ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಾಲ್ಕು ಕೋ ಆಪರೇಟಿವ್ ಬ್ಯಾಂಕ್‌ಗಳ ಮೇಲೆ ದಂಡವನ್ನು ವಿಧಿಸಿದೆ. ಆರ್‌ಬಿಐ ನಾಲ್ಕು ಬ್ಯಾಂಕ್‌ಗಳ ಮೇಲೆ ಒಟ್ಟಾಗಿ 44 ಲಕ್ಷ ರೂಪಾಯಿ ದಂಡವನ್ನುವಿಧಿಸಿದೆ. ಚೆನ್ನೈ ಮೂಲದ ತಮಿಳುನಾಡು ಸ್ಟೇಟ್ ಅಪೆಕ್ಸ್ ಕೋ-ಆಪರೇಟಿವ್ ಬ್ಯಾಂಕ್‌ಗೆ 16 ಲಕ್ಷ ರೂಪಾಯಿ ದಂಡ ಸೇರಿದಂತೆ ಒಟ್ಟಾಗಿ 44 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ.
ನಿಗದಿತ ಅವಧಿಯಲ್ಲಿ ಅರ್ಹ ಮೊತ್ತವನ್ನು ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ (DEAF) ವರ್ಗಾಯಿದ ಕಾರಣಕ್ಕೆ ಬಾಂಬೆ ಮರ್ಕೆಂಟೈಲ್ ಕೋ-ಆಪರೇಟಿವ್ ಬ್ಯಾಂಕ್‌ಗೆ 13 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ. ಮೊತ್ತವನ್ನು ವಿಳಂಬವಾಗಿ ವರ್ಗಾಯಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪ್ರಕಟಣೆಯಲ್ಲಿ ತಿಳಿಸಿದೆ.

'ಠೇವಣಿಗಳ ಮೇಲಿನ ಬಡ್ಡಿ ದರ' ನಿರ್ದೇಶನಗಳನ್ನು ನಿಯಮದ ಪ್ರಕಾರವಾಗಿ ಪಾಲನೆ ಮಾಡದ ಕಾರಣ ಪುಣೆಯ ಜನತಾ ಸಹಕಾರಿ ಬ್ಯಾಂಕ್‌ಗೆ 13 ಲಕ್ಷ ರೂಪಾಯಿಯ ದಂಡವನ್ನು ವಿಧಿಸಲಾಗಿದೆ ಎಂದು ಕೇಂದ್ರ ಬ್ಯಾಂಕ್ ಪ್ರತ್ಯೇಕ ಪ್ರಕಟಣೆಯಲ್ಲಿ ತಿಳಿಸಿದೆ. ನಿರ್ದಿಷ್ಟ ಅವಧಿಯಲ್ಲಿ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ಅರ್ಹ ಮೊತ್ತವನ್ನು ವರ್ಗಾವಣೆ ಮಾಡದ ಕಾರಣ ತಮಿಳುನಾಡು ರಾಜ್ಯ ಅಪೆಕ್ಸ್ ಕೋ-ಆಪರೇಟಿವ್ ಬ್ಯಾಂಕ್‌ಗೆ ದಂಡವನ್ನು ವಿಧಿಸಲಾಗಿದೆ.
ನಿಗದಿತ ಸಮಯದೊಳಗೆ ವಂಚನೆಯ ಬಗ್ಗೆ ನಬಾರ್ಡ್‌ಗೆ ವರದಿ ಮಾಡಿಲ್ಲ ಮತ್ತು ವಿಳಂಬವಾಗಿ ವಂಚನೆಯ ಬಗ್ಗೆ ವರದಿ ಮಾಡಿದೆ. ಕೆಲವು ನಿಯಮಗಳ ಉಲ್ಲಂಘನೆಗಾಗಿ ರಾಜಸ್ಥಾನದ ಬರನ್ ನಗ್ರಿಕ್ ಸಹಕಾರಿ ಬ್ಯಾಂಕ್‌ಗೆ 2 ಲಕ್ಷ ರೂಪಾಯಿಗಳ ವಿತ್ತೀಯ ದಂಡವನ್ನು ವಿಧಿಸಲಾಗಿದೆ.
ಈ ಹಿಂದೆಯೂ ಹಲವು ಬ್ಯಾಂಕ್‌ಗಳ ಮೇಲೆ ದಂಡ
ಮಾರ್ಚ್ 27ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಆರು ಬ್ಯಾಂಕ್‌ಗಳ ಮೇಲೆ ದಂಡವನ್ನು ವಿಧಿಸಿದೆ. ಈ ಬ್ಯಾಂಕುಗಳು ನಿಯಮವನ್ನು ಸರಿಯಾಗಿ ಪಾಲನೆ ಮಾಡಿಲ್ಲ ಎಂಬ ಆರೋಪದಲ್ಲಿ ಆರ್‌ಬಿಐ ಬ್ಯಾಂಕ್‌ಗಳ ಮೇಲೆ ದಂಡವನ್ನು ವಿಧಿಸಲಾಗಿದೆ. ಈ ಬ್ಯಾಂಕ್‌ಗಳ ಮೇಲಿನ ವಿತ್ತೀಯ ದಂಡ ಅಥವಾ ದಂಡವು 1.10 ಲಕ್ಷ ರೂಪಾಯಿಯಿಂದ 3 ಲಕ್ಷ ರೂಪಾಯಿ ಆಗಿದೆ.
ಆಲಿಗಢ ಜಿಲ್ಲಾ ಸಹಕಾರಿ ಬ್ಯಾಂಕ್ ಮೇಲೆ ಆರ್‌ಬಿಐ 2 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ. ದೆಲ್ಲಿ ನಾಗರಿಕ ಸಹಕಾರಿ ಬ್ಯಾಂಕ್ ( Delhi Nagrik Sehkari Bank) ಮೇಲೆ ಆರ್‌ಬಿಐ 3 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ. ಕೋಲ್ಕತ್ತಾ ಪೊಲೀಸ್ ಕೋ-ಆಪರೇಟಿವ್ ಬ್ಯಾಂಕ್ ಮೇಲೆ ಕೇಂದ್ರ ಬ್ಯಾಂಕ್ 1.10 ಲಕ್ಷ ರೂಪಾಯಿ ದಂಡವನ್ನು ಹೇರಿದೆ. ಮೆಹ್‌ನಸ ಜಿಲ್ಲಾ ಕೇಂದ್ರ ಕೋ ಆಪರೇಟಿವ್ ಬ್ಯಾಂಕ್ ಮೇಲೆಯೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಂಡವನ್ನು ವಿಧಿಸಿದೆ. ಸುಮಾರು 2.10 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ.
ವ್ಯಾಪಾರಿ ಸಹಕಾರಿ ಬ್ಯಾಂಕ್ ಮರ್ಯಾದಿತ ಮತ್ತು ಶ್ರೀ ಗಣೇಶ ಸಹಕಾರಿ ಬ್ಯಾಂಕ್ ಲಿಮಿಟೆಡ್ ಮೇಲೆ ಆರ್‌ಬಿಐ 2 ಲಕ್ಷ ರೂಪಾಯಿ ದಂಡವನ್ನು ಹೇರಿದೆ. ಈ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದೆ. ಬ್ಯಾಂಕಿಂಗ್ ರೆಗ್ಯೂಲೇಷನ್ ಕಾಯ್ದೆ 1950 ಮತ್ತು ಠೇವಣಿಗಳ ಮೇಲಿನ ಬಡ್ಡಿದರಗಳಿಗೆ ಸಂಬಂಧಿಸಿದ ಆದೇಶದ ಅಡಿಯಲ್ಲಿ ಬ್ಯಾಂಕ್ ಮೇಲೆ ದಂಡವನ್ನು ವಿಧಿಸಲಾಗಿದೆ. ಈ ಬ್ಯಾಂಕ್‌ಗಳ ವಿರುದ್ಧ ತನಿಖೆಯನ್ನು ನಡೆಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಂಡ ವಿಧಿಸುವ ನಿರ್ಧಾರವನ್ನು ಮಾಡಿದೆ.


Click it and Unblock the Notifications