ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮತ್ತೊಂದು ಬ್ಯಾಂಕ್ ಮೇಲೆ ದಂಡವನ್ನು ವಿಧಿಸಿದೆ. ಅದು ಕೂಡಾ ಒಂದು ಕೋಟಿ ರೂಪಾಯಿಗೂ ಅಧಿಕ ಮೊತ್ತದ ದಂಡವನ್ನು ಆರ್‌ಬಿಐ ವಿಧಿಸಿದೆ. ಇತ್ತೀಚೆಗೆ ಆರ್‌ಬಿಐ ನಾಲ್ಕು ಕೋ ಆಪರೇಟಿವ್ ಬ್ಯಾಂಕ್‌ಗಳ ಮೇಲೆ 44 ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಈಗ ಆರ್‌ಬಿಐ ಕೇವಲ ಒಂದು ಬ್ಯಾಂಕ್ ಮೇಲೆ ಸುಮಾರು 1.73 ಕೋಟಿ ರೂಪಾಯಿ ದಂಡವನ್ನು ವಿಧಿಸಿದ್ದು, ಕಾರಣ ಇಲ್ಲಿದೆ.
ಆರ್‌ಬಿಐನ ನಿಯಮವನ್ನು ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಚ್‌ಎಸ್‌ಬಿಸಿ ಬ್ಯಾಂಕ್ ಮೇಲೆ 1.73 ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ. ಕ್ರೆಡಿಟ್ ಇನ್ಫಾರ್ಮೆಷನ್ ಕಂಪನಿ ನಿಯಮವನ್ನು ಎಚ್‌ಎಸ್‌ಬಿಸಿ ಬ್ಯಾಂಕ್ ಉಲ್ಲಂಘನೆ ಮಾಡಿದೆ. ಕ್ರೆಡಿಟ್ ಇನ್ಫಾರ್ಮೆಷನ್ ಸಂಸ್ಥೆಗಳಿಗೆ ಎಚ್‌ಎಸ್‌ಬಿಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಗ್ಗೆ ತಪ್ಪಾದ ಮಾಹಿತಿಯನ್ನು ನೀಡಿದೆ ಎಂದು ಕೇಂದ್ರ ಬ್ಯಾಂಕ್ (ಆರ್‌ಬಿಐ) ಆರೋಪ ಮಾಡಿದೆ.

ಈ ಆರೋಪದ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನಿಖೆಯನ್ನು ನಡೆಸಿದೆ. ಈ ತನಿಖೆಯಲ್ಲಿ ಎಚ್‌ಎಸ್‌ಬಿಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಗ್ಗೆ ತಪ್ಪಾದ ಮಾಹಿತಿಯನ್ನು ನೀಡಿರುವುದು ಮಾತ್ರವಲ್ಲದೆ, ಕ್ರೆಡಿಟ್ ಕಾರ್ಡ್‌ನ ಕೊನೆಯ ದಿನಾಂಕದ ಬಗ್ಗೆಯೂ ತಪ್ಪು ಮಾಹಿತಿ ನೀಡಿದೆ ಎಂಬುವುದು ಬಹಿರಂಗವಾಗಿದೆ. ಈ ಬಗ್ಗೆ ಅಧಿಕ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ ಮುಂದೆ ಓದಿ...
ಕ್ರೆಡಿಟ್ ಕಾರ್ಡ್ ಬಗ್ಗೆ ತಪ್ಪು ಮಾಹಿತಿ ಹಂಚಿಕೆ
ಆರ್‌ಬಿಐ ಪ್ರಕಾರ ಎಚ್‌ಎಸ್‌ಬಿಸಿ ಬ್ಯಾಂಕ್ ತನ್ನ ಜಿರೋ ಬ್ಯಾಲೆನ್ಸ್ ಕ್ರೆಡಿಟ್ ಕಾರ್ಡ್ ಬಗ್ಗೆ ನಾಲ್ಕು ಕ್ರೆಡಿಟ್ ಇನ್ಫಾರ್ಮೇಷನ್ ಸಂಸ್ಥೆಗಳಿಗೆ ತಪ್ಪಾದ ಮಾಹಿತಿಯನ್ನು ನೀಡಿದೆ. ಈ ಮೂಲಕ ಸಿಐಸಿ ನಿಯಮವನ್ನು ಎಚ್‌ಎಸ್‌ಬಿಸಿ ಬ್ಯಾಂಕ್ ಉಲ್ಲಂಘನೆ ಮಾಡಿದೆ. ಇನ್ನು ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನ ಕೊನೆಯ ದಿನಾಂಕದ ಬಗ್ಗೆಯೂ ತಪ್ಪಾದ ಮಾಹಿತಿಯನ್ನು ನೀಡಿದೆ. ಅದಕ್ಕಾಗಿ ಎಚ್‌ಎಸ್‌ಬಿಸಿ ಬ್ಯಾಂಕ್ ಮೇಲೆ 1.73 ಕೋಟಿ ರೂಪಾಯಿ ದಂಡವನ್ನು ವಿಧಿಸಲಾಗಿದೆ.
ಕ್ರೆಡಿಟ್ ಕಾರ್ಡ್ ನಿಯಮ ಉಲ್ಲಂಘನೆ
ಈ ಆರೋಪಗಳ ಬೆನ್ನಲ್ಲೇ ಎಚ್‌ಎಸ್‌ಬಿಸಿ ಬ್ಯಾಂಕ್ ಹಣಕಾಸು ಸ್ಥಿತಿಯ ಬಗ್ಗೆ ಮಾರ್ಚ್ 31, 2021ರವರೆಗೆ ಕೇಂದ್ರ ಬ್ಯಾಂಕ್ ನಿಗಾ ಇರಿಸಿದೆ, ತನಿಖೆಯನ್ನು ನಡೆಸಿದೆ. ಈ ತನಿಖೆಯ ವೇಳೆ ಎಚ್‌ಎಸ್‌ಬಿಸಿ ಬ್ಯಾಂಕ್ ಆರ್‌ಬಿಐನ ಕ್ರೆಡಿಟ್ ಕಾರ್ಡ್ ಸಂಬಂಧಿತ ಹಲವಾರು ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ತಿಳಿದು ಬಂದಿದೆ. ಅದಕ್ಕಾಗಿ ಆರ್‌ಬಿಐ ಎಚ್‌ಎಸ್‌ಬಿಸಿ ಬ್ಯಾಂಕ್‌ಗೆ ಶೋಕಾಸ್ ನೋಟಿಸ್ ಅನ್ನು ನೀಡಿದೆ. ಯಾಕೆ ತಪ್ಪಾದ ಮಾಹಿತಿಯನ್ನು ನೀಡಲಾಗಿದೆ ಎಂದು ಪ್ರಶ್ನಿಸಿದೆ.
ಇತರೆ ಬ್ಯಾಂಕ್‌ಗಳ ಮೇಲೆಯೂ ದಂಡ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಾಲ್ಕು ಕೋ ಆಪರೇಟಿವ್ ಬ್ಯಾಂಕ್‌ಗಳ ಮೇಲೆ ದಂಡವನ್ನು ವಿಧಿಸಿದೆ. ಆರ್‌ಬಿಐ ನಾಲ್ಕು ಬ್ಯಾಂಕ್‌ಗಳ ಮೇಲೆ ಒಟ್ಟಾಗಿ 44 ಲಕ್ಷ ರೂಪಾಯಿ ದಂಡವನ್ನುವಿಧಿಸಿದೆ. ಚೆನ್ನೈ ಮೂಲದ ತಮಿಳುನಾಡು ಸ್ಟೇಟ್ ಅಪೆಕ್ಸ್ ಕೋ-ಆಪರೇಟಿವ್ ಬ್ಯಾಂಕ್‌ಗೆ 16 ಲಕ್ಷ ರೂಪಾಯಿ ದಂಡ ಸೇರಿದಂತೆ ಒಟ್ಟಾಗಿ 44 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ.
ನಿಗದಿತ ಅವಧಿಯಲ್ಲಿ ಅರ್ಹ ಮೊತ್ತವನ್ನು ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ (DEAF) ವರ್ಗಾಯಿದ ಕಾರಣಕ್ಕೆ ಬಾಂಬೆ ಮರ್ಕೆಂಟೈಲ್ ಕೋ-ಆಪರೇಟಿವ್ ಬ್ಯಾಂಕ್‌ಗೆ 13 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ. ಮೊತ್ತವನ್ನು ವಿಳಂಬವಾಗಿ ವರ್ಗಾಯಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪ್ರಕಟಣೆಯಲ್ಲಿ ತಿಳಿಸಿದೆ.
'ಠೇವಣಿಗಳ ಮೇಲಿನ ಬಡ್ಡಿ ದರ' ನಿರ್ದೇಶನಗಳನ್ನು ನಿಯಮದ ಪ್ರಕಾರವಾಗಿ ಪಾಲನೆ ಮಾಡದ ಕಾರಣ ಪುಣೆಯ ಜನತಾ ಸಹಕಾರಿ ಬ್ಯಾಂಕ್‌ಗೆ 13 ಲಕ್ಷ ರೂಪಾಯಿಯ ದಂಡವನ್ನು ವಿಧಿಸಲಾಗಿದೆ ಎಂದು ಕೇಂದ್ರ ಬ್ಯಾಂಕ್ ಪ್ರತ್ಯೇಕ ಪ್ರಕಟಣೆಯಲ್ಲಿ ತಿಳಿಸಿದೆ. ನಿರ್ದಿಷ್ಟ ಅವಧಿಯಲ್ಲಿ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ಅರ್ಹ ಮೊತ್ತವನ್ನು ವರ್ಗಾವಣೆ ಮಾಡದ ಕಾರಣ ತಮಿಳುನಾಡು ರಾಜ್ಯ ಅಪೆಕ್ಸ್ ಕೋ-ಆಪರೇಟಿವ್ ಬ್ಯಾಂಕ್‌ಗೆ ದಂಡವನ್ನು ವಿಧಿಸಲಾಗಿದೆ.
ನಿಗದಿತ ಸಮಯದೊಳಗೆ ವಂಚನೆಯ ಬಗ್ಗೆ ನಬಾರ್ಡ್‌ಗೆ ವರದಿ ಮಾಡಿಲ್ಲ ಮತ್ತು ವಿಳಂಬವಾಗಿ ವಂಚನೆಯ ಬಗ್ಗೆ ವರದಿ ಮಾಡಿದೆ. ಕೆಲವು ನಿಯಮಗಳ ಉಲ್ಲಂಘನೆಗಾಗಿ ರಾಜಸ್ಥಾನದ ಬರನ್ ನಗ್ರಿಕ್ ಸಹಕಾರಿ ಬ್ಯಾಂಕ್‌ಗೆ 2 ಲಕ್ಷ ರೂಪಾಯಿಗಳ ವಿತ್ತೀಯ ದಂಡವನ್ನು ವಿಧಿಸಲಾಗಿದೆ.


Click it and Unblock the Notifications