ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಯುಪಿಐ ಬಳಕೆದಾರರಿಗೆ ಸಿಹಿಸುದ್ದಿ ನೀಡಿದೆ. ವಿತ್ತೀಯ ನೀತಿ ಸಮಿತಿಯ ನಿರ್ಧಾರಗಳ ಕುರಿತು ಗವರ್ನರ್ ಶಕ್ತಿಕಾಂತ ದಾಸ್ ಇಂದು ಪತ್ರಿಕಾಗೋಷ್ಠಿಯಲ್ಲಿ ಯುಪಿಐ ಪೇ 123 ಮತ್ತು UPI ಲೈಟ್‌ನ ವಹಿವಾಟು ಮಿತಿಗಳನ್ನು ಹೆಚ್ಚಿಸಲಾಗಿದೆ ಎಂದು ತಿಳಿದ್ದಾರೆ
ಯುಪಿಐ123 ಪಾವತಿಯ ಪ್ರತಿ ವಹಿವಾಟಿನ ಮಿತಿಯನ್ನು ₹ 5,000 ರಿಂದ ₹ 10,000 ಕ್ಕೆ ಹೆಚ್ಚಿಸಲಾಗಿದೆ. ಇದಲ್ಲದೆ, UPI ಲೈಟ್ ವ್ಯಾಲೆಟ್ ಮಿತಿಯನ್ನು ₹ 2,000 ರಿಂದ ₹ 5,000 ಕ್ಕೆ ವಿಸ್ತರಿಸಲಾಗಿದೆ. UPI ಲೈಟ್‌ನ ಪ್ರತಿ ವಹಿವಾಟಿನ ಮಿತಿಯು ₹ 100 ರಿಂದ ₹ 500 ಕ್ಕೆ ಹೆಚ್ಚಾಗಿದೆ.

UPI ಲೈಟ್ ವ್ಯಾಲೆಟ್:
UPI ಲೈಟ್ ವ್ಯಾಲೆಟ್ ಒಂದು ಸರಳ ಮತ್ತು ಸುರಕ್ಷಿತ ಯುಪಿಐ ಪಾವತಿ ವಿಧಾನವಾಗಿದೆ. ಇದು ತ್ವರಿತ ಮತ್ತು ಅನುಕೂಲಕರ ಪಾವತಿಗಳನ್ನು ಸುಲಭ ಸಾಧ್ಯವಾಗಿಸುತ್ತದೆ. ಈ ವ್ಯಾಲೆಟ್ ಅನ್ನು ಬಳಸಲು, ಯುಪಿಐ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು, ನಿಮ್ಮ ಬ್ಯಾಂಕ್ ಖಾತೆಗೆ ಸಂಪರ್ಕ ಕಲ್ಪಿಸಬೇಕು. UPI ಲೈಟ್ ನಲಲ್ಲಿ ಯಾವುದೇ ಪಿನ್ ಅನ್ನು ನಮೂದಿಸದೆಯೇ ಸುಲಭವಾಗಿ ಪಾವತಿಗಳನ್ನು ಮಾಡಬಹುದು. ಇದು ಒಂದು ರೀತಿಯ ಆನ್‌ಲೈನ್ ವ್ಯಾಲೆಟ್‌ನಂತೆ ಕಾರ್ಯನಿರ್ವಹಿಸುತ್ತದೆ, ಅಲ್ಲಿ ನೀವು ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಟಾಪ್ ಅಪ್ ಮಾಡಬಹುದು ಮತ್ತು ನಂತರ ಅದನ್ನು ಪಾವತಿಗಳಿಗೆ ಬಳಸಬಹುದು. ಇದರಲ್ಲಿ ಪ್ರತಿ ವಹಿವಾಟಿನ ಮಿತಿ ಮತ್ತು ದೈನಂದಿನ ವಹಿವಾಟಿನ ಮಿತಿ ಇರುತ್ತದೆ.
ಈ ಕಾರಣದಿಂದ ಆರ್ ಬಿ ಐ ಯುಪಿಐ ಲೈಟ್ ವ್ಯಾಲೆಟ್ ಮಿತಿಯನ್ನುಮತ್ತು ವಹಿವಾಟು ಮಿತಿಯನ್ನು ದ್ವಿಗುಣಿಗೊಳಿಸಿದೆ. ಈ ಹಿಂದೆ ಗರಿಷ್ಠ 2,000 ರೂ. ತನಕ ಹಣವನ್ನು ಯುಪಿಐ ಲೈಟ್ ವ್ಯಾಲಟ್‌ನಲ್ಲಿ ತುಂಬಿಸಬಹುದಾಗಿತ್ತು, ಆದರೆ ಇದನ್ನು ₹ 5,000 ವರೆಗೆ ಹೆಚ್ಚಿಸಲಾಗಿದೆ. ಅಂದರೆ, ಈಗ ನಿಮ್ಮ ಯುಪಿಐ ಲೈಟ್ ವ್ಯಾಲಟ್‌ನಲ್ಲಿ 5,000 ರೂ. ಹಣವನ್ನು ತುಂಬಿಸಬಹುದಾಗಿದೆ. ಜೊತೆಗೆ,₹ 100 ಯಿಂದ ಪ್ರತಿ ವಹಿವಾಟಿನ ಮಿತಿಯನ್ನು ಈಗ ಇದು ₹ 500 ವರೆಗೆ ಹೆಚ್ಚಿಸಲಾಗಿದೆ. ಇದು ಹೆಚ್ಚಿನ ಯುಪಿಐ ಬಳಕೆದಾರರಿಗೆ ಅನುಕೂಲವಾಗುತ್ತದೆ.
ಯುಪಿಐ123 ಪೇ ಬಳಕೆ ಹೇಗೆ?
UPI123 Pay ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಪಾವತಿ ಸೇವೆಯನ್ನು ವೇಗವಾಗಿ ಮತ್ತು ಸುಲಭ ರೀತಿಯಲ್ಲಿ ಬಳಸಬಹುದಾದ ಫೀಚರ್ ಫೋನ್ (ಸ್ಮಾರ್ಟ್‌ಫೋನ್ ಅಲ್ಲದ) ಬಳಕೆದಾರರಿಗೆ ತ್ವರಿತ ಪಾವತಿ ಪರಿಹಾರವಾಗಿದೆ. ಇದು ಬಳಕೆದಾರರಿಗೆ ಇಂಟರ್ನೆಟ್ ಬಳಸದೆ ಪಾವತಿಗಳನ್ನು ಮಾಡಲು ಅನುಮತಿಸುತ್ತದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಸಹಯೋಗದೊಂದಿಗೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಯುಪಿಐ123Pay ಎಂದು ಕರೆಯಲ್ಪಡುವ ಫೀಚರ್ ಫೋನ್‌ಗಳಿಗಾಗಿ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ಅನ್ನು ಮಾರ್ಚ್ 08, 2022 ರಂದು ಪ್ರಾರಂಭಿಸಿತ್ತು. ಭಾರತದಲ್ಲಿ ಈಗಲೂ ಬಹಳಷ್ಟು ಸಂಖ್ಯೆಯಲ್ಲಿ ಫೀಚರ್ ಪೋನ್ ಬಳಕೆದಾರರಿದ್ದಾರೆ. ಇವರನ್ನು ಗಮನದಲ್ಲಿರಿಸಿಕೊಂಡು ಯುಪಿಐ123 ಪಾವತಿಯ ಪ್ರತಿ ವಹಿವಾಟಿನ ಮಿತಿಯನ್ನು ₹ 5,000 ರಿಂದ ₹ 10,000 ಕ್ಕೆ ಆರ್ ಬಿ್ಐ ಹೆಚ್ಚಿಸಿದೆ. UPI123 Pay ಸೌಲಭ್ಯವು ಈಗ 12 ಭಾಷೆಗಳಲ್ಲಿ ಲಭ್ಯವಿದೆ. ಈ ಹಿಂದೆ UPI 123 ಪಾವತಿಯಲ್ಲಿ ಪ್ರತಿ ವಹಿವಾಟಿನ ಮಿತಿಯನ್ನು 5000 ರೂ. ನಿಗದಿಗೊಳಿಸಲಾಗಿತ್ತು.
ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಯುಪಿಐ ನೆಟ್‌ವರ್ಕ್ ಸೆಪ್ಟೆಂಬರ್‌ನಲ್ಲಿ 500 ಮಿಲಿಯನ್‌ಕ್ಕಿಂತ ಹೆಚ್ಚು ದೈನಂದಿನ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಿದೆ. ವಹಿವಾಟಿನ ಮೌಲ್ಯವು ನಿರಂತರ ಐದನೇ ತಿಂಗಳಿಗೂ ₹20 ಲಕ್ಷ ಕೋಟಿಯ ಗಡಿಯನ್ನು ದಾಟಿದೆ. ಆಗಸ್ಟ್‌ನಲ್ಲಿ ₹66,475 ಕೋಟಿಯ ವೆಚ್ಚದಿಂದ ಸೆಪ್ಟೆಂಬರ್‌ನಲ್ಲಿ ದೈನಂದಿನ ವಹಿವಾಟಿನ ಸರಾಸರಿ ಮೌಲ್ಯ ₹68,800 ಕೋಟಿಗೆ ಏರಿಕೆಯಾಗಿದೆ.
ಯುಪಿಐ ಮೂಲಕ ತೆರಿಗೆ ಪಾವತಿ ಮಿತಿ ಹೆಚ್ಚಳ:
ಯುಪಿಐ ಮೂಲಕ ತೆರಿಗೆ ಪಾವತಿ ಮಿತಿಯನ್ನು ಹೆಚ್ಚಿಸಲಾಗಿದೆ. ಆಗಸ್ಟ್‌ಗಾಗಿ ಮೊದಲು, ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಕೆಲವೊಂದು ವರ್ಗಗಳ ವಹಿವಾಟುಗಳನ್ನು ಹೊರತುಪಡಿಸಿ, ಯುಪಿಐಗೆ 1 ಲಕ್ಷ ರೂ. ಪಾವತಿ ಮಿತಿ ಇದ್ದಿತ್ತು. ಆದರೆ, ಆಗಸ್ಟ್‌ನಲ್ಲಿ ಯುಪಿಐ ಮೂಲಕ ತೆರಿಗೆ ಪಾವತಿಯ ಮಿತಿಯನ್ನು ಪ್ರತಿ ವಹಿವಾಟಿಗೆ 1 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದು ಗ್ರಾಹಕರಿಗೆ ಯುಪಿಐ ಬಳಸಿ ತೆರಿಗೆ ಪಾವತಿಸಲು ಹೆಚ್ಚು ಸುಲಭವಾಗಲಿದೆ.


Click it and Unblock the Notifications