ನವದೆಹಲಿ, ಏಪ್ರಿಲ್ 9: ಆಕ್ಸಿಸ್ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್‌ಗಳಿಂದ ನಿಯಮ ಉಲ್ಲಂಘನೆ ಹಿನ್ನೆಲೆ ಭಾರತೀಯ ರಿಸರ್ವ್ ಬ್ಯಾಂಕ್ ಭಾರಿ ಮೊತ್ತದ ದಂಡವನ್ನು ವಿಧಿಸಿದೆ. ಕಳೆದ ಶುಕ್ರವಾರ ಎರಡೂ ಬ್ಯಾಂಕ್ ಮೇಲೆ ತಲಾ 93 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ.
KYC ಮಾರ್ಗಸೂಚಿಗಳು ಸೇರಿದಂತೆ ವಿವಿಧ ನಿಯಮಗಳ ಉಲ್ಲಂಘನೆಗಾಗಿ ಆಕ್ಸಿಸ್ ಬ್ಯಾಂಕ್‌ಗೆ ದಂಡ ವಿಧಿಸಲಾಗಿದೆ. ನಿಯಂತ್ರಕರು ನೀಡಿದ ಕೆಲವು ನಿರ್ದೇಶನಗಳನ್ನು ಅನುಸರಿಸದಿದ್ದಕ್ಕಾಗಿ ಆಕ್ಸಿಸ್ ಬ್ಯಾಂಕ್‌ಗೆ ದಂಡವನ್ನು ವಿಧಿಸಲಾಗಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಆಕ್ಸಿಸ್ ಬ್ಯಾಂಕ್ ಸಾಲಗಳು ಮತ್ತು ಮುಂಗಡಗಳಿಗೆ ಸಂಬಂಧಿಸಿದಂತೆ ನಿಮ್ಮ ಗ್ರಾಹಕರನ್ನು ತಿಳಿಯಿರಿ (ಕೆವೈಸಿ) ಮಾರ್ಗಸೂಚಿಗಳು ಹಾಗೂ 'ಉಳಿತಾಯ ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್‌ಗಳನ್ನು ನಿರ್ವಹಿಸದಿರುವ ದಂಡದ ಶುಲ್ಕಗಳ ವಿಷಯದಲ್ಲಿ ಕೆಲವು ನಿಬಂಧನೆಗಳನ್ನು ಬ್ಯಾಂಕ್ ಉಲ್ಲಂಘಿಸಿದೆ ಎಂದು ಆರ್‌ಬಿಐ ಹೇಳಿದೆ.

ಐಡಿಬಿಐ ಬ್ಯಾಂಕ್‌ಗೆ ದಂಡ ವಿಧಿಸಿದ್ದೇಕೆ?:
ವಾಣಿಜ್ಯ ಬ್ಯಾಂಕ್‌ಗಳು ಮತ್ತು ಆಯ್ದ ಹಣಕಾಸು ಸಂಸ್ಥೆಗಳಿಂದ ವಂಚನೆಗಳು - ವರ್ಗೀಕರಣದ ಬಗ್ಗೆ ವರದಿ ಮಾಡುವಿಕೆ' ಕುರಿತು ನಿರ್ದೇಶನಗಳನ್ನು ಅನುಸರಿಸದಿದ್ದಕ್ಕಾಗಿ ಐಡಿಬಿಐ ಬ್ಯಾಂಕ್‌ಗೆ ದಂಡ ವಿಧಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
'ಪ್ರಾಯೋಜಕ ಬ್ಯಾಂಕ್‌ಗಳು ಮತ್ತು ಎಸ್‌ಸಿಬಿ/ಯುಸಿಬಿಗಳಂತಹ ಕಾರ್ಪೊರೇಟ್ ಗ್ರಾಹಕರ ನಡುವೆ ಪಾವತಿ ವ್ಯವಸ್ಥೆಯ ನಿಯಂತ್ರಣಗಳನ್ನು ಬಲಪಡಿಸುವುದು' ಮತ್ತು 'ಸೈಬರ್ ಸೆಕ್ಯುರಿಟಿ ಫ್ರೇಮ್‌ವರ್ಕ್,' ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಐಡಿಬಿಐ ಬ್ಯಾಂಕ್‌ಗೆ ಆರ್‌ಬಿಐ ದಂಡ ವಿಧಿಸಿದೆ ಎಂದು ಮತ್ತೊಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಆದಾಗ್ಯೂ, ನಿಯಂತ್ರಕ ಅನುಸರಣೆಯ ನ್ಯೂನತೆ ಆಧರಿಸಿ ದಂಡವನ್ನು ವಿಧಿಸಲಾಗುತ್ತದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಅಲ್ಲದೆ, ಪಿಟಿಐ ವರದಿಯ ಪ್ರಕಾರ, ಆಯಾ ಗ್ರಾಹಕರೊಂದಿಗೆ ಅವರು ಮಾಡಿಕೊಂಡಿರುವ ಯಾವುದೇ ವಹಿವಾಟು ಅಥವಾ ಒಪ್ಪಂದದ ಸಿಂಧುತ್ವದ ಮೇಲೆ ದಂಡವನ್ನು ವಿಧಿಸಲು ಉದ್ದೇಶಿಸಿಲ್ಲ ಎಂದು ಆರ್‌ಬಿಐ ಹೇಳಿದೆ.
ಗ್ರಾಹಕರಿಗೆ ಯಾವುದೇ ಆತಂಕ ಬೇಕಿಲ್ಲ:
ಐಡಿಬಿಐ ಮತ್ತು ಆಕ್ಸಿಸ್ ಬ್ಯಾಂಕ್ ಗ್ರಾಹಕರು ದಂಡದ ಬಗ್ಗೆ ಯಾವುದೇ ರೀತಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಎರಡೂ ಬ್ಯಾಂಕ್‌ಗಳು ಗ್ರಾಹಕರ ಮೇಲೆ ಯಾವುದೇ ಹೆಚ್ಚುವರಿ ತೆರಿಗೆ ಅನ್ನು ವಿಧಿಸದೇ ತಮ್ಮ ಸೇವೆಯನ್ನು ಮುಂದುವರಿಸಲಿವೆ ಎಂದು ಆರ್‌ಬಿಐ ತಿಳಿಸಿದೆ.


Click it and Unblock the Notifications