ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಶುಕ್ರವಾರ ಮತ್ತೊಂದು ಬ್ಯಾಂಕ್ ಮೇಲೆ ದಂಡವನ್ನು ವಿಧಿಸಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಮೇಲೆ ಕೇಂದ್ರ ಬ್ಯಾಂಕ್ (ಆರ್‌ಬಿಐ) ಸುಮಾರು 84.50 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ. ಈ ಹಿಂದೆಯೂ ಆರ್‌ಬಿಐ ಕೆನರಾ ಬ್ಯಾಂಕ್ ಸೇರಿದಂತೆ ಹಲವಾರು ಬ್ಯಾಂಕ್‌ಗಳ ಮೇಲೆ ದಂಡವನ್ನು ವಿಧಿಸಿದೆ.
ಪ್ರಮುಖವಾಗಿ ವಂಚನೆ ಮತ್ತು ವರದಿಗೆ ಸಂಬಂಧಿಸಿದ ನಿಯಮಗಳನ್ನು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸರಿಯಾದ ರೀತಿಯಲ್ಲಿ ಪಾಲನೆ ಮಾಡಿಲ್ಲ ಎಂಬ ಕಾರಣದಿಂದಾಗಿ ಆರ್‌ಬಿಐ ದಂಡವನ್ನು ವಿಧಿಸಿದೆ. ಮಾರ್ಚ್ 31, 2021ರವರೆಗೆ ಬ್ಯಾಂಕ್‌ನ ಆರ್ಥಿಕ ಸ್ಥಿತಿಯ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಗತ್ಯ ಪರಿಶೀಲನೆ, ತಪಾಸಣೆಯನ್ನು ನಡೆಸಿದೆ. ಬಳಿಕ ಬ್ಯಾಂಕ್ ಮೇಲೆ ದಂಡವನ್ನು ವಿಧಿಸಿದೆ.

ಆರ್‌ಬಿಐ ದಂಡ ವಿಧಿಸಿರುವುದು ಏಕೆ?
ಸಾರ್ವಜನಿಕ ವಲಯದ ಬ್ಯಾಂಕ್ ಆದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ವಂಚನೆಯೊಂದರ ಬಗ್ಗೆ ಏಳು ದಿನಗಳ ಒಳಗಾಗಿ ಆರ್‌ಬಿಐಗೆ ಮಾಹಿತಿ ನೀಡುವುದರಲ್ಲಿ ವಿಫಲವಾಗಿದೆ ಎಂದು ಆರೋಪ ಮಾಡಲಾಗಿದೆ. ಸಾಮಾನ್ಯವಾಗಿ ಎಲ್ಲ ಬ್ಯಾಂಕುಗಳು ಎಸ್‌ಎಂಎಸ್ ಅಲರ್ಟ್ ಶುಲ್ಕವನ್ನು ಬ್ಯಾಂಕ್‌ಗಳಿಂದ ಪಡೆದುಕೊಳ್ಳುತ್ತದೆ.
ಈ ಎಸ್‌ಎಂಎಸ್ ಅಲರ್ಟ್ ಶುಲ್ಕವು ಮೊದಲೇ ನಿಗದಿ ಮಾಡಲಾಗಿರುವ ಶುಲ್ಕವಾಗಿರುತ್ತದೆ. ಆದರೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಈ ನಿಗದಿತ ದರಕ್ಕಿಂತ ಅಧಿಕ ಶುಲ್ಕವನ್ನು ಗ್ರಾಹಕರಿಂದ ಸಂಗ್ರಹ ಮಾಡಿದೆ. ಈ ವಿಚಾರವಾಗಿ ಆರ್‌ಬಿಐ ಬ್ಯಾಂಕ್‌ಗೆ ನೋಟಿಸ್ ನೀಡಿದೆ. ಹಾಗೆಯೇ ದಂಡವನ್ನು ಯಾಕೆ ವಿಧಿಸಬಾರದು ಎಂದು ಕಾರಣ ನೀಡಲು ತಿಳಿಸಿದೆ. ಆದರೆ ಬ್ಯಾಂಕ್ ಸರಿಯಾದ ಕಾರಣ ನೀಡಲು ವಿಫಲವಾಗಿದ್ದು, ಆರ್‌ಬಿಐ ದಂಡ ವಿಧಿಸಿದೆ.
"ನೋಟಿಸ್‌ಗೆ ಬ್ಯಾಂಕ್ ನೀಡಿದ ಉತ್ತರವನ್ನು ಪರಿಶೀಲನೆ ಮಾಡಲಾಗಿದೆ. ಅದಾದ ಬಳಿಕ ವೈಯಕ್ತಿಕ ವಿಚಾರಣೆಯನ್ನು ಕೂಡಾ ನಡೆಸಲಾಗಿದೆ. ಈ ಎಲ್ಲ ವಿಚಾರಣೆಗೆಳ ಬಳಿಕ ಆರ್‌ಬಿಐ ನಿರ್ದೇಶನವನ್ನು ಅನುಸರಿಸದ ಆರೋಪವು ದೃಢಪಟ್ಟಿದೆ. ಆದ್ದರಿಂದಾಗಿ ಬ್ಯಾಂಕ್ ಮೇಲೆ ದಂಡವನ್ನು ವಿಧಿಸಲಾಗಿದೆ," ಎಂದು ಆರ್‌ಬಿಐ ತಿಳಿಸಿದೆ.
ದಂಡವು ನಿಯಂತ್ರಕರ ಅನುಸರಣೆಯನ್ನು ಮಾಡದ ಆಧಾರದಲ್ಲಿ ವಿಧಿಸಲಾಗಿದೆ. ಈ ದಂಡವನ್ನು ಬ್ಯಾಂಕ್ ತನ್ನ ಗ್ರಾಹಕರೊಂದಿಗೆ ನಡೆಸಿದ ನ್ಯಾಯಸಮ್ಮತವಲ್ಲದ ಯಾವುದೇ ವಹಿವಾಟು ಅಥವಾ ವ್ಯವಸ್ಥೆಯನ್ನು ನಿರ್ಣಯ ಮಾಡುವ ಉದ್ದೇಶದಿಂದ ವಿಧಿಸಲಾಗಿಲ್ಲ ಎಂದು ಕೂಡಾ ಈ ಸಂದರ್ಭದಲ್ಲೇ ಆರ್‌ಬಿಐ ಸ್ಪಷ್ಟಪಡಿಸಿದೆ.
ಕೆನರಾ ಬ್ಯಾಂಕ್ ಸೇರಿ ಹಲವಾರು ಬ್ಯಾಂಕ್‌ಗಳ ಮೇಲೆ ದಂಡ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹಲವಾರು ಬ್ಯಾಂಕ್‌ಗಳ ಮೇಲೆ ದಂಡವನ್ನು ವಿಧಿಸಿದೆ. ಅದರಲ್ಲೂ ಮುಖ್ಯವಾಗಿ ಈ ವರ್ಷದ ಐದು ತಿಂಗಳಿನಲ್ಲೇ ಹಲವಾರು ಬ್ಯಾಂಕ್‌ಗಳ ಮೇಲೆ ಆರ್‌ಬಿಐ ದಂಡ ವಿಧಿಸಿದೆ. ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಕೆನರಾ ಬ್ಯಾಂಕ್ ಮೇಲೆಯೂ ದಂಡವನ್ನು ವಿಧಿಸಲಾಗಿದೆ.
ಮಾರ್ಚ್ ತಿಂಗಳಿನಲ್ಲಿ ಕರೂರ್ ವೈಶ್ಯ ಬ್ಯಾಂಕ್ ಮೇಲೆ 30 ಲಕ್ಷ ರೂಪಾಯಿ ದಂಡವನ್ನು ಆರ್‌ಬಿಐ ವಿಧಿಸಿದೆ. ಇನ್ನು ನಿಯಮ ಉಲ್ಲಂಘನೆ ಮಾಡಿದ ಕಾರಣದಿಂದಾಗಿ ನಾಲ್ಕು ಕೋ ಆಪರೇಟಿವ್ ಬ್ಯಾಂಕ್‌ಗಳ ಮೇಲೆ 44 ಲಕ್ಷ ರೂಪಾಯಿ ದಂಡವನ್ನು ಆರ್‌ಬಿಐ ಏಪ್ರಿಲ್‌ನಲ್ಲಿ ವಿಧಿಸಿದೆ. ಅದಾದ ಬಳಿಕ ಮೇ ತಿಂಗಳಿನಲ್ಲೇ ಒಟ್ಟಾಗಿ ಮೂರು ಬ್ಯಾಂಕ್‌ಗಳ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಂಡವನ್ನು ವಿಧಿಸಿದೆ.
ಎಚ್‌ಎಸ್‌ಬಿಸಿ ಬ್ಯಾಂಕ್ ಮೇಲೆ ಮೇ ಆರಂಭದಲ್ಲಿ 1.73 ಕೋಟಿ ರೂಪಾಯಿ ದಂಡವನ್ನು ಆರ್‌ಬಿಐ ವಿಧಿಸಿದೆ. ಅದಾ ಬಳಿಕ ದೇಶದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಕೆನರಾ ಬ್ಯಾಂಕ್ ಮೇಲೆ 2.92 ಕೋಟಿ ರೂಪಾಯಿ ದಂಡವನ್ನು ವಿಧಿಸಲಾಗಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 84.50 ಲಕ್ಸಷ ರೂಪಾಯಿ ದಂಡವನ್ನು ಈಗ ವಿಧಿಸಲಾಗಿದೆ.


Click it and Unblock the Notifications