ಭಾರತದಲ್ಲಿ ಡಿಜಿಟಲ್ ವಹಿವಾಟುಗಳು ಅತ್ಯಂತ ವೇಗವಾಗಿ ಬೆಳೆಯುತ್ತಿವೆ. ಅದರಲ್ಲೂ ಇಂಟರ್ನೆಟ್ ಲಭ್ಯತೆಯ ಹೆಚ್ಚಳ ಮತ್ತು ನೋಟು ಬ್ಯಾನ್ , ಕೋವಿಡ್ ನಂತರ ಡಿಟಿಟಲ್ ಪಾವತಿಯಲ್ಲಿ ಹೊಸ ಮೈಲುಗಲ್ಲನ್ನು ಸ್ಥಾಪಿಸಿದೆ. ಡಿಜಿಟಲ್ ಪಾವತಿಯಲ್ಲಿ ದೇಶದಲ್ಲಿ ಆಗಿರುವ ಕ್ರಾಂತಿಕಾರ ಬದಲಾವಣೆ ಜಾಗತಿಕವಾಗಿ ಭಾರತವನ್ನು ಮುಂಚೂಣಿಯಲ್ಲಿ ನಿಲ್ಲಿಸಿರುವುದು ಮಾತ್ರವಲ್ಲ ದೇಶ ಸಾಧಿಸಿರುವ ನೈಪುಣ್ಯ ಮತ್ತು ಎಲ್ಲರನ್ನು ಒಳಗೊಂಡ ದಕ್ಷ ಹಣಕಾಸು ವ್ಯವಸ್ಥೆ ನಿರ್ಮಾಣದ ಮಾದರಿಯನ್ನು ಹಾಕಿಕೊಟ್ಟಿದೆ
ಆನ್‌ಲೈನ್ ಬ್ಯಾಂಕಿಂಗ್, ಯುಪಿಐ, ಡಿಜಿಟಲ್ ವಾಲೆಟ್‌ಗಳು ಇಂದು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿವೆ. ಆದರೆ ಈ ವೇಗದ ಬೆಳವಣಿಗೆಯೊಂದಿಗೆ ವಂಚನೆ ಮತ್ತು ತಪ್ಪುಗಳು ಮಾಡುವುದು, ಯಾರದ್ದೋ ಖಾತೆಗೆ ಬದಲಾಗಿ ಇನ್ಯಾರದ್ದೋ ಖಾತೆಗೆ ಹಣ ಹಾಕುವ ಸಾಧ್ಯತೆಯೂ ಹೆಚ್ಚಾಗಿದೆ. ತಪ್ಪಾದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಒಂದು ಸಮಸ್ಯೆಯಾದರೆ ಸೈಬರ್ ವಂಚನೆಗಳು ಪ್ರಮುಖ ವಂಚನೆಗಳಲ್ಲಿ ಒಂದು. ಈ ಸಮಸ್ಯೆಗಳನ್ನು ನಿವಾರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಒಂದು ಹೊಸ ಹೆಜ್ಜೆ ಇಟ್ಟಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ (ಆರ್‌ಟಿಜಿಎಸ್) ಮತ್ತು ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್ಫರ್ (ಎನ್‌ಇಎಫ್‌ಟಿ) ವ್ಯವಸ್ಥೆಗಳಿಗೆ ಒಂದು ಪ್ರಮುಖ ಬದಲಾವಣೆಯನ್ನು ತರಲು ಉದ್ದೇಶಿಸಿದೆ. ಇದರ ಪ್ರಕಾರ, ಹಣವನ್ನು ವರ್ಗಾಯಿಸುವಾಗ ಫಲಾನುಭವಿಗಳ ಹೆಸರನ್ನು ಪರಿಶೀಲಿಸುವ ಒಂದು ವೈಶಿಷ್ಟ್ಯವನ್ನು ಆರ್‌ಬಿಐ ಪರಿಚಯಿಸಲಿದೆ.
ಹೊಸ ನಿಯಮದ ಪ್ರಕಾರ, ನೀವು ಆರ್‌ಟಿಜಿಎಸ್ ಅಥವಾ ಎನ್‌ಇಎಫ್‌ಟಿ ಮೂಲಕ ಹಣ ವರ್ಗಾಯಿಸುವ ಮೊದಲು, ನೀವು ಹಣ ಕಳುಹಿಸುತ್ತಿರುವ ವ್ಯಕ್ತಿಯ ಹೆಸರು ನಿಖರವಾಗಿದೆಯೇ ಎಂದು ಪರಿಶೀಲಿಸಬಹುದು. ಇದು ತಪ್ಪಾದ ವಹಿವಾಟು ನಡೆಯುವ ಸಾಧ್ಯತೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಈ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಮತ್ತು ಇಎಂಪಿಎಸ್ (IMPS) ಈ ವೈಶಿಷ್ಟ್ಯವು ಈಗಾಗಲೇ ಲಭ್ಯವಿದೆ, ಅಲ್ಲಿ ಬಳಕೆದಾರರು ಪಾವತಿ ಮಾಡುವ ಮೊದಲು ಫಲಾನುಭವಿಯ ಹೆಸರನ್ನು ದೃಢೀಕರಿಸಬಹುದು. RBI ಈ ಪ್ರಯೋಜನವನ್ನು RTGS ಮತ್ತು NEFT ಬಳಕೆದಾರರಿಗೂ ವಿಸ್ತರಿಸಲು ಯೋಜಿಸಿದೆ.
ಆರ್‌ಬಿಐ ಪ್ರಕಾರ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಈ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ವಹಿಸಿದೆ. ಒಮ್ಮೆ ಈ ವೈಶಿಷ್ಟ್ಯ ರೆಡಿಯಾದರೆ , ಬ್ಯಾಂಕ್‌ಗಳು ತಮ್ಮ ಇಂಟರ್ನೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ವೈಶಿಷ್ಟ್ಯವನ್ನು ಅಳವಡಿಸಿಕೊಳ್ಳತ್ತದೆ. ವಹಿವಾಟುಗಳಿಗಾಗಿ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡುವ ಗ್ರಾಹಕರು ಸಹ ಈ ಸೌಲಭ್ಯಕ್ಕೆ ಪ್ರವೇಶವನ್ನು ಹೊಂದಿರುತ್ತಾರೆ.
ಇದು ಹೇಗೆ ಕೆಲಸ ಮಾಡುತ್ತದೆ ?
ನೀವು ಆರ್‌ಟಿಜಿಎಸ್(RTGS) ಅಥವಾ ಎನ್‌ಇಎಫ್‌ಟಿ(NEFT) ಮೂಲಕ ಹಣ ವರ್ಗಾವಣೆ ಮಾಡುವಾಗ, ನೀವು ಹಣ ಪಡೆಯುವವರ ಖಾತೆ ಸಂಖ್ಯೆ ಮತ್ತು ಬ್ಯಾಂಕ್ ಶಾಖೆಯ IFSC ಕೋಡ್ ಅನ್ನು ನಮೂದಿಸಬೇಕಾಗುವುದು ಸಾಮಾನ್ಯ. ಈ ಮಾಹಿತಿಯನ್ನು ನೀವು ಸರಿಯಾಗಿ ನಮೂದಿಸಿದರೆ, ವ್ಯವಸ್ಥೆ ಸ್ವಯಂಚಾಲಿತವಾಗಿ ಆ ವ್ಯಕ್ತಿಯ ಹೆಸರನ್ನು ತೋರಿಸುತ್ತದೆ. ವ್ಯವಹಾರವನ್ನು ಮುಂದುವರಿಸುವ ಮೊದಲು ವಿವರಗಳನ್ನು ದೃಢೀಕರಿಸಲು ಕಳುಹಿಸುವವರಿಗೆ ಅವಕಾಶ ನೀಡುತ್ತದೆ.
ಇದರಿಂದ ನೀವು ಹಣ ಸರಿಯಾದ ವ್ಯಕ್ತಿಗೆ ಹೋಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಬಹುದು. ಈ ವೈಶಿಷ್ಟ್ಯವು ತಪ್ಪಾದ ಖಾತೆ ಸಂಖ್ಯೆ ಅಥವಾ IFSC ಕೋಡ್‌ಗಳಿಂದ ಉಂಟಾಗುವ ತಪ್ಪುಗಳನ್ನು ತಡೆಯುತ್ತದೆ. ಇದರಿಂದ ವಂಚಕರು ತಪ್ಪಾದ ಖಾತೆಗೆ ಹಣ ವರ್ಗಾಯಿಸುವಂತೆ ಮಾಡಿ ಹಣವನ್ನು ಕದಿಯುವ ಸಾಧ್ಯತೆ ಕಡಿಮೆಯಾಗುತ್ತದೆ. ಇದು ಡಿಜಿಟಲ್ ಬ್ಯಾಂಕಿಂಗ್ ಅನ್ನು ಹೆಚ್ಚು ಸುರಕ್ಷಿತವಾಗಿಸುತ್ತದೆ ಮತ್ತು ಗ್ರಾಹಕರಲ್ಲಿ ಹೆಚ್ಚಿನ ವಿಶ್ವಾಸವನ್ನು ಮೂಡಿಸುತ್ತದೆ.
ಈ ವ್ಯವಸ್ಥೆಯನ್ನು ಜಾರಿಗೆ ತರಲು ಬ್ಯಾಂಕ್‌ಗಳಿಗೆ 2025ರ ಏಪ್ರಿಲ್ 1ರ ಡೆಡ್ ಲೈನ್ ನ್ನು ಆರ್‌ಬಿಐ ನೀಡಿದೆ. ಇದು RTGS ಮತ್ತು NEFT ವ್ಯವಸ್ಥೆಗಳನ್ನು ಬಳಸುವ ಎಲ್ಲಾ ನೇರ ಮತ್ತು ಉಪ-ಸದಸ್ಯ ಬ್ಯಾಂಕ್‌ಗಳನ್ನು ಒಳಗೊಂಡಿರುತ್ತದೆ.
Bankbazaar.com ನ ಸಿಇಒ ಆದಿಲ್ ಶೆಟ್ಟಿ ಅವರ ಪ್ರಕಾರ, ಆರ್‌ಬಿಐನ ಹೊಸ ನಿಯಮದಿಂದ ಗ್ರಾಹಕರಿಗೆ ಹೆಚ್ಚು ಸುರಕ್ಷಿತವಾಗಿ ಹಣ ವರ್ಗಾಯಿಸಲು ಸಾಧ್ಯವಾಗುತ್ತದೆ. ಈಗ ನೀವು ಆರ್‌ಟಿಜಿಎಸ್ ಅಥವಾ ಎನ್‌ಇಎಫ್‌ಟಿ ಮೂಲಕ ಹಣ ಕಳುಹಿಸುವಾಗ, ಹಣ ಪಡೆಯುವವರ ಹೆಸರನ್ನು ನೀವು ಪರಿಶೀಲಿಸಬಹುದು. ಇದರಿಂದ ತಪ್ಪಾದ ವ್ಯಕ್ತಿಗೆ ಹಣ ಹೋಗುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications