ಬೆಂಗಳೂರು, ಏಪ್ರಿಲ್ 14: ಫೋನ್ ಪೇ, ಗೂಗಲ್ ಪೇ , ಪೇಟಿಎಂ , ಹೀಗೆ ಸಾಕಷ್ಟು ಯುಪಿಐ ಅಪ್ಲಿಕೇಶನ್ ಗಳು ಭಾರತದ ಜನಸಾಮಾನ್ಯರಿಗೆ ಪರಿಚಿತವಾಗಿದೆ. ಯುಪಿಐ ಪೇಮೆಂಟ್ ಪದ್ಧತಿ ಜಾರಿಗೆ ಬಂದ ನಂತರದಲ್ಲಿ ಅತಿ ಸುಲಭ ಮತ್ತು ಅತಿ ಜನಪ್ರಿಯ ಅಪ್ಲಿಕೇಶನ್ ಗಳಾಗಿ ಜನರಲ್ಲಿ ಗುರುತಿಸಿಕೊಂಡಿದ್ದು ಈ ಅಪ್ಲಿಕೇಶನ್‌ಗಳು .
ತಾಂತ್ರಿಕ ಮತ್ತು ಸುರಕ್ಷತೆಯ ಕಾರಣಗಳಿಗಾಗಿ ಪೇಟಿಎಂ ಅಪ್ಲಿಕೇಶನ್ ಬಳಕೆ ಭಾರತದಲ್ಲಿ ನಿಷೇಧಕ್ಕೆ ಒಳಗಾಗಿದೆ. ಅದೇ ಹಾದಿಯಲ್ಲಿ ಈಗ ಫೋನ್ ಪೇ ಮತ್ತು ಗೂಗಲ್ ಪೇ ಕೂಡ ಸಾಗಲಿದೆಯೇ ಎಂಬ ಅನುಮಾನ ಮೂಡಿದೆ.

ಆದರೂ ಹೆಚ್ಚೆಚ್ಚು ಜನ ಬಳಕೆ ಮಾಡುತ್ತಿದ್ದ ಅಪ್ಲಿಕೇಶನ್ ಗಳು ಎಂದರೆ ಫೋನ್ ಪೇ ಮತ್ತು ಗೂಗಲ್ ಪೇ ಅಪ್ಲಿಕೇಶನ್ಗಳು ಇಲ್ಲಿನ ಯಾವುದೇ ಟ್ರಾನ್ಸಾಕ್ಷನ್ ಗಳಿಗೂ ನೀವು ಶುಲ್ಕ ಪಾವತಿ ಮಾಡುವಂತಿರಲಿಲ್ಲ ಹಾಗೂ ಒಬ್ಬರಿಗೆ ಹಣ ವರ್ಗಾವಣೆ ಮಾಡುವುದು ಬಹಳ ಸುಲಭವಾಗಿತ್ತು ಈ ಕಾರಣಗಳಿಗೆ ಅತಿ ವೇಗವಾಗಿ ಈ ಅಪ್ಲಿಕೇಶನ್ ಗಳು ಜನಪ್ರಿಯತೆ ಪಡೆದುಕೊಂಡಿದ್ದವು.
ಸದ್ಯ ದೇಶದಲ್ಲಿ ಶೇಕಡ 80ರಷ್ಟು ವಹಿವಾಟು ಈ ಯು ಪಿ ಐ ಅಪ್ಲಿಕೇಶನ್ ಗಳ ಮೂಲಕ ನಡೆಯುತ್ತಿದೆ ಆದರೆ ಇದೀಗ ಹೊಸ ಶರತ್ತುಗಳನ್ನು ವಿಧಿಸುವ ಮೂಲಕ ಫೋನ್ ಪೇ ಮತ್ತು ಗೂಗಲ್ ಪೇ ಅಪ್ಲಿಕೇಶನ್ ಗಳ ಮೇಲೆ ಆರ್ ಬಿ ಐ ನಿಯಂತ್ರಣ ಸಾಧಿಸಲು ಮುಂದಾಗಿದೆ.
ಬದಲಿ ಅಪ್ಲಿಕೇಶನ್ ಬರಲಿದೆ ಎಂದ RBI
ಫೋನ್ ಪೇ ಮತ್ತು ಗೂಗಲ್ ಪೇ ಭಾರತದಲ್ಲಿ ಅತಿ ಜನಪ್ರಿಯವಾದ ಯುಪಿಐ ಅಪ್ಲಿಕೇಶನ್ ಗಳಾಗಿದ್ದರು , ಇದು ಮೂಲತಹ ಅಮೆರಿಕ ಮೂಲದ ಕಂಪನಿಗಳು ಡೆವಲಪ್ ಮಾಡಿರುವಂತಹ ಅಪ್ಲಿಕೇಶನ್ ಗಳಾಗಿದೆ . ಈ ಕಾರಣಕ್ಕೆ ಆರ್ ಬಿ ಐ ಹೆಚ್ಚೆಚ್ಚು ಜನರು ದೇಶಿಯ ಅಪ್ಲಿಕೇಶನ್ಗಳನ್ನು ಬಳಸುವ ಕಡೆ ಗಮನಹರಿಸಲಿ ಎಂಬ ಕಾರಣಕ್ಕೆ ಫೋನ್ ಪೇ ಮತ್ತು ಗೂಗಲ್ ಪೇ ಗಳ ಮೇಲೆ ನಿಯಂತ್ರಣ ತರಲು ಮುಂದಾಗಿದೆ.
ವಿದೇಶಿ ಅಪ್ಲಿಕೇಶನ್ಗಳ ಅತಿಯಾದ ಬಳಕೆ ಯಾವತ್ತಿದ್ದರೂ ದೇಶಕ್ಕೆ ,ದೇಶದ ಭದ್ರತೆಗೆ ಮಾರಕವೇ . ಮಾಹಿತಿ ಸೋರಿಕೆ ಇರಬಹುದು,ದತ್ತಾಂಶಗಳ ಕಳುವು ಆಗಬಹುದು ಅಥವಾ ಖಾತೆಗಳು ಹ್ಯಾಕ್ ಆಗೋದ್ರಿಂದ ಇನ್ಯಾವುದೇ ರೀತಿಯ ತೊಂದರೆ ಸೃಷ್ಟಿಯಾಗಬಹುದು . ಎಲ್ಲದಕ್ಕೂ ಈ ವಿದೇಶಿ ಅಪ್ಲಿಕೇಶನ್ ಗಳು ಕಾರಣವಾದರೂ ಅಚ್ಚರಿ ಇಲ್ಲ . ಹೀಗಾಗಿ ಮುಂಚಿತವಾಗಿಯೇ ಎಚ್ಚೆತ್ತುಕೊಂಡಿರುವ ಆರ್‌ಬಿಐ, ಈ ವಿದೇಶಿ ಅಪ್ಲಿಕೇಶನ್ ಗಳ ಬದಲು ಜನ ಹೆಚ್ಚೆಚ್ಚು ದೇಶೀಯ ಅಪ್ಲಿಕೇಶನ್ ಬಳಸುವ ನಿಟ್ಟಿನಲ್ಲಿ ಗ್ರಾಹಕರಿಗೆ ಸೌಲಭ್ಯ ಒದಗಿಸುವ ಯೋಜನೆ ರೂಪಿಸಲು ಮುಂದಾಗಿದೆ.
ದೇಶಿಯ ಫಿನ್-ಟೆಕ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಹೆಚ್ಚಿನ ನೆರವು ಮತ್ತು ಸಹಕಾರ ನೀಡಿದರೆ ಹೆಚ್ಚು ಹೆಚ್ಚು ಈ ರೀತಿಯ ದೇಶಿಯ ಅಪ್ಲಿಕೇಶನ್ಗಳನ್ನು ಡೆವಲಪ್ ಮಾಡುವುದು ಸುಲಭವಾಗುತ್ತೆ ಆ ಮೂಲಕ ಭಾರತೀಯರು ಈ ಮುಂಚೆ ಹೇಗೆ ಫೋನ್ ಪೇ ಮತ್ತು ಗೂಗಲ್ ಪೇ ಪೇಟಿಎಂ ಅಪ್ಲಿಕೇಶನ್ಗಳನ್ನು ಬಳಸುತ್ತಿದ್ದರು ,ಅಷ್ಟೇ ಸುಲಭವಾಗಿ ದೇಶೀಯ ಅಪ್ಲಿಕೇಶನ್ ಗಳನ್ನ ಬಳಸಲು ಅನುವು ಮಾಡಿಕೊಡಲು ಯೋಜನೆ ರೂಪಿಸಲು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಫೋನ್ ಪೇ ಮತ್ತು ಗೂಗಲ್ ಪೇ ಬಳಕೆಯನ್ನು ಕಡಿತಗೊಳಿಸಲು RBI ಯೋಚಿಸಿದೆ.


Click it and Unblock the Notifications