ನಿಯಮವನ್ನು ಉಲ್ಲಂಘನೆ ಮಾಡಿದ ಕಾರಣಕ್ಕೆ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 1.8 ಕೋಟಿ ರೂಪಾಯಿ ಹಾಗೂ ಐಸಿಐಸಿಐ ಬ್ಯಾಂಕ್‌ಗೆ 30 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬುಧವಾರ ತಿಳಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಯ ಮೇಲ್ವಿಚಾರಣಾ ಮೌಲ್ಯಮಾಪನಕ್ಕಾಗಿ (ISE) ಶಾಸನಬದ್ಧ ತಪಾಸಣೆಯನ್ನು ಮಾರ್ಚ್ 31, 2019 ರಂತೆ ಅದರ ಹಣಕಾಸಿನ ಸ್ಥಿತಿಯನ್ನು ಉಲ್ಲೇಖಿಸಿ ನಡೆಸಲಾಗಿದೆ ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಮೇಲ್ವಿಚಾರಣಾ ಮೌಲ್ಯಮಾಪನ ಹಾಗೂ ಇತರ ದಾಖಲೆಗಳ ಪರಿಶೀಲನೆಯ ನಂತರ ಆರ್‌ಬಿಐ ಪಿಎನ್‌ಬಿಯ ಷೇರುಗಳಿಗೆ ಸಂಬಂಧಿಸಿದ ಕೆಲವು ನಿಬಂಧನೆಗಳ ಉಲ್ಲಂಘನೆ ಕಂಡು ಬಂದಿದೆ ಎಂದು ಆರ್‌ಬಿಐ ಹೇಳಿದೆ. ಐಸಿಐಸಿಐ ಬ್ಯಾಂಕಿನಲ್ಲಿ ಮಾರ್ಚ್ 31, 2019 ರಂತೆ ಅದರ ಹಣಕಾಸಿನ ಸ್ಥಿತಿಯನ್ನು ಉಲ್ಲೇಖಿಸಿ ಬ್ಯಾಂಕ್‌ನ ಮೇಲ್ವಿಚಾರಣಾ ಮೌಲ್ಯಮಾಪನಕ್ಕಾಗಿ ಶಾಸನಬದ್ಧ ತಪಾಸಣೆ ನಡೆಸಲಾಗಿದೆ ಎಂದು RBI ಹೇಳಿದೆ.

ಇನ್ನು ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸದಿದ್ದಕ್ಕಾಗಿ ಶುಲ್ಕವನ್ನು ವಿಧಿಸಲು ಸಂಬಂಧಿಸಿದ ನಿರ್ದೇಶನಗಳನ್ನು ಐಸಿಐಸಿಐ ಬ್ಯಾಂಕ್ ಅನುಸರಿಸದಿರುವುದು ಆರ್‌ಬಿಐ ಗಮನಕ್ಕೆ ಕಂಡುಬಂದಿದೆ. ಎರಡೂ ಬ್ಯಾಂಕುಗಳಲ್ಲಿ ನಿಯಮವನ್ನು ಉಲ್ಲಂಘನೆ ಮಾಡಿದ ಆರೋಪದಲ್ಲಿ ದಂಡವನ್ನು ವಿಧಿಸಲಾಗಿದೆ ಎಂದು ಆರ್‌ಬಿಐ ಹೇಳಿದೆ. ಹಾಗೆಯೇ ಬ್ಯಾಂಕ್‌ಗಳು ತಮ್ಮ ಗ್ರಾಹಕರೊಂದಿಗೆ ಮಾಡಿಕೊಂಡ ಯಾವುದೇ ವಹಿವಾಟು ಅಥವಾ ಒಪ್ಪಂದದ ಸಿಂಧುತ್ವಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಕೂಡಾ ಆರ್‌ಬಿಐ ತಿಳಿಸಿದೆ.
ನಿಯಮ ಉಲ್ಲಂಘನೆ ಮಾಡಿದ ಎಸ್‌ಬಿಐ, ಯೂನಿಯನ್ ಬ್ಯಾಂಕ್‌ಗೂ ದಂಡ
ಈ ಹಿಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೂ ದಂಡವನ್ನು ವಿಧಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ (ಎಸ್‌ಬಿಐ) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸೋಮವಾರ ಒಂದು ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ. ವಂಚನೆ ಸಂಬಂಧಿಸಿದ ನಿಯಮಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪಾಲನೆ ಮಾಡಿಲ್ಲ ಎಂಬ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಎಸ್‌ಬಿಐಗೆ ದಂಡ ವಿಧಿಸಿದೆ ಎಂದು ವರದಿ ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ (ಎಸ್‌ಬಿಐ) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸೋಮವಾರ ಒಂದು ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ. ವಂಚನೆ ಸಂಬಂಧಿಸಿದ ನಿಯಮಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪಾಲನೆ ಮಾಡಿಲ್ಲ ಎಂಬ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಎಸ್‌ಬಿಐಗೆ ದಂಡ ವಿಧಿಸಿದೆ ಎಂದು ವರದಿ ಆಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ನಿಯಂತ್ರಕರು, "ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಎಸ್‌ಬಿಐನಲ್ಲಿ ಇರುವ ಗ್ರಾಹಕರ ಖಾತೆಯ ಪರಿಶೀಲನೆ ನಡೆಸಿದೆ. ಈ ಸಂದರ್ಭದಲ್ಲಿ ಕೆಲವು ಅಡೆತಡೆಗಳು ಇರುವುದು ಕಂಡು ಬಂದಿದೆ," ಎಂದು ಹೇಳಿದ್ದಾರೆ. "ಯಾವುದೇ ವಂಚನೆ ನಡೆದ ಸಂದರ್ಭದಲ್ಲಿ ಆ ಬಗ್ಗೆ ದೂರು ದಾಖಲು ಮಾಡುವಾಗ ಎಸ್‌ಬಿಐನ ಕೆಲವು ಅಡೆತಡೆಗಳಿಂದಾಗಿ ವಿಳಂಬವಾಗುತ್ತದೆ. ಈ ನಿಟ್ಟಿನಲ್ಲಿ ದಂಡ ವಿಧಿಸಲಾಗಿದೆ," ಎಂದು ಕೂಡಾ ಉಲ್ಲೇಖ ಮಾಡಲಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನವೆಂಬರ್ 29 ರಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೇಲೆ ಸುಮಾರು ಒಂದು ಕೋಟಿ ರೂಪಾಯಿಯಷ್ಟು ವಿತ್ತೀಯ ದಂಡವನ್ನು ವಿಧಿಸಿದೆ. ಆಸ್ತಿಗಳ ಮಾರಾಟ ಹಾಗೂ ವಂಚನೆಗಳ ವರದಿಗೆ ಸಂಬಂಧಿಸಿದ ಕೆಲವು ನಿರ್ಬಂಧನೆಗಳನ್ನು ಉಲ್ಲಂಘನೆ ಮಾಡಿದ ಆರೋಪದ ಮೇಲೆ ಆರ್‌ಬಿಐ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೇಲೆ ಒಂದು ಕೋಟಿ ರೂಪಾಯಿ ವಿತ್ತೀಯ ದಂಡವನ್ನು ವಿಧಿಸಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ಆರ್‌ಬಿಐ ಈ ಹಿಂದೆ ತಪಾಸಣೆಯನ್ನು ನಡೆಸಿ ಎಚ್ಚರಿಕೆಯನ್ನು ನೀಡಿದೆ. ಆದರೆ ಅದರ ಹೊರತಾಗಿಯೂ ಈ ಆಸ್ತಿಗಳ ಮಾರಾಟ ಹಾಗೂ ವಂಚನೆಗಳ ವರದಿಗೆ ಸಂಬಂಧಿಸಿದ ಕೆಲವು ನಿರ್ಬಂಧನೆಗಳನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡಿಲ್ಲ ಎಂಬ ಆರೋಪದಲ್ಲಿ ದಂಡ ವಿಧಿಸಲಾಗಿದೆ.


Click it and Unblock the Notifications