ಆರ್‌ಬಿಐ 5 ರೂ ನಾಣ್ಯದ ಚಲಾವಣೆಯನ್ನ ನಿಲ್ಲಿಸುತ್ತಾ? ಕಾರಣವೇನಿರಬಹುದು ಇಲ್ಲಿ ತಿಳಿಯಿರಿ

5 ರುಪಾಯಿ ನಾಣ್ಯಕ್ಕೆ ಸಂಬಂಧಿಸಿದಂತ ಸುದ್ದಿಯೊಂದು ಎಲ್ಲಾ ಕಡೆ ಹರಿದಾಡುತ್ತಿದೆ. ಬಹಳ ಹಿಂದಿನಿಂದಲೂ ಹಣಕಾಸಿನ ವ್ಯವಹಾರದಲ್ಲಿ ಚಿಲ್ಲರೆ ಸಮಸ್ಯೆಯನ್ನ ನೀಗಿಸುತ್ತಿದ್ದ 5 ರುಪಾಯಿ ನಾಣ್ಯವನ್ನ ರಿಸರ್ವ್​ ಬ್ಯಾಂಕ್ ಆಫ್ ಇಂಡಿಯಾ ನಿಷೇಧಿಸಿದೆ ಎಂಬ ಸುದ್ದಿ ಎಲ್ಲಾ ಕಡೆಗಳಲ್ಲಿಯೂ ಬಿತ್ತರವಾಗಿದೆ.

ಹಳೆಯ ದಪ್ಪವಾಗಿರುವ 5 ರುಪಾಯಿ ನಾಣ್ಯ ಚಲಾವಣೆಯನ್ನ ಆರ್.ಬಿ ಐ ಹಿಂಪಡೆದಿದೆ. ಕೇಂದ್ರ ಸರ್ಕಾರವೂ ಕೂಡ ಈ ಹಳೇ ನಾಣ್ಯಗಳ ತಯಾರಿಕೆಯನ್ನ ನಿಲ್ಲಿಸಿದೆ ಎಂಬ ಸುದ್ದಿ ಈಗ ಕೇಳಿಬರುತ್ತಿದೆ. ಈ ಬಗ್ಗೆ ಹಲವು ರಾಷ್ಟ್ರೀಯ ವಾಹಿನಿಗಳು ಸುದ್ದಿಯನ್ನ ಬಿತ್ತರಿಸಿವೆ.

ಆರ್‌ಬಿಐ 5 ರೂ ನಾಣ್ಯದ ಚಲಾವಣೆಯನ್ನ ನಿಲ್ಲಿಸುತ್ತಾ? ಏಕೆ ತಿಳಿಯಿರಿ

2 ರೀತಿಯ 5 ರೂಪಾಯಿ ನಾಣ್ಯಗಳು ಸದ್ಯ ಚಲಾವಣೆಯಲ್ಲಿದೆ. ಪಳಪಳ ಹೊಳೆಯುವ ಗೋಲ್ಡ್ ಕಾಯಿನ್, ಹೆಚ್ಚು ವ್ಯಾಸವಿರುವ ಅದೇ ಲೋಹಗಳಿಂದ ಮಾಡಿದ ಬೆಳ್ಳಿಯಂತೆ ಕಾಣುವ ಐದು ರುಪಾಯಿ ನಾಣ್ಯ. ಈ ರೀತಿಯ 2 ಬಗೆಯ ನಾಣ್ಯಗಳಲ್ಲಿ ದಪ್ಪನೆಯ ಐದು ರುಪಾಯಿ ಮುಖಬೆಲೆಯೆ ನಾಣ್ಯವನ್ನ ಆರ್​ಬಿಐ ಹಿಂಪಡೆದುಕೊಂಡಿದೆ ಎನ್ನಲಾಗುತ್ತಿದೆ. ಆದರೆ ರಿಸರ್ವ್​ ಬ್ಯಾಂಕ್ ನಿಂದ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ.

ಯಾವುದೇ ಚಲಾವಣೆಯಲ್ಲಿರುವ ನಾಣ್ಯಗಳು ಹಾಗೂ ನೋಟುಗಳನ್ನ ದಿಢೀರ್ ಎಂದು ಕೈ ಬಿಡಲು ಹಲವು ಕಾರಣಗಳಿರುತ್ತದೆ. ಒಂದು ನಾಣ್ಯವನ್ನೇನಾದರು ತಯಾರಿಸುತ್ತೇವೆ ಎಂದರೆ, ನಾಣ್ಯಕ್ಕೆ ಬಳಸುವ ಲೋಹವು ಆ ನಾಣ್ಯದ ಮೌಲ್ಯಕ್ಕಿಂತ ಹೆಚ್ಚಾಗುವಂತಿಲ್ಲ. ಇಂತಹ ಸಂದರ್ಭದಲ್ಲಿ ನಾಣ್ಯಗಳ ತಯಾರಿಕೆಗೆ ಅಧಿಕ ಬೆಲೆಯ ಲೋಹಗಳನ್ನ ಬಳಸಿದಾಗ, ಸರ್ಕಾರಕ್ಕೆ ಅರ್ಥಿಕ ಹೊಡೆತ ಬೀಳುತ್ತದೆ. ಹಾಗಾಗಿ ಹೆಚ್ಚು ದಪ್ಪದ, ತೂಕವುಳ್ಳ 5 ರುಪಾಯಿ ಮುಖಬೆಲೆಯ ನಾಣ್ಯವನ್ನ ಆರ್​ಬಿಐ ಹಿಂಪಡೆದಿದೆ ಎಂದ ವದಂತಿ ಈಗ ಎಲ್ಲಾ ಕಡೆಗಳಲ್ಲಿ ಬಿತ್ತರವಾಗುತ್ತಿದೆ.

ಇನ್ನೂ ಭಾರಿ ತೂಕ ಐದು ರುಪಾಯಿ ನಾಣ್ಯವನ್ನ ಕರಗಿಸಿ ಹತ್ತು ಸೂಜಿಗಳನ್ನ ಮಾಡಿ, ಒಂದಕ್ಕೆ ಎರಡು ರುಪಾಯಿಯಂತೆ ಮಾರಿದರೆ ಸರ್ಕಾರಕ್ಕೆ ಇಪ್ಪತ್ತು ರುಪಾಯಿ ಲಾಭವಾಗುತ್ತದೆ. ಆದರೆ ಕೇವಲ ಒಂದೇ ಒಂದು ಐದು ರುಪಾಯಿ ನಾಣ್ಯಕ್ಕೆ ದುಪ್ಪಟ್ಟು ಖರ್ಚಾದಾಗ, ಉತ್ಪಾಧನ ವೆಚ್ಚವೇ ಹೆಚ್ಚಾಗಿ ನಿಯಮಕ್ಕೆ ವಿರುದ್ಧವಾಗಿರುತ್ತದೆ ಎಂದು ಆರ್ಥಿಕ ತಜ್ಞರು ಅಭಿಪ್ರಯಾವನ್ನ ವ್ಯಕ್ತಪಡಸಿದ್ದಾರೆ. ಅಲ್ಲದೆ 5 ರೂಪಾಯಿ ನಾಣ್ಯಗಳಿಂದ ನಾಲ್ಕರಿಂದ ಐದು ಬ್ಲೇಡ್​ಗಳನ್ನ ಮಾಡಬಹುದು. ಕೆಲವು ಮಂದಿ ಈಗಾಗಲೇಐದು ರುಪಾಯಿ ನಾಣ್ಯಗಳಿಂದ ಬ್ಲೇಡ್​ಗಳನ್ನ ಮಾಡಿ ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ 5ರೂಪಾಯಿ ನಾಣ್ಯಗಳನ್ನು ಮುದ್ರಿಸುವುದನ್ನು ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ ನಿಲ್ಲಿಸಲು ಇದೇ ಕಾರಣ ಎನ್ನಲಾಗುತ್ತಿದೆ.

ಇನ್ನೂ ಮುಖ್ಯವಾಗಿ ಈ ಐದು ರುಪಾಯಿ ಮುಖಬೆಲೆಯ ನಾಣ್ಯಗಳನ್ನ ಕಾನೂನು ಬಾಹೀರವಾಗಿ ಬಾಂಗ್ಲಾದೇಶಕ್ಕೆ ಕಳ್ಳ ಸಾಗಾಣಿಕೆ ಮಾಡಲಾಗುತ್ತಿದೆ. ಈ ನಾಣ್ಯಗಳನ್ನ ಕರಗಿಸಿ, ಬೇರೆ-ಬೇರೆ ರೀತಿಯ ಉತ್ಪನ್ನಗಳನ್ನ ತಯಾರಿಸಿಕೊಂಡು ಒಂದು ನಾಣ್ಯದಿಂದ ದುಪ್ಪಟ್ಟು ಹಣ ಮಾಡಿಕೊಳ್ಳುತ್ತಾರೆ. ಈ ಎಲ್ಲಾ ಕಾಣಗಳಿಂದ ಆರ್​ಬಿಐ ಈ ನಾಣ್ಯ ಚಲಾವಣೆಯನ್ನ ನಿಲ್ಲಿಸಿದ್ದಾರೆ.

ಇನ್ನೂ ಹಿತ್ತಾಳೆ ಬಣ್ಣದ ನಾಣ್ಯ ಅತ್ಯಂತ ಆಕರ್ಷಕವಾಗಿದ್ದರೂ ಕೂಡ ಅದರ ತಯಾರಿಕ ವರಚ್ಚ ಕಡಿಮೆ ಇದೆ. ಹೀಗಾಗಿ ಈ ನಾಣ್ಯವನ್ನು ಕರಗಿಸಿ ಅನ್ಯ ಲಾಭದಾಯಕ ಉತ್ಪನ್ನಗಳನ್ನು ತಯಾರಿಸಲು ಸಾಧ್ಯವಿಲ್ಲ. ಹೀಗಾಗಿ ಹಳದಿ ಲೋದಸ ನಾಣ್ಯವನ್ನ ಚಲಾವಣೆಗೆ ಬಿಟ್ಟು ಸಿಲ್ವರ್ ಲೋಹವನ್ನ ಹಿಂಡೆಯಲಾಗುತ್ತಿದೆ.
ಇನ್ನೂ ನಮ್ಮ ಭಾರತದಲ್ಲಿ ಹಲವು ಬಾರಿ ಡಿ ಮಾನಿಟೈಸೇಶನ್ ಮಾಡಿದರು ಕೂಡ ಹಲವು ನಾಣ್ಯಗಳು ಚಲಾವನೆಯಲ್ಲಿವೆ. ಒಂದಿಷ್ಟು ಹಿಂದಿನಿಂದ ಇದ್ದರೆ ಇನ್ನೊಂದಿಷ್ಟು ಹೊಸದಾಗಿ ಚಲಾವಣೆಗೆ ತರಲಾಗಿದೆ. ಸದ್ಯ 1 ರೂ, 2 ರೂ, 5 ರೂ, 10 ರೂ, 20 ರೂ ನಾಣ್ಯಗಳು ಚಲಾವಣೆಯಲ್ಲಿವೆ. ಆದರೀಗ ಭಾರಿ ತೂಕದ ಬೆಳ್ಳಿಯ ಐದು ರುಪಾಯಿ ನಾಣ್ಯವನ್ನ ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್​ ಬ್ಯಾಂಕ್ ಹಿಂಪಡೆದಿದೆ ಎಂಬ ವದಂತಿ ಬಹಳ ದಿನಗಳಿಂದ ಜೋರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+