ಐಪಿಎಲ್ ಜ್ವರ ಶುರು. ಮಿಲಿಯನ್ ಡಾಲರ್ ಟೂರ್ನಿ ಆರಂಭಕ್ಕಾಗಿ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಹೌದು, IPL 2025ರ 18ನೇ ಆವೃತ್ತಿಯಗೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಕ್ರಿಕೆಟ್ ಅಭಿಮಾನಿಗಳಿಗೆ ಐಪಿಎಲ್ ಜಾತ್ರೆ ಶುರುವಾಗಲಿದೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ತಮ್ಮ ತವರಿನ ಪಂದ್ಯಗಳಿಗೆ ಟಿಕೆಟ್‌ಗಳ ಮಾರಾಟವನ್ನು ಪ್ರಾರಂಭಿಸಿದೆ. ಆರ್‌ಸಿಬಿ ತಂಡದ ತವರಿನ ಪಂದ್ಯಗಳ ಟಿಕೆಟ್ ಮಾರಾಟವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಧವಾರ ಆರಂಭಿಸಿದೆ. ವಿಪರ್ಯಾಸವೆಂದರೆ, ಈ ಬಾರಿಯೂ ಆರ್‌ಸಿಬಿ ಪಂದ್ಯಗಳ ಟಿಕೆಟ್ ದರ ದುಬಾರಿಯಾಲಿದೆ.
ಹೌದು ಪ್ರತಿವರ್ಷದಂತೆ ಬೆಂಗಳೂರಿನಲ್ಲಿ (Bengaluru) ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ (RCB) ಕ್ರಿಕೆಟ್ ಪಂದ್ಯಗಳ ಟಿಕೆಟ್ ದರ ದುಬಾರಿಯಾಗಿದ್ದು ಟಿಕೆಟ್‌ದರವನ್ನು ಮಾಡುವಂತೆ ಅಗ್ರಹ ಸಹ ಕೇಳಿ ಬಂದಿದೆ.ಆದರೂ ಕೂಡ ಟಿಕೆಟ್ ದರ ಮಾತ್ರ ಕಡಿಮೆಯಾಗಿಲ್ಲ. ಇನ್ನೂ ಸಾಮಾನ್ಯ ಕ್ರಿಕೆಟ್ ಅಭಿಮಾನಿಗಳಿಗೆ ಕೈಗೆಟುಕದ ರೀತಿಯಲ್ಲಿ ಟಿಕೆಟ್ ದರ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ದರ ಕಡಿಮೆ ಮಾಡುವಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧ್ಯಕ್ಷ ಪ್ರಥಮೇಶ್ ಮಿಶ್ರಾಗೆ ಅವರಿಗೆ ಕನ್ನಡ ಚಳುವಳಿ ಕೇಂದ್ರ ಸಮಿತಿಯಿಂದ ಪತ್ರ ಸಹ ಬರೆಯಲಾಗಿದೆ.

RCB ಟಿಕೆಟ್ ಎಲ್ಲಿ ಖರೀದಿಸಬೇಕು?
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆರಂಭಿಕ ಪಂದ್ಯದ ಟಿಕೆಟ್‌ಗಳು ಬೇಗನೆ ಮಾರಾಟವಾಗಿವೆ. ಪಂದ್ಯವನ್ನು ನೇರಪ್ರಸಾರ ವೀಕ್ಷಿಸಲು ಉತ್ಸುಕರಾಗಿರುವ RCB ಅಭಿಮಾನಿಗಳು ಅಧಿಕೃತ RCB ವೆಬ್‌ಸೈಟ್ ಅಥವಾ BookMyShow ಮೂಲಕ ತಮ್ಮ ಟಿಕೆಟ್‌ಗಳನ್ನು ಖರೀದಿಸಬಹುದು.ಈ ಟಿಕೆಟ್‌ಗಳ ಬೆಲೆಗಳು ಕನಿಷ್ಠ 2,300 ರೂ.ಗಳಿಂದ ಪ್ರಾರಂಭವಾಗಿ 43,000 ರೂ.ಗಳವರೆಗೆ ಇರುತ್ತದೆ.
RCB ಟಿಕೆಟ್ ಬುಕಿಂಗ್ ಮಾಡುವ ವಿಧಾನ
- RCB ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಟಿಕೆಟ್ ವಿಭಾಗಕ್ಕೆ ನ್ಯಾವಿಗೇಟ್ ಮಾಡಬೇಕಾಗುತ್ತದೆ.
- ಪಂದ್ಯವನ್ನು ಆಯ್ಕೆಮಾಡಿ: ನೀವು ನೋಡಲು ಬಯಸುವ ಪಂದ್ಯವನ್ನು ಆರಿಸಿ ಮತ್ತು "ಟಿಕೆಟ್‌ಗಳನ್ನು ಖರೀದಿಸಿ" ಮೇಲೆ ಕ್ಲಿಕ್ ಮಾಡಿ.
- ಆಸನಗಳು ಮತ್ತು ಟಿಕೆಟ್‌ಗಳ ಸಂಖ್ಯೆಯನ್ನು ಆಯ್ಕೆಮಾಡಿ: ನಿಮ್ಮ ಆದ್ಯತೆಯ ಸೀಟುಗಳನ್ನು ಆರಿಸಿ ಮತ್ತು ನೀವು ಖರೀದಿಸಲು ಬಯಸುವ ಟಿಕೆಟ್‌ಗಳ ಸಂಖ್ಯೆಯನ್ನು ಖಚಿತಪಡಿಸಿ
- ವೈಯಕ್ತಿಕ ವಿವರಗಳನ್ನು ನಮೂದಿಸಿ: ನಿಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ಮತ್ತು ಪಾವತಿಗೆ ಮುಂದುವರಿಯಿರಿ.
- ಪಾವತಿ ಮಾಡಿ: ನೀವು ಯುಪಿಐನ ಯಾವುದೇ ಆ್ಯಪ್ ಪಾವತಿ ವಿಧಾನವನ್ನು ಬಳಸಿಕೊಂಡು ನಿಮ್ಮ ಟಿಕೆಟ್‌ಗಳಿಗೆ ಪಾವತಿಸಿ.
- M-ಟಿಕೆಟ್‌ಗಳನ್ನು ಪ್ರವೇಶಿಸಿ: RCB ವೆಬ್‌ಸೈಟ್‌ನಲ್ಲಿ ನಿಮ್ಮ ಖಾತೆಯ "ಆರ್ಡರ್‌ಗಳು" ವಿಭಾಗದ ಅಡಿಯಲ್ಲಿ ನಿಮ್ಮ ಮೊಬೈಲ್ ಟಿಕೆಟ್‌ಗಳನ್ನು ಪ್ರವೇಶಿಸಬಹುದು.
RCB ಟಿಕೆಟ್ ಬೆಲೆ ಎಷ್ಟಿದೆ?
ಕೆಐಎ ವೈರ್‌ಗಳು ಮತ್ತು ಕೇಬಲ್‌ಗಳು ಎ ಸ್ಟ್ಯಾಂಡ್: 2,300 ರೂ.
ಬೋಟ್ ಸಿ ಸ್ಟ್ಯಾಂಡ್ : 3,300
ಪೂಮಾ ಬಿ ಸ್ಟ್ಯಾಂಡ್ : 3,300
ಟಿಕೆಟಿ ಜಿಟಿ ಅನೆಕ್ಸ್ : 4,000 ರೂ.
ಕತಾರ್ ಏರ್‌ವೇಸ್ ಜಾವಗಲ್ ಶ್ರೀನಾಥ್ ಸ್ಟ್ಯಾಂಡ್: 10,000 ರೂ.
ಬಿರ್ಲಾ ಎಸ್ಟೇಟ್ ಬಿಎಸ್ ಚಂದ್ರಶೇಖರ್ ಸ್ಟ್ಯಾಂಡ್ : 15,000 ರೂ
ಬೆಂಗಳೂರಿನಲ್ಲಿ ಯಾವೆಲ್ಲಾ ದಿನಗಳಲ್ಲಿ ಪಂದ್ಯ ಇರಲಿದೆ?
RCB vs GT: ಏಪ್ರಿಲ್ 2
RCB vs DC: ಏಪ್ರಿಲ್ 10
RCB vs PBKS: ಏಪ್ರಿಲ್ 18
RCB vs RR: ಏಪ್ರಿಲ್ 24
RCB vs CSK: ಮೇ 3
RCB vs SRH: ಮೇ 13
RCB vs KKR: ಮೇ 17
ಆರ್‌ಸಿಬಿ ತಂಡದಲ್ಲಿ ಯಾರೆಲ್ಲಾ ಆಟಗಾರು ಇದ್ದಾರೆ?
ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಲಿಯಾಮ್ ಲಿವಿಂಗ್‌ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹೇಜಲ್‌ವುಡ್, ರಸಿಕ್ ದಾರ್, ಸುಯಾಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ನುವಾನ್ ತುಷಾರ, ಮನೋಜ್ ಭಂಡಗೆ, ಜಾಕೋಬ್ ಬೆಥೆಲ್, ಸ್ವಸ್ತಿಕ್ ಚಿಕಾರ, ಲುಂಗಿ ಎನ್‌ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಠಿ, ಯಶ್ ದಯಾಳ್
ಆರ್‌ಸಿಬಿ ಈ ಸಲನಾದ್ರೂ ಕಪ್ ಗೆಲ್ಲುತ್ತಾ?
ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್‌ನಲ್ಲಿ ಕಳೆದ 17 ಸೀಸನ್‌ಗಳಲ್ಲಿ ಆಡುವಾಡುತ್ತಲೇ ಬಂದಿದೆ ಪೈನಲ್‌ಗೆ ತಲುಪಿದರೂ ಐಪಿಎಲ್ ಕಪ್ ಮಾತ್ರ ಕನಸಗಿಯೇ ಉಳಿದಿದೆ. ಆರ್ ಸಿಬಿ ಇದುವರೆಗೂ ಮೂರು ಬಾರಿ ಫೈನಲ್ ಪ್ರವೇಶಿಸಿ ಸೈ ಎನಿಸಿಕೊಂಡಿದೆ. ಇದೀಗ 18ನೇ ಅವೃತ್ತಿಯಲ್ಲದರೂ ಕಪ್ ಗೆಲುತ್ತಾ ಎಂಬುವುದನ್ನು ಕಾದುನೋಡಬೇಕಿದೆ. ಸೋತರೂ ಗೆದ್ದರೂ ಆರ್‌ಸಿಬಿಗೆ ಇರುವ ಕ್ರೇಜ್ ಮಾತ್ರ ಕಡಿಮೆಯಾಗುವುದೇ ಇಲ್ಲ..


Click it and Unblock the Notifications