GR Exclusive poll: ಮತ್ತೆ ಇಳಿಕೆಯಾಗುತ್ತಾ RBI ರೆಪೋ ದರ..? FY26ರಲ್ಲಿ ರೆಪೋ ದರ 5.5% ಇಳಿಕೆ ಸಾಧ್ಯತೆ..! ಪೂರ್ತಿ ಓದಿ

RBI ರೆಪೋ ದರ, ಗುಡ್‌ರಿಟರ್ನ್ಸ್‌ ಸಮೀಕ್ಷೆ: 2020ನೇ ಇಸವಿಯಲ್ಲಿ ಇಡೀ ವಿಶ್ವದಲ್ಲಿ ಕೊರೋನಾ ತಾಂಡವವಾಡಿತ್ತು. ಅದು ಎಲ್ಲರಿಗೂ ಗೊತ್ತಿರುವ ಮಾಹಿತಿಯೇ. ಆದರೆ ಮಹಾಮಾರಿ ಕೊರೋನಾ ಸಾಂಕ್ರಾಮಿಕದಿಂದ, ಷೇರು ಮಾರುಕಟ್ಟೆ ಮೇಲೆ ಬಿದ್ದ ಹೊಡೆತ ಸಣ್ಣದಲ್ಲ. ಹೀಗಿದ್ದರೂ ಕೂಡ ಷೇರು ಮಾರುಕಟ್ಟೆಯು 2025ರ ಏಪ್ರಿಲ್‌ ಅಂತ್ಯಕ್ಕೆ ಭಾರತದ ಹಣಕಾಸು ಪರಿಸ್ಥಿತಿ ಮತ್ತೆ ಬದಲಾಗುವ ಲಕ್ಷಣಗಳು ಕಂಡು ಬರುತ್ತಿವೆ.

RBI Repo rate: ಮತ್ತೆ ಇಳಿಕೆಯಾಗುತ್ತಾ ರೆಪೋ ದರ..?

ಹೌದು, ಈ ಕುರಿತು "ಗುಡ್‌ರಿಟರ್ನ್ಸ್" ಒಂದು ಸಮೀಕ್ಷೆ ನಡೆಸಿದೆ. ಆ ಸಮೀಕ್ಷೆ ಪ್ರಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಮುಂದಿನ ಹಣಕಾಸು (FY26) ನೀತಿ ಪರಿಶೀಲನೆಯಲ್ಲಿ ಮತ್ತೆ 25 ಬೇಸಿಸ್ ಪಾಯಿಂಟ್‌ಗಳಷ್ಟು ರೆಪೊ ದರ ಕಡಿತಗೊಳಿಸಬಹುದೆಂಬ ನಿರೀಕ್ಷೆಯಿದೆ. ಈ ಒಂದು ಕಾರಣದಿಂದ ಜನಸಾಮಾನ್ಯರಿಗೆ ಒಂದು ಸಮಾಧಾನಕರ ಸುದ್ದಿ ಇದೆ. ಅದೇನೆಂದರೆ ಇದರಿಂದ ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿದರಗಳು ಇಳಿಯುವ ಸಾಧ್ಯತೆ ಹೆಚ್ಚಾಗಿ ಕಂಡುಬಂದಿದೆ.

ಇನ್ನು "ಗುಡ್‌ರಿಟರ್ನ್ಸ್" ನಡೆಸಿದ ಸಮೀಕ್ಷೆಯಲ್ಲಿ ಸುಮಾರು 33 ಮಂದಿ ಅರ್ಥಶಾಸ್ತ್ರಜ್ಞರು ಭಾಗವಹಿಸಿದ್ದರು. ಅವರಲ್ಲಿ 29 ಮಂದಿ ರೆಪೋ ದರ ಇಳಿಕೆಯ ಲಕ್ಷಣದ ಬಗ್ಗೆ ವಿವರಿಸಿದ್ದಾರೆ. ಅಂದರೆ ಏಪ್ರಿಲ್ 9ರಂದು ಮುಕ್ತಾಯಗೊಳ್ಳುವ MPC ಸಭೆಯಲ್ಲಿ RBI ತನ್ನ ಧೋರಣೆಯಲ್ಲಿನ ಸಡಿಲಿಕೆಯನ್ನು ಮುಂದುವರೆಸುತ್ತು. ಅಲ್ಲಿ ಮುಂದಿನ ಹಣಕಾಸು ವರ್ಷದಲ್ಲಿ 25 ಬೇಸಿಸ್ ಪಾಯಿಂಟ್‌ಗಳಷ್ಟು ರೆಪೋ ದರ ಇಳಿಕೆ ಮಾಡುವ ನಿರೀಕ್ಷೆಯನ್ನು ಅವರೇ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ICRA ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಅವರು ಹೇಳಿರುವ ಪ್ರಕಾರ, ನಾವು FY2026ಕ್ಕೆ GDP ಬೆಳವಣಿಗೆಯ ಆಧಾರಿತ ನಿರೀಕ್ಷೆಯನ್ನು 6.5% ಎಂದು ಅಂದಾಜಿಸಿದ್ದೇವೆ ಎಂದಿದ್ದೇವೆ ಎಂದು ಹೇಳಿದ್ದಾರೆ. CPI ಆಧಾರಿತ ಹಣದುಬ್ಬರ 4.2% ಕ್ಕೆ ಇಳಿಯಲಿದೆ ಎಂಬ ನಿರೀಕ್ಷೆಯೊಂದಿಗೆ MPC ರೆಪೊ ದರವನ್ನು 25bps ರಷ್ಟು ಕಡಿತಗೊಳಿಸಲಿದೆ ಎಂದಿದ್ದಾರೆ.

ಕ್ಯಾಪಿಟಲ್ ಎಕನಾಮಿಕ್ಸ್‌ನ ಶಿಲಾನ್ ಶಾ ಅವರೂ CPI ದರ ಇತ್ತೀಚೆಗೆ ಕಡಿಮೆಯಾದ ಹಿನ್ನೆಲೆಯಲ್ಲಿ MPC ಮತ್ತೆ ದರ ಇಳಿಕೆ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಂದರೆ RBI ತನ್ನ ದೀರ್ಘಾವಧಿಯ ದೋರಣಿಯ ಪ್ರಕಾರ ಬಡ್ಡಿದರಗಳನ್ನು ಹೀಗೇ ಕ್ರಮೇಣ ಇಳಿಸಲು ಆರಂಭಿಸಿದ್ದು, ಮುಂದಿನ ಕೆಲವು ತ್ರೈಮಾಸಿಕಗಳಲ್ಲಿ ಇನ್ನಷ್ಟು ಕಡಿತಗಳ ನಿರೀಕ್ಷೆ ಇದೆ.

ಜೂನ್‌ನಲ್ಲಿ ಮತ್ತೊಂದು ದರ ಕಡಿತ ಸಾಧ್ಯತೆ:

ಇನ್ನು ಮುಂಬರುವ ಜೂನ್ ಅಥವಾ ಆಗಸ್ಟ್‌ನಲ್ಲಿ ಮತ್ತೊಮ್ಮೆ 25bps ಕಡಿತವಾಗಬಹುದು ಎಂಬ ಅಂದಾಜು ಕೂಡಾ ಇದೆ. FY26ರಲ್ಲಿ ರೆಪೊ ದರವನ್ನು 5.5% ವರೆಗೆ ಇಳಿಸುವ ಸಾಧ್ಯತೆ ಅರ್ಥಶಾಸ್ತ್ರಜ್ಞರು ವ್ಯಕ್ತಪಡಿಸುತ್ತಿದ್ದಾರೆ. ಇದು ಆರ್‌ಬಿಐ ಗುರಿಯಾದ ಮಧ್ಯಮಾವಧಿಯ CPI ಹಣದುಬ್ಬರದ 4% ಗುರಿಗೆ ತಲುಪುವ ಪ್ರಯತ್ನವಾಗಿದೆ.


ಪಾಲಿಸಿ ನಿಲುವಿನಲ್ಲಿ ಏನಾದರೂ ಬದಲಾವಣೆ..?

ಇನ್ನು SBM ಬ್ಯಾಂಕ್ ಇಂಡಿಯಾದ ಖಜಾನಾ ಮುಖ್ಯಸ್ಥ ಮಂದಾರ್ ಪಿಟಾಲೆ ಅವರ ಪ್ರಕಾರ, ಏಪ್ರಿಲ್ MPC ಯಲ್ಲಿ RBI ತನ್ನ ಬಡ್ಡಿದರ ಇಳಿಕೆಯ ಜೊತೆಗೆ ತಟಸ್ಥ ನಿಲುವನ್ನೇ ಮುಂದುವರೆಸಲಿದೆ ಎಂದಿದ್ದಾರೆ. ಏಪ್ರಿಲ್‌ನಲ್ಲಿ 0.8 ಟ್ರಿಲಿಯನ್ ರೂಪಾಯಿ ಮೌಲ್ಯದ ಓಪನ್ ಮಾರುಕಟ್ ಓಪರೇಶನ್ ಖರೀದಿ ಘೋಷಣೆಯೊಂದಿಗೆ RBI ತನ್ನ ನೀತಿ ಪ್ರಣಾಳಿಕೆಯನ್ನು ಸ್ಥಿರವಾಗಿರಿಸಲಿದೆ.

ಬಾಂಡ್ ಮಾರುಕಟ್ಟೆಗಳ ನಿರೀಕ್ಷೆ ಏನಿದೆ..?

ಪಿಜಿಐಎಂ ಇಂಡಿಯಾ ಮ್ಯೂಚುವಲ್ ಫಂಡ್‌ನ ಪುನೀತ್ ಪಾಲ್ ಅವರು, ಈ MPC ಸಭೆ ಬಾಂಡ್ ಮಾರುಕಟ್ಟೆಗಳಿಗೆ ಅನುಕೂಲವಾಗಲಿದೆ ಮತ್ತು ಜಾಗತಿಕ ಅನಿಶ್ಚಿತತೆ ನಡುವೆಯೂ ಹಣಕಾಸು ಬೆಂಬಲವನ್ನು ಖಚಿತಪಡಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. "ಪ್ಯಾಕ್‌ನ ಜೋಕರ್" ಎಂಬ ರೀತಿಯಲ್ಲಿ ನಿರೀಕ್ಷೆಗೂ ಹೊರಗಾದ ನಿರ್ಧಾರವನ್ನು RBI ತೆಗೆದುಕೊಳ್ಳುವ ಸಾಧ್ಯತೆಯೂ ತಿರಸ್ಕರಿಸಲಾಗದು ಎಂದಿದ್ದಾರೆ.

ಹಣದುಬ್ಬರದ ಚಲನಶೀಲತೆ ಮತ್ತು ಜಾಗತಿಕ ಸ್ಥಿತಿ:

ಬ್ಯಾಂಕ್ ಆಫ್ ಬರೋಡಾದ ಅರ್ಥಶಾಸ್ತ್ರಜ್ಞೆ ದೀಪನ್ವಿತಾ ಮಜುಂದಾರ್ ಅವರು, CPI ಹಣದುಬ್ಬರ ಮಾರ್ಚ್ 2025ಕ್ಕೆ 3.6% ಕ್ಕೆ ಇಳಿಯಲಿದೆ ಎಂದು ಹೇಳಿದರು. FY25ರಲ್ಲಿ ಹಣದುಬ್ಬರ 4.6% ಇರಲಿದೆ ಎನ್ನಲಾಗಿದೆ, ಇದು RBI ಗುರಿಯ 4.8%ಕ್ಕಿಂತ ಕಡಿಮೆ. FY26ರಲ್ಲಿ CPI ಸುಸ್ಥಿರವಾಗಿದೆ ಎಂದು ಅವರು ನಂಬುತ್ತಾರೆ.
ಅಮೆರಿಕದಲ್ಲಿ ಬಡ್ಡಿದರ ತೀವ್ರತೆಯಿಂದಾಗಿ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿರುವ ಕಾರಣ, ಭಾರತದಲ್ಲಿ ಬಡ್ಡಿದರ ಇಳಿಕೆ ಚಕ್ರವು ನಿಜವಾದ ಆರ್ಥಿಕ ಬದಲಾವಣೆಗೆ ದಾರಿ ಮಾಡಿಕೊಡಲಿದೆ ಎಂಬ ನಂಬಿಕೆ ಇದೆ. ಇದಲ್ಲದೆ, ಭಾರತ ಮತ್ತು ಅಮೆರಿಕದ ನಡುವಿನ ಹಣದುಬ್ಬರ ವ್ಯತ್ಯಾಸವು FY26ರಲ್ಲಿ 200 ಬೇಸ್ ಪಾಯಿಂಟ್‌ ಆಗಿರಬಹುದು ಎಂಬ ನಿರೀಕ್ಷೆ ಇದೆ.

ಅಂತಿಮದ ದೃಷ್ಠಿಕೋನ:

ಫೆಬ್ರವರಿ 2025ರ MPC ಸಭೆಯಲ್ಲಿ RBI 25 ಬೇಸ್ ಪಾಯಿಂಟ್‌ನಷ್ಟು ದರ ಕಡಿತ ಮಾಡಿ, ಐದು ವರ್ಷಗಳ ಬಳಿಕ ಮೊದಲ ಬಾರಿಗೆ ಸಡಿಲ ನೀತಿಯತ್ತ ಪಾದಮೂಡಿತ್ತು. ಇದಕ್ಕೆ ಮೊದಲು ಹನ್ನೊಂದು ಸತತ ಸಭೆಗಳಲ್ಲಿ ರೆಪೊ ದರ 6.25% ಕ್ಕೆ ಅಚಲವಾಗಿತ್ತು. ಈಗ CPI ದರ 3.62% ಕ್ಕೆ ತಲುಪಿರುವುದು MPCಗೆ ಇನ್ನಷ್ಟು ಬಡ್ಡಿದರ ಇಳಿಕೆಗೆ ಹಸಿರು ನಿಶಾನೆ ನೀಡುತ್ತಿದೆ.ನೇರವಾಗಿ ಹೇಳುವುದಾದರೆ, ಜಾಗತಿಕ ಆರ್ಥಿಕ ಕುಸಿತದ ಭೀತಿ ನಡುವೆಯೂ ಭಾರತದಲ್ಲಿ ಹಣದುಬ್ಬರ ನಿಯಂತ್ರಣದಲ್ಲಿರುವುದರಿಂದ RBI ಮುಂದಿನ ತಿಂಗಳುಗಳಿಂದ ಬಡ್ಡಿದರ ಕಡಿತ ಚಕ್ರವನ್ನು ಮುಂದುವರಿಸಬಹುದು. FY26ರ ಅಂತ್ಯಕ್ಕೆ ರೆಪೊ ದರ 5.5% ಕ್ಕೆ ತಲುಪಬಹುದಾದ ಮುನ್ಸೂಚನೆ ಇದೆ. ಈ ನೀತಿಯ ಪರಿಣಾಮವಾಗಿ ಸಾಲದ ಬಡ್ಡಿದರಗಳು ಇಳಿಯುವ ನಿರೀಕ್ಷೆಯಿದೆ, ತದ್ವಾರೆ ಉಳಿತಾಯದ ಬಡ್ಡಿದರಗಳು ಕೂಡಾ ಪ್ರಭಾವಿತರಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+