ಸಮಯ ಕಳೆದಂತೆ ತಂತ್ರಜ್ಞಾನದಲ್ಲಿ ಯಾವ ರೀತಿಯಲ್ಲಿ ಮಹತ್ತರ ಬದಲಾವಣೆಯಾಗುತ್ತಿದೆ ಎಂಬುದರ ಬಗ್ಗೆ ನಮಗೆ ಅರಿವಿದೆ. ಅದೇ ರೀತಿ ತಂತ್ರಜ್ಞಾನವು ಮಾನವನ ಸುಖಕರ ಬದುಕಿಗೆ ಯಾವ ರೀತಿಯ ನೆರವಾಗುತ್ತಿರುವುದು ಕೂಡ ತಿಳಿದಿದೆ. ಆದರೆ ಪ್ರತಿಯೊಂದು ಉತ್ತಮ ಸಂಗತಿಯನ್ನೂ ಮಾನವ ದುರುಪಯೋಗ ಪಡಿಸಿಕೊಳ್ಳುತ್ತಿರುವ ಸಂಗತಿ ಇಂದು ನಿನ್ನೆಯದಲ್ಲ. ಮಾನವನ ಒಳಿತಿಗೆ ಇರುವ ಆವಿಷ್ಕಾರಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರು ವಿಚಾರ ಇತ್ತೀಚಿಗಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.
ಇದಕ್ಕೆ ಹಲವು ಉದಾಹರಣೆಗಳನ್ನು ನೀಡಬಹುದಾದರೂ ಡೀಪ್ ಫೇಕ್ ಬಗ್ಗೆ ಸದ್ಯ ಸಾಕಷ್ಟು ಚರ್ಚೆಯಾಗುತ್ತಿದೆ. ಬಹುಭಾಷಾ ನಟಿ ರಶ್ಮಿಕಾ ಮಂದಣ್ಣರ ಡೀಪ್‌ಫೇಕ್ ವಿಡಿಯೋ ವೈರಲ್ ಆದ ಬಳಿಕ ಭಾರತೀಯರಿಗೆ ಡೀಪ್‌ಫೇಕ್‌ನ ಅನಾಹುತದ ಬಗ್ಗೆ ತಿಳಿದು ಬಂದಿತ್ತು. ಸದ್ಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ್ ದಾಸ್ ಅವರಿಗೆ ಕೂಡ ಡೀಪ್‌ಫೇಕ್ ವಿಡಿಯೋದ ಬಿಸಿ ತಟ್ಟಿದೆ.
ಆರ್ ಬಿಐ ಮುಖ್ಯಸ್ಥ ಶಕ್ತಿಕಾಂತ್ ದಾಸ್ ಅವರ ಡೀಪ್ ಫೇಕ್ ವಿಡಿಯೋ ಮೂಲಕ ದುಷ್ಕರ್ಮಿಗಳ ತಂಡವೊಂದು ಲಾಭ ಮಾಡಿಕೊಳ್ಳಲು ಯತ್ನಿಸುತ್ತಿರುವ ಆಘಾತಕಾರಿ ವಿಚಾರ ಬಯಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಉನ್ನತ ನಿರ್ವಹಣೆಯ ಮುಖ್ಯಸ್ಥರ ಹೆಸರಲ್ಲಿ ಡೀಪ್‌ಫೇಕ್ ವೀಡಿಯೊಗಳು ಹರಿದಾಡುತ್ತಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಆರ್ಥಿಕ ಸಲಹೆಯನ್ನು ನೀಡುವುದರ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಎಚ್ಚರಿಕೆ ನೀಡಿದ ಆರ್‌ಬಿಐ
ಆರ್‌ಬಿಐ ಗವರ್ನರ್ ಶಕ್ತಿಕಾಂತ್ ಅವರ ಡೀಪ್‌ಫೇಕ್ ವಿಡಿಯೋ ತಯಾರಿಸಿ, ಅದನ್ನು ದುಷ್ಕರ್ಮಿಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದು, ಈ ಬಗ್ಗೆ ಆರ್‌ಬಿಐ ಕೂಡ ನಾಗರಿಕರಿಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿದೆ. ಅಲ್ಲದೆ ಆರ್‌ಬಿಐ ಈ ಬಗ್ಗೆ ಹೇಳಿಕೆಯನ್ನು ಕೂಡ ಬಿಡುಗಡೆ ಮಾಡಿದ್ದು, ಎಚ್ಚರಿಕೆಯಿಂದ ಇರುವಂತೆ ತಿಳಿಸಿದೆ. ಕೆಲವು ಹೂಡಿಕೆ ಯೋಜನೆಗಳ ಪ್ರಾರಂಭ ಅಥವಾ ಬೆಂಬಲವನ್ನು ಹೇಳಿಕೊಳ್ಳುವ ಸಾಮಾಜಿಕ ಮಾಧ್ಯಮಗಳಲ್ಲಿ ಗವರ್ನರ್ (ಶಕ್ತಿಕಾಂತ ದಾಸ್) ಅವರ ನಕಲಿ ವೀಡಿಯೊಗಳನ್ನು ಪ್ರಸಾರ ಮಾಡುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ.
ತಾಂತ್ರಿಕ ಸಾಧನಗಳ ಬಳಕೆಯ ಮೂಲಕ ಇಂತಹ ಯೋಜನೆಗಳಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡಲು ಈ ಡೀಪ್ ಫೇಕ್ ವಿಡಿಯೊಗಳು ಜನರಿಗೆ ಸಲಹೆ ನೀಡಲು ಪ್ರಯತ್ನಿಸುತ್ತಿವೆ. ಆದರೆ ತನ್ನ ಅಧಿಕಾರಿಗಳು ಅಂತಹ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಅಥವಾ ಬೆಂಬಲಿಸುವುದಿಲ್ಲ ಮತ್ತು ಈ ವಿಡಿಯೊಗಳು ನಕಲಿ ಎಂದು ಸ್ಪಷ್ಟನೆ ನೀಡಿದೆ. ಅದರಲ್ಲೂ ಮುಖ್ಯವಾಗಿ ಆರ್‌ಬಿಐ ಅಂತಹ ಯಾವುದೇ ಹಣಕಾಸು ಹೂಡಿಕೆ ಸಲಹೆಯನ್ನು ನೀಡುವುದಿಲ್ಲ. ಆದ್ದರಿಂದ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಇಂತಹ ಡೀಪ್‌ಫೇಕ್ ವೀಡಿಯೊಗಳೊಂದಿಗೆ ತೊಡಗಿಸಿಕೊಳ್ಳುವ ಮತ್ತು ಅದಕ್ಕೆ ಬಲಿಯಾಗದಂತೆ ಸಾರ್ವಜನಿಕರಿಗೆ ಆರ್‌ಬಿಐ ಎಚ್ಚರಿಕೆ ನೀಡಿದೆ.
ಈ ವರ್ಷದ ಆರಂಭದಲ್ಲಿ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಹೂಡಿಕೆದಾರರು ನಕಲಿ ಅಥವಾ ಕೃತಕ ಬುದ್ಧಿಮತ್ತೆಗೆ ಸಂಚಿಗೆ ಬೀಳದಂತೆ ಎಚ್ಚರಿಕೆ ನೀಡಿತ್ತು. ಎನ್ಎಸ್ ಇ ಎಂಡಿ ಮತ್ತು ಸಿಇಒ ಆಶಿಶ್‌ಕುಮಾರ್ ಚೌಹಾಣ್ ಸ್ಟಾಕ್‌ಗಳನ್ನು ಶಿಫಾರಸು ಮಾಡುವ ಡೀಪ್ ಫೇಕ್ ನಕಲಿ ವೀಡಿಯೊಗಳನ್ನು ರಚಿಸಲಾಗಿದೆ. ದೊಡ್ಡ ಉದ್ಯಮಿಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ಹಲವಾರು ನಿದರ್ಶನಗಳಿವೆ. ಸ್ಟಾಕ್‌ಗಳನ್ನು ಖರೀದಿಸಲು ಶಿಫಾರಸು ಮಾಡಿ ಮತ್ತು ವ್ಯಾಪಾರ ಸಲಹೆಯನ್ನು ನೀಡುತ್ತಿವೆ. ಅಂತಹ ಎಲ್ಲಾ ವೀಡಿಯೊಗಳು ನಕಲಿ ಮತ್ತು ಕೃತಕ ಬುದ್ಧಿಮತ್ತೆಯಿಂದ ರಚಿಸಲ್ಪಟ್ಟವು ಎಂದು ಎನ್ ಎಸ್ ಇ ಹೇಳಿದೆ.
ಡೀಪ್‌ಫೇಕ್ ವಿಡಿಯೋದಲ್ಲಿ ಏನಿದೆ?
ಇನ್ನು ಹಲವಾರು ಸೆಲೆಬ್ರಿಟಿಗಳ ನಕಲಿ ವಿಡಿಯೋ ಮಾಡಿ, ಅದನ್ನು ದುಷ್ಕರ್ಮಿಗಳು ತಮ್ಮ ಲಾಭಕ್ಕೆ ತಕ್ಕಂತೆ ಸೃಷ್ಟಿಸುವುವ ಸಂಗತಿ ಈಗಾಗಲೇ ಹಲವು ಬಾರಿ ನಡೆದಿದೆ. ಸದ್ಯ ಆರ್‌ಬಿಐ ಮುಖ್ಯಸ್ಥ ಶಕ್ತಿಕಾಂತ್ ಅವರ ನಕಲಿ ವಿಡಿಯೋಗಳನ್ನು ಮಾಡಿ ಕೂಡ ದುಷ್ಕರ್ಮಿಗಳು ಲಾಭ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಈ ಡೀಪ್‌ಫೇಕ್ ವಿಡಿಯೋದಲ್ಲಿ , ಶಕ್ತಿಕಾಂತ್ ಅವರು ಕೆಲವು ಹೊಸ ಹೂಡಿಕೆ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಅಂಥ ಯೋಜನೆಗಳಲ್ಲಿ ಸಾರ್ವಜನಿಕರು ಕೂಡ ಹೂಡಿಕೆ ಮಾಡುವಂತೆ ಹೇಳಿದ್ದಾರೆ ಎಂಬ ನಕಲಿ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಡೀಪ್‌ಫೇಕ್ ವಿಡಿಯೋಗಳ ಬಗ್ಗೆ ಮಾಹಿತಿ ಇರದವರು ಇದನ್ನೇ ನಿಜವೆಂದು ನಂಬಿ, ಷೇರು ಮಾರುಕಟ್ಟೆಗಳ ಕಂಪೆನಿಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಹಣಕಾಸು ಸಂಬಂಧಿತ ಯಾವುದೇ ಹೂಡಿಕೆಗಳಿಗೆ ಆರ್‌ಬಿಐ ಸಲಹೆ ನೀಡುವುದಿಲ್ಲ. ಅಲ್ಲದೆ ಶಕ್ತಿಕಾಂತ್ ಅವರು ಯಾವುದೇ ಹೂಡಿಕೆಗೆ ಯೋಜನೆಗಳಿಗೆ ಬೆಂಬಲ ನೀಡಿಲ್ಲ. ನಾಗರಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
More From GoodReturns

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?



Click it and Unblock the Notifications