ಇಕಾಮರ್ಸ್‌ನ ಪ್ರಮುಖ ಸಂಸ್ಥೆಯಾದ ಅಮೆಜಾನ್ ಸಿಇಒ ಆಂಡಿ ಜಾಸಿ ಭಾರತದಲ್ಲಿ ಮತ್ತೆ 15 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಸಿದ್ಧವಾಗಿದ್ದೇವೆ ಎಂದು ಹೇಳಿದ್ದಾರೆ. ಈಗಾಗಲೇ ಭಾರತದಲ್ಲಿ ಅಮೆಜಾನ್‌ನ ಒಟ್ಟು ಹೂಡಿಕೆಯು 26 ಬಿಲಿಯನ್ ಡಾಲರ್ ಆಗಿದೆ. ಅಮೆಜಾನ್ ಸಿಇಒ ಆಂಡಿ ಜಾಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದು, ಇದಾದ ಬಳಿಕ ಹೂಡಿಕೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
"ನಾನು ಪ್ರಧಾನಿ ಮೋದಿಯವರೊಂದಿಗೆ ಉತ್ತಮ ಮತ್ತು ಉತ್ಪಾದಕತೆಯ ಮಾತುಕತೆಯನ್ನು ನಡೆಸಿದ್ದೇನೆ. ನಾವು ಹಲವಾರು ಗುರಿಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದೇವೆ ಎಂದು ಭಾವಿಸುತ್ತೇನೆ. ಅಮೆಜಾನ್ ಭಾರತದ ಅತಿದೊಡ್ಡ ಹೂಡಿಕೆದಾರರಲ್ಲಿ ಒಂದಾಗಿದೆ," ಎಂದು ಅಮೆಜಾನ್ ಸಿಇಒ ಆಂಡಿ ಜಾಸಿ ತಿಳಿಸಿದ್ದಾರೆ.

ಭಾರತದಲ್ಲಿನ ಹೂಡಿಕೆಯ ಬಗ್ಗೆ ಮಾಹಿತಿ ನೀಡಿದ ಅಮೆಜಾನ್ ಸಿಇಒ
"ನಾವು ಇಲ್ಲಿಯವರೆಗೆ ಒಟ್ಟಾಗಿ 11 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದೇವೆ. ಇನ್ನೂ ನಾವು 15 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಸಿದ್ಧವಾಗಿದ್ದೇವೆ. ಈ ಹೂಡಿಕೆಯ ಬಳಿಕ ನಾವು ಭಾರತದ ಮೇಲೆ ಒಟ್ಟಾಗಿ 26 ಬಿಲಿಯನ್ ಡಾಲರ್ ಹೂಡಿಕೆ ಮಾಡಿದಂತೆ ಆಗುತ್ತದೆ. ನಾವು ಭಾರತದೊಂದಿಗೆ ಉತ್ತಮ ಪಾಲುದಾರಿಕೆಗಾಗಿ ಕಾಯುತ್ತಿದ್ದೇವೆ," ಎಂದು ಕೂಡಾ ಅಮೆಜಾನ್ ಸಿಇಒ ಆಂಡಿ ಜಾಸಿ ಹೇಳಿದ್ದಾರೆ.
ತಾನು ಪ್ರಧಾನಿ ಮೋದಿಯವರೊಂದಿಗೆ ಉತ್ಪಾದಕ ಸಭೆಯನ್ನು ನಡೆಸಿದ್ದೇನೆ. ನಾವು ಅಮೆಜಾನ್ ಸ್ಟಾರ್ಟ್‌ಅಪ್‌ಗಳನ್ನು ಹೇಗೆ ಬೆಂಬಲಿಸಬಹುದು, ಹೇಗೆ ಉದ್ಯೋಗಗಳನ್ನು ಸೃಷ್ಟಿಸಬಹುದು, ರಫ್ತುಗಳನ್ನು ಸಕ್ರಿಯಗೊಳಿಸಬಹುದು ಎಂಬ ಬಗ್ಗೆ ನಾವು ಚರ್ಚೆಯನ್ನು ನಡೆಸಿದ್ದೇವೆ ಎಂದು ಅಮೆಜಾನ್ ಸಿಇಒ ಆಂಡಿ ಜಾಸಿ ಹೇಳಿಕೊಂಡಿದ್ದಾರೆ.
26 ಬಿಲಿಯನ್ ಡಾಲರ್ ಹೂಡಿಕೆಯು 2030 ರ ವೇಳೆಗೆ ಭಾರತದಲ್ಲಿ ಕ್ಲೌಡ್ ಮೂಲಸೌಕರ್ಯಕ್ಕೆ ಘೋಷಣೆ ಮಾಡಿದ 11 ಬಿಲಿಯನ್ ಡಾಲರ್ ಹಣವು ಕೂಡಾ ಒಳಗೊಂಡಿದೆ. ಈ ಹೂಡಿಕೆಯ ಭಾರತದ ವ್ಯವಹಾರದಲ್ಲಿ ಪ್ರತಿ ವರ್ಷ ಅಂದಾಜು ಸರಾಸರಿ 1.31 ಲಕ್ಷ ಉದ್ಯೋಗಗಳಿಗೆ ಬೆಂಬಲವಾಗಲಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು ಅಮೆಜಾನ್ ಸಿಇಒ ಆಂಡಿ ಜಾಸಿರನ್ನು ಭೇಟಿಯಾದ ನಂತರ ಪಿಎಂಒ ಕೂಡಾ ಟ್ವೀಟ್ ಮಾಡಿದೆ. ಇಬ್ಬರೂ ಇ-ಕಾಮರ್ಸ್, ಡಿಜಿಟಲೀಕರಣ ಪ್ರಯತ್ನಗಳು ಮತ್ತು ಲಾಜಿಸ್ಟಿಕ್ಸ್ ವಲಯದಂತಹ ಕೆಲವು ನಿರ್ಣಾಯಕ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಭಾರತದಲ್ಲಿ ಎಂಎಸ್‌ಎಂಇಯಲ್ಲಿ ಡಿಜಿಟಲೀಕರಣವನ್ನು ಪ್ರೋಮೋಟ್ ಮಾಡುವ ನಿಟ್ಟಿನಲ್ಲಿ ಅಮೆಜಾನ್‌ನ ಅನ್ನು ಭಾರತಕ್ಕೆ ಪಿಎಂ ಮೋದಿ ಸ್ವಾಗತಿಸಿದ್ದಾರೆ.
ಅಮೆಜಾನ್‌ನ ಸಿಇಒ ಹಾಗೂ ಅಧ್ಯಕ್ಷರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅತೀ ಉತ್ಪಾದಕತಾ ಸಭೆಯನ್ನು ನಡೆಸಿದ್ದಾರೆ ಎಂದು ಟ್ವೀಟ್ ಮೂಲಕ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. "ಇಕಾಮರ್ಸ್ ಮತ್ತು ಅಮೆಜಾನ್ ಜೊತೆ ಉನ್ನಷ್ಟು ಸಹಭಾಗಿತ್ವ ಹೆಚ್ಚಳ ಮಾಡುವ ಬಗ್ಗೆ ಈ ಸಭೆಯಲ್ಲಿ ಚರ್ಚೆ ಮಾಡಲಾಗಿದೆ," ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ವೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ಮೋದಿಯನ್ನು ಭೇಟಿಯಾದ ಪಿಚೈ, ಮಸ್ಕ್
ಇನ್ನು ಅದಕ್ಕೂ ಮುನ್ನ ಆಲ್ಫಾಬೇಟ್ ಸಿಇಒ ಸುಂದರ್ ಪಿಚೈ ಹಾಗೂ ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದಾರೆ. ಭಾರತದಲ್ಲಿ ಡಿಜಿಟೈಸೇಷನ್ ಫಂಡ್‌ಗಾಗಿ ನಾವು 10 ಬಿಲಿಯನ್ ಡಾಲರ್ ಅನ್ನು ಹೂಡಿಕೆ ಮಾಡಲು ಸಿದ್ಧವಾಗಿದ್ದೇವೆ ಎಂದು ಆಲ್ಫಾಬೇಟ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ. ಭಾರತದಲ್ಲಿ ಟೆಸ್ಲಾ ಹೂಡಿಕೆ ಮಾಡಲು ಉತ್ಸುಕವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಭೇಟಿಯಾದ ಬಳಿಕ ಎಲಾನ್ ಮಸ್ಕ್ ಹೇಳಿದ್ದಾರೆ.


Click it and Unblock the Notifications