ಆರ್‌ಬಿಐ ಹಣಕಾಸು ನೀತಿ: 11ನೇ ಬಾರಿ ರೆಪೋ ದರ ಶೇಕಡಾ 6.5ರಲ್ಲಿ ಯಾವುದೇ ಬದಲಾವಣೆ ಇಲ್ಲ!

ಭಾರತೀಯ ರಿಸರ್ವ್‌ ಬ್ಯಾಂಕ್‌ ಡಿಸೆಂಬರ್‌ 6, 2024ರಂದು ಸತತ ಹನ್ನೊಂದನೇ ಬಾರಿ ಕೂಡ ರೆಪೋ ದರ 6.5% ಅನ್ನು ಯಥಾಸ್ಥಿತಿಯಲ್ಲಿಡಲು ನಿರ್ಧರಿಸಿದೆ. ಅನಂತರದಲ್ಲಿ ಸ್ಥಾಯಿ ಠೇವಣಿ ಸೌಲಭ್ಯ (SDF) ದರವು ಕೂಡ 6.25% ನಲ್ಲಿ ಯಥಾಸ್ಥಿತಿಯಲ್ಲಿ ಉಳಿಯಲಿದೆ. ಮತ್ತು ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (MSF) ದರ ಮತ್ತು ಬ್ಯಾಂಕ್ ದರ 6.75% ಇರಲಿವೆ. ಇನ್ನು ಮಾರುಕಟ್ಟೆ ಮತ್ತು ಅರ್ಥಶಾಸ್ತ್ರಜ್ಞರ ನಿರೀಕ್ಷೆಗಳಿಗೆ ಅನುಗುಣವಾಗಿ ದರಗಳು ನಿರ್ಧಾರವಾಗಲಿವೆ.

ಎಂಪಿಸಿ ಕೂಡ ತನ್ನ ವಿತ್ತೀಯ ನೀತಿಯ ನಿಲುವನ್ನು ಯಥಾಸ್ಥಿತಿಯಲ್ಲಿಡಲು ನಿರ್ಧರಿಸಿದೆ. ಹಾಗೆ ಬೆಳವಣಿಗೆಯನ್ನ ಬೆಂಬಲಿಸುವ ಗುರಿಯೊಂದಿಗೆ ಹಣದುಬ್ಬರವನ್ನು ಎಂಪಿಸಿ ಗಮನಹರಿಸುತ್ತದೆ.

11ನೇ ಬಾರಿ RBI ರೆಪೋ ದರ 6.5%ನಲ್ಲಿ ಮುಂದುವರೆಯಲಿದೆ!

ರೆಪೋ ದರದ ಕುರಿತು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮಾತನಾಡಿದ್ರು, ವಿತ್ತೀಯ ನೀತಿಯು ಬಹುಮುಖ್ಯವಾಗಿದೆ ಏಕೆಂದರೆ ಅದು ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹೊಂದಿಕೊಳ್ಳುವ ಹಣದುಬ್ಬರವನ್ನು ಅನುಸರಿಸುವುದು ನಮ್ಮ ಪ್ರಯತ್ನವಾಗಿದೆ. ಹಾಗೆ ಬೆಲೆ ಸ್ಥಿರತೆ ಜೊತೆಜೊತೆಗೆ, ಬೆಳವಣಿಗೆ ಕೂಡ ಮುಖ್ಯವಾಗಿದೆ ಎಂದರು.

ರಷ್ಯಾ ಉಕ್ರೇನ್‌ನ ಯುದ್ದ ಪರಿಸ್ಥಿತಿಯಿಂದಾಗಿ ಜಾಗತಿಕವಾಗಿ ತೀವ್ರ ಹಣದುಬ್ಬರದ ಒತ್ತಡ ಉಂಟಾದವು. ಹಾಗೆ ಇದರಿಂದಾಗಿ ಪೂರೈಕೆ-ಸರಪಳಿಗೆ ಅಡತಡೆಗಳು ಉಲ್ಬಣಗೊಂಡವು. ಮೇ 2022-ಫೆಬ್ರವರಿ 2023 ರಿಂದ ಪ್ರಮುಖ ದರವನ್ನು 250 ಬಿಪಿಎಸ್‌ಗಳಿಗೆ ದರ ಹೆಚ್ಚಿಸಿದ ನಂತರ ಆರ್‌ಬಿಐ ಫೆಬ್ರವರಿ 2023 ರಿಂದ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಇರಿಸಿದೆ. ಪ್ರಸ್ತುತ, ರಷ್ಯಾ ಮತ್ತು ಮಧ್ಯಪ್ರಾಚ್ಯದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮುಂದುವರೆದಿದೆ.

ಅಲ್ಲದೆ, ಕೇಂದ್ರ ಬ್ಯಾಂಕ್‌ನಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಮೊದಲ ಅಧಿಕಾರಾವಧಿಯ ಕೊನೆಯ ನೀತಿ ಇದಾಗಿದೆ. ಆರ್‌ಬಿಐ ಗವರ್ನರ್ ಅವರ ಆರು ವರ್ಷಗಳ ಅಧಿಕಾರಾವಧಿಯು ಡಿಸೆಂಬರ್ 10, 2024 ರಂದು ಮುಗಿಯಲಿದೆ. ಅವರು ಆರ್‌ಬಿಐ ಗವರ್ನರ್ ಆಗಿ ಡಿಸೆಂಬರ್ 11, 2018 ರಂದು ಸೇರ್ಪಡೆಯಾಗಿದ್ದರು. ಸರ್ಕಾರವು ಅವರ ಅಧಿಕಾರಾವಧಿಯನ್ನು ವಿಸ್ತರಿಸುತ್ತದೆಯೇ ಅಥವಾ ಅವರ ಸ್ಥಾನದಲ್ಲಿ ಹೊಸಬರನ್ನ ತಂದು ಕೂರಿಸುತ್ತದೆಯೇ ಎಂಬುದನ್ನ ಮುಂದಿನ ದಿನಗಳಲ್ಲಿ ನೋಡಬೇಕಾಗಿದೆ. ಆದ್ರೆ ಅವರ ಅಧಿಕಾರಾವಧಿಯನ್ನ ಏನಾದರು ವಿಸ್ತರಿಸಿದರೆ, ದಾಸ್ ಅವರು ಭಾರತದಲ್ಲಿ RBIನ ದೀರ್ಘಾವಧಿಯ ಗವರ್ನರ್ ಆಗಲಿದ್ದಾರೆ.

ರೆಪೊ ದರ ಎಂದರೇನು?

ರೆಪೊ ದರ (ಮರು ಖರೀದಿ ದರ) ವಾಣಿಜ್ಯ ಬ್ಯಾಂಕುಗಳು ತಮಗೆ ಅವಶ್ಯಕತೆ ಬಿದ್ದಾಗ ಆರ್‌ ಬಿಐನಿಂದ ಪಡೆಯುವ ಸಾಲದ ಮೇಲೆ ವಿಧಿಸುವಂತ ಬಡ್ಡಿದರ ಇದಾಗಿದೆ. ಈ ದರವು ಆರ್ಥಿಕತೆಯಲ್ಲಿ ದ್ರವ್ಯತೆಯನ್ನು ನಿಯಂತ್ರಿಸಲು ಮತ್ತು ಹಣದುಬ್ಬರವನ್ನು ನಿಯಂತ್ರಿಸಲು ಪ್ರಮುಖ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಆರ್‌ಬಿಐ ರೆಪೊ ದರವನ್ನು ಹೆಚ್ಚಿಸಿದಾಗ, ಬ್ಯಾಂಕ್‌ಗಳು ಸಾಲ ಪಡೆಯುವ ವೇಳೆ ಹೆಚ್ಚು ಬಡ್ಡಿ ದರವನ್ನ ವಿಧಿಸಬೇಕಾಗುತ್ತದೆ.

ಆರ್‌ಬಿಐ ನೀಡುವ ಸಾಲಗಳಿಗೆ ಹೆಚ್ಚಿನ ಬಡ್ಡಿದರಗಳನ್ನ ವಿಧಿಸುವುದಲ್ಲದೆ, ಇದು ಹಣದುಬ್ಬರವನ್ನು ತಡೆಯಲು ಸಹಾಯ ಮಾಡುತ್ತದೆ. ರೆಪೊ ದರವು ನೇರವಾಗಿ ಸಾಲದ ವೆಚ್ಚ, ಹೂಡಿಕೆ ಮಟ್ಟಗಳು ಮತ್ತು ಹಣದುಬ್ಬರವನ್ನು ಪ್ರಭಾವ ಬೀರುತ್ತವೆ. ಹಾಗೆ ದೇಶದ ಹಣಕಾಸು ನೀತಿಯನ್ನು ನಿರ್ವಹಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. RBIಯ ಹಣಕಾಸು ನೀತಿ ಸಮಿತಿಯು (MPC) ಹಣದುಬ್ಬರ , ಬೆಳವಣಿಗೆ ಮತ್ತು ದ್ರವ್ಯತೆ ಮಟ್ಟಗಳಂತಹ ಆರ್ಥಿಕ ಪರಿಸ್ಥಿತಿಗಳ ಆಧಾರದ ಮೇಲೆ ರೆಪೊ ದರವನ್ನು ನಿಯಮಿತವಾಗಿ ಪರಿಶೀಲಿಸುತ್ತದೆ ಮತ್ತು ಸರಿಹೊಂದಿಸುತ್ತದೆ.

ರಿವರ್ಸ್ ರೆಪೊ ದರ ಎಂದರೇನು?

ರಿವರ್ಸ್ ರೆಪೋ ದರವು ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಬ್ಯಾಂಕ್‌ಗಳು ಇಡುವ ಠೇವಣಿಗೆ ಸಿಗುವ ಬಡ್ಡಿ ಇದಾಗಿದೆ. ಈ ವಹಿವಾಟಿನಲ್ಲಿ ಹೆಚ್ಚಿನ ಬೆಲೆಗೆ ಮರುಖರೀದಿ ಮಾಡುವ ಭರವಸೆಯೊಂದಿಗೆ, ವಾಣಿಜ್ಯ ಬ್ಯಾಂಕುಗಳು ಆರ್‌ಬಿಐಗೆ ಹಣವನ್ನು ಸಾಲವಾಗಿ ನೀಡುತ್ತವೆ ಮತ್ತು ಮೇಲಾಧಾರವಾಗಿ ಆರ್‌ಬಿಐ ಸೆಕ್ಯೂರಿಟಿಗಳನ್ನು ನೀಡುತ್ತದೆ. ರಿವರ್ಸ್ ರೆಪೋ ದರವು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹೆಚ್ಚುವರಿ ದ್ರವ್ಯತೆಯನ್ನು ನಿರ್ವಹಿಸುತ್ತದೆ. ಬ್ಯಾಂಕ್‌ಗಳು ತಮ್ಮ ಹೆಚ್ಚುವರಿ ಹಣವನ್ನು ಸಾಲ ನೀಡುವ ಬದಲು ಆರ್‌ಬಿಐನಲ್ಲಿ ಇರಿಸಲು ಉತ್ತೇಜಿಸುತ್ತದೆ.

ಇದು ಹಣದುಬ್ಬರವನ್ನು ನಿಯಂತ್ರಿಸಲು ಮತ್ತು ಆರ್ಥಿಕತೆಯಲ್ಲಿ ದ್ರವ್ಯತೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ವ್ಯತಿರಿಕ್ತವಾಗಿ, ರಿವರ್ಸ್ ರೆಪೋ ದರವನ್ನು ಕಡಿಮೆಗೊಳಿಸಿದಾಗ, ಬ್ಯಾಂಕ್‌ಗಳು ಆರ್‌ಬಿಐನಲ್ಲಿ ಹಣವನ್ನು ಠೇವಣಿ ಮಾಡಲು ಬಯಸುವುದಿಲ್ಲ. ಇದು ಹೆಚ್ಚು ಸಾಲ ನೀಡುವಿಕೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತದೆ. ರಿವರ್ಸ್ ರೆಪೋ ದರ, ರೆಪೋ ದರದ ಜೊತೆಗೆ, ಹಣದ ಪೂರೈಕೆಯನ್ನು ನಿಯಂತ್ರಿಸಲು, ಹಣದುಬ್ಬರವನ್ನು ನಿಯಂತ್ರಿಸಲು ಮತ್ತು ಹಣಕಾಸಿನ ಸ್ಥಿರತೆಯನ್ನು ಕಾಪಾಡಿಕೊಳ್ಳಲು RBIನ ಹಣಕಾಸು ನೀತಿ ಚೌಕಟ್ಟಿನಲ್ಲಿ ಇದು ಪ್ರಮುಖ ಭಾಗವಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+