ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸಾಮಾನ್ಯವಾಗಿ ಯಾವುದೇ ಬ್ಯಾಂಕ್ ಆರ್‌ಬಿಐನ ನಿಯಮವನ್ನು ಉಲ್ಲಂಘನೆ ಮಾಡಿದರೆ ದಂಡವನ್ನು ವಿಧಿಸುತ್ತದೆ. ಅದರಂತೆಯೇ ಕರೂರ್ ವೈಶ್ಯ ಬ್ಯಾಂಕ್‌ಗೆ ಕೂಡಾ ಆರ್‌ಬಿಐ ದಂಡ ವಿಧಿಸಿದೆ. ಆರ್‌ಬಿಐ ನಿಯಮವನ್ನು ಉಲ್ಲಂಘನೆ ಮಾಡಿದ ಆರೋಪದ ಮೇಲೆ ಕರೂರ್ ವೈಶ್ಯ ಬ್ಯಾಂಕ್ ಮೇಲೆ ಮಾರ್ಚ್ 24ರಂದು ಆರ್‌ಬಿಐ ಸುಮಾರು 30 ಲಕ್ಷ ರೂಪಾಯಿ ದಂಡ ವಿಧಿಸಿದೆ. ಕೇಂದ್ರ ಬ್ಯಾಂಕ್ ಬ್ಯಾಂಕ್‌ನಲ್ಲಿ ಪರಿಶೀಲನೆ, ತನಿಖೆ ನಡೆಸಿದ ಬಳಿಕ ಈ ದಂಡವನ್ನು ವಿಧಿಸಿದೆ.
ಕರೂರ್ ವೈಶ್ಯ ಬ್ಯಾಂಕ್‌ನಲ್ಲಿ ಆರ್‌ಬಿಐ ತಪಾಸಣೆ ಅಥವಾ ತನಿಖೆಯನ್ನು ನಡೆಸಿದಾಗ ಕರೂರ್ ವೈಶ್ಯ ಬ್ಯಾಂಕ್ ನಕಲಿ ಖಾತೆಗಳ ಬಗ್ಗೆ ಆರ್‌ಬಿಐಗೆ ಯಾವುದೇ ಮಾಹಿತಿ ನೀಡಿಲ್ಲ ಎಂಬುವುದು ತಿಳಿದು ಬಂದಿದೆ. ನಮ್ಮ ದೇಶದ ಕೇಂದ್ರ ಬ್ಯಾಂಕ್‌ನ 2016ರ ಸೂಚನೆಯ ಪ್ರಕಾರ ಎಲ್ಲ ಬ್ಯಾಂಕುಗಳು ತಮ್ಮ ಬ್ಯಾಂಕ್‌ನಲ್ಲಿ ನಕಲಿ ಖಾತೆಗಳ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ. ಆದರೆ ಈ ಮಾಹಿತಿಯನ್ನು ಕರೂರ್ ವೈಶ್ಯ ಬ್ಯಾಂಕ್ ಆರ್‌ಬಿಐ ನೀಡದಿರುವುದು ಪರಿಶೀಲನೆಯ ವೇಳೆ ತಿಳಿದು ಬಂದಿದೆ.

ಫೆಬ್ರವರಿ 21, 2022ರಿಂದ ಮಾರ್ಚ್ 4, 2023ರವರೆಗೆ ದೀರ್ಘಕಾಲದ ತನಿಖೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಡೆಸಿದೆ. ಹಾಗೆಯೇ ಬ್ಯಾಂಕ್‌ನಲ್ಲಿರುವ ನಕಲಿ ಖಾತೆಗಳ ಬಗ್ಗೆ ಕೇಂದ್ರ ಬ್ಯಾಂಕ್‌ಗೆ ಯಾವುದೇ ಮಾಹಿತಿಯನ್ನು ಯಾಕೆ ನೀಡಿಲ್ಲ ಎಂಬ ಸ್ಪಷ್ಟಣೆಯನ್ನು ನೀಡಲು ಕರೂರ್ ವೈಶ್ಯ ಬ್ಯಾಂಕ್‌ಗೆ ಆರ್‌ಬಿಐ ನೋಟಿಸ್ ಜಾರಿ ಮಾಡಿದೆ. ಹಾಗೆಯೇ ಈ ನೋಟಿಸ್‌ನಲ್ಲಿ ನಕಲಿ ಖಾತೆಗಳ ವಿರುದ್ಧ ಕ್ರಮವನ್ನು ಯಾಕೆ ಕೈಗೊಂಡಿಲ್ಲ ಎಂದು ಪ್ರಶ್ನಿಸಲಾಗಿದೆ. ಈ ಬಗ್ಗೆ ಬ್ಯಾಂಕ್ ಪ್ರತಿಕ್ರಿಯೆಯನ್ನು ನೀಡಿದ ಬಳಿಕ ಬ್ಯಾಂಕ್‌ಗೆ ಆರ್‌ಬಿಐ ದಂಡವನ್ನು ವಿಧಿಸಿದೆ.
ಈ ಬಗ್ಗೆ ಆರ್‌ಬಿಐ ಹೇಳಿಕೆಯನ್ನು ನೀಡಿದೆ. ಬ್ಯಾಂಕ್ ನಿಯಮವನ್ನು ಉಲ್ಲಂಘನೆ ಮಾಡಿದೆ ಎಂಬುವುದು ಖಚಿತವಾಗಿದೆ. ಆದ್ದರಿಂದಾಗಿ ಬ್ಯಾಂಕ್ ಮೇಲೆ ದಂಡವನ್ನು ಹೇರಲಾಗಿದೆ ಎಂದು ತಿಳಿಸಿದೆ. ಇನ್ನು ಈ ಸಂದರ್ಭದಲ್ಲೇ ಕರೂರ್ ವೈಶ್ಯ ಬ್ಯಾಂಕ್ ಡಿಸೆಂಬರ್‌ನಲ್ಲಿ ಅಂತ್ಯವಾದ ತ್ರೈಮಾಸಿಕದಲ್ಲಿ ಸುಮಾರು 289 ಕೋಟಿ ರೂಪಾಯಿ ಲಾಭವನ್ನು ಗಳಿಸಿದೆ ಎಂಬುವುದು ಗಮನಾರ್ಹ. ಅದಕ್ಕೂ ಹಿಂದಿನ ಡಿಸೆಂಬರ್ ತ್ರೈಮಾಸಿಕದಲ್ಲಿ ಪಡೆದ ಲಾಭಕ್ಕಿಂತ ಇತ್ತೀಚಿನ ಡಿಸೆಂಬರ್ ತ್ರೈಮಾಸಿಕದಲ್ಲಿ ಪಡೆದ ಲಾಭವು ಶೇಕಡ 30ರಷ್ಟು ಏರಿಕೆಯಾಗಿದೆ. ಅಂದರೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗಿದೆ.
ಈ ಹಿಂದೆ ಹಲವಾರು ಬ್ಯಾಂಕ್‌ಗಳ ಮೇಲೆ ದಂಡ ವಿಧಿಸಿದ ಆರ್‌ಬಿಐ
ಈ ಹಿಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಆರ್‌ಬಿಎಲ್ ಬ್ಯಾಂಕ್ ಮೇಲೆ ಸುಮಾರು 2.27 ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ. ಆರ್‌ಬಿಎಲ್ ಬ್ಯಾಂಕ್ ಕೂಡಾ ನಿಯಮವನ್ನು ಪಾಲಿಸದ ಕಾರಣ ದಂಡವನ್ನು ವಿಧಿಸಿದೆ. ಸಾಲ ಮರುಪಡೆಯುವ ಏಜೆಂಟ್‌ಗಳಿಗೆ ಸಂಬಂಧಿಸಿದ ನಿಯಮವನ್ನು ಪಾಲಿಸಿಲ್ಲ ಎಂಬ ಆರೋಪ ಸಾಬೀತಾದ ಬಳಿಕ ದಂಡ ಹೇರಲಾಗಿದೆ. ಕೇಂದ್ರ ಬ್ಯಾಂಕ್ ಆರ್‌ಬಿಎಲ್ ವಿರುದ್ಧ ಹಲವಾರು ದೂರುಗಳನ್ನು ಪಡೆದ ಹಿನ್ನೆಲೆ ತನಿಖೆ ನಡೆಸಿ ದಂಡ ವಿಧಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಮೇಲೆ ದಂಡವನ್ನು ವಿಧಿಸಿದೆ. ಕೇಂದ್ರ ಬ್ಯಾಂಕ್‌ನ ಕೆಲವು ನಿರ್ದೇಶನಗಳನ್ನು ಅನುಸರಿಸದ ಕಾರಣಕ್ಕಾಗಿ ಸುಮಾರು 57.50 ಲಕ್ಷ ವಿತ್ತೀಯ ದಂಡವನ್ನು ವಿಧಿಸಿದೆ ಎಂದು ತಿಳಿಸಿದೆ. ಎಟಿಎಂ ಕಾರ್ಡ್ ಕ್ಲೋನಿಂಗ್ ಮತ್ತು ಸ್ಕಿಮ್ಮಿಂಗ್ ಒಳಗೊಂಡ ವಂಚನೆಗಳ ಕೆಲವು ಘಟನೆಗಳು ಪತ್ತೆಯಾದ ಮೂರು ವಾರದ ಒಳಗಾಗಿ ಆರ್‌ಬಿಐಗೆ ಈ ಬಗ್ಗೆ ವರದಿ ಸಲ್ಲಿಸಲು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ವಿಫಲವಾಗಿದೆ ಎಂದು ಕೇಂದ್ರ ಬ್ಯಾಂಕ್ ಅಧಿಸೂಚನೆಯಲ್ಲಿ ತಿಳಿಸಿದೆ.


Click it and Unblock the Notifications