GoodReturns Poll: ಅಕ್ಟೋಬರ್‌ನಲ್ಲಿ ರೆಪೋ ಸ್ಥಿರ, FY25ರಲ್ಲಿ ಶೇ.1.25ರಷ್ಟು ದರ ಕಡಿತ: ಗುಡ್‌ರಿಟರ್ನ್ಸ್‌ ಪೋಲ್

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಧ್ಯಕ್ಷತೆಯಲ್ಲಿ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಮುಂದಿನ ವಾರ ಮುಂದಿನ ವಾರ ನಡೆಯಲಿದೆ. ಈ ಸಮಿತಿಯು ರೆಪೋ ದರವನ್ನು ಶೇಕಡ 6.5ರಲ್ಲಿ ಸ್ಥಿರವಾಗಿರಿಸಲಿದೆ ಎಂದು ಗುಡ್ ರಿಟರ್ನ್ಸ್ ಇಂಗ್ಲೀಷ್ ನಡೆಸಿದ 25 ಅರ್ಥಶಾಸ್ತ್ರಜ್ಞರ ಸಮೀಕ್ಷೆಯಲ್ಲಿ ಕಂಡು ಬಂದಿದೆ.

ಆರ್‌ಬಿಐ ಎಂಪಿಸಿ ಸದಸ್ಯರು ಅಕ್ಟೋಬರ್ 4-6ರ ನಡುವೆ ಸಭೆ ನಡೆಸಲಿದ್ದು, ಶುಕ್ರವಾರ ರೆಪೋ ದರ ಪರಿಷ್ಕರಣೆ ಪ್ರಕಟಿಸುತ್ತಾರೆ. ಸಮೀಕ್ಷೆಯನ್ನು ಸೆಪ್ಟೆಂಬರ್ 20-28 ರ ನಡುವೆ ನಡೆಸಲಾಗಿದೆ. ಕಳೆದ ವರ್ಷ ಮೇ ತಿಂಗಳಿನಿಂದ ಫೆಬ್ರವರಿ 2023 ರವರೆಗೆ ಆರ್‌ಬಿಐ ರೆಪೋ ದರವನ್ನು ಸುಮಾರು 250 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆ ಮಾಡಿದೆ. ಇದಾದ ಬಳಿಕ ಈಗ ಸತತ ನಾಲ್ಕನೇ ಬಾರಿಗೆ ರೆಪೋ ದರವನ್ನು ಸ್ಥಿರವಾಗಿರಿಸಬಹುದು ಎಂದು ಸಮೀಕ್ಷೆ ಹೇಳಿದೆ.

ಅಕ್ಟೋಬರ್‌ನಲ್ಲಿ ರೆಪೋ ಸ್ಥಿರ, FY25ರಲ್ಲಿ ಶೇ.1.25ರಷ್ಟು ದರ ಕಡಿತ..

ಕಳೆದ ಎರಡು ವರ್ಷಗಳಲ್ಲಿ ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ವಿಶ್ವದಾದ್ಯಂತ ಹಲವಾರು ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿದರಗಳನ್ನು ಹೆಚ್ಚಿಸುತ್ತಿವೆ. ಇನ್ನು ಇತ್ತೀಚಿನ ಸಿಪಿಐ ಹಣದುಬ್ಬರ ದರವು ನಿರೀಕ್ಷೆಗಿಂತ ಉತ್ತಮವಾಗಿದ್ದರೂ, ಆರ್‌ಬಿಐನ ಸಹಿಷ್ಣುತೆ ಮಿತಿಯಾದ ಶೇಕಡ 2-6 ಕ್ಕಿಂತ ಹೆಚ್ಚಾಗಿದೆ.

ತಜ್ಞರು ಏನು ಹೇಳುತ್ತಾರೆ?

"ಈ ಬಾರಿಯ ಕ್ರೆಡಿಟ್ ನೀತಿಯು ಅಸ್ತಿತ್ವದಲ್ಲಿರುವ ದರದ ರಚನೆ ಮತ್ತು ನೀತಿಯೊಂದಿಗೆಯೇ ಮುಂದುವರಿಯುತ್ತದೆ. ಆದ್ದರಿಂದ ರೆಪೋ ದರವನ್ನು ಶೇಕಡ 6.5 ರಷ್ಟು ಉಳಿಸಿಕೊಳ್ಳಲಾಗುತ್ತದೆ. ಹಣದುಬ್ಬರವು ಇನ್ನೂ ಶೇಕಡ 6.8 ರಲ್ಲಿದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ದರ ತೀವ್ರವಾಗಿ ಇಳಿಯುವ ನಿರೀಕ್ಷೆಯಿದೆ," ಎಂದು ಬ್ಯಾಂಕ್ ಆಫ್ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್ ಹೇಳಿದ್ದಾರೆ.

"ಖಾರಿಫ್ ಉತ್ಪಾದನೆ ವಿಚಾರದಲ್ಲಿ ವಿಶೇಷವಾಗಿ ಬೇಳೆಕಾಳುಗಳಿಗೆ ಸಂಬಂಧಿಸಿದಂತೆ ಇನ್ನೂ ಕೆಲವು ನಿರಾಶಾವಾದವಿದೆ. ಇದರಿಂದಾಗಿ ಬೆಲೆಗಳು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಆದರೆ ಹಣದುಬ್ಬರವು ಇಳಿಕೆಯಾಗುವುದರಿಂದ ರೆಪೋ ದರ ಹೆಚ್ಚಳವನ್ನು ತಳ್ಳಿಹಾಕಬಹುದು," ಎಂದು ಕೂಡಾ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್ ತಿಳಿಸಿದ್ದಾರೆ.

ಶೇಕಡ 95 ಕ್ಕಿಂತ ಹೆಚ್ಚು, ಅಥವಾ ಒಟ್ಟು 25 ಅರ್ಥಶಾಸ್ತ್ರಜ್ಞರಲ್ಲಿ 24 ಮಂದಿ ಅಕ್ಟೋಬರ್ 2023 ರ ನೀತಿ ಸಭೆಯಲ್ಲಿ ರೆಪೋ ದರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಊಹಿಸಿದ್ದಾರೆ. ರೂಪಾಯಿ ದೌರ್ಬಲ್ಯ, ಹೆಚ್ಚುತ್ತಿರುವ ಆಹಾರ ಹಣದುಬ್ಬರವನ್ನು ಪರಿಗಣಿಸಿ ಒಬ್ಬರು ಅರ್ಥಶಾಸ್ತ್ರಜ್ಞರು ಬರೋಬ್ಬರಿ 30-50 ಬಿಪಿಎಸ್ ರೆಪೋ ದರ ಹೆಚ್ಚಳದ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಾಗಿ ನೋಡಿದಾಗ ರೆಪೋ ದರ ಸ್ಥಿರತೆಗೆ ಅಧಿಕ ಪೋಲ್ ಲಭ್ಯವಾಗಿದೆ. ಆದರೆ 2024-25 ರ ಮೊದಲ ತ್ರೈಮಾಸಿಕದಲ್ಲಿ 25 ಬಿಪಿಎಸ್‌ನಿಂದ 100 ಬಿಪಿಎಸ್‌ ದರ ಕಡಿತ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

"ಜಾಗತಿಕ ಹಣದುಬ್ಬರ ಕೂಡ ಶೀಘ್ರದಲ್ಲೇ ಉತ್ತುಂಗಕ್ಕೇರುತ್ತದೆ. ನಮ್ಮಲ್ಲಿ ವಿತ್ತೀಯ ನೀತಿ ಈಗ ತಟಸ್ಥವಾಗಿದೆ. ಮುಂಬರುವ ತ್ರೈಮಾಸಿಕಗಳಲ್ಲಿ ಸಿಪಿಐ ಹಣದುಬ್ಬರವು ಶೇಕಡ 5-5.5 ರ ಆಸುಪಾಸಿಗೆ ಇಳಿಯಬಹುದು. ಜನವರಿ - ಮಾರ್ಚ್ 2024 ತ್ರೈಮಾಸಿಕದಲ್ಲಿ 25 ಬಿಪಿಎಸ್ ದರ ಕಡಿತದ ನಿರೀಕ್ಷೆಯಿದೆ," ಎಂದು ತಜ್ಞ ಅಭಿಷೇಕ್ ಉಪಾಧ್ಯಾಯ ಹೇಳಿದ್ದಾರೆ.

ಆಗಸ್ಟ್ 2023 ರಲ್ಲಿ, ಸಿಪಿಐ ಹಣದುಬ್ಬರವು ಶೇಕಡ 6.83ಕ್ಕೆ ತೀವ್ರವಾಗಿ ಇಳಿಕೆಯಾಗಿದೆ. ಇದು ಮಾರುಕಟ್ಟೆ ಊಹೆ ಮಾಡಿದಕ್ಕಿಂತ ಉತ್ತಮವಾಗಿದೆ. ಆಹಾರ ಹಣದುಬ್ಬರದಲ್ಲಿ ವಿಶೇಷವಾಗಿ ತರಕಾರಿ ಬೆಲೆಗಳ ಕಡಿತದಿಂದಾಗಿ ಹಣದುಬ್ಬರದಲ್ಲಿ ತೀವ್ರ ಇಳಿಕೆಯಾಗಿದೆ. ಕೋರ್ ಹಣದುಬ್ಬರವು ಶೇಕಡ 4.8 ರಷ್ಟಿದೆ. ಆದರೆ ತರಕಾರಿ ಬೆಲೆಯಲ್ಲಿ ತೀವ್ರ ಕುಸಿತವಾದರೂ ಕೂಡಾ ಧಾನ್ಯಗಳು ಮತ್ತು ಬೇಳೆಕಾಳುಗಳ ದರವು ಏರಿಕೆಯಾಗುವ ಸಾಧ್ಯತೆಯಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+