ಕಳೆದ ಎರಡು ತಿಂಗಳ ಅವಧಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹಲವಾರು ಬ್ಯಾಂಕ್‌ಗಳ ಮೇಲೆ ದಂಡವನ್ನು ವಿಧಿಸಿದೆ. ಪ್ರಮುಖವಾಗಿ ನಿಯಮವನ್ನು ಉಲ್ಲಂಘನೆ ಮಾಡಿದ ಆರೋಪದಲ್ಲಿ ಬ್ಯಾಂಕ್‌ಗಳ ಮೇಲೆ ದಂಡವನ್ನು ವಿಧಿಸಲಾಗಿದೆ. ಈಗ ಆರ್‌ಬಿಐ ಇಂಡಿನಿಯನ್ ಓವರ್‌ಸೀಸ್ ಬ್ಯಾಂಕ್ ಮೇಲೆ ದಂಡವ ವಿಧಿಸಿದೆ.
ಹೌದು ಶುಕ್ರವಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (ಐಒಬಿ) ಮೇಲೆ 2.20 ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ. ಆದಾಯ ಗುರುತಿಸುವಿಕೆಗೆ ಸಂಬಂಧಿತ ನಿಯಮ ಅನುಸರಣೆ ಮಾಡದ ಕಾರಣದಿಂದಾಗಿ ಐಒಬಿ ಮೇಲೆ ಕೋಟ್ಯಾಂತರ ರೂಪಾಯಿ ದಂಡವನ್ನು ವಿಧಿಸಿದೆ.

"ಆದಾಯ ಗುರುತಿಸುವಿಕೆ, ಆಸ್ತಿ ವರ್ಗೀಕರಣ ಮತ್ತು ಮುಂಗಡಗಳಿಗೆ ಸಂಬಂಧಿಸಿದ ನಿಯಮಗಳನ್ನು ಬ್ಯಾಂಕ್ ಸರಿಯಾಗಿ ಪಾಲನೆ ಮಾಡಿಲ್ಲ," ಎಂದು ಆರ್‌ಬಿಐ ಆರೋಪ ಮಾಡಿದೆ. ಬ್ಯಾಂಕ್ ನಿಯಮ ಉಲ್ಲಂಘನೆ ಮಾಡಿದರ ದಂಡವಾಗಿ ಈ ಹಣವನ್ನು ಪಡೆಯಲಾಗಿದೆ. ಬ್ಯಾಂಕ್ ತನ್ನ ಗ್ರಾಹಕರೊಂದಿಗೆ ಮಾಡಿಕೊಂಡಿರುವ ಯಾವುದೇ ವಹಿವಾಟು ಅಥವಾ ಒಪ್ಪಂದದ ಸಿಂಧುತ್ವದ ಬಗ್ಗೆ ಪ್ರಶ್ನಿತವಲ್ಲ ಎಂದು ಆರ್‌ಬಿಐ ಹೇಳಿದೆ.
ಇತರೆ ಬ್ಯಾಂಕ್‌ಗಳ ಮೇಲೆಯೂ ಆರ್‌ಬಿಐ ದಂಡ
ಈ ಹಿಂದೆ ಹಲವಾರು ಬ್ಯಾಂಕ್‌ಗಳ ಮೇಲೆ ಆರ್‌ಬಿಐ ದಂಡವನ್ನು ವಿಧಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಈ ಹಿಂದಿನ ಶುಕ್ರವಾರ ಮತ್ತೊಂದು ಬ್ಯಾಂಕ್ ಮೇಲೆ ದಂಡವನ್ನು ವಿಧಿಸಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಮೇಲೆ ಕೇಂದ್ರ ಬ್ಯಾಂಕ್ (ಆರ್‌ಬಿಐ) ಸುಮಾರು 84.50 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ.
ಪ್ರಮುಖವಾಗಿ ವಂಚನೆ ಮತ್ತು ವರದಿಗೆ ಸಂಬಂಧಿಸಿದ ನಿಯಮಗಳನ್ನು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸರಿಯಾದ ರೀತಿಯಲ್ಲಿ ಪಾಲನೆ ಮಾಡಿಲ್ಲ ಎಂಬ ಕಾರಣದಿಂದಾಗಿ ಆರ್‌ಬಿಐ ದಂಡವನ್ನು ವಿಧಿಸಿದೆ. ಮಾರ್ಚ್ 31, 2021ರವರೆಗೆ ಬ್ಯಾಂಕ್‌ನ ಆರ್ಥಿಕ ಸ್ಥಿತಿಯ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಗತ್ಯ ಪರಿಶೀಲನೆ, ತಪಾಸಣೆಯನ್ನು ನಡೆಸಿದೆ. ಬಳಿಕ ಬ್ಯಾಂಕ್ ಮೇಲೆ ದಂಡವನ್ನು ವಿಧಿಸಿದೆ.
ಕೆನರಾ ಬ್ಯಾಂಕ್ ಮೇಲೆಯೂ ಆರ್‌ಬಿಐ ದಂಡವನ್ನು ವಿಧಿಸಿದೆ. ಕೇಂದ್ರ ಬ್ಯಾಂಕ್‌ನ ಹಲವಾರು ನಿಯಮಗಳನ್ನು ಕೆನರಾ ಬ್ಯಾಂಕ್ ಉಲ್ಲಂಘನೆ ಮಾಡಿದೆ ಎಂದು ಆರ್‌ಬಿಐ ಹೇಳಿದೆ. ಪ್ರಮುಖವಾಗಿ ಬಾಹ್ಯ ಬೆಂಚ್‌ಮಾರ್ಕ್, ಉಳಿತಾಯ ಖಾತೆಗೆ ಸಂಬಂಧಿಸಿದ ನಿಯಮವನ್ನು ಉಲ್ಲಂಘಿಸಿದೆ ಎಂದು ಆರ್‌ಬಿಐ ತಿಳಿಸಿದೆ. ಕೆನರಾ ಬ್ಯಾಂಕ್ ಮೇಲೆ 2.92 ಕೋಟಿ ರೂ. ದಂಡವನ್ನು ಆರ್‌ಬಿಐ ವಿಧಿಸಿದೆ.
ಅದಕ್ಕೂ ಮುನ್ನ ಆರ್‌ಬಿಐನ ನಿಯಮವನ್ನು ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಚ್‌ಎಸ್‌ಬಿಸಿ ಬ್ಯಾಂಕ್ ಮೇಲೆ 1.73 ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ. ಅದಕ್ಕೂ ಮುನ್ನ ಆರ್‌ಬಿಐ ನಾಲ್ಕು ಬ್ಯಾಂಕ್‌ಗಳ ಮೇಲೆ ಒಟ್ಟಾಗಿ 44 ಲಕ್ಷ ರೂಪಾಯಿ ದಂಡವನ್ನುವಿಧಿಸಿದೆ.
ಚೆನ್ನೈ ಮೂಲದ ತಮಿಳುನಾಡು ಸ್ಟೇಟ್ ಅಪೆಕ್ಸ್ ಕೋ-ಆಪರೇಟಿವ್ ಬ್ಯಾಂಕ್‌ಗೆ 16 ಲಕ್ಷ ರೂಪಾಯಿ ದಂಡ, ಬಾಂಬೆ ಮರ್ಕೆಂಟೈಲ್ ಕೋ-ಆಪರೇಟಿವ್ ಬ್ಯಾಂಕ್‌ಗೆ 13 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ.
'ಠೇವಣಿಗಳ ಮೇಲಿನ ಬಡ್ಡಿ ದರ' ನಿರ್ದೇಶನಗಳನ್ನು ನಿಯಮದ ಪ್ರಕಾರವಾಗಿ ಪಾಲನೆ ಮಾಡದ ಕಾರಣ ಪುಣೆಯ ಜನತಾ ಸಹಕಾರಿ ಬ್ಯಾಂಕ್‌ಗೆ 13 ಲಕ್ಷ ರೂಪಾಯಿಯ ದಂಡವನ್ನು ವಿಧಿಸಲಾಗಿದೆ ಎಂದು ಕೇಂದ್ರ ಬ್ಯಾಂಕ್ ಪ್ರತ್ಯೇಕ ಪ್ರಕಟಣೆಯಲ್ಲಿ ತಿಳಿಸಿದೆ. ನಿರ್ದಿಷ್ಟ ಅವಧಿಯಲ್ಲಿ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ಅರ್ಹ ಮೊತ್ತವನ್ನು ವರ್ಗಾವಣೆ ಮಾಡದ ಕಾರಣ ತಮಿಳುನಾಡು ರಾಜ್ಯ ಅಪೆಕ್ಸ್ ಕೋ-ಆಪರೇಟಿವ್ ಬ್ಯಾಂಕ್‌ಗೆ ದಂಡವನ್ನು ವಿಧಿಸಲಾಗಿದೆ.
ನಿಗದಿತ ಸಮಯದೊಳಗೆ ವಂಚನೆಯ ಬಗ್ಗೆ ನಬಾರ್ಡ್‌ಗೆ ವರದಿ ಮಾಡಿಲ್ಲ ಮತ್ತು ವಿಳಂಬವಾಗಿ ವಂಚನೆಯ ಬಗ್ಗೆ ವರದಿ ಮಾಡಿದೆ. ಕೆಲವು ನಿಯಮಗಳ ಉಲ್ಲಂಘನೆಗಾಗಿ ರಾಜಸ್ಥಾನದ ಬರನ್ ನಗ್ರಿಕ್ ಸಹಕಾರಿ ಬ್ಯಾಂಕ್‌ಗೆ 2 ಲಕ್ಷ ರೂಪಾಯಿಗಳ ವಿತ್ತೀಯ ದಂಡವನ್ನು ವಿಧಿಸಲಾಗಿದೆ.


Click it and Unblock the Notifications