ಸತತ ನಾಲ್ಕನೇ ದಿನ ವಹಿವಾಟಿನ ಅಂತ್ಯದ ವೇಳೆಗೆ ಸೆನ್ಸೆಕ್ಸ್, ನಿಫ್ಟಿ ನಷ್ಟವನ್ನು ಕಂಡಿದೆ. ಆರ್‌ಬಿಐ ರೆಪೋ ದರ ಏರಿಕೆ ಮಾಡಿ, ಸಹಕಾರಿ ಬ್ಯಾಂಕ್‌ಗಳಿಗೆ ಸಂಬಂಧಿಸಿದ ಕೆಲವು ಕ್ರಮಗಳನ್ನು ಪ್ರಕಟ ಮಾಡುತ್ತಿದ್ದಂತೆ ಷೇರು ಮಾರುಕಟ್ಟೆಯು ಕೊಂಚ ಚೇತರಿಕೆ ಕಂಡಿತ್ತು. ಆದರೆ ವಹಿವಾಟಿನ ಅಂತ್ಯದ ವೇಳೆಗೆ ನಷ್ಟವನ್ನು ಕಂಡಿದೆ.
ಆರ್‌ಬಿಐ ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡಿದೆ. ಇದರಿಂದಾಗಿ ರೆಪೋ ದರವು ಶೇಕಡ 4.40 ರಿಂದ ಶೇಕಡ 4.90ಕ್ಕೆ ಏರಿದೆ. ಈ ಹಿಂದೆ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿತ್ತು. ಆ ಸಂದರ್ಭ ಷೇರು ಪೇಟೆ ದಿಡೀರ್ ಆಗಿ ಕುಸಿತ ಕಂಡಿತ್ತು.
ವಹಿವಾಟಿನ ಅಂತ್ಯದ ವೇಳಗೆ ಬಿಎಸ್‌ಇ ಸೆನ್ಸೆಕ್ಸ್ ಸುಮಾರು 215 ಅಂಕ ಅಥವಾ ಶೇಕಡ 0.39 ಕುಸಿದು 54,892 ಕ್ಕೆ ತಲುಪಿದೆ. ಈ ವೇಳೆಯಲ್ಲೇ ನಿಫ್ಟಿ 60 ಅಂಕ ಅಥವಾ ಶೇಕಡ 0.37 ಕುಸಿದು 16,356ಕ್ಕೆ ಇಳಿದಿದೆ.

ವಹಿವಾಟಿನ ಅಂತ್ಯದಲ್ಲಿ ನಿಫ್ಟಿ ಮಿಡ್‌ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ ಇಳಿಕೆ ಕಂಡಿದೆ. ಕ್ರಮವಾಗಿ ಶೇಕಡ 0.48 ಹಾಗೂ ಶೇಕಡ 0.30 ಕುಸಿತ ಕಂಡಿದೆ. ನಿಫ್ಟಿ ಎಫ್‌ಎಂಸಿಜಿ, ನಿಫ್ಟಿ ಕನ್ಸ್ಯೂಮರ್ ಡ್ಯೂರೆಬಲ್ಸ್, ನಿಫ್ಟಿ ಆಯಿಲ್, ನಿಫ್ಟಿ ಗ್ಯಾಸ್, ನಿಫ್ಟಿ ಖಾಸಗಿ ಬ್ಯಾಂಕ್ ಭಾರೀ ಇಳಿಕೆ ಕಂಡಿದೆ. ಈ ಷೇರುಗಳು ಕ್ರಮವಾಗಿ ಶೇಕಡ 1.05, ಶೇಕಡ 0.55, ಶೇಕಡ 0.92, ಶೇಕಡ 0.43 ಕುಸಿತ ಕಂಡಿದೆ.
ಭಾರ್ತಿ ಏರ್‌ಟೇಟ್ ಟಾಪ್ ಲೂಸರ್
ಇನ್ನು ನಿಫ್ಟಿ ಭಾರ್ತಿ ಏರ್‌ಟೇಲ್ ಭಾರೀ ಇಳಿಕೆ ಕಂಡಿದೆ. ಶೇಕಡ 2.98ರಷ್ಟು ಕುಸಿದು, ರೂಪಾಯಿ 664.90ಕ್ಕೆ ತಲುಪಿದೆ. ಐಟಿಸಿ, ರಿಲಾಯನ್ಸ್ ಇಂಡಸ್ಟ್ರೀಸ್, ಯುಪಿಎಲ್ ಹಾಗೂ ಏಷ್ಯನ್ ಪೇಂಟ್ಸ್ ಕೂಡಾ ಭಾರೀ ನಷ್ಟವನ್ನು ಕಂಡಿದೆ.
ಇನ್ನು ಷೇರು ಮಾರುಕಟ್ಟೆಯಲ್ಲಿ 1,554 ಷೇರುಗಳು ಏರಿಕೆ ಕಂಡರೆ, 1,768 ಷೇರುಗಳು ಭಾರೀ ಇಳಿದಿದೆ. ಬಿಎಸ್‌ಇಯಲ್ಲಿ ಏರ್‌ಟೇಟ್, ಐಟಿಸಿ, ರಿಲಾಯನ್ಸ್, ಏಷ್ಯನ್ ಪೇಂಟ್ಸ್, ಆಕ್ಸಿಸ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಇನ್ಫೋಸಿಸ್, ಪವರ್ ಗ್ರಿಡ್, ಅಲ್ಟ್ರಾಟೆಕ್ ಸಿಮೆಂಟ್ ಕೂಡಾ ಭಾರೀ ನಷ್ಟವನ್ನು ಅನುಭವಿಸಿದೆ.
ಎಲ್‌ಐಸಿ ಷೇರು ಭಾರೀ ಇಳಿಕೆ
ಈ ನಡುವೆ ಆರಂಭದಲ್ಲಿ ರಿಯಾಯಿತಿ ದರದಲ್ಲಿ ಲೀಸ್ಟಿಂಗ್ ಆದ ಎಲ್‌ಐಸಿ ಷೇರುಗಳು ನಿರಂತರವಾಗಿ ನಷ್ಟವನ್ನು ಕಂಡಿದೆ. ವಿತರಣೆ ಬೆಲೆ 949ರಿಂದ 700ಕ್ಕೆ ಕುಸಿದಿದೆ. ಪ್ರತಿದಿನ ಸಾರ್ವಕಾಲಿಕ ಕುಸಿತ ದಾಖಲು ಮಾಡುತ್ತಿದೆ. ಇಂದು (ಜೂನ್ 8) ಶೇಕಡ 1.98ರಷ್ಟು ಕುಸಿತ ಕಂಡು 738ರಲ್ಲಿ ಸ್ಥಿರವಾಗಿದೆ. ಇನ್ನು ಇದರಕ್ಕೆ ವ್ಯತಿರಿಕ್ತವಾಗಿ ಟಾಟಾ ಸ್ಟೀಲ್ಸ್, ಎಸ್‌ಬಿಐ, ಡಾ ರೆಡ್ಡೀಸ್, ಬಜಾಜ್ ಫಿನಾನ್ಸ್, ಟಿಸಿಎಸ್, ಟೈಟಾನ್, ಮಾರುತಿ, ಬಜಾಜ್ ಫೀನ್ಸರ್ವ್, ಎಚ್‌ಸಿಎಲ್ ಟೆಕ್, ವಿಪ್ರೋ, ಎಂ&ಎಂ, ಎಚ್‌ಡಿಎಫ್‌ಸಿ ಟ್ವಿನ್ಸ್ ಲಾಭದೊಂದಿಗೆ ವಹಿವಾಟು ಅಂತ್ಯ ಮಾಡಿದೆ.


Click it and Unblock the Notifications