ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ವಿತ್ತೀಯ ನೀತಿ ಸಮಿತಿ (MPC) ಸಭೆಯಲ್ಲಿ ರೆಪೊ ದರವನ್ನು (Repo Rate) ಬದಲಾಯಿಸದೆ ಯಥಾಸ್ಥಿತಿಯಲ್ಲಿ ಮುಂದುವರೆಸಿದೆ ಎಂದು ಘೋಷಿಸಿದೆ. ಈ ನಿರ್ಧಾರದಿಂದ, ರೆಪೊ ದರವು 5.25% ಪ್ರತಿಶತದಲ್ಲೇ ಸ್ಥಿರವಾಗಿ ಮುಂದುವರಿಯಲಿದೆ. ಆರ್‌ಬಿಐ ಕಳೆದ ಡಿಸೆಂಬರ್‌ನಲ್ಲಷ್ಟೇ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಇಳಿಸಿತ್ತು. ಇದೀಗ ಇದೇ ದರ ಮುಂದುವರೆಯಲಿದೆ ಎಂದು ಆರ್‌ಬಿಐ ಹೇಳಿದೆ.

ಹಣಕಾಸು ನೀತಿ ಸಮಿತಿ (MPC) ಸಭೆಯ ಫಲಿತಾಂಶವನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ರೆಪೋ ರೇಟ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಹೇಳುತ್ತಾ, ಹಿಂದಿನ ಘೋಷಣೆಯಂತೆ ರೆಪೋ ದರ 5.25% ದಲ್ಲಿ ಸ್ಥಿರವಾಗಿರಲಿದೆ ಎಂದು ಹೇಳಿದ್ದಾರೆ.
ಸಾಲಗಾರರಿಗಿಲ್ಲ ಸಿಹಿ ಸುದ್ದಿ!
ರೆಪೋ ರೇಟ್ ಎಂದರೆ ಒಂದು ದೇಶದ ಕೇಂದ್ರ ಬ್ಯಾಂಕ್, ವಾಣಿಜ್ಯ ಬ್ಯಾಂಕ್‌ಗಳಿಗೆ ನೀಡಲಾಗುವ ಸಾಲದ ಬಡ್ಡಿದರವಾಗಿದೆ. ಇದು ಒಂದು ವೇಳೆ ಬದಲಾದರೆ ಗ್ರಾಹಕರು ಬ್ಯಾಂಕ್‌ಗಳಿಂದ ಪಡೆಯುವ ಹೋಮ್ ಲೋನ್, ಕಾರ್ ಲೋನ್, ಪರ್ಸನಲ್ ಲೋನ್‌ಗಳ ಇಎಂಐಗಳ ಮೇಲೆ ಪ್ರಭಾವ ಬೀರುತ್ತದೆ. ಆರ್‌ಬಿಐ ರೆಪೋ ದರವನ್ನು ಕಡಿಮೆ ಮಾಡಿದ್ರೆ, ಬ್ಯಾಂಕುಗಳಿಗೂ ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ನೀಡಲಾಗುತ್ತದೆ. ಇದರ ಪ್ರಯೋಜನವನ್ನು ತಮ್ಮ ಗ್ರಾಹಕರಿಗೂ ವರ್ಗಾಯಿಸುತ್ತದೆ.
ಆದರೆ ಇದೀಗ ರೆಪೋ ರೇಟ್ ಕಡಿಮೆಯಾಗದ ಕಾರಣ, ಗೃಹಸಾಲ, ಕಾರು ಸಾಲ ಮತ್ತು ಪರ್ಸನಲ್ ಲೋನ್‌ಗಳ ಇಎಂಐನಲ್ಲಿ ಕಡಿಮೆಯಾಗಬಹುದು ಎಂದು ನಿರೀಕ್ಷೆಯಲ್ಲಿದ್ದ ಗ್ರಾಹಕರಿಗೆ ನಿರಾಸೆಯಾಗಿದೆ. ಆರ್‌ಬಿಐ ನಿರ್ಧಾರದಿಂದ, ಅದೇ ಬಡ್ಡಿದರಗಳು, ಇಎಂಐ ಮುಂದುವರೆಯುತ್ತದೆ.
ರೆಪೊ ದರ ಎಂದರೆ, ಕೇಂದ್ರ ಬ್ಯಾಂಕ್ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಅಲ್ಪಾವಧಿಯ ಸಾಲಗಳ ಮೇಲಿನ ಬಡ್ಡಿ ದರ. ಇದರ ಪೂರ್ಣ ರೂಪ "ರಿಪರ್ಚೇಸ್ ಅಗ್ರಿಮೆಂಟ್" ಅಥವಾ "ರಿಪರ್ಚೇಸಿಂಗ್ ಆಪ್ಷನ್" (Repurchase Agreement or Repurchasing Option) ಎಂದಾಗಿದೆ. ಇದನ್ನು ಆರ್‌ಬಿಐ ಸಂಪೂರ್ಣವಾಗಿ ನಿಯಂತ್ರಿಸುತ್ತದೆ.
ಗುಡ್‌ರಿಟರ್ನ್ಸ್ ಸಮೀಕ್ಷೆಯಂತೆ ಫಲಿತಾಂಶ ಪ್ರಕಟ:
ರೆಪೋ ದರ ಕಡಿತಕ್ಕೆ ಸಂಬಂಧಿಸಿದಂತೆ ಗುಡ್ ರಿಟರ್ನ್ಸ್ ಸಮೀಕ್ಷೆಯನ್ನು ನಡೆಸಿತ್ತು. ಈ ಸಮೀಕ್ಷೆಯಲ್ಲಿ 30 ಆರ್ಥಿಕ ತಜ್ಞರು ಮತ್ತು ಮಾರುಕಟ್ಟೆ ತಜ್ಞರು ಒಳಗೊಂಡಿದ್ದರು. ಗುಡ್ ರಿಟರ್ನ್ಸ್ ಸಮೀಕ್ಷೆಯ ಪ್ರಕಾರ 20 ಜನರು ಕೇಂದ್ರ ಬ್ಯಾಂಕ್ ರೆಪೋ ರೇಟ್ ಸ್ಥಿರವಾಗಿಡುತ್ತದೆ ಎಂದು ನಿರೀಕ್ಷಿಸಿದ್ದರೆ, 10 ಜನರು ದರ ಕಡಿತ ಮಾಡಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಇದೀಗ ಕೊನೆಗೂ ಆರ್‌ಬಿಐ ತನ್ನ ರೆಪೋ ದರವನ್ನು ಸ್ಥಿರವಾಗಿಟ್ಟಿದೆ.
ಕಳೆದ ಫೆಬ್ರವರಿ 2025ರಿಂದ ದೇಶದ ಆರ್ಥಿಕ ಪ್ರಗತಿಗಾಗಿ, MPC ರೆಪೋ ದರವನ್ನು ಒಟ್ಟು 125 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಿದೆ. ಇದರಲ್ಲಿ ಫೆಬ್ರವರಿ ಮತ್ತು ಏಪ್ರಿಲ್‌ನಲ್ಲಿ 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿತ್ತು. ಇನ್ನು ಜೂನ್‌ನಲ್ಲಿ 50 ಬೇಸಿಸ್ ಪಾಯಿಂಟ್, ಡಿಸೆಂಬರ್‌ನಲ್ಲಿ 25 ಬೇಸಿಸ್ ಪಾಯಿಂಟ್, ಡಿಸೆಂಬರ್‌ನಲ್ಲಿ 25 ಬೇಸಿಸ್ ಪಾಯಿಂಟ್ ಕಡಿತಗೊಳಿಸಲಾಗಿದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications