ಹಣಕಾಸು ಮಾಹಿತಿಗಳನ್ನು ಸುಲಭವಾಗಿ ಜನರಿಗೆ ತಲುಪಿಸಲು ಹಾಗೂ ಸುರಕ್ಷತೆ, ಜಾಗೃತಿ ಹೆಚ್ಚಿಸಲು RBI ಒಂದು ಹೆಜ್ಜೆ ಮುಂದೆ ಹೋಗಿದೆ. ಅಂದರೆ ಭಾರತೀಯ ರಿಸರ್ವ್ ಬ್ಯಾಂಕ್ ಈಗ ತನ್ನ ಅಧಿಕೃತ ವಾಟ್ಸಾಪ್ ಚಾನಲ್‌ನ ಆರಂಭಿಸಿದೆ. ಇದು ದೇಶಾದ್ಯಂತ, ವಿಶೇಷವಾಗಿ ದೂರದ ಮತ್ತು ಕಡಿಮೆ ಸಂಪರ್ಕ ಹೊಂದಿರುವ ಪ್ರದೇಶಗಳಲ್ಲಿರುವ ಬಳಕೆದಾರರಿಗೆ, ಪ್ರಮುಖ ಬ್ಯಾಂಕಿಂಗ್ ಮತ್ತು ಹಣಕಾಸು ನವೀಕರಣಗಳನ್ನು ಸರಳ ಮತ್ತು ಸುಲಭವಾಗಿ ತಲುಪಿಸಲು ಸಹಾಯ ಮಾಡುತ್ತದೆ.ಇದು ಸಾರ್ವಜನಿಕ ಜಾಗೃತಿ ಕಾರ್ಯಕ್ರಮದ ಒಂದು ಭಾಗವಾಗಿದೆ.

ಇನ್ನು ಈ ಕಾರ್ಯಕ್ರಮವು ಮೊದಲಿನಿಂದಲೇ SMS, ದೂರದರ್ಶನ ಜಾಹೀರಾತುಗಳು, ಪತ್ರಿಕೆಗಳು ಹಾಗೂ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಪ್ರಮುಖ ಮಾಹಿತಿಯನ್ನು ಹಂಚುವ ಕಾರ್ಯವನ್ನು ನಡೆಸುತ್ತಿತ್ತು. ಆದರೆ, ಹೆಚ್ಚು ಜನರು ಎಸ್ಎಂಎಸ್ ನೋಡುವುದಿಲ್ಲ. ಏನೇ ಮಾಹಿತಿ ಬಂದರೂ ನಿರ್ಲಕ್ಷಿಸಿಬಿಡುತ್ತಾರೆ. ಹೀಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ವಾಟ್ಸಾಪ್ ಮೊರೆ ಬಂದಿದೆ. ವಾಟ್ಸಾಪ್ ಸೇರ್ಪಡೆಯಿಂದ RBI ಹೆಚ್ಚಿನ ಜನರನ್ನು ತಲುಪುವ ಆಶಯವನ್ನು ಹೊಂದಿದೆ, ಏಕೆಂದರೆ ವಾಟ್ಸಾಪ್ ದೇಶದಲ್ಲಿಯೇ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ.
RBI ವಾಟ್ಸಾಪ್ ಚಾನೆಲ್ ಪ್ರಾರಂಭದ ಹಿನ್ನಲೆ:
RBI ಈ ಚಾನೆಲ್ ಅನ್ನು ಆರಂಭಿಸುವ ಹಿಂದಿನ ಉದ್ದೇಶವು ಉತ್ತಮವಾಗಿದೆ. ಅಂದರೆ ಇದರ ಉದ್ದೇಶ ಬಳಕೆದಾರರಿಗೆ ಬ್ಯಾಂಕಿಂಗ್, ಡಿಜಿಟಲ್ ಸುರಕ್ಷತೆ ಹಾಗೂ ಇತರ ಪ್ರಮುಖ ವಿಷಯಗಳ ಬಗ್ಗೆ ಪರಿಶೀಲಿಸಿದ ಮತ್ತು ಸಕಾಲಿಕ ಮಾಹಿತಿಯನ್ನು ನೇರವಾಗಿ ಒದಗಿಸುವುದಾಗಿದೆ. ಈ ಮೂಲಕ, ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ನಕಲಿ ಸುದ್ದಿ ಮತ್ತು ವಂಚನೆಗಳನ್ನು ತಪ್ಪಿಸಲು ಸಹಾಯ ಮಾಡುವ ಗುರಿಯಿದೆ. RBI ನ ಈ ಚಾನೆಲ್ ಬಳಕೆದಾರರಿಗೆ ಗೊಂದಲಗಳನ್ನು ನಿವಾರಿಸುವ ಮೂಲಕ ಸಾರ್ವಜನಿಕ ನಂಬಿಕೆಯನ್ನು ಬೆಳೆಸಲು ಸಹಾಯ ಮಾಡುವುದಾಗಿ ಹೇಳಿದೆ.
ಆರ್‌ಬಿಐ ತನ್ನ 4 ಏಪ್ರಿಲ್ 2025 ರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು, ಭೌಗೋಳಿಕ ಸ್ಥಳವನ್ನು ಲೆಕ್ಕಿಸದೇ, ನಮ್ಮ 'ಭಾರತೀಯ ರಿಸರ್ವ್ ಬ್ಯಾಂಕ್' WhatsApp ಖಾತೆ ಮೂಲಕ, ದೇಶಾದ್ಯಾಂತ ಎಲ್ಲರಿಗೂ ಹಣಕಾಸು ಮಾಹಿತಿಯನ್ನು ಸರಳವಾಗಿ ತಲುಪಿಸುವ ಗುರಿಯಾಗಿದೆ ಎಂದು ಘೋಷಿಸಿದೆ. ಈ ಚಾನೆಲ್, ಜನರನ್ನು ಉತ್ತಮ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ವಂಚನೆಗಳನ್ನು ತಪ್ಪಿಸಲು ಸಹಾಯ ಮಾಡುವುದರ ಮೂಲಕ, ದೇಶದ ಹಣಕಾಸು ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ಸುರಕ್ಷತೆ ಹೆಚ್ಚಿಸುವಲ್ಲಿ ಕೈಜೋಡಿಸುತ್ತದೆ.
ಯಾವ ರೀತಿಯ ಮಾಹಿತಿ ಹಂಚಿಕೊಳ್ಳಲಾಗುತ್ತದೆ?
ಈ ವಾಟ್ಸಾಪ್ ಚಾನೆಲ್ ಮೂಲಕ, ಬಳಕೆದಾರರು RBI ನಿಂದ ಹಲವು ಪ್ರಮುಖ ಮಾಹಿತಿಗಳನ್ನು ಪಡೆಯಬಹುದಾಗಿದೆ:
• ಸುರಕ್ಷಿತ ಡಿಜಿಟಲ್ ಬ್ಯಾಂಕಿಂಗ್ ಅಭ್ಯಾಸಗಳು
• ವಂಚನೆಯನ್ನು ತಪ್ಪಿಸುವ ಮೂಲಕಗಳು
• ಬ್ಯಾಂಕ್ ಗ್ರಾಹಕರ ಹಕ್ಕುಗಳ ಬಗ್ಗೆ ಮಾಹಿತಿ
• ನಿಯಮಗಳು ಮತ್ತು ನೀತಿಗಳ ಕುರಿತು ಇತ್ತೀಚಿನ ನವೀಕರಣಗಳು
• ಬ್ಯಾಂಕಿಂಗ್ ಸಂಬಂಧಿತ ವದಂತಿಗಳು ಅಥವಾ ಸುಳ್ಳು ಮಾಹಿತಿಯ ಕುರಿತು ಸ್ಪಷ್ಟೀಕರಣ
ಈ ವ್ಯವಸ್ಥೆ, ವಿಶೇಷವಾಗಿ ಆರ್‌ಬಿಐ ವೆಬ್‌ಸೈಟ್ ಅಥವಾ ಬೋಲ್ಚಿಯ ಮೇಲ್ವಿಚಾರಣೆ ಇಲ್ಲದೆ ವಾಟ್ಸಾಪ್ ಬಳಸುವ ಜನರಿಗಾಗಿ ಅತ್ಯಂತ ಉಪಯುಕ್ತವಾಗಿರುತ್ತದೆ.
RBI ವಾಟ್ಸಾಪ್ ಚಾನೆಲ್‌ಗೆ ಹೇಗೆ ಸೇರೋದು?
1. RBI ನ ಅಧಿಕೃತ ವೆಬ್‌ಸೈಟ್ ಅಥವಾ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಹಂಚಿದ QR ಕೋಡ್ ಅನ್ನು ಸ್ಕ್ಯಾನ್ ಮಾಡಿ. ಇದು ನಿಮ್ಮನ್ನು ನೇರವಾಗಿ RBI WhatsApp ಚಾನೆಲ್‌ಗೆ ಕರೆದೊಯ್ಯುತ್ತದೆ.
2. ನಂತರ, Join ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
3. ನೀವು ಈಗ RBI ನ ಪರಿಶೀಲಿತ WhatsApp ಖಾತೆಯಿಂದ ನವೀಕರಣಗಳನ್ನು ಪಡೆಯಲು ಪ್ರಾರಂಭಿಸಬಹುದು.
RBI ನ ಅಧಿಕೃತ ವಾಟ್ಸಾಪ್ ಖಾತೆ ವ್ಯವಹಾರ ಸಂಖ್ಯೆ 9999 041 935 ಮೂಲಕ ಕಾರ್ಯನಿರ್ವಹಿಸುತ್ತದೆ. ಬಳಕೆದಾರರು ಸರಿಯಾದ ಚಾನೆಲ್ ಅನ್ನು ಅನುಸರಿಸುತ್ತಿದ್ದಾರೆಯೆಂದು ಖಚಿತಪಡಿಸಿಕೊಳ್ಳಲು ಖಾತೆ ಹೆಸರಿನ ಪಕ್ಕದಲ್ಲಿರುವ ಪರಿಶೀಲನಾ ಚಿಹ್ನೆಯನ್ನು ಪರಿಶೀಲಿಸಲು ಸೂಚಿಸಲಾಗಿದೆ.
RBI ನ ಈ ಹೊಸ ಹಿನ್ನಲೆಯಲ್ಲಿ, ದೇಶಾದ್ಯಾಂತ ಬಹುಮಟ್ಟಿನಲ್ಲಿ ಹಣಕಾಸು ಜಾಗೃತಿ ಮತ್ತು ಸುರಕ್ಷತೆ ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.


Click it and Unblock the Notifications