Tatkal Ticket: ತತ್ಕಾಲ್ ಟಿಕೆಟ್‌ ಬುಕಿಂಗ್ ಸಮಯ ನಿಜಕ್ಕೂ ಬದಲಾಗಿದ್ಯಾ? ಸಮಯ ಬದಲಾವಣೆ ಬಗ್ಗೆ IRCTC ಸ್ಪಷ್ಟನೆ ಏನು..?

ತತ್ಕಾಲ್ ಟಿಕೆಟ್ ಬುಕಿಂಗ್ ಸಂಬಂಧ ಇತ್ತೀಚೆಗೆ ಸಾಮಾಜಿಕ ಜಾಲಾತಾಣಗಳಲ್ಲಿ ಒಂದಷ್ಟು ಸುದ್ದಿ ವೈರಲ್ ಆಗಿತ್ತು. ಅದೇನೆಂದರೆ ತತ್ಕಾಲ್ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಏಪ್ರಿಲ್ 15ರಿಂದ ಬದಲಾವಣೆಯಾಗಲಿವೆ ಎಂಬ ವದಂತಿ ಹರಿದಾಡಿತ್ತು. ಈ ವದಂತಿಗೆ ಕಿವೊಗೊಟ್ಟ ಜನ ಏನೆಲ್ಲಾ ಬದಲಾವಣೆಯಾಗಿರಬಹುದಪ್ಪ ಎಂದು ಕಂಗೆಟ್ಟು ಹೋಗಿದ್ದರು. ಜನರ ಗೊಂದಲಕ್ಕೆ ಮಣಿದ IRCTC ಸ್ವತಃ ಸ್ಪಷ್ಟನೆ ನೀಡುವ ಮೂಲಕ ಎಲ್ಲಾ ಗೊಂದಗಳಿಗೆ ತೆರೆ ಎಳೆದಿದೆ. ಅಂದರೆ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಎಂದಿನಂತೆಯೇ ಸಿಸ್ಟಂ ಇರುತ್ತದೆ ಎಂದು ಸ್ಪಷ್ಟನೆ ನೀಡಿದ್ದು, ಇದೀಗ ಸಮಾಧಾನ ನೀಡಿದೆ.

ತತ್ಕಾಲ್ ಟಿಕೆಟ್‌ ಬುಕಿಂಗ್ ಸಮಯ ಬದಲಾವಣೆ ಬಗ್ಗೆ IRCTC ಸ್ಪಷ್ಟನೆ!

ತಪ್ಪು ಪ್ರಚಾರಕ್ಕೆ IRCTC ತಿರುಗೇಟು:

ತತ್ಕಾಲ್ ಟಿಕೆಟ್ ಬುಕ್ಕಿಂಗ್ ವೇಳೆ ಹರಡಿದ್ದ ವದಂತಿ ಹೇಗಿತ್ತು ಎಂದರೆ, ಏಜೆಂಟ್‌ಗಳಿಗೂ ಈ ಹೊಸ ಸಮಯ ಬದಲಾಗುತ್ತದೆ ಎಂದಿತ್ತು. ಈ ರೀತಿ ದಾರಿ ತಪ್ಪಿಸುವ ಪೋಸ್ಟ್ ಹರಿದಾಡುವಿಕೆಗೆ IRCTC ಕೆಂಡಾಮಂಡಲವಾಗಿತ್ತು. ಇದು ಸಾವಿರಾರು ಜನರಲ್ಲಿ ಗೊಂದಲ ಉಂಟುಮಾಡಿತು. ಹೀಗಾಗಿ ಸ್ಪಷ್ಟನೆ ನೀಡಲು ಸ್ವತಃ ಮುಂದು ಬಂದ IRCTC ಎಕ್ಸ್ ಖಾತೆಯಲ್ಲಿ ಅಧಿಕೃತವಾಗಿ ತಿರುಗೇಟು ನೀಡಿದೆ. ತತ್ಕಾಲ್ ಮತ್ತು ಪ್ರೀಮಿಯಂ ತತ್ಕಾಲ್ ಟಿಕೆಟ್‌ಗಳ ಬುಕಿಂಗ್ ಸಮಯಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಎಲ್ಲ ಬುಕಿಂಗ್‌ಗಳು ಹಿಂದಿನ ಸಮಯದಂತೆ ಮುಂದುವರೆಯುತ್ತವೆ ಎಂದು ಘೋಷಿಸಿದೆ.

ತತ್ಕಾಲ್ ಟಿಕೆಟ್‌ಗಳ ನಿಖರ ಬುಕಿಂಗ್ ಸಮಯ:

ತತ್ಕಾಲ್ ಟಿಕೆಟ್ ವ್ಯವಸ್ಥೆ ರೈಲ್ವೆ ಪ್ರಯಾಣಿಕರಿಗೆ ತುರ್ತು ಸಂದರ್ಭಗಳಲ್ಲಿ ದೊರೆಯುವ ಮುಖ್ಯ ಆಯ್ಕೆ. ಈ ವ್ಯವಸ್ಥೆಯಲ್ಲಿ ಟಿಕೆಟ್‌ಗಳನ್ನು ನೀವು ಪ್ರಯಾಣದ ದಿನಕ್ಕೊಂದು ದಿನ ಮೊದಲು ಬುಕ್ ಮಾಡಬಹುದು. ಆದರೆ ಬುಕಿಂಗ್ ಆರಂಭವಾಗುವ ಸಮಯ ವರ್ಗಾನುಗುಣವಾಗಿ ವಿಭಜಿಸಲಾಗಿದೆ:

ಎಸಿ ತರಗತಿಗಳಿಗೆ (2A, 3A, CC, EC, 3E): ಬೆಳಿಗ್ಗೆ 10:00 ಕ್ಕೆ
ಎಸಿ ಅಲ್ಲದ ತರಗತಿಗಳಿಗೆ (SL, FC, 2S): ಬೆಳಿಗ್ಗೆ 11:00 ಕ್ಕೆ

ಈ ಪೈಕಿ ಫಸ್ಟ್ ಎಸಿ (1A) ತರಗತಿಗೆ ತತ್ಕಾಲ್ ವ್ಯವಸ್ಥೆ ಲಭ್ಯವಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಮಹತ್ವದ ಸಂಗತಿಯಾಗಿದೆ.

ತತ್ಕಾಲ್ ಟಿಕೆಟ್ ಬುಕ್ ಮಾಡುವುದೇಗೆ..?

ಪ್ರಯಾಣಿಕರು ತಾವು ಪ್ರಯಾಣಿಸುವ ಒಂದು ದಿನದ ಮೊದಲು, IRCTC ಅಧಿಕೃತ ವೆಬ್‌ಸೈಟ್ (www.irctc.co.in) ಅಥವಾ ಮೊಬೈಲ್ ಆಪ್ ಬಳಸಿಕೊಂಡು ತತ್ಕಾಲ್ ಟಿಕೆಟ್‌ಗಳನ್ನು ಸುಲಭವಾಗಿ ಬುಕ್ ಮಾಡಬಹುದು. ಟಿಕೆಟ್‌ಗಳ ಲಭ್ಯತೆ ಸೀಮಿತವಾಗಿರುವುದರಿಂದ, ನಿಗದಿತ ಸಮಯದಲ್ಲಿಯೇ ಪ್ರಯತ್ನಿಸುವುದು ಅಗತ್ಯವಾಗಿದೆ. ತಪ್ಪು ಮಾಹಿತಿ ನೀಡುವ ಅನಧಿಕೃತ ವೆಬ್‌ಸೈಟ್‌ಗಳನ್ನು ಅಥವಾ ಆಪ್‌ಗಳನ್ನು ತಪ್ಪಿದ್ರೆ ಉತ್ತಮ.

ತತ್ಕಾಲ್ ಟಿಕೆಟ್‌ಗಳಿಗೆ ಅನ್ವಯವಾಗುವ ಶುಲ್ಕದ ವಿವರ:

ಟಿಕೆಟ್ ದರದಲ್ಲಿ ಮಾತ್ರ ಪ್ರಯಾಣಿಕರೇ ರಾಜಿಯಾಗಬೇಕಾಗುತ್ತದೆ. ಏಕೆಂದರೆ ತತ್ಕಾಲ್ ಟಿಕೆಟ್‌ ಸಾಮಾನ್ಯ ದರಕ್ಕಿಂತ ಹೆಚ್ಚಿನ ಶುಲ್ಕದಲ್ಲಿ ಸಿಗುತ್ತದೆ.

ಎರಡನೇ ದರ್ಜೆ ಸೀಟಿಂಗ್ (2S): ಟಿಕೆಟ್ 10%

ಇತರ ಎಲ್ಲಾ ತರಗತಿಗಳಿಗೆ: 30%

ಇವುಗಳಿಗೂ ಕನಿಷ್ಠ ಮತ್ತು ಗರಿಷ್ಠ ಶುಲ್ಕ ಮಿತಿಯನ್ನು ನಿಗದಿಪಡಿಸಲಾಗಿದೆ, ಇದು ಪ್ರಯಾಣಿಕರ ಮೇಲಿನ ಆರ್ಥಿಕ ಭಾರವನ್ನು ನಿಯಂತ್ರಿಸುವ ಉದ್ದೇಶದಿಂದ ಮಾಡಲಾಗಿದೆ.

ರದ್ದುಪಡಿಸಿದ ತತ್ಕಾಲ್ ಟಿಕೆಟ್‌ಗಳಿಗೆ ಮರುಪಾವತಿ ಇಲ್ಲ:

ತತ್ಕಾಲ್ ಟಿಕೆಟ್ ಬುಕ್ ಮಾಡಿದ ನಂತರ ರದ್ದುಗೊಳಿಸಿದರೆ ಸಾಮಾನ್ಯವಾಗಿ ಮರುಪಾವತಿ ದೊರೆಯುವುದಿಲ್ಲ. ಆದರೆ ಕೆಲವು ಅಪರೂಪದ ಸಂದರ್ಭಗಳಲ್ಲಿ ಮಾತ್ರ ಇರುತ್ತದೆ. ಅಂದರೆ ಟಿಕೆಟ್ ವೇಯ್ಟ್‌ಲಿಸ್ಟ್ ಆಗಿದ್ದರೆ ಅಥವಾ ತುರ್ತು ಪರಿಸ್ಥಿತಿ ಬಂದಾಗ ರೈಲ್ವೆ ನಿಯಮಗಳ ಪ್ರಕಾರ ಶೇಕಡಾವಾರು ಕಡಿತದೊಂದಿಗೆ ಮರುಪಾವತಿ ಸಿಗಬಹುದು. ಆದರೆ ಪೂರ್ತಿ ಮರುಪಾವತಿ ಇರುವುದಿಲ್ಲ.

ತತ್ಕಾಲ್ ಟಿಕೆಟ್ ಅಥವಾ ರೈಲ್ವೆ ಸೇವೆಗಳ ಬಗ್ಗೆ ಮಾಹಿತಿ ಪಡೆಯಲು ಪ್ರಯಾಣಿಕರು ಯಾವಾಗಲೂ IRCTC ಅಧಿಕೃತ ವೆಬ್‌ಸೈಟ್, ಆಪ್ ಅಥವಾ 139 ಸಹಾಯವಾಣಿಯನ್ನು ಬಳಸಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ನಿಖರತೆ ಇಲ್ಲದ ಸುದ್ದಿ ಅಥವಾ ತಪ್ಪು ಮಾಹಿತಿ ತಕ್ಷಣವೇ ನಿರಾಕರಿಸಲಾಗುವುದು ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.

ಅಂದಹಾಗೆ ತತ್ಕಾಲ್ ಟಿಕೆಟ್ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂಬುದು ಐಆರ್‌ಸಿಟಿಸಿಯ ಸ್ಪಷ್ಟನೆ. ಎಸಿ, ಎಸಿ ಅಲ್ಲದ ತರಗತಿಗಳು ಮತ್ತು ಏಜೆಂಟ್‌ಗಳಿಗೆ ಬುಕಿಂಗ್ ಸಮಯವೂ ಹಿಂದೆ ಇದ್ದಂತೆಯೇ ಮುಂದುವರೆದಿದೆ. ಪ್ರಯಾಣಿಕರು ಯಾವುದೇ ಗೊಂದಲಕ್ಕೊಳಗಾಗದೇ ಅಧಿಕೃತ ನವೀಕರಣಗಳನ್ನು ಮಾತ್ರ ನಂಬಬೇಕು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+