ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮೂರು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಸುಮಾರು ಒಂದರಿಂದ ಎರಡು ಕೋಟಿ ರೂಪಾಯಿಯಷ್ಟು ದಂಡವನ್ನು ವಿಧಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಪಂಜಾಬ್ & ಸಿಂಧ್ ಬ್ಯಾಂಕ್ (ಪಿಎಸ್‌ಬಿ) ಮತ್ತು ಇಂಡಿಯನ್ ಬ್ಯಾಂಕ್‌ಗೆ ಆರ್‌ಬಿಐ ದಂಡವನ್ನು ವಿಧಿಸಿದೆ.
ಪ್ರಮುಖವಾಗಿ ಕೇಂದ್ರ ಬ್ಯಾಂಕ್‌ನ ಮಾರ್ಗಸೂಚಿಗಳನ್ನು ಅನುಸರಿಸದ ಕಾರಣದಿಂದಾಗಿ ಈ ಮೂರು ಬ್ಯಾಂಕ್‌ಗಳ ಮೇಲೆ ದಂಡವನ್ನು ವಿಧಿಸಲಾಗಿದೆ. ಆದ್ದರಿಂದಾಗಿ ಈ ಮೂರು ಸ್ಟಾಕ್‌ಗಳ ಮೇಲೆ ಇಂದು ಅಧಿಕ ಗಮನವನ್ನು ಹರಿಸಲಾಗುತ್ತದೆ. ಸಾಲ ಮತ್ತು ಅಡ್ವಾನ್ಸ್ ನಿರ್ದೇಶನಗಳನ್ನು ಅನುಸರಿಸದ ಕಾರಣ ಎಸ್‌ಬಿಐ ಮತ್ತು ಇಂಡಿಯನ್ ಬ್ಯಾಂಕ್‌ಗೆ ಆರ್‌ಬಿಐ ದಂಡ ವಿಧಿಸಿದೆ. ಆದರೆ ಡೆಪಾಸಿಟ್‌ದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ ಯೋಜನೆ ಅನುಸರಿಸದ್ದಕ್ಕೆ ಪಂಜಾಬ್ & ಸಿಂಧ್ ಬ್ಯಾಂಕ್‌ಗೆ ದಂಡ ವಿಧಿಸಲಾಗುತ್ತದೆ.

ಈ ಬ್ಯಾಂಕ್‌ಗಳು ಮಾರ್ಗಸೂಚಿಗಳನ್ನು ಪಾಲಿಸದೆ ಇರುವ ಕಾರಣ ತಿಳಿಸಲು ಮೊದಲು ನೋಟಿಸ್‌ಗಳನ್ನು ನೀಡಲಾಗಿತ್ತು. ಅದಾದ ಬಳಿಕ ದಂಡವನ್ನು ವಿಧಿಸಲಾಗಿದೆ. ನೋಟಿಸ್‌ಗೆ ಉತ್ತರ ಬಂದ ಬಳಿಕವೇ ಆರ್‌ಬಿಐ ಈ ಬ್ಯಾಂಕ್‌ಗಳ ಮೇಲೆ ವಿತ್ತೀಯ ದಂಡವನ್ನು ವಿಧಿಸುವ ನಿರ್ಧಾರವನ್ನು ಮಾಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ (ಎಸ್‌ಬಿಐ) ಆರ್‌ಬಿಐ ಸಾಲಗಳು ಮತ್ತು ಅಡ್ವಾನ್ಸ್ ವಿಚಾರದಲ್ಲಿ ಆರ್‌ಬಿಐ ನೀಡಿದ ಕೆಲವು ನಿರ್ದೇಶನಗಳನ್ನು ಅನುಸರಿಸದಿದ್ದಕ್ಕಾಗಿ 1.30 ಕೋಟಿ ರೂಪಾಯಿಗಳ ವಿತ್ತೀಯ ದಂಡವನ್ನು ವಿಧಿಸಲಾಗಿದೆ.
ಇಂಡಿಯನ್ ಬ್ಯಾಂಕ್
ಆರ್‌ಬಿಐ ಇಂಡಿಯನ್ ಬ್ಯಾಂಕ್ ಮೇಲೆ ಸುಮಾರು 1.62 ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ. ಸಾಲ ಮತ್ತು ಅಡ್ವಾನ್ಸ್ ವಿಚಾರದಲ್ಲಿ ನಿಯಮಗಳನ್ನು ಪಾಲನೆ ಮಾಡದ ಆರೋಪದಲ್ಲಿ ಈ ಬ್ಯಾಂಕ್ ಮೇಲೆ ದಂಡವನ್ನು ವಿಧಿಸಲಾಗಿದೆ. ಇಂಡಿಯನ್ ಬ್ಯಾಂಕ್‌ನ ವಿಷಯದಲ್ಲಿಯೂ, ಆರ್‌ಬಿಐ ಮಾರ್ಚ್ 31, 2021 ರಂತೆ ಮೌಲ್ಯಮಾಪನವನ್ನು ನಡೆಸಿದೆ.
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್
ಮೇಲಿನ ಎರಡು ಪಿಎಸ್‌ಯು ಬ್ಯಾಂಕ್‌ಗಳಿಗೆ ಹೋಲಿಸಿದರೆ, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಬೇರೆ ವಿಚಾರದಲ್ಲಿ ದಂಡವನ್ನು ವಿಧಿಸಿದೆ. ಡೆಪಾಸಿಟ್‌ದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ ಯೋಜನೆ, 2014- ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 26A, ಕುರಿತು ಆರ್‌ಬಿಐ ಹೊರಡಿಸಿದ ನಿರ್ದೇಶನಗಳನ್ನು ಅನುಸರಿಸದಿದ್ದಕ್ಕಾಗಿ 1 ಕೋಟಿ ರೂಪಾಯಿ ದಂಡವನ್ನು ಆರ್‌ಬಿಐ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ಗೆ ವಿಧಿಸಲಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಈ ಹಿಂದೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಮೇಲೆ ದಂಡವನ್ನು ವಿಧಿಸಿದೆ. ಕೇಂದ್ರ ಬ್ಯಾಂಕ್ (ಆರ್‌ಬಿಐ) ಸುಮಾರು 84.50 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ. ಈ ಹಿಂದೆಯೂ ಆರ್‌ಬಿಐ ಕೆನರಾ ಬ್ಯಾಂಕ್ ಸೇರಿದಂತೆ ಹಲವಾರು ಬ್ಯಾಂಕ್‌ಗಳ ಮೇಲೆ ದಂಡವನ್ನು ವಿಧಿಸಿದೆ.
ಪ್ರಮುಖವಾಗಿ ವಂಚನೆ ಮತ್ತು ವರದಿಗೆ ಸಂಬಂಧಿಸಿದ ನಿಯಮಗಳನ್ನು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸರಿಯಾದ ರೀತಿಯಲ್ಲಿ ಪಾಲನೆ ಮಾಡಿಲ್ಲ ಎಂಬ ಕಾರಣದಿಂದಾಗಿ ಆರ್‌ಬಿಐ ದಂಡವನ್ನು ವಿಧಿಸಿದೆ. ಮಾರ್ಚ್ 31, 2021ರವರೆಗೆ ಬ್ಯಾಂಕ್‌ನ ಆರ್ಥಿಕ ಸ್ಥಿತಿಯ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಗತ್ಯ ಪರಿಶೀಲನೆ, ತಪಾಸಣೆಯನ್ನು ನಡೆಸಿದೆ. ಬಳಿಕ ಬ್ಯಾಂಕ್ ಮೇಲೆ ದಂಡವನ್ನು ವಿಧಿಸಿದೆ.
ಆರ್‌ಬಿಐ ಕೆನರಾ ಬ್ಯಾಂಕ್ ಮೇಲೆ ಸುಮಾರು 2.92 ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ. ಪ್ರಮುಖವಾಗಿ ಬಾಹ್ಯ ಬೆಂಚ್‌ಮಾರ್ಕ್, ಉಳಿತಾಯ ಖಾತೆಗೆ ಸಂಬಂಧಿಸಿದ ನಿಯಮವನ್ನು ಉಲ್ಲಂಘಿಸಿದೆ ಎಂದು ಆರ್‌ಬಿಐ ತಿಳಿಸಿದೆ. ಎಚ್‌ಎಸ್‌ಬಿಸಿ ಬ್ಯಾಂಕ್ ಮೇಲೆ 1.73 ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ.


Click it and Unblock the Notifications