ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ ಮೋಹನ್ ಅವರು, ಮೆಟ್ರೋ ಹಂತ 3ಎ (ರೆಡ್ ಲೈನ್) ಯೋಜನೆಯಲ್ಲಿ ಕೇಂದ್ರವು ಪರಿಷ್ಕರಣೆಗಳನ್ನು ಸರಿಯಾಗಿಯೇ ಕೋರಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಸರ್ಜಾಪುರದಿಂದ ಹೆಬ್ಬಾಳವರೆಗಿನ ನಮ್ಮ ಮೆಟ್ರೋ ಮಾರ್ಗವು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಇತಿಹಾಸದಲ್ಲಿ ಅತ್ಯಂತ ದುಬಾರಿ ಯೋಜನೆಯಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಹೌದು,ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್ ಸರ್ಜಾಪುರದಿಂದ ಹೆಬ್ಬಾಳವರೆಗಿನ ನಮ್ಮ ಮೆಟ್ರೋ ಮಾರ್ಗವು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಇತಿಹಾಸದಲ್ಲಿ ಅತ್ಯಂತ ದುಬಾರಿ ಯೋಜನೆಯಾಗಿದೆ ಎಂದು ಹೇಳಿದ್ದಾರೆ.

ಸರ್ಜಾಪುರದಿಂದ ಹೆಬ್ಬಾಳದವರೆಗಿನ ಬೆಂಗಳೂರಿನ ಮೆಟ್ರೋ ಹಂತ 3A (ರೆಡ್ ಲೈನ್) ನಿರ್ಣಾಯಕವಾಗಿದೆ.ಆದರೆ 28,405 ಕೋಟಿ ರೂ.ಇದು ನಮ್ಮ ಮೆಟ್ರೋ ಇತಿಹಾಸದಲ್ಲಿ ಅತ್ಯಂತ ದುಬಾರಿಯ ಯೋಜನೆಯಾಗಿದೆ.ಕೇಂದ್ರವು ಸರಿಯಾಗಿ ಪರಿಷ್ಕರಣೆಗಳನ್ನು ಕೋರಿದೆ.ಬಿಎಂಆರ್‌ಸಿಎಲ್ ಈಗ ಮರು ಮೌಲ್ಯಮಾಪನ ಮಾಡಿ ಹೆಚ್ಚಿನ ಅಂದಾಜು ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
ರಾಜ್ಯ ಸರ್ಕಾರದಿಂದ ಅಂತಿಮ ಅನುಮೋದನೆ ನೀಡುವ ಮೊದಲು ವೆಚ್ಚದ ಅಂದಾಜನ್ನು ತಜ್ಞ ಸಂಸ್ಥೆಯಿಂದ ಪರಿಶೀಲಿಸಬೇಕೆಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಕೂಡ ನಿರ್ದೇಶವನ್ನು ನೀಡಿದೆ.ಭೂಸ್ವಾಧೀನ ನಿಲ್ದಾಣ ನಿರ್ಮಾಣ,ಜೋಡಣೆ ಮತ್ತು ರಚನೆ, ಎಳೆತ ಮತ್ತು ವಿದ್ಯುತ್ ಸರಬರಾಜು, ಸಿಗ್ನಲಿಂಗ್ ಮತ್ತು ದೂರಸಂಪರ್ಕ ಮತ್ತು ರೈಲು ಖರೀದಿಯಂತಹ ಅಂಶಗಳು ಹೆಚ್ಚಿನ ವೆಚ್ಚಕ್ಕೆ ಕಾರಣವಾಗಿವೆ ಎಂದು ವಿವರವಾದ ಯೋಜನಾ ವರದಿ (ಡಿಪಿಆರ್) ಮಾಹಿತಿಯನ್ನು ತಿಳಿಸಿದ್ದಾರೆ.
ಸರ್ಜಾಪುರದಿಂದ ಹೆಬ್ಬಾಳವರೆಗಿನ 36.59 ಕಿ.ಮೀ ಉದ್ದದ ಕೆಂಪು ಮಾರ್ಗವು 22.14 ಕಿ.ಮೀ ಎತ್ತರಿಸಿದ ಮಾರ್ಗ ಮತ್ತು 14.45 ಕಿ.ಮೀ ಸುರಂಗವನ್ನು ಒಳಗೊಂಡಿದೆ. ಒಟ್ಟು 28 ನಿಲ್ದಾಣಗಳನ್ನು ಒಳಗೊಂಡಿದೆ. ಎತ್ತರಿಸಿದ ಮಾರ್ಗದಲ್ಲಿ 17 ನಿಲ್ದಾಣಗಳು ಮತ್ತು ಸುರಂಗದಲ್ಲಿ 11 ನಿಲ್ದಾಣಗಳು ಇರುತ್ತವೆ ಎಂದು ಅವರು ಹೇಳಿದ್ದಾರೆ.
ಒಂದು ವರ್ಷ ಕೆಂಪು ಮಾರ್ಗದ ವಿಳಂಬ
ಬಿಎಂಆರ್‌ಸಿಎಲ್ (BMRCL) ಈ ಯೋಜನೆಯು 2030ರ ವೇಳೆಗೆ ಪೂರ್ಣಗೊಂಡು ರೈಲು ಸಂಚಾರ ಆರಂಭವಾಗಬೇಕೆಂಬ ಗುರಿಯನ್ನು ಹೊಂದಿದೆ.ಕೋರಮಂಗಲ, ಹೆಬ್ಬಾಳ, ಸರ್ಜಾಪುರ ಮುಂತಾದ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುವ ಕೆಂಪು ಮಾರ್ಗವು ನಗರ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ.ಆದರೆ ಕೇಂದ್ರ ಸರ್ಕಾರದ ಒಅದುಮೋದನೆ ಸಿಗುವುದು ತಡವಾಗಿರುವುದರಿಂದ ಇನ್ನೂ ಒಂದು ವರ್ಷ ವಿಳಂಬವಾಗುತ್ತದೆ ಎಂದು ವರದಿಗಳು ಹೇಳಿವೆ.ಈ ರೆಡ್ ಲೈನ್ ಮೆಟ್ರೋ ಮಾರ್ಗ ಸುಮಾರು 37 ಕಿಲೋಮೀಟರ್ ಉದ್ದದ್ದಾಗಿದೆ.ಇದರಲ್ಲಿ ಒಟ್ಟು 28 ನಿಲ್ದಾಣಗಳು ಸೇರುತ್ತವೆ.ಇದಕ್ಕಾಗಿ ಅಂದಾಜು 28,405 ಕೋಟಿ ವೆಚ್ಚ ತೆಗಲಬಹುದು ಎನ್ನಲಾಗಿದೆ.ಇನ್ನು ಈ ಮೆಟ್ರೋ ಮಾರ್ಗ 2030 ರೊಳಗೆ ಪೂರ್ಣಗೊಳ್ಳತ್ತದೆ.
ನಮ್ಮ ಮೊಟ್ರೋ ಬೆಂಗಳೂರಿನ ಸಂಚಾರ ಜೀವನಾಡಿ. ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ನಮ್ಮ ಮೊಟ್ರೋ ಜಾಲ ವಿಸ್ತರಣೆ ನಡೆಯುತ್ತಲೇ ಇದೆ. ಆದರೆ, ಕೆಲವೊಂದು ಮಾರ್ಗಗಳು ಹಲವು ಸವಾಲುಗಳಿಂದಾಗಿ ವಿಳಂಬವನ್ನು ಎದುರಿಸುತ್ತಿವೆ. ಅದರಲ್ಲಿ ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆ ಕೂಡ ಒಂದು.
ಬಿಎಂಆರ್‌ಸಿಎಲ್ (BMRCL) ಮೆಟ್ರೋ ಹಂತದ ಯೋಜನೆಯು 2030ರ ವೇಳೆಗೆ ಪೂರ್ಣಗೊಂಡು ರೈಲು ಸಂಚಾರ ಆರಂಭವಾಗಬೇಕೆಂಬ ಗುರಿಯನ್ನು ಹೊಂದಿದೆ.ಆದರೆ ಹಲವಾರು ಸವಾಲುಗಳು ಹಾಗೂ ಸಮಸ್ಯೆಗಳಿಂದ ಈ ಮಾರ್ಗದ ಆರಂಭ ವಿಳಂಬವನ್ನು ಎದುರಿಸುತ್ತಿವೆ. ಹಳದಿ, ಗುಲಾಬಿ ಮತ್ತು ನೀಲಿ ಮಾರ್ಗಕ್ಕೆ ಹಲವು ಸವಾಗಳು ಎದುರಾಗಿವೆ. ಭೂಸ್ವಾಧೀನ ಸಮಸ್ಯೆಗಳು,ಮರಗಳನ್ನು ಕಡಿಯಲು ಅನುಮತಿ ಪಡೆಯುವಲ್ಲಿ ವಿಳಂಬ,ರೈಲುಗಳೂ ಬೋಗಿಗಳ ಕೊರತೆ ಇನ್ನೂ ಮುಂತಾದ ಸಮಸ್ಸೆಗಳನ್ನು ಎದುರಾಗಲಿದೆ.
ನಮ್ಮ ಮೆಟ್ರೋ ಕೆಂಪು ಮಾರ್ಗವು ವಿಳಂಬವನ್ನು ಎದುರುತ್ತಿದೆ.ಕಾರ್ಯರಂಭ ಮಾಡುವುದು ಇನ್ನೂ ತಡವಾಗಬಹುದು.


Click it and Unblock the Notifications