ಐಪಿಎಲ್ 2025ರ ವಿಜಯೋತ್ಸವವನ್ನು ಆಚರಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ (ಆರ್‌ಸಿಬಿ) ಯೋಜಿಸಿದ್ದ ಮುಕ್ತ ಬಸ್ ಪರೇಡ್ ಅನ್ನು ಬೆಂಗಳೂರಿನಲ್ಲಿ ಭಾರೀ ಸಂಚಾರ ದಟ್ಟಣೆಯಿಂದಾಗಿ ರದ್ದು ಮಾಡಲಾಗಿದೆ. ಪಂಜಾಬ್ ವಿರುದ್ಧ 6 ರನ್‌ಗಳ ಭರ್ಜರಿ ಜಯಗಳಿಸಿದ ನಂತರ ಆರ್‌ಸಿಬಿ ವಿಜಯಯಾತ್ರೆಯ ಪರೇಡ್ ಘೋಷಿಸಿತ್ತು. ಆರ್‌ಸಿಬಿ ತಂಡವನ್ನು ರಾಜ್ಯ ಸರ್ಕಾರದ ವತಿಯಿಂದ ಸನ್ಮಾನಿಸಲಾಗುವುದು. ಪಾಸ್‌ಗಳನ್ನು ಹೊಂದಿರುವವರಿಗೆ ಮಾತ್ರ ಸ್ಥಳಕ್ಕೆ ಪ್ರವೇಶಕ್ಕೆ ಅವಕಾಶವಿರುತ್ತದೆ.
ಹೌದು, ಆರ್‌ಸಿಬಿ 17 ವರ್ಷಗಳ ಕನಸನ್ನು ಮಂಗಳವಾರ ರಾತ್ರಿ ಅಹಮದಾಬಾದ್‌ನಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧ ಆರು ರನ್‌ಗಳ ಭರ್ಜರಿ ಜಯಗಳಿಸುವ ಮೂಲಕ ನನಸು ಮಾಡಿಕೊಂಡಿತ್ತು. ನಂತರ ಆರ್‌ಸಿಬಿ ವಿಜಯ ಪರೇಡ್ ಅನ್ನು ಘೋಷಣೆಯನ್ನು ಮಾಡಿತ್ತು.ಆದರೆ ಈಗಾಗಲೇ ಐಪಿಎಲ್ ಕಪ್ ಹೊತ್ತು ಬೆಂಗಳೂರಿಗೆ ಆರ್‌ಸಿಬಿ ಆಟಗಾರ ತಂಡ ಆಗಮಿಸಿದೆ.ಇದರ ನಡುವೆ ರಾಜ್ಯ ಸರ್ಕಾರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿ ಮುಕ್ತ ಬಸ್ ಪರೇಡ್ ರದ್ದು ಮಾಡಿದೆ.

ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 5 ರಿಂದ ಸಂಜೆ 6 ರವರೆಗೆ ಆರ್‌ಸಿಬಿ ತಂಡವನ್ನು ಸನ್ಮಾನಿಸಲಾಗುವುದು. ಮಾನ್ಯ ಪಾಸ್‌ಗಳನ್ನು ಹೊಂದಿರುವವರಿಗೆ ಮಾತ್ರ ಸ್ಥಳಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ.
RCB ವಿಜಯೋತ್ಸವ: ಟಿಕೆಟ್, ಪಾಸ್ ಇದ್ದವರಿಗೆ ಮಾತ್ರ ಎಂಟ್ರಿ
IPL 2025 ಚಾಂಪಿಯನ್ ಟ್ರೋಫಿ ಮುಡಿಗೇರಿಸಿಕೊಂಡಿರುವ RCB ವಿಜಯೋತ್ಸವ ಅಭಿನಂದನಾ ಸಮಾರಂಭ ಸಂಜೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಭಾಗವಹಿಸಲು ಅಧಿಕೃತ ಟಿಕೆಟ್ ಮತ್ತು ಪಾಸ್ ಹೊಂದಿದವರಿಗೆ ಮಾತ್ರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವಕಾಶವನ್ನು ಮಾಡಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದತ್ತ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಮಾಧ್ಯಮಗಳಿಗೆ ಈ ಹೇಳಿಕೆ ಬಿಡುಗಡೆ ಈ ರದ್ದು ಮಾಡಿರುವ ಮಾಹಿತಿಯನ್ನು ತಿಳಿಸಿದ್ದಾರೆ.
ವಿಕ್ಟರಿ ಸಮಾರಂಭಕ್ಕೆ ಆನ್‌ಲೈನ್ ಟಿಕೆಟ್ ಬಿಡುಗಡೆ
17 ವರ್ಷದ ಬಳಿಕ ಐಪಿಎಲ್ ಟ್ರೋಫಿ ಗೆದ್ದಿರುವ ಆರ್‌ಸಿಬಿಯಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 6 ರಿಂದ 8 ಗಂಟೆವರೆಗೆ ವಿಕ್ಟರಿ ಸಮಾರಂಭವನ್ನು ಆಯೋಜಿಸಲಾಗಿದೆ.ಈ ಸಮಾರಂಭಕ್ಕೆ ತೆರಳುವ ಅಭಿಮಾನಿಗಳಿಗೆ ಆನ್ ಲೈನ್ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಜಿನಿ ಆಪ್ ನಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದಾಗಿದೆ. ಈ ಟಿಕೆಟ್‌ಗಳು ಇರುವವರಿಗೆ ಮಾತ್ರ ಆರ್ ಸಿಬಿ ವಿಕ್ಟರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಟಿಕೆಟ್ ಇಲ್ಲದಿದ್ದರೇ ಸ್ಟೇಡಿಯಂ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.
ಟ್ರೋಲ್‌ಗಳಿಗೆ ದಿಟ್ಟ ಉತ್ತರ ಕೊಟ್ಟ ಬೆಂಗಳೂರು
ಐಪಿಎಲ್ ಕಪ್ ಗೆದ್ದ ನಂತರ ಮೊದಲ ಬಾರಿಗೆ ಟ್ರೋಲ್‌ಗಳಿಗೆ ಪ್ರತಿಕ್ರಿಯಿಸಲು ಆರ್‌ಸಿಬಿ ಇನ್‌ಸ್ಟಾಗ್ರಾಮ್‌ಗೆ ಕರೆದೊಯ್ದಿತು. ಸಾಮಾಜಿಕ ಮಾಧ್ಯಮದಲ್ಲಿ 'ಮಾನವೀಯತೆಯನ್ನು ಉಳಿಸಿ ಹಾಗೂ ಆರ್‌ಸಿಬಿ ಗೆಲ್ಲಲು ಬಿಡಬೇಡಿ' ಪ್ರವೃತ್ತಿಯನ್ನು ಉಲ್ಲೇಖಿಸಿ, ಫ್ರಾಂಚೈಸಿ 'ಮಾನವೀಯತೆಯನ್ನು ಉಳಿಸಲಾಗಿದೆ' ಎಂಬ ಶೀರ್ಷಿಕೆಯೊಂದಿಗೆ ಪತ್ರಿಕೆಗಳನ್ನು ಓದುತ್ತಿರುವ ಜನರನ್ನು ತೋರಿಸುವ ಚಿತ್ರವನ್ನು ಹಂಚಿಕೊಂಡಿದೆ. ಯಾರಿಗೆ ಇದು ಸಂಬಂಧಿಸಿರಬಹುದು ಎಂದು ಆರ್‌ಸಿಬಿ ಬರೆದುಕೊಂಡಿದೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರೀ ಸಂಚಾರ ದಟ್ಟಣೆ
18ರ ಕನಸು ನನಸು ಮಾಡಿ ಕಪ್ ಹಿಡಿದುಕೊಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೆಂಗಳೂರಿಗೆ ಆಗಮಿಸಿದೆ. ಹಾಗಾಗೇ ಬೆಂಗಳೂರಿನಲ್ಲಿ ಬಾರೀ ಸಂಚಾರ ದಟ್ಟಣೆ ಉಂಟಾಗಿದೆ. ವಿಧಾನಸೌಧದ ಸುತ್ತಲು ಟ್ರಾಫಿಕ್ ಜಾಮ್ ಆಗಿದ್ದು ಆರ್‌ಸಿಬಿ ಅಭಿಮಾನಿಗಳು ಕಿಕ್ಕರದು ತುಂಬಿದ್ದಾರೆ. ಪೊಲೀಸರಿಗೆ ಸಂಚಾರ ದಟ್ಟಣೆಯನ್ನು ನಿಭಾಹಿಸುವದು ಹರಸಾಹಸವಾಗಿದೆ.
ಆರ್‌ಸಿಬಿಯ ಈ ವಿಜಯದಲ್ಲಿ ವಿರಾಟ್ ಕೋಹ್ಲಿಯ 18 ವರ್ಷಗಳ ಕಾಲದ ತಪಸ್ಸಿದೆ, ನಿಷ್ಠೆ, ಬದ್ಧತೆಯಿದೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಆರ್‌ಸಿಬಿ ಪ್ರತಿ ಆಟಗಾರರು ಚಾಂಪಿಯನ್ ಪ್ರದರ್ಶನ ನೀಡಿದ್ದಾರೆ


Click it and Unblock the Notifications