬಹುದು ಎಂದು ಕೇಂದ್ರ ಬ್ಯಾಂಕ್ ಈ ಸಂದರ್ಭದಲ್ಲೇ ಹೇಳಿದೆ.
ನಗದು ಹರಿವನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ನಿಟ್ಟಿನಲ್ಲಿ ಚಾಲ್ತಿ ಖಾತೆಯ ಬಳಕೆಯನ್ನು ಶಿಸ್ತುಬದ್ಧಗೊಳಿಸುವ ಗುರಿಯನ್ನು ಆರ್‌ಬಿಐನ ಹೊಸ ನಿಯಮಗಳು ಹೊಂದಿದೆ. ಈಗಾಗಲೇ ಮಿತಿಮೀರಿದ ನಿಯಂತ್ರಿತ ವಲಯವನ್ನು ನಿಯಂತ್ರಣ ಮಾಡುವ ಮೂಲಕ ಹಣದ ಹರಿವನ್ನು ಈ ನಿಯಮಗಳ ಮೂಲಕ ನಿಯಂತ್ರಸಲಾಗುತ್ತದೆ ಎಂದು ವರದಿಯು ಹೇಳಿದೆ.
ಪ್ರಸ್ತುತ ಜಾರಿಯಲ್ಲಿ ಇರುವ ಮಾರ್ಗಸೂಚಿಗಳು ಮತ್ತು ದಂಡದ ನಿಬಂಧನೆಗಳ ಹೊರತಾಗಿಯೂ ಸಾಲಗಾರರು ವಿವಿಧ ಬ್ಯಾಂಕ್‌ಗಳಲ್ಲಿ ಅನೇಕ ಚಾಲ್ತಿ ಖಾತೆಗಳನ್ನು ತೆರೆಯುವ ಮೂಲಕ ಹಣವನ್ನು ಬೇರೆಡೆಗೆ ವರ್ಗಾವಣೆ ಮಾಡುತ್ತಾರೆ ಹಾಗೂ ವಂಚನೆ ಮಾಡಿದ್ದಾರೆ ಎಂಬುವುದು ಆರ್‌ಬಿಐ ಗಮನಕ್ಕೆ ಬಂದಿದೆ. ಉದ್ದೇಶವು ಸ್ಪಷ್ಟವಾಗಿದ್ದರೂ, ಸಾಲದ ಶಿಸ್ತನ್ನು ತರುವ ಅಗತ್ಯವು ಬಹಳಷ್ಟು ಗೊಂದಲವನ್ನು ಸೃಷ್ಟಿ ಮಾಡಿದೆ.