ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದ ಮೆರವಣಿಗೆಯಲ್ಲಿ ಕಾಲ್ತುಳಿತದಲ್ಲಿ 11 ಮಂದಿ ಸಾವನಪ್ಪಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಮೃತ ಕುಟಂಬಗಳಿಗೆ ಅಧಿಕೃತವಾಗಿ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ಗಾಯಾಳುಗಳಿಗೆ 'ಆರ್‌ಸಿಬಿ ಕೇರ್ಸ್' ನಿಧಿ ಪ್ರಾರಂಭಿಸಿದೆ. ಜೂನ್ 4 ರಂದು ಸಂಜೆ ಬೆಂಗಳೂರಿನಲ್ಲಿ ಆರ್‌ಸಿಬಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಡೆದ ಈ ದುರಂತ ಇಡೀ ದೇಶವನ್ನೇ ದುಖಿಃತಗೊಳಿಸಿದೆ. ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಈಗಾಗಲೇ ಸಿಎಂ ಸಿದ್ದರಾಮಯ್ಯ ತಲಾ 10 ಲಕ್ಷ ರೂ. ಘೋಷಣೆ ಮಾಡಿತ್ತು. ಇದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ (RCB Franchise) ಆಡಳಿತ ಮಂಡಳಿ ತಲಾ 10 ಲಕ್ಷ ರೂ. ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ತಲಾ 5 ಲಕ್ಷ ರೂ. ಪರಿಹಾರ ಘೋಷಣೆಯನ್ನು ಮಾಡಿದೆ.ಒಟ್ಟು ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ಸಿಗಲಿದೆ. ಜೊತೆಗೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಚಿಕಿತ್ಸಾ ವೆಚ್ಚವನ್ನು ನೀಡುವುದಾಗಿ ಹೇಳಿದೆ.

ಗಾಯಗೊಂಡ ಅಭಿಮಾನಿಗಳಿಗೆ 'ಆರ್‌ಸಿಬಿ ಕೇರ್ಸ್' ನಿಧಿ ಘೋಷಣೆ ಪರಿಹಾರದ ಜೊತೆಗೆ, ಆರ್‌ಸಿಬಿ 'ಆರ್‌ಸಿಬಿ ಕೇರ್ಸ್' ಎಂಬ ವಿಶೇಷ ಪರಿಹಾರ ನಿಧಿಯನ್ನು ಕೂಡ ಆರಂಭಿಸಿದೆ. ಈ ನಿಧಿಯು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದ ಸಂದರ್ಭದಲ್ಲಿ ಗಾಯಗೊಂಡ ಅಭಿಮಾನಿಗಳಿಗೆ ಸಹಾಯ ಮಾಡುತ್ತದೆ. ಈ ನಿಧಿಯು ದೀರ್ಘಕಾಲದವರಗೆ ಬೆಂಬಲವನ್ನು ನೀಡುತ್ತದೆ ಎಂದು ಆರ್‌ಸಿಬಿ ಫ್ರಾಂಚೈಸಿ ಹೇಳಿಯನ್ನು ನೀಡಿದೆ.
ಆರ್‌ಸಿಬಿ ವಿಜಯೋತ್ಸವದಲ್ಲಿ ಆಗಿದ್ಧೇನು..?
ಐಪಿಎಲ್ 18ನೇ ಸೀಸನ್‌ನಲ್ಲಿ ಆರ್‌ಸಿಬಿ ಐಪಿಎಲ್ ಟ್ರೋಫಿ ಗೆಲುವು ಮೂಲಕ 17 ವರ್ಷದ ಕನಸನ್ನು ನನಸು ಮಾಡಿತ್ತು. ಇದನ್ನು ಸಂಭ್ರದಲದಲಿ ಆಚರಣೆ ಮಾಡಲು ಜೂನ್ 4 ರಂದು ಆರ್‌ಸಿಬಿ ವಿಜಯೋತ್ಸವ ಮೆರವಣಿಗೆಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಆದರೆ ಅಲ್ಲಿ ನಡೆದಿದ್ದೇ ಬೇರೆ.
ಅಂದು ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಲಕ್ಷಾಂತರ ಆರ್‌ಸಿಬಿ ಅಭಿಮಾನಿಗಳು ಮತ್ತು ಬೆಂಬಲಿಗರು ದಂಡು ಇತ್ತು. ಸ್ಥಳೀಯ ಭದ್ರತೆ ಮತ್ತು ಮೂಲಸೌಕರ್ಯಗಳಿಗೆ ಇದನ್ನು ನಿಭಾಯಿಸಲು ತುಂಬಾ ಕಷ್ಟವಾಗಿತ್ತು. ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತವು ಕಾರ್ಯಕ್ರಮದ ಸುರಕ್ಷತೆ ಮತ್ತು ಜನಸಂದಣಿ ನಿಯಂತ್ರಣದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹತ್ತಿರದ ಮೆಟ್ರೋ ನಿಲ್ದಾಣಗಳನ್ನು ಮುಚ್ಚುವುದು ಅವ್ಯವಸ್ಥೆಗೆ ಕಾರಣವಾಗಿದೆ ಎಂದು ಸೂಚಿಸುವ ಕೆಲವು ವರದಿಗಳು ಸಹ ಆಗಿದ್ದೇವೆ. ಈ ದುರಂತವು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು ಮತ್ತು ಬೆಂಗಳೂರಿನಲ್ಲಿ ದೊಡ್ಡ ಸಾರ್ವಜನಿಕ ಸಭೆಗಳಿಗೆ ಕಠಿಣ ಸುರಕ್ಷತಾ ಪ್ರೋಟೋಕಾಲ್‌ಗಳ ಬೇಡಿಕೆಗಳಿಗೆ ಕಾರಣವಾಯಿತು ಎಂದು ಕೂಡ ಹೇಳಿದ್ಧಾರೆ.
ಯಾವುದೇ ಪೂರ್ವಯೋಚಿತ ಯೋಜನೆ ಇಲ್ಲದೇ ಕಾರ್ಯಕ್ರವನ್ನು ಆಯೋಜನೆಯನ್ನು ಮಾಡಬಾರದಿತ್ತು ಎಂದು ಕೂಡ ಸರ್ಕಾರಕ್ಕೆ ಟೀಕೆಯನ್ನು ಸಹ ಮಾಡಿದ್ದಾರೆ. ಇದರ ಜೊತೆಗೆ ಪೊಲೀಸ್ ಪಡೆ ಜನಸಂಖ್ಯೆಯನ್ನು ನಿರ್ವಹಣೆ ಮಾಡಲು ವಿಫಲವಾಗಿತ್ತು. ಇನ್ನೂ ಹೆಚ್ಚಿನ ಕ್ರಮಗಳನ್ನು ತಗೆದುಕೊಂಡಿದ್ದರೆ ಹನ್ನೋಂದು ಮಂದಿಯ ಜೀವ ಉಳಿಯುತ್ತಿತ್ತು.
ಮೃತರ ಕುಟುಂಬಕ್ಕೆ ಘೋಷಿಸಿರುವ ಪರಿಹಾರಗಳೇನು?
ಸಿಎಂ ಸಿದ್ದರಾಮಯ್ಯ ಅವರು ಘಟನೆಯ ತನಿಖೆಗೆ ಆದೇಶಿಸಿದ್ದಾರೆ ಮತ್ತು ಆರ್‌ಸಿಬಿ ಘೋಷಿಸಿದ ಪರಿಹಾರದ ಜೊತೆಗೆ ಸರ್ಕಾರಿ ಪರಿಹಾರವನ್ನು ಭರವಸೆಯನ್ನು ಸಹ ನೀಡಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರವನ್ನು ಸರ್ಕಾರ ನೀಡುವುದಾಗಿ ಘೋಷಣೆಯನ್ನು ಮಾಡಿದೆ. ಗಾಯಾಳುಗಳಿಗೆ ಕರ್ನಾಟಕ ಸರ್ಕಾರ ಉಚಿತ ವೈದ್ಯಕೀಯ ಆರೈಕೆಯನ್ನು ಸಹ ನೀಡುತ್ತದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಕೂಡ ಮೃತ ಕುಟುಂಬಕ್ಕೆ 5 ಲಕ್ಷ ರೂ.ಗಳನ್ನು ನೀಡುವುದಾಗಿ ಹೇಳಿಕೆಯನ್ನು ನೀಡಿದೆ.


Click it and Unblock the Notifications