ದೀಪಾವಳಿಗೆ ಆರ್‌ಬಿಐನ 'ಸೀಕ್ರೆಟ್ ಮಿಷನ್': ಲಂಡನ್‌ನಿಂದ 102 ಟನ್ ಚಿನ್ನ ಭಾರತಕ್ಕೆ

ಭಾರತೀಯ ರಿಸರ್ವ್ ಬ್ಯಾಂಕ್ ( ಆರ್ ಬಿಐ) ಈ ದೀಪಾವಳಿಯಂದು ಲಂಡನ್‌ನ ಬ್ಯಾಂಕ್ ಆಫ್ ಇಂಗ್ಲೆಂಡ್‌ನಲ್ಲಿ ಸುರಕ್ಷಿತವಾಗಿ ಇರಿಸಲಾಗಿದ್ದ 102 ಟನ್ ಚಿನ್ನವನ್ನು ಭಾರತಕ್ಕೆ ತಂದಿದೆ. ವಿದೇಶದಲ್ಲಿದ್ದ ಈ ಚಿನ್ನವನ್ನು ದೇಶದೊಳಗಿನ ಸುರಕ್ಷಿತ ಖಜಾನೆಗೆ ಸ್ಥಳಾಂತರಿಸಲಾಗಿದೆ.

ಧನತ್ರಯೋದಶಿಯಂದು ಚಿನ್ನವನ್ನು ಖರೀದಿಸುವುದು ಭಾರತೀಯರಲ್ಲಿ ಪ್ರಮುಖವಾದ ಸಂಪ್ರದಾಯ. ಈ ಸಂದರ್ಭದಲ್ಲಿ ಆರ್‌ಬಿಐ ಕೂಡ ಭಾರತದ ಪ್ರತಿಯೊಬ್ಬ ನಾಗರಿಕನಂತೆ ಚಿನ್ನವನ್ನು ದೇಶಕ್ಕೆ ವಾಪಾಸು ತರಲು ಉತ್ಸುಕವಾಗಿತ್ತು.

ದೀಪಾವಳಿಗೆ ಆರ್‌ಬಿಐನ 'ಸೀಕ್ರೆಟ್ ಮಿಷನ್'

ಈ ಚಿನ್ನವನ್ನು ಸುರಕ್ಷಿತವಾಗಿ ವಾಪಾಸ್ ತರಲು ಆರ್‌ಬಿಐ ಅತ್ಯಂತ ವಿಶ್ವಾಸಾರ್ಹವಾದ ಯೋಜನೆಯನ್ನು ರೂಪಿಸಿತ್ತು. ಯಾಕೆಂದರೆ 102 ಟನ್ ಚಿನ್ನ ವಿದೇಶದಿಂದ ಭಾರತಕ್ಕೆ ತರುವುದು ಸುಲಭವಲ್ಲ. ಹೀಗಾಗಿ ಆರ್ ಬಿಐ ಅದಕ್ಕಾಗಿ ಸಾಗಣೆಯ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಇದು ಅತ್ಯಂತ ನಿಖರವಾದ ಯೋಜನೆಯನ್ನು ಹೊಂದಿತ್ತು. ಒಟ್ಟಾರೆ ನೋಡುವುದಾದರೆ ಭಾರತವು ಇಂಗ್ಲೆಂಡ್ ನಿಂದ ೨೧೪ಟನ್ ಚಿನ್ನವನ್ನು ತಂದಂತಾಗಿದೆ.

ಸ್ವದೇಶಕ್ಕೆ ಚಿನ್ನ ತರಲು ಕಾರಣಗಳೇನು?

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಲಂಡನ್‌ನಿಂದ ಚಿನ್ನವನ್ನು ಮರಳಿ ತಂದಿರುವುದರ ಹಿಂದೆ ಅನೇಕ ಕಾರಣಗಳಿದ್ದರೂ ಅವುಗಳಲ್ಲಿ ಒಂದು ಪ್ರಮುಖ ಕಾರಣವೆಂದರೆ ವಿದೇಶದಲ್ಲಿ ಸಂಭವಿಸಬಹುದಾದ ಅಪಾಯಗಳಿಂದ ದೇಶದ ಅಮೂಲ್ಯವಾದ ಮೀಸಲುಗಳನ್ನು ರಕ್ಷಿಸುವುದು. ಜಾಗತಿಕವಾಗಿ ಪ್ರಕ್ಷುಬ್ದ ಸ್ಥಿತಿ ಏರ್ಪಟ್ಟಿರುವಾಗ ಸ್ವದೇಶದಲೇ ಚಿನ್ನವನ್ನು ಇಟ್ಟುಕೊಳ್ಳುವುದು ಉತ್ತಮ ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.

ಆರ್‌ಬಿಐನ ಇತ್ತೀಚಿನ ವಿದೇಶಿ ವಿನಿಮಯ ಮೀಸಲು ವರದಿಯ ಪ್ರಕಾರ, ಸೆಪ್ಟೆಂಬರ್ ಅಂತ್ಯದ ವೇಳೆಗೆ ಭಾರತವು 855 ಟನ್‌ಗಳಷ್ಟು ಚಿನ್ನವನ್ನು ಹೊಂದಿದೆ, ಅರ್ಧಕ್ಕಿಂತ ಹೆಚ್ಚು ಅಥವಾ 510.5 ಟನ್‌ಗಳನ್ನು ಈಗ ದೇಶೀಯವಾಗಿ ಸಂಗ್ರಹಿಸಲಾಗಿದೆ. 2022ರ ಸೆಪ್ಟೆಂಬರ್'ನ ನಂತರ ಈವರೆಗೆ ಒಟ್ಟು 214 ಟನ್ ಚಿನ್ನವನ್ನು ಚಿನ್ನವನ್ನು ಭಾರತ ಇಂಗ್ಲೆಂಡ್ ನ ಬ್ಯಾಂಕ್ ನಿಂದ ಮರಳಿ ತಂದಿದೆ. ಮೇ 31 ರಂದು 100 ಟನ್ ಚಿನ್ನ ಸ್ವರ್ಣವನ್ನು ತರಲಾಗಿತ್ತು. ಇಷ್ಟೊಂದು ಪ್ರಮಾಣದ ಚಿನ್ನವನ್ನು ವಿದೇಶದಿಂದ ಭಾರತಕ್ಕೆ ತಂದಿದ್ದು 1991ರ ಬಳಿಕ ಇದೇ ಮೊದಲು.

1991 ರಲ್ಲಿ, ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದ ಚಂದ್ರಶೇಖರ್ ನೇತೃತ್ವದ ಸರ್ಕಾರ ಹಣವನ್ನು ಸಂಗ್ರಹಿಸಲು ಚಿನ್ನವನ್ನುಅಡವು ಇಟ್ಟಿತ್ತು. ಜುಲೈ 4 ಮತ್ತು 18 ರ ನಡುವೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಜಪಾನ್‌ನಲ್ಲಿ 46.91 ಟನ್ ಚಿನ್ನವನ್ನು ಒತ್ತೆ ಇಟ್ಟು, $400 ಮಿಲಿಯನ್ ಸಾಲ ಪಡೆದುಕೊಂಡಿತ್ತು. ಸುಮಾರು 15 ವರ್ಷಗಳ ಹಿಂದೆ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಸರ್ಕಾರದ ಅಡಿಯಲ್ಲಿ ಆರ್‌ಬಿಐ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) 200 ಟನ್ ಚಿನ್ನವನ್ನು ಖರೀದಿಸಿತು.

RBI ತನ್ನ 'ರಹಸ್ಯ ಮಿಷನ್' ನ್ನು ರೂಪಿಸಿದ್ದು ಹೇಗೆ?

ಆರ್‌ಬಿಐ ಲಂಡನ್‌ನಿಂದ ಭಾರತಕ್ಕೆ ಚಿನ್ನವನ್ನು ಸಾಗಿಸುವ ಕಾರ್ಯಾಚರಣೆ ಅಸಮಾನ್ಯ ರೀತಿಯಲ್ಲಿರುತ್ತದೆ. ದೊಡ್ಡ ಪ್ರಮಾಣದ ಚಿನ್ನದ ವರ್ಗಾವಣೆಯು ಹಲವಾರು ಸವಾಲುಗಳನ್ನು ಹೊಂದಿರುತ್ತದೆ. ಅದರಲ್ಲಿ ಚಿನ್ನದ ವರ್ಗಾವಣೆಯ ಮಾಹಿತಿಯ ಬಗ್ಗೆ ಯಾವುದೇ ಮಾಹಿತಿ ಸೋರಿಕೆಯಾಗದಂತೆ ಕಾಪಾಡಿಕೊಳ್ಳುವುದು ಪ್ರಮುಖ ವಿಚಾರವಾಗಿದೆ.

ಯಾವುದೇ ಮಾಹಿತಿ ಸೋರಿಕೆಯಾಗದಂತೆ ಎಲ್ಲಾ ಕಾರ್ಯಾಚರಣೆಗಳನ್ನು ಗುಪ್ತವಾಗಿ ನಡೆಸಲಾಗಿದೆ. ಚಿನ್ನವನ್ನು ಸಾಗಿಸಲು ವಿಶೇಷ ವಿಮಾನಗಳನ್ನು ಬಳಸಿಕೊಂಡು ಸಾಗಾಟ ಮಾಡಿದೆ. ಈ ವಿಮಾನಗಳು ಹೆಚ್ಚಿನ ಭದ್ರತೆಯೊಂದಿಗೆ ಸಜ್ಜಿತವಾಗಿರುತ್ತವೆ. ಚಿನ್ನದ ಗಟ್ಟಿಗಳ ಸಾಗಣೆಗೆ ಚಿನ್ನದ ಸುಗಮ ಚಲನೆಗಾಗಿ ನಿರ್ದಿಷ್ಟ ತೆರಿಗೆ ಶುಲ್ಕಗಳಿಂದ ವಿನಾಯಿತಿಗಳ ಅಗತ್ಯವಿದೆ.

ಈ ಎಲ್ಲಾ ವಿಚಾರಗಳನ್ನು ಪಕ್ಕಾ ಮಾಡಿಕೊಂಡು ದೀಪಾವಳಿಗೆ RBI ಚಿನ್ನವನ್ನು ಸ್ವದೇಶಕ್ಕೆ ತಂದಿದೆ. ಇನ್ನೊಂದೆಡೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್ ಬಿಐ ಅಧಿಕಾರಿಗಳು ಈಗಾಗಲೇ ಭಾರತ ವಿದೇಶದಲ್ಲಿಟ್ಟ ಚಿನ್ನ ಭಾರತಕ್ಕೆ ವಾಪಸ್ ತಂದಿದೆ. ಹೀಗಾಗಿ ಈ ವರ್ಷ ಮತ್ತೆ ಯಾವುದೇ ಹೆಚ್ಚುವರಿ ದೊಡ್ಡ ಪ್ರಮಾಣದ ಚಿನ್ನವನ್ನು ಭಾರತಕ್ಕೆ ತರಲು ಯಾವುದೇ ಯೋಜನೆ ಹಾಕಿಕೊಂಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+